ಗುಜರಾತ್‌ನಲ್ಲಿ ಜಿಯೋ 'ಗೊಲ್‌ಗಪ್ಪಾ': ತಿಂದಷ್ಟು ಅನ್ ಲಿಮಿಡೆಟ್ ಪಾನಿಪೂರಿ..!!!!

ಪಾನಿಪೂರಿ ಮಾರಾಟ ಮಾಡುವ ರವಿ ಜಗದಂಬಾ ಜಿಯೋ ಮಾದರಿಯಲ್ಲಿ ತನ್ನ ಗ್ರಾಹಕರಿಗೆ ಪಾನಿಪೂರಿ ಆಫರ್ ನೀಡಿದ್ದಾನೆ. 'ಗೋಲ್ ಗಪ್ಪಾ ಖಾವೋ' ಹೆಸರಿನಲ್ಲಿ ಅಲ್‌ಲಿಮಿಟೆಡ್ ಪಾನಿಪೂರಿ ತಿನ್ನುವ ಆಪರ್ ನೀಡಿದ್ದಾನೆ.

|

ದೇಶದ ಜನರಿಗೆ ಅನ್‌ಲಿಮಿಟೆಡ್ ಡೇಟಾ ನೀಡುವ ಮೂಲಕ ಹೊಸ ಅಲೆಯನ್ನು ಸೃಷ್ಟಿಸಿದ ರಿಲಯನ್ಸ್ ಮಾಲೀಕತ್ವದ ಜಿಯೋ ಮಾದರಿಯಲ್ಲೇ ಗುಜರಾತ್‌ನಲ್ಲಿ ಪಾನಿಪೂರಿ ಮಾಡುವಾತ ತನ್ನ ಗ್ರಾಹಕರಿಗೆ ಅಲ್‌ಲಿಮಿಟೆಡ್ ಪಾನಿಪೂರಿ ತಿನ್ನುವ ಅವಕಾಶವನ್ನು ಮಾಡಿಕೊಟ್ಟಿದ್ದಾನೆ. ಈ ಮೂಲಕ ಸುದ್ದಿಯಾಗಿದ್ದಾನೆ, ಸಾಮಾಜಿಕ ಜಾಲತಾಣಗಳಲ್ಲಿ ಮಿಂಚುತ್ತಿದ್ದಾನೆ.

ಗುಜರಾತ್‌ನಲ್ಲಿ ಜಿಯೋ 'ಗೊಲ್‌ಗಪ್ಪಾ': ತಿಂದಷ್ಟು ಅನ್ ಲಿಮಿಡೆಟ್ ಪಾನಿಪೂರಿ..!!!!

ಗುಜರಾತಿನ ಪ್ರಮುಖ ಸ್ಥಳಗಳಲ್ಲಿ ಒಂದಾಗ ಪೋರಬಂದರಿನಲ್ಲಿ ಪಾನಿಪೂರಿ ಮಾರಾಟ ಮಾಡುವ ರವಿ ಜಗದಂಬಾ ಜಿಯೋ ಮಾದರಿಯಲ್ಲಿ ತನ್ನ ಗ್ರಾಹಕರಿಗೆ ಪಾನಿಪೂರಿ ಆಫರ್ ನೀಡಿದ್ದಾನೆ. 'ಗೋಲ್ ಗಪ್ಪಾ ಖಾವೋ' ಹೆಸರಿನಲ್ಲಿ ಅಲ್‌ಲಿಮಿಟೆಡ್ ಪಾನಿಪೂರಿ ತಿನ್ನುವ ಆಫರ್ ಮಾಡಿದ್ದಾನೆ.

ಧನ್ ಧನಾ ಧನ್ ಮಾದರಿಯಲ್ಲಿ ಎರಡು ಆಫರ್ :

ಧನ್ ಧನಾ ಧನ್ ಮಾದರಿಯಲ್ಲಿ ಎರಡು ಆಫರ್ :

ಜಿಯೋ ಧನ್ ಧನಾ ಧನ್ ಮಾದರಿಯಲ್ಲಿ ಇಲ್ಲಿಯೂ ಎರಡು ಆಫರ್ ಲಭ್ಯ, 'ಗೊಲ್‌ಗಪ್ಪಾ' ತಿನ್ನುವವರ ಸಂಖ್ಯೆ ಹೆಚ್ಚಾಗಿದೆ ಇದೇ ಮಾದರಿಯಲ್ಲಿ ಪ್ರತಿ ನಿತ್ಯ ತಿನ್ನುವವರ ಸಂಖ್ಯೆಯೂ ಕಡಿಮೆ ಇಲ್ಲ. ಇಕ್ಕಾಗಿ ರವಿ ಎರಡು ರೀತಿಯ ಆಫರ್ ನೀಡಿದ್ದಾನೆ.

ಗೊಲ್‌ಗಪ್ಪಾ' ಡೈಲಿ ಆಫರ್:

ಗೊಲ್‌ಗಪ್ಪಾ' ಡೈಲಿ ಆಫರ್:

ಒಂದು ಡೈಲಿ ಆಫರ್ ಇದರಲ್ಲಿ 100 ರೂಪಾಯಿ ನೀಡಿ ಅನ್'ಲಿಮಿಟೆಡ್ ಪಾನಿಪೂರಿ ತಿನ್ನಬಹುದು. ನೀವು ಬೇಕು ಎಂದಷ್ಟು ಪಾನಿ ಪೂರಿಯನ್ನು ರವಿ ನೀಡಲಿದ್ದಾನೆ ಎನ್ನಲಾಗಿದೆ. ಈ ಆಪರ್ ನೀಡದ ಮೇಲೆ ಪಾನಿಪೂರಿ ವ್ಯಾಪಾರವೂ ಜೋರಾಗಿ ನಡೆಯುತ್ತಿದೆ ಎನ್ನಲಾಗಿದೆ.

'ಗೊಲ್‌ಗಪ್ಪಾ' ಮಂತ್ಲಿ ಆಫರ್:

'ಗೊಲ್‌ಗಪ್ಪಾ' ಮಂತ್ಲಿ ಆಫರ್:

ಇದೇ ಮಾದರಿಯಲ್ಲಿ ಪ್ರತಿ ನಿತ್ಯ ಬಂದು ಪಾನಿಪೂರಿ ತಿನ್ನುವವರಿಗಾಗಿ ತಿಂಗಳ ಆಫರ್ ಸಹ ಲಭ್ಯವಿದೆ. ಮಂತ್ಲಿ ಆಫರ್ 1000 ರೂಪಾಯಿದ್ದಾಗಿದೆ. 1000 ರೂಪಾಯಿ ನೀಡಿ ಇಡೀ ತಿಂಗಳು ನಿಮಗೆ ಬೇಕಾದಷ್ಟು ಪಾನಿಪೂರಿ ತಿನ್ನಬಹುದಾಗಿದೆ. ನೀವು ಸಾಕು ಎನ್ನುವಷ್ಟು ಪಾನಿಪೂರಿಯು ಲಭ್ಯವಿರಲಿದೆ.

ಫೇಮಸ್ ಆಗಿದೆ ಜಿಯೋ 'ಗೊಲ್‌ಗಪ್ಪಾ':

ಫೇಮಸ್ ಆಗಿದೆ ಜಿಯೋ 'ಗೊಲ್‌ಗಪ್ಪಾ':

ಸದ್ಯ ಮಾರುಕಟ್ಟೆಯಲ್ಲಿ ಜಿಯೋ ಹೆಚ್ಚಿನ ಖ್ಯಾತಿ ಗಳಿಸಿದಂತೆ ಜಿಯೋ 'ಗೊಲ್‌ಗಪ್ಪಾ' ಸಹ ಹೆಚ್ಚಿನ ಖ್ಯಾತಿಯನ್ನು ಗಳಿಸಿಕೊಂಡಿದೆ. ಇಲ್ಲಿ ಹೋಗಿ ಪಾನಿಪೂರಿ ತಿಂದವರೆಲ್ಲೂ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಟ್ವೀಟರ್ ನಲ್ಲಿ ಚಿತ್ರಗಳಲ್ಲಿ ಫೋಸ್ಟ್ ಮಾಡುತ್ತಿದ್ದು, ಇದನ್ನು ನೋಡಿ ರವಿಯನ್ನು ಹುಡುಕಿಕೊಂಡು ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಸಾಗಿದೆ.

Best Mobiles in India

Read more about:
English summary
frenzy with Reliance Jio’s unlimited offers, a pani puri vendor in Gujarat too took inspiration and decided to give his customers countless servings. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X