2021ರ ಜಿಯೋ ಭವಿಷ್ಯ ಈಗಲೇ ಡಿಸೈಡ್!! ಅಬ್ಬಾ ಏನ್ ಪ್ಲಾನ್ ಇದು?

ಜಿಯೋವಿನ ಮುಂದಿನ ಪ್ಲಾನ್‌ಗಳು ಏನೇನು ಎಂಬ ಮಾಹಿತಿ ಹೊರಬಿದ್ದಿದೆ

Written By:

ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಮಾಡಿದ ಮೋಡಿಯನ್ನು ಬೇರೆ ಇನ್ನಾವ ಟೆಲಿಕಾಂ ಕಂಪೆನಿಯೂ ಮಾಡಿಲ್ಲ ಎನ್ನಬಹುದು.! ಪ್ರಮೋಷನಲ್ ಮತ್ತು ಹ್ಯಾಪಿ ನ್ಯೂ ಇಯರ್ ಆಫರ್ ಮೂಲಕ ಜಿಯೋ ಭಾರತದಲ್ಲಿ ಉಚಿತ ಡೇಟಾ ಆಫರ್ ನೀಡಿ ವಿಶ್ವದಲ್ಲಿಯೇ ಗಮನಸೆಳೆದಿತ್ತು!!

ಇನ್ನೇನು ಮಾರ್ಚ್ 31 ರ ನಂತರ ಜಿಯೋವಿನ ಉಚಿತ ಸೇವೆ ಮುಗಿಯಲಿದ್ದು, ಇದರ ಜೊತೆಗೆ ಪ್ರೈಮ್ ಆಫರ್ ಮೂಲಕ ಜಿಯೋ ಮತ್ತೆ ಹೊಸ ಆಫರ್ ಘೋಷಿಸಿದೆ.! ತಿಂಗಳಿಗೆ ಕೇವಲ 303 ರೂಪಾಯಿಗಳನ್ನು ರೀಚಾರ್ಜ್ ಮಾಡಿಸಿದರೆ ಮತ್ತೆ ಒಂದು ವರ್ಷ ಜಿಯೋ ಅನ್‌ಲಿಮಿಟೆಡ್ ಸೇವೆಯನ್ನು ಪಡೆಯಬಹುದಾಗಿದೆ.!

ಗೂಗಲ್‌ನಿಂದ 2 ಸಾವಿರಕ್ಕೆ ಸ್ಮಾರ್ಟ್‌ಫೋನ್ ಬಿಡುಗಡೆ!!

ಇನ್ನು ಇದರ ಜೊತೆಗೆ ಜಿಯೋ ಬಗ್ಗೆ ಅಂಬಾನಿ ಭವಿಷ್ಯದ ಪ್ಲಾನ್ ಹೊಂದಿದ್ದು, ಜಿಯೋವಿನ ಮುಂದಿನ ಪ್ಲಾನ್‌ಗಳು ಏನೇನು ಎಂಬ ಮಾಹಿತಿ ಹೊರಬಿದ್ದಿದೆ. ಹಾಗಾದರೆ, ಅವುಗಳು ಯಾವುವು ಎಂಬುದನ್ನು ಕೆಳಗಿ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

#1 ಭಾರತದ ಶೇ 99 ಜನಸಂಖ್ಯೆಗೆ ನೆಟ್‌ವರ್ಕ್ ಸೇವೆ!!

ಮುಂದಿನ ಕೆಲವೇ ತಿಂಗಳಿನಲ್ಲಿ ಭಾರತದ ಪ್ರತಿ ಹಳ್ಳಿಯಲ್ಲಿಯೂ ಜಿಯೋ ನೆಟ್‌ವರ್ಕ್ ಸ್ಥಾಪಿಸುವುದು ಜಿಯೋವಿನ ಮೊದಲ ಗುರಿಯಾಗಿದೆ.! ಈಗಾಗಲೇ ಸಿಸ್ಕೊ ಕಂಪೆನಿ ಜೊತೆ ಕೈ ಜೋಡಿಸಿರುವ ಜಿಯೋ, ದೇಶದ ಜನಸಂಖ್ಯೆಯ ಶೇಕಡ 99 ಪರ್ಸೆಂಟ್ ಜನರಿಗೆ ಅತ್ಯುತ್ತಮ ಸೇವೆ ನೀಡಲು ನಿರ್ಧರಿಸಿದೆ.!!

#2 20 ಪರ್ಸೆಂಟ್ ಕಡಿಮೆ ದರ!!

ಪ್ರೈಮ್ ಆಫರ್ ನಂತರ ಉಳಿದ ಟೆಲಿಕಾಂಗಳು ಸಹ ಅನ್‌ಲಿಮಿಟೆಡ್ ಆಫರ್‌ಗಳನ್ನು ನೀಡುತ್ತಿದ್ದು, ಜಿಯೋ ಇತರ ಟೆಲಿಕಾಂಗಳಿಗಿಂತ 20 ಪರ್ಸೆಂಟ್ ಕಡಿಮೆ ದರದಲ್ಲಿ ತನ್ನ ಸೇವೆಗಳನ್ನು ನೀಡುವುದಾಗಿ ಜಿಯೋ ಹೇಳಿಕೊಂಡಿದೆ.!!

#3 2021ಕ್ಕೆ 50 ಪರ್ಸೆಂಟ್ ಟೆಲಿಕಾಂ ಮಾರುಕಟ್ಟೆ ವಶ!!

ಜಿಯೋ ಈಗಾಗಲೇ ಉಚಿತ ಸೇವೆ ನೀಡಿ 10 ಕೋಟಿ ಗ್ರಾಹಕರನ್ನು ಹೊಂದಿದ್ದು, 2021 ರ ವೇಳೆಗೆ ಭಾರತದ ಶೇಕಡ 50 ಪರ್ಸೆಂಟ್ ಟೆಲಿಕಾಂ ಮಾರುಕಟ್ಟೆಯನ್ನು ಆಕ್ರಮಿಸಿಕೊಳ್ಳಬೇಕು ಎಂದು ಜಿಯೋ ಗುರಿಯನ್ನು ಹಾಕಿಕೊಂಡಿದೆ.!!

#4 ಸ್ಯಾಮ್‌ಸಂಗ್ ಜೊತೆಗೂಡಿ 5G ತರಲಿದೆ ಜಿಯೋ!!

ಈಗಾಗಲೇ 4G ಮೂಲಕ ಮೋಡಿ ಮಾಡುತ್ತಿರುವ ಜಿಯೋ, ಪ್ರಸ್ತುತದಲ್ಲಿ ಭಾರತದಲ್ಲಿನ ನಂಬರ್ ಒನ್ ಮೊಬೈಲ್ ಬ್ರಾಂಡ್ ಸ್ಯಾಮ್‌ಸಂಗ್ ಜೊತೆಗೂಡಿ 5G ನೆಟ್‌ವರ್ಕ್ ಅನ್ನು ಭಾರತದಲ್ಲಿ ತರಲು ಚಿಂತಿಸಿದೆ.!! ಈ ಮೂಲಕ 5G ಯುಗಕ್ಕೆ ಭಾರತದ ಎಂಟ್ರಿ ಜಿಯೋಯಿಂದಲೇ ಆಗುತ್ತದೆ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
the whole telecom industry has shaken. In fact, the company has forced all telcos to change their tariff plans to retain their users. to know more visit to kannada.gizbot.com
Please Wait while comments are loading...
Opinion Poll

Social Counting