ಭಾರತಕ್ಕೆ ಬರುತ್ತಿರುವ ಈ ಒಂದು ಇಯರ್‌ಫೋನ್ ಬೆಲೆ ಬರಿ 45 ಲಕ್ಷ!! ಅಂತಹದ್ದೇನಿದೆ?

ಜರ್ಮನ್ ಆಡಿಯೋ ಕಂಪೆನಿ ಸೆನೈಜರ್ ಬಿಡುಗಡೆ ಮಾಡಿರುವ "ಸೆನೈಸರ್ ಹೆಚ್‌ಇ 1" ಇಯರ್ ಫೋನ್ ಇಷ್ಟು ಬೆಲೆಯನ್ನು ಹೊಂದಿದೆ.!!

|

ಅಬ್ಬಬ್ಬಾ ಎಂದರೆ ಒಂದು ಇಯರ್‌ಫೋನ್ ಬೆಲೆ ಎಷ್ಟಿರಬಹುದು.? ಈ ಪ್ರಶ್ನೆಗೆ 1000 ದಿಂದ 10000 ರೂಪಾಯಿಗಳು ಎಂದು ನಾವು ಊಹೆ ಮಾಡುತ್ತೇ ಅಲ್ಲವೇ? ಆದರೆ, ನಿಮ್ಮ ಊಹೆ ತಪ್ಪು! ಏಕೆಂದರೆ ಭಾರತದಲ್ಲಿ ನೂತನವಾಗಿ ಪರಿಚಯಿಸುತ್ತಿರುವ ನೂತನ ಇಯರ್‌ಫೋನ್ ಬೆಲೆ 45 ಲಕ್ಷ ರೂಪಾಯಿಗಳು!!

ಹೌದು, ಜರ್ಮನ್ ಆಡಿಯೋ ಕಂಪೆನಿ ಸೆನೈಜರ್ ಬಿಡುಗಡೆ ಮಾಡಿರುವ "ಸೆನೈಸರ್ ಹೆಚ್‌ಇ 1" ಇಯರ್ ಫೋನ್ ಇಷ್ಟು ಬೆಲೆಯನ್ನು ಹೊಂದಿದ್ದು, ಕೆಲವೇ ಕೆಲವು ಪ್ರಪಂಚದಲ್ಲಿಯೇ ಅತ್ಯಂತ ಗುಣಮಟ್ಟ ಮತ್ತು ಅತ್ಯಂತ ಸುಂದವಾದ ಇಯರ್‌ಫೋನ್ ಇದಾಗಿದೆ ಎಂದು ಸೆನೈಜರ್ ಕಂಪೆನಿ ಹೇಳಿಕೊಂಡಿದೆ.!!

ಹಾಗಾದರೆ, ನೂತನವಾಗಿ ಬಿಡುಗಡೆಯಾಗಿರುವ "ಸೆನೈಸರ್ ಹೆಚ್‌ಇ 1" ಇಯರ್‌ಫೋನ್ ಹೇಗಿದೆ? ಈ ಇಯರ್‌ಫೋನ್ ವಿಶೆಷತೆಗಳೇನು? ಬೆಲೆ ಯಾಕಿಷ್ಟು ಹೆಚ್ಚು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ಇಎಸ್ಎಸ್ ಸಾಬರ್ ES9018!!?

ಇಎಸ್ಎಸ್ ಸಾಬರ್ ES9018!!?

ಡಿಜಿಟಲ್ ಸಂಗೀತವನ್ನು ಅನಲಾಗ್ ಸಿಗ್ನಲ್ಗಳಾಗಿ ಮಾರ್ಪಡಿಸಲು ಇಎಸ್ಎಸ್ ಸಾಬರ್ ES9018 ಚಿಪ್ ಅನ್ನು ಬಳಸಲಾಗಿದ್ದು, ಸಂಯೋಜಿತ ಪರಿಣಾಮ, ಕಡಿಮೆ ವಿದ್ಯುತ್ ಅವಶ್ಯಕತೆಗಳನ್ನು ಹೊಂದಿರುವ ಸೆನೈಸರ್ ಹೆಚ್‌ಇ 1 ಹೆಚ್ಚಿನ ಉದ್ವೇಗ ನೀಡುತ್ತದೆ. ಮತ್ತು 6,000 ವೈಯಕ್ತಿಕ ಆಡಿಯೋ ಘಟಕಗಳನ್ನು ಒಳಗೊಂಡಿದೆ ಎಂದು ಸೆನೈಸರ್ ಹೇಳಿದೆ.

ಪ್ಲ್ಯಾಟಿನಂ ಮತ್ತು ಚಿನ್ನ!

ಪ್ಲ್ಯಾಟಿನಂ ಮತ್ತು ಚಿನ್ನ!

ಆವಿಯಾದ ಪ್ಲ್ಯಾಟಿನಂ ಡಯಾಫ್ರಾಮ್ಗಳು ಮತ್ತು ಚಿನ್ನದ-ಆವಿಯಾದ ಸೆರಾಮಿಕ್ ವಿದ್ಯುದ್ವಾರಗಳನ್ನು ಬಳಸಿ ಸೆನೈಸರ್ HE 1 ಇಯರ್‌ಫೋನ್ ತಯಾರು ಮಾಡಲಾಗಿದೆಯಂತೆ. ಇನ್ನು ಆಮ್ಲಜನಕ ಮುಕ್ತ ಆಡಿಯೋ ಸಿಗ್ನಲ್ಗಳ ಗರಿಷ್ಟ ಪ್ರಸರಣಕ್ಕಾಗಿ ಬೆಳ್ಳಿ ಲೇಪಿತವಾಗಿದೆ. ಬೆಲೆ ಯಾಕೆ ಹೆಚ್ಚು ಗೊತ್ತಾಯ್ತ ?

ಸಿಗ್ನಲ್ ಪರಿವರ್ತಿಸಲು 8 DAC ಗಳು!!

ಸಿಗ್ನಲ್ ಪರಿವರ್ತಿಸಲು 8 DAC ಗಳು!!

ಆಡಿಯೋ ಡೇಟಾವನ್ನು 32 ಬಿಟ್‌ ರೆಸಲ್ಯೂಶನ್ ಮತ್ತು 384 ಕಿಲೋಹರ್ಟ್ಜವರೆಗೆ ಅನಲಾಗ್ ಸಿಗ್ನಲ್ಗಳಂತೆ ಪರಿವರ್ತಿಸಲು 8 ಆಂತರಿಕ DACಗಳನ್ನು ನೈಸರ್ HE 1 ಇಯರ್‌ಫೋನ್ ಹೊಂದಿದೆ. (ಚಿತ್ರದಲ್ಲಿ ಇಯರ್‌ಫೋನ್ ಪಕ್ಕದಲ್ಲಿರುವ) ಶಬ್ದ ಕಡಿತಕ್ಕೆ ಪ್ರತಿ ಸ್ಟೀರಿಯೋ ಚಾನಲ್ಗೆ 4 DAC ಗಳನ್ನು ಸಮಾನಾಂತರವಾಗಿ ಜೋಡಿಸಲಾಗಿದೆ.

ಕ್ಯಾರರಾ ಅಮೃತಶಿಲೆ ಬಳಕೆ!!

ಕ್ಯಾರರಾ ಅಮೃತಶಿಲೆ ಬಳಕೆ!!

ಇಟಲಿಯ ಮೈಕೆಲ್ಯಾಂಜೆಲೊ ಅವರು ಶಿಲ್ಪಗಳನ್ನು ರಚಿಸಿದ ಕ್ಯಾರರಾ ಅಮೃತಶಿಲೆಯನ್ನು ಈ ಮೈಕ್ರೊಪ್ರೊಸೆಸರ್‌ನಲ್ಲಿ ಬಳಸಲಾಗಿದ್ದು, ಈ ರೀತಿಯ ಅಮೃತಶಿಲೆಯ ಬೇರೆ ಎಲ್ಲೂ ಇಲ್ಲ ಎಂದು ಸೆನೈಸರ್ ಹೇಳಿದೆ. ಕೇಳುಗನ ಹೊಂದಾಣಿಕೆಗಳನ್ನು ಅನುಸರಿಸುವ "ಸೆನೈಸರ್ ಹೆಚ್‌ಇ 1" ಇಯರ್‌ಫೋನ್ ಭಾರತದಲ್ಲಿ ಮೇ 2017 ರಿಂದ 45,00,000ರೂಪಾಯಿಗೆ ಲಭ್ಯವಿದೆ.

Best Mobiles in India

English summary
A combined effect ensures high impulse fidelity with relatively low power requirements.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X