ಜಿಯೋಯಿಂದಾಗಿ ಪ್ರಪಂಚದಲ್ಲಿಯೇ ಮೊದಲ ಸ್ಥಾನಕ್ಕೆ ಬಂದು ನಿಂತ ಭಾರತ!!

ಇಂಟರ್‌ನೆಟ್‌ ಬಳಕೆಯಲ್ಲಿ ಮುಂದುವರೆದ ದೇಶಗಳಿಗಿಂತ ಬಹಳಷ್ಟು ಕಡಿಮೆ ಇದ್ದ ಭಾರತ ಇದೀಗ ಮೊದಲ ಸ್ಥಾನ ಅಲಂಕರಿಸಿದೆ.

Written By:

ಜಿಯೋ ಉಚಿತ ಡೇಟಾ ಆಫರ್ ನೀಡಿದ್ದರಿಂದ ಒಂದು ತಿಂಗಳಿನಲ್ಲಿ ಭಾರತೀಯರ ಡೇಟಾ ಬಳಕೆ ಇಡೀ ಪ್ರಪಂಚದಲ್ಲಿಯೇ ಹೆಚ್ಚು ಎನ್ನುವ ಮಾಹಿತಿ ಹೊರಬಿದ್ದಿದೆ.!! ಜಿಯೋ ಟೆಲಿಕಾಂಗೆ ಬರುವ ಮೊದಲು ಇದ್ದ ಡೇಟಾ ಬಳಕೆ ಇದೀಗ 5 ಪಟ್ಟು ಹೆಚ್ಚುದ್ದು, ಭಾರತ ಇದೀಗ ಪ್ರಪಂಚದಲ್ಲಿಯೇ ಮೊದಲ ಸ್ಥಾನಕ್ಕೆ ಬಂದು ನಿಂತಿದೆ.!!

ಭಾರತದಲ್ಲಿ ಜಿಯೋ ಸೇವೆ ನೀಡಿದ ನಂತರ ಕೇವಲ ಒಂದು ತಿಂಗಳಲ್ಲಿ 100 ಕೋಟಿ ಜಿಬಿಯಷ್ಟು ಜಿಯೋ ಇಂಟರ್‌ನೆಟ್‌ ಬಳಕೆಯಾಗಿದ್ದು, ಇಂಟರ್‌ನೆಟ್‌ ಬಳಕೆಯಲ್ಲಿ ಮುಂದುವರೆದ ದೇಶಗಳಿಗಿಂತ ಬಹಳಷ್ಟು ಕಡಿಮೆ ಇದ್ದ ಭಾರತ ಇದೀಗ ಮೊದಲ ಸ್ಥಾನ ಅಲಂಕರಿಸಿದೆ.ಎರಡನೆ ಸ್ಥಾನದಲ್ಲಿರುವ ಅಮೆರಿಕಾ ಕೇವಲ 71 ಕೋಟಿ GB ಡೇಟಾ ಮಾತ್ರ ಬಳಸಿದೆ.!!

ಜಿಯೋಯಿಂದಾಗಿ ಪ್ರಪಂಚದಲ್ಲಿಯೇ ಮೊದಲ ಸ್ಥಾನಕ್ಕೆ ಬಂದು ನಿಂತ ಭಾರತ!!

ಜಿಯೋ ಪ್ರೈಮ್ = ಏರ್‌ಟೆಲ್‌ ಫೈಟ್!..345 ರೂ.ಗೆ 28GB ಡೇಟಾ ಮತ್ತು ಅನ್‌ಲಿಮಿಟೆಡ್ ಕಾಲ್!!

ಜಿಯೋ ನೀಡಿದ ಡೇಟಾದಿಂದ ಮಾತ್ರವೇ ಇಷ್ಟು ದಾಖಲೆಯಾಗಿದ್ದು, ಭಾರತದ ಉಳಿದ ಟೆಲಿಕಾಂಗಳಿಂದ ಬಳಕೆಯಾಗಿರುವ ಡೇಟಾ ಪ್ರಮಾಣ ಇನ್ನು ಹೆಚ್ಚಿದ್ದು, ಇದೇ ಮೊದಲ ಸಾರಿ ಇಷ್ಟೊಂದು ಪ್ರಮಾಣದಲ್ಲಿ ಡೇಟಾ ಬಳಕೆಯಾಗಿದೆ.

ಜಿಯೋಯಿಂದಾಗಿ ಪ್ರಪಂಚದಲ್ಲಿಯೇ ಮೊದಲ ಸ್ಥಾನಕ್ಕೆ ಬಂದು ನಿಂತ ಭಾರತ!!

ಇನ್ನು ಜಿಯೋ ಉಚಿತ ಸೇವೆಯನ್ನು ನಿಲ್ಲಿಸಿದ ಬಳಿಕ ಭಾರತೀಯರ ಡೇಟಾ ಬಳಕೆ ಸಾಕಷ್ಟು ಕಡಿಮೆಯಾಗುತ್ತದೆ ಎನ್ನಲಾಗಿದ್ದು, ಜಿಯೋ ಪ್ರೈಮ್ ಆಫರ್‌ ಮೂಲಕ ಇದೇ ಪ್ರಮಾಣದಲ್ಲಿ ಡೇಟಾ ಬಳಕೆ ಸಾಧ್ಯವಿಲ್ಲಾ ಎನ್ನುವ ಮಾತು ಹರಿದಾಡಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
Now this is an interesting question about jio. to know more visit to kannada.gizbot.com
Please Wait while comments are loading...
Opinion Poll

Social Counting