ವಿಶ್ವದ ಮೊದಲ ಮಡಿಸಬಹುದಾದ ಡಿಸ್‌ಪ್ಲೇ ಬಿಡುಗಡೆ ಮಾಡಲಿದೆ ಸ್ಯಾಮ್‌ಸಂಗ್....!

ಸ್ಯಾಮ್‌ಸಂಗ್ ಇದೇ ಮೊದಲ ಬಾರಿಗೆ ವಿಸ್ತರಿಸಬಹುದಾದ ಡಿಸ್‌ಪ್ಲೇಯನ್ನು ಪರಿಚಯಿಸಲು ಮುಂದಾಗಿದೆ.

|

ಮೊಬೈಲ್ ಡಿಸ್‌ಪ್ಲೇಯಲ್ಲಿ ಹೊಸ ಕ್ರಾಂತಿಗೆ ಕಾರಣವಾದ ಸ್ಯಾಮ್‌ಸಂಗ್ ಇದೇ ಮೊದಲ ಬಾರಿಗೆ ವಿಸ್ತರಿಸಬಹುದಾದ ಡಿಸ್‌ಪ್ಲೇಯನ್ನು ಪರಿಚಯಿಸಲು ಮುಂದಾಗಿದ್ದು, ತನ್ನ ಮುಂದಿನ ಟಾಪ್ ಎಂಡ್ ಸ್ಮಾರ್ಟ್‌ಫೋನಿನಲ್ಲಿ ಈ ಹೊಸ ಡಿಸ್‌ಪ್ಲೇಯನ್ನು ಅಳವಡಿಸಲಿದೆ ಎನ್ನಲಾಗಿದೆ.

ವಿಶ್ವದ ಮೊದಲ ಮಡಿಸಬಹುದಾದ ಡಿಸ್‌ಪ್ಲೇ ಬಿಡುಗಡೆ ಮಾಡಲಿದೆ ಸ್ಯಾಮ್‌ಸಂಗ್....!

ಓದಿರಿ: ದೇಶದಲ್ಲಿ ಮೊದಲಿಗೆ BSNLನಿಂದ ಸ್ಯಾಟಿಲೈಟ್ ಫೋನ್ ಸೇವೆ: ಪ್ರತಿ ನಿಮಿಷಕ್ಕೆ ವಿಧಿಸುವ ದರ ಕೇಳಿದ್ರೆ ಶಾಕ್ ಆಗ್ತೀರ..!

ಸ್ಯಾಮ್‌ಸಂಗ್ ಹೊಸದಾಗಿ ಆವಿಷ್ಕರಿಸಿರುವ ವಿಸ್ತರಿಸ ಬಹುದಾದ OLED ಡಿಸ್‌ಪ್ಲೇಯನ್ನು ತನ್ನ ಟಿವಿ ಮತ್ತು ಫೋನ್‌ಗಳಲ್ಲಿ ಅಳವಡಿಸಲಿದ್ದು, ನಂತರದಲ್ಲಿ ಬೇರೆಯವರಿಗೂ ತಯಾರಿಸಿಕೊಡಲಿದೆಯಂತೆ. ವಿಸ್ತರಿಸಬಹುದಾದ ಡಿಸ್‌ಪ್ಲೇ ಎಂದರೆ ಒಂದು ಹಂತದವರೆಗೂ ಡಿಸ್‌ಪ್ಲೇಯನ್ನು ಎಳೆಯಬಹುದಾಗಿದೆ ಅದುವೇ ರಬ್ಬರ್ ಮಾದರಿಯಲ್ಲಿ.

ಈ ಡಿಸ್‌ಪ್ಲೇಯೂ ರಬ್ಬರ್ ಮಾದರಿಯಲ್ಲಿ ಇರಲ್ಲಿದ್ದು ನೀವು ಇದನ್ನು ಒಳಕ್ಕೆ ತಳ್ಳಬಹುದು ಇಲ್ಲವೇ ಹೊರಕ್ಕೆ ಎಳೆಯಬಹುದು. ನೀವು ಹಾಗೆ ಮಾಡಿ ಬಿಟ್ಟ ನಂತರ ರಬ್ಬರ್ ಮಾದರಿಯಲ್ಲಿ ಅದು ಪುನಃ ತನ್ನ ಜಾಗಕ್ಕೆ ಹಾಗೆಯೇ ಮರಳಲಿದೆ. ಇದು ಡಿಸ್‌ಪ್ಲೇ ವಿಭಾಗದಲ್ಲೇ ಕ್ರಾಂತಿಕಾರಕ ಬದಲಾವಣೆಯನ್ನು ತರಲಿದೆ.

ವಿಶ್ವದ ಮೊದಲ ಮಡಿಸಬಹುದಾದ ಡಿಸ್‌ಪ್ಲೇ ಬಿಡುಗಡೆ ಮಾಡಲಿದೆ ಸ್ಯಾಮ್‌ಸಂಗ್....!

ಓದಿರಿ: 5,300mAh ಬ್ಯಾಟರಿ ಹೊಂದಿರುವ ಶಿಯೋಮಿ ಮಿ ಮ್ಯಾಕ್ಸ್ 2 ಲಾಂಚ್: ಬೆಲೆ, ವಿಶೇಷತೆಗಳು..!!!

ಅಲ್ಲದೆ ಈ ಹೊಸ ಡಿಸ್‌ಪ್ಲೇಯನ್ನು ಭಾಗಿಸಬಹುದಾಗಿದೆ, ಸುತ್ತಿ ಇಡಬಹುದಾಗಿದೆ, ಅದು ಎರಡು ಕಡೆಯಿಂದ ಬಾಗಿಸಲು ಮತ್ತು ಸುತ್ತಲು ಅವಕಾಶವನ್ನು ಮಾಡಿಕೊಡಲಿದೆ. ಒಟ್ಟಿನಲ್ಲಿ ಪೇಪರ್ ಮಾದರಿಯಲ್ಲಿ ಇದನ್ನು ಬಳಸುವ ಸಾಧ್ಯತೆ ಇದೆ. ಅಲ್ಲದೇ ಇದು 4K ಗುಣಮಟ್ಟವನ್ನು ಹೊಂದಿದೆ ಎನ್ನಲಾಗಿದೆ.

ಇತ್ತೀಚೆಗೆ ಡಿಸ್‌ಪ್ಲೇ ವಿಚಾರದಲ್ಲಿ ಸ್ಯಾಮ್‌ಸಂಗ್ ಹೆಚ್ಚಿನ ಸಂಶೋದನೆಯನ್ನ ನಡೆಸುತ್ತಿದ್ದು, ಐಫೋನ್‌ಗಳಿಗೂ ತನ್ನದೇ ಡಿಸ್‌ಪ್ಲೇಯನ್ನು ಸರಬರಾಜು ಮಾಡುತ್ತಿದೆ. ಸದ್ಯ ಈ ಹೊಸ ಆವಿಷ್ಕಾರವೂ ಟಿವಿ ಮತ್ತು ಮೊಬೈಲ್ ಡಿಸ್‌ಪ್ಲೇಗಳ ಇತಿಹಾಸವನ್ನೇ ಬದಲಾಯಿಸಲಿದೆ ಎನ್ನುವುದು ತಜ್ಞರ ಅಭಿಪ್ರಾಯವಾಗಿದೆ.

Best Mobiles in India

Read more about:
English summary
samsung was planning on announcing a ‘stretchable’ OLED display at SID 2017. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X