ಸ್ಮಾರ್ಟ್‌ಪೋನಿನಲ್ಲಿ ಬ್ಯಾಟರಿ ಖಾಲಿಯಾದರೆ ಪಕ್ಕದ ಪೋನಿಂದ ಚಾರ್ಜ್ ಮಾಡಿಕೊಳ್ಳಿ, ಅದು ವೈರ್‌ಲೈಸ್...!!

ಹೊಸದೊಂದು ಆವಿಷ್ಕಾರ ನಡೆಯುತ್ತಿದ್ದು, ಪಕ್ಕದ ಪೋನಿನಿಂದ ಯಾವುದೇ ವೈರ್‌ ಕನೆಕ್ಷನ್ ಇಲ್ಲದೇ ನಿಮ್ಮ ಫೋನನ್ನು ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

|

ಸ್ಮಾರ್ಟ್‌ಪೋನಿನ ಬ್ಯಾಟರಿ ಬೇಗನೆ ಖಾಲಿಯಗಲಿದೆ ಎಂಬುದು ಎಲ್ಲರ ಸಮಸ್ಯೆಯಾಗಿದ್ದು, ಇದನ್ನು ಪರಿಹರಿಸುವ ಸಲುವಾಗಿ ಅನೇಕ ಪ್ರಯತ್ನಗಳು ನಡೆಯುತ್ತಿದೆ, ಪವರ್ ಬ್ಯಾಂಕ್ ಬಳಕೆ, ಜಾಸ್ತಿ ಬ್ಯಾಕಪ್ ಇರುವ ಬ್ಯಾಟರಿ ಬಳಕೆ ಸೇರಿದಂತೆ ಹಲವು ಪ್ರಯತ್ನಗಳು ನಡೆಯುತ್ತಿದೆ. ಹೊಸದೊಂದು ಆವಿಷ್ಕಾರ ನಡೆಯುತ್ತಿದ್ದು, ಪಕ್ಕದ ಪೋನಿನಿಂದ ಯಾವುದೇ ವೈರ್‌ ಕನೆಕ್ಷನ್ ಇಲ್ಲದೇ ನಿಮ್ಮ ಫೋನನ್ನು ಚಾರ್ಜ್ ಮಾಡಿಕೊಳ್ಳಬಹುದಾಗಿದೆ.

ಸ್ಮಾರ್ಟ್‌ಪೋನಿನಲ್ಲಿ ಬ್ಯಾಟರಿ ಖಾಲಿಯಾದರೆ ಪಕ್ಕದ ಪೋನಿಂದ ಚಾರ್ಜ್  ಮಾಡಿಕೊಳ್ಳಿ

ಓದಿರಿ: ಜಿಯೋ, ಏರ್‌ಟೆಲ್‌ಗೆ ಸೆಡ್ಡು ಹೊಡೆದ ಸರ್ಕಾರ: BSNL ನಿಂದ ಇತಿಹಾಸದಲ್ಲೇ ಅತ್ಯುತ್ತಮ ಆಫರ್..!!!

ಸದ್ಯ ಸ್ಮಾರ್ಟ್‌ಪೋನುಗಳಲ್ಲಿ ಹೆಚ್ಚಿನ ಬಾಳಿಕೆ ಬರುವಂತಹ ಬ್ಯಾಟರಿಗಳನ್ನು ಅಳವಡಿಸಿದ್ದರು ಬ್ಯಾಟರಿ ಬಾಳಿಕೆ ಕಡಿಮೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈ ಹಿನ್ನಲೆಯಲ್ಲಿ ನಿಮ್ಮ ಪೋನಿನ ಪಕ್ಕದಲ್ಲಿರುವ ಪೋನಿಂದಲೇ ಚಾರ್ಜ್ ಮಾಡಿಕೊಳ್ಳುವ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.

ಸದ್ಯದ ಸ್ಮಾರ್ಟ್‌ಪೋನಿನಲ್ಲಿ ಕಾಣಿಸಿಕೊಳ್ಳುತ್ತಿರುವ NFC ಮೂಲಕ ಚಾರ್ಜಿಂಗ್ ಮಾಡುವ ತಂತ್ರಜ್ಞಾನವನ್ನು ಸೋನಿ ಅಭಿವೃದ್ಧಿಪಡಿಸಿದ್ದು, ಇದಕ್ಕಾಗಿ ಪೇಟೆಂಟ್ ಸಹ ಪಡೆದುಕೊಂಡಿದೆ ಎನ್ನಲಾಗಿದೆ. ಇದರಲ್ಲಿ ವೈರ್‌ಲೈಸ್ ಡೇಟಾ ಟ್ರಾನ್ಸ್‌ಫರ್ ಮತ್ತು ಎಲೆಕ್ಟ್ರಿಸಿಟಿ ಸಹ ಟ್ರಾನ್ಸ್‌ಫರ್ ಮಾಡುವ ಮೂಲಕ ಸೋನಿ ಹೊಸದೊಂದು ಅವಿಷ್ಕಾರಕ್ಕೆ ಮುಂದಾಗಿದೆ.

ಸ್ಮಾರ್ಟ್‌ಪೋನಿನಲ್ಲಿ ಬ್ಯಾಟರಿ ಖಾಲಿಯಾದರೆ ಪಕ್ಕದ ಪೋನಿಂದ ಚಾರ್ಜ್  ಮಾಡಿಕೊಳ್ಳಿ

ಓದಿರಿ: 3GB RAM ಹೊಂದಿರುವ ಕೂಲ್‌ಪ್ಯಾಡ್ ನೋಟ್ 5 ಲೈಟ್‌: ಬೆಲೆ ರೂ.8,199 ಮಾತ್ರ

ಶೀಘ್ರವೇ ಸೋನಿ ಈ ತಂತ್ರಜ್ಞಾನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದ್ದು, ಮೊದಲಿಗೆ ತನ್ನ ಸ್ಮಾರ್ಟ್‌ಪೋನುಗಳಲ್ಲಿ ಮಾತ್ರ ಇದನ್ನು ಅಳವಡಿಸಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಡೇಟಾ ಮಾದರಿಯಲ್ಲೇ ಬ್ಯಾಟರಿಯನ್ನು ಹಂಚಿಕೊಳ್ಳುವ ಕಾಲವು ದೂರವಿಲ್ಲ.

Best Mobiles in India

Read more about:
English summary
Sony introduced a patent that steals battery power from your friend’s phone without even having to connect a cable. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X