ಜಿಯೋ ದಿಂದ ಮತ್ತಷ್ಟು ಆಕರ್ಷಕ ಆಫರ್‌ಗಳು..!?! ಏಪ್ರಿಲ್ 15ಕ್ಕೇ ಜಿಯೋ ಪ್ಲಾನ್ ಏನು..?

ಮತ್ತೆ ಮೂರು ತಿಂಗಳು ಉಚಿತ ಸೇವೆಯನ್ನು ನೀಡಲು ಮುಂದಾಗಿತ್ತು. ಆದರೆ ಇದಕ್ಕೆ ಟ್ರಾಯ್ ಬ್ರೇಕ್ ಹಾಕಿದೆ.

|

ಜಿಯೋ ತನ್ನ ಗ್ರಾಹಕರಿಗೆ ನೀಡಲು ಮುಂದಾಗಿದ್ದ ಸಮ್ಮರ್ ಸರ್ಪ್ರೈಸ್ ಆಫರ್ ಅನ್ನು ಟ್ರಾಯ್ ಆದೇಶದ ಮೇರೆಗೆ ಹಿಂಪಡೆದ ಕಾರಣದಿಂದ ತನ್ನ ಗ್ರಾಹಕರಿಗೆ ನೋವಾಗಬಾರದು ಎಂದು ಜಿಯೋ ಮತ್ತಷ್ಟು ಆಕರ್ಷಕ ಆಫರ್‌ಗಳನ್ನು ನೀಡಲು ಮುಂದಾಗಲಿದೆ ಎನ್ನುವ ಮಾತು ಕೇಳಿಬಂದಿದೆ.

ಜಿಯೋ ದಿಂದ ಮತ್ತಷ್ಟು ಆಕರ್ಷಕ ಆಫರ್‌ಗಳು..!?!

72 ಮಿಲಿಯನ್‌ಗೂ ಅಧಿಕ ಜಿಯೋ ಪ್ರೈಮ್ ಸದಸ್ಯರು ತಿಂಗಳಿಗೆ 303 ರೂಗಳನ್ನು ನೀಡಿ ಜಿಯೋ ಸೇವೆಯನ್ನು ಪಡೆಯಲು ಮುಂದಾಗಿದ್ದರು. ಇದರಿಂದ ಸಂಸತಗೊಂಡ ಜಿಯೋ ಮತ್ತೆ ತನ್ನ ಗ್ರಾಹಕರಿಗೆ 303 ರೂ.ಗಳಿಗೆ ಮತ್ತೆ ಮೂರು ತಿಂಗಳು ಉಚಿತ ಸೇವೆಯನ್ನು ನೀಡಲು ಮುಂದಾಗಿತ್ತು. ಆದರೆ ಇದಕ್ಕೆ ಟ್ರಾಯ್ ಬ್ರೇಕ್ ಹಾಕಿದ್ದು, ಸಮ್ಮರ್ ಸರ್ಪ್ರೈಸ್ ಆಫರ್‌ಅನ್ನು ಹಿಂಪಡೆಯುವಂತೆ ಆದೇಶ ನೀಡಿತ್ತು.

ಓದಿರಿ: ಫ್ಲಿಪ್‌ಕಾರ್ಟ್, ಆಮೆಜಾನ್‌ನಲ್ಲಿ ಶಾಕಿಂಗ್ ಬೆಲೆಗೆ ಜಿಯೋ ಲಾಪ್‌ಟಾಪ್..!

ಟ್ರಾಯ್ ಆದೇಶಕ್ಕೆ ತಲೆ ಭಾಗಿದ ಜಿಯೋ:

ಟ್ರಾಯ್ ಆದೇಶಕ್ಕೆ ತಲೆ ಭಾಗಿದ ಜಿಯೋ:

ಆರಂಭದ ಆರು ತಿಂಗಳೂ ಉಚಿತ ಸೇವೆಯನ್ನ ನೀಡಿದ್ದ ಜಿಯೋ ಮತ್ತೇ ಮೂರು ತಿಂಗಳು ಉಚಿತ ಸೇವೆಯನ್ನು ಮುಂದುವರೆಸುವ ಆಲೋಚನೆಯಲ್ಲಿತ್ತು. ಆದರೆ ಇತರೆ ಕಂಪನಿಗಳ ಕಾಟದಿಂದಾಗಿ ತಿಂಗಳಿಗೆ 101 ರೂ. ಅನ್ನುವಂತೆ ಮೂರು ತಿಂಗಳಿಗೆ 303 ರೂ. ದರವನ್ನು ವಿಧಿಸಲು ಮುಂದಾಗಿತ್ತು. ಈ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿದ ಟ್ರಾಯ್ ಈ ಕೊಡುಗೆಯನ್ನು ಹಿಂಪಡೆಯುವಂತೆ ತಿಳಿಸಿತ್ತು. ಈ ಆದೇಶಕ್ಕೆ ತಲೆಭಾಗಿದ ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್ ಅನ್ನು ಹಿಂಪಡೆಯಿತು.

ಜಿಯೋ ವಿರುದ್ಧ ಟ್ರಾಯ್‌ಗೆ ದೂರು ನೀಡಿದ ವೊಡೋಪೋನ್:

ಜಿಯೋ ವಿರುದ್ಧ ಟ್ರಾಯ್‌ಗೆ ದೂರು ನೀಡಿದ ವೊಡೋಪೋನ್:

ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್ ಟ್ರಾಯ್ ನಿಯಮಾವಳಿಗಳನ್ನು ಮೀರಿದೆ ಎಂದು ತಕರಾರು ತೆಗೆದ ವೊಡೋಫೋನ್ ಜಿಯೋ ವಿರುದ್ಧ ಟ್ರಾಯ್‌ಗೆ ದೂರು ಸಲ್ಲಿಸಿದೆ, ಅಲ್ಲದೇ ಜಿಯೋ ಟ್ರಾಯ್ ಆದೇಶವನ್ನ ಸರಿಯಾದ ರೀತಿಯಲ್ಲಿ ಪಾಲಿಸುತ್ತಿಲ್ಲ ಎಂದು ಆರೋಪಿಸಿದೆ.

ಅಧಿಕೃತವಾಗಿ ಸಮ್ಮರ್ ಸರ್ಪ್ರೈಸ್ ಆಫರ್ ಹಿಂಪಡೆದ ಜಿಯೋ: ಆದರೆ ಗ್ರಾಹಕರಿಗೆ ನೀಡಿದ ಭರವಸೆ ಏನು..?ಅಧಿಕೃತವಾಗಿ ಸಮ್ಮರ್ ಸರ್ಪ್ರೈಸ್ ಆಫರ್ ಹಿಂಪಡೆದ ಜಿಯೋ: ಆದರೆ ಗ್ರಾಹಕರಿಗೆ ನೀಡಿದ ಭರವಸೆ ಏನು..?

ಮತ್ತೇ ಆಕರ್ಷಕ ಆಫರ್ ನೀಡುವ ಭರವಸೆ:

ಮತ್ತೇ ಆಕರ್ಷಕ ಆಫರ್ ನೀಡುವ ಭರವಸೆ:

ಟ್ರಾಯ್ ಆದೇಶದ ಮೇರೆಗೆ ಜಿಯೋ ಸಮ್ಮರ್ ಸರ್ಪ್ರೈಸ್ ಆಫರ್ ಹಿಂಪಡೆದ ನಂತರ ತನ್ನ ಗ್ರಾಹಕರಿಗೆ ಅದಕ್ಕಿಂತ ಆಕರ್ಷಕವಾದ ಆಫರ್ ನೀಡಿವ ಭರವಸೆಯನ್ನು ಜಿಯೋ ನೀಡಿದೆ. ಮತ್ತೆ ಟ್ರಾಯ್‌ಗೆ ಸವಾಲು ಓಡ್ಡುವಂತೆ ಆಫರ್ ನೀಡಲು ಜಿಯೋ ಪ್ಲಾನ್ ಮಾಡುತ್ತಿದೆ ಎನ್ನುವ ಮಾತು ಕೇಳಿ ಬಂದಿದೆ.

ಶಾಕಿಂಗ್ ಬೆಲೆಗೆ ಜಿಯೋ ಲಾಪ್‌ಟಾಪ್..!ಶಾಕಿಂಗ್ ಬೆಲೆಗೆ ಜಿಯೋ ಲಾಪ್‌ಟಾಪ್..!

ಜಿಯೋ ಮುಂದಿನ ನಡೆ:

ಜಿಯೋ ಮುಂದಿನ ನಡೆ:

ತನ್ನ ಮೇಲೆ ನಂಬಿಕೆ ಇರಿಸಿ ಬಂದಿರುವ ಗ್ರಾಹಕರಿಗೆ ಲಾಭ ಮಾಡಿಕೊಡುವ ನಿಟ್ಟಿನಲ್ಲಿ ಯೋಜನೆಯೊಂದನ್ನು ರೂಪಿಸುತ್ತಿದ್ದು, ಟ್ರಾಯ್ ನಿಯಾಮನುಸಾರವೇ ತನ್ನ ಗ್ರಾಹಕರಿಗೆ ಯಾವ ರೀತಿಯಲ್ಲಿ ಕೊಡುಗೆಯನ್ನು ತಲುಪಿಸಬೇಕು ಎಂಬುದರ ಕುರಿತು ಚರ್ಚೆ ನಡೆಸುತ್ತಿದ್ದು, ಇನ್ನು ಎರಡು ಮೂರು ದಿನಗಳಲ್ಲಿ ಹೊಸ ಕೊಡುಗೆಯನ್ನು ನೀಡಲಿದೆ.

ಏಪ್ರಿಲ್ 15ಕ್ಕೆ ಮತ್ತೊಂದು ಕೊಡುಗೆ:

ಏಪ್ರಿಲ್ 15ಕ್ಕೆ ಮತ್ತೊಂದು ಕೊಡುಗೆ:

ಜಿಯೋ ಸಮ್ಮರ್ ಸಪ್ರೈಸ್ ಆಫರ್ ಏಪ್ರಿಲ್ 15ಕ್ಕೆ ಕೊನೆಯಾಗುತ್ತಿತ್ತು. ಆದರೆ ಈಗ ಆಫರ್ ಹಿಂಡೆದಿರುವುದರಿಂದ ಅಂದೇ ಜಿಯೋ ಹೊಸ ಕೊಡುಗೆಯೊಂದನ್ನು ನೀಡಬಹುದು. ಇಲ್ಲದೇ ಉಚಿತ ಕೊಡುಗೆಯನ್ನು ಘೋಷಿಸಬಹುದು, ಇಲ್ಲವೇ ದರದಲ್ಲಿ ಭಾರೀ ಕಡಿತ ಮಾಡಬಹುದು, ಇಲ್ಲದೇ ಉಚಿತ ಸೇವೆಯನ್ನೇ ಮತ್ತೇ ಮುಂದುವರೆಸಬಹುದು. ಯಾವುದಕ್ಕೂ ಏಪ್ರಿಲ್ 15ರ ವರೆಗೂ ಕಾಯಲೇ ಬೇಕಿದೆ.

ಫ್ಲಿಪ್‌ಕಾರ್ಟ್ ತೆಕ್ಕೆ ಸೇರಿದ ಈಬೇಫ್ಲಿಪ್‌ಕಾರ್ಟ್ ತೆಕ್ಕೆ ಸೇರಿದ ಈಬೇ

Best Mobiles in India

Read more about:
English summary
"We are updating our tariff packs and will be soon introducing more exciting offers,"Jio said on its website. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X