ಸೋನಿ ಮೊಬೈಲ್ ತನ್ನ ಹೊಸ ಸ್ಮಾರ್ಟ್ ಫೋನ್ ಆದ ಸೋನಿ Experia P ಮಾಡಲ್ ಅನ್ನು ಮುಂದಿನ ವಾರ ಭಾರತಕ್ಕೆ ಬಿಡುಗಡೆ ಮಾಡಲಿದೆ ಎಂಬ ಸುದ್ದಿ ಬಂದಿದೆ. ಫೆಬ್ ತಿಂಗಳಲ್ಲಿ ನಡೆದ ವಿಶ್ವ ಮೊಬೈಲ್ ಕಾಂಗ್ರೆಸ್ ನಲ್ಲಿ ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆ ಗಳಿಸಿದ್ದ ಈ ಫೋನ್ 26,000 ರೂಪಾಯಿಗೆ ಬರಲಿದೆಯಂತೆ. ಈ ಫೋನಿನ ಫೀಚರುಗಳು ಈ ರೀತಿ ಇವೆ: 4 ಇಂಚ್ ತರಚು ನಿರೋಧಕ ಡಿಸ್ಪ್ಲೇ, 960 x 540 ರೆಸಲ್ಯೂಶನ್ ನೊಂದಿಗೆ ಆಂಡ್ರಾಯ್ಡ್ 2.3 ಜಿಂಜರ್...
ಸ್ಯಾಮ್ಸಂಗ್ ಗ್ಯಾಲಕ್ಸಿ Proclaim ಸ್ಮಾರ್ಟ್ ಫೋನ್
ಸ್ಯಾಮ್ಸಂಗ್ ಕಂಪನಿಯು ಈಗ ವಿಶ್ವದ ನಂ.1 ಸ್ಮಾರ್ಟ್ ಫೋನ್ ಮಾರಾಟಗಾರನಾಗಿದ್ದು, ಹಲವಾರು ರೀತಿಯ, ವಿಭಿನ್ನ ಸ್ಪೆಸಿಫಿಕೆಶನ್ ಗಳು ಇರುವ ಹೊಸ ಸ್ಮಾರ್ಟ್ ಫೋನುಗಳನ್ನು ಬಿಡುಗಡೆ ಮಾಡುತ್ತಿದೆ. ಸ್ಯಾಮ್ಸಂಗ್ ಗ್ಯಾಲಕ್ಸಿ S3 ಫೋನು ಹಿಟ್ ಆದ ಮೇಲಂತೂ, ಮತ್ತಷ್ಟು ಹುರುಪಿನಿಂದ ಸ್ಯಳಕ್ಸಿ ಸರಣಿಯ ಫೋನುಗಳನ್ನು ಬಿಡುಗಡೆ ಮಾಡುತ್ತಿದ್ದು, ಈಗ ಗ್ಯಾಲಕ್ಸಿ Proclaim ಹೆಸರಿನ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಅನ್ನು ಹೊರತರಲಿದೆ. ಈ ಸ್ಮಾರ್ಟ್ ಫೋನಿನ ಫೀಚರುಗಳು ಈ ರೀತಿ ಇವೆ: 3.5 ಇಂಚ್ TFT ಟಚ್ ಸ್ಕ್ರೀನ್ 2.3 ಜಿಂಜರ್...
ಆಪಲ್ ಐಫೋನ್ 5 ದೊಡ್ಡ ಸ್ಕ್ರೀನ್ ಜೊತೆ ಬರಲಿದೆಯೇ
ಆಪಲ್ ಕಂಪನಿಯ ಅತಿ ನಿರೀಕ್ಷಿತ ಉತ್ಪನ್ನವಾದ ಆಪಲ್ ನ್ಯೂಪ್ಯಾಡ್ ಟ್ಯಾಬ್ಲೆಟ್ ಬಿಡುಗಡೆಯಾಗಿ ಹಿಟ್ ಆದ ಮೇಲೆ, ಈಗ ಆಪಲ್ ಐಫೋನ್ 5 ಬಗ್ಗೆ ಸಾಕಷ್ಟು ಗುಲ್ಲು ಎದ್ದಿವೆ. ಸೆಪ್ಟೆಂಬರ್ ವೇಳೆಗೆ ಬಿಡುಗಡೆ ಆಗುತ್ತೆ ಅಂತ ಕೆಲವರು ಗುಲ್ಲೆಬ್ಬಿಸಿದರೆ, ಇನ್ನು ಕೆಲವರು, ಇದರಲ್ಲಿ ರೆಟಿನಾ ಡಿಸ್ಪ್ಲೇ ಇರಲಿದೆ, ಪ್ಲಾಸ್ಟಿಕ್ ಹಾಗು ಲೋಹದ ಗುಣ ಎರಡೂ liquid metal ತಂತ್ರಜ್ಞಾನ ಇರಲಿದೆ ಎಂದೂ ಸುದ್ದಿ ಹರಡಿದ್ದರು. ಈಗ ಬಂದಿರುವ ಲೇಟೆಸ್ಟ್ ಸುದ್ದಿ ಏನೆಂದರೆ 4 ಇಂಚ್ ಡಿಸ್ಪ್ಲೇ ಜೊತೆ ಬರಲಿರುವ...
ನೋಕಿಯಾ 110 & 112 ಬಜೆಟ್ ಫೋನುಗಳು ಬರಲಿದೆ
ನೋಕಿಯಾ ಕಂಪನಿ ತನ್ನ ಕಡಿಮೆ ಬಜೆಟ್ ಮೊಬೈಲುಗಳಿಂದಲೇ ಭಾರತದ ಮಾರುಕಟ್ಟೆಯಲ್ಲಿ ಹಿಟ್ ಆದದ್ದು. ಆದರೆ ಇತ್ತೀಚೆಗೆ ಸ್ಯಾಮ್ಸಂಗ್ ಹಾಗು ಚೀನಾದ ಮೊಬೈಲುಗಳು ಅದರ ಮಾರುಕಟ್ಟೆ ಪಾಲು ಕುಸಿಯುತ್ತಿದ್ದು, ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡುತ್ತಿದೆ. ಹೀಗಾಗಿ ಹಲವಾರು ಬಜೆಟ್ ಮೊಬೈಲುಗಳನ್ನು ಬಿಡುಗಡೆ ಮಾಡುತ್ತಿದ್ದು, ಈಗ ನೋಕಿಯಾ 110 ಹಾಗು ನೋಕಿಯಾ 112 ಹೆಸರಿನ ಎರಡು ದ್ವಿಸಿಮ್ ಮಾಡೆಲ್ ಗಳನ್ನು ಘೋಷಿಸಿದೆ. ನೋಕಿಯಾ 110 ಮಾಡಲ್ ನ ಫೀಚರುಗಳು ಈ ರೀತಿ ಇವೆ: 1.8 ಅಂಗುಲ ಡಿಸ್ಪ್ಲೇ 128 X 160...
ಸ್ಯಾಮ್ಸಂಗ್ ಗ್ಯಾಲಕ್ಸಿ S3 ಕೊಳ್ಳಲು 7 ಕಾರಣಗಳು
ಈ ವರ್ಷದ ಸ್ಮಾರ್ಟ್ ಫೋನುಗಳಲ್ಲೇ ಅತೀ ಹೆಚ್ಚು ನಿರೀಕ್ಷೆ ಇದ್ದದ್ದು ಸ್ಯಾಮ್ಸಂಗ್ ಗ್ಯಾಲಕ್ಸಿ S3 ಮೇಲೆ. ಜೂನ್ 10ಕ್ಕೆ ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಮೊಬೈಲ್ ಈಗಾಗಲೇ ಫೆವರಿಟ್ ಎನಿಸಿದೆ. ಮೂಲಗಳ ಪ್ರಕಾರ 42,500 ರೂಪಾಯಿ ಬೆಲೆಗೆ ಸ್ಯಾಮ್ಸಂಗ್ ಈ ಫೋನನ್ನು ಗ್ರಾಹಕರಿಗೆ ಮಾರಲಿದ್ದು, ಆಪಲ್ ನ ಐ ಫೋನ್ 4S ಗಿಂತಾ ಹಲವು ರೀತಿಯಲ್ಲಿ ಚೆನ್ನಾಗಿದೆ. ನೀವು ಯಾಕೆ ಈ ಫೋನನ್ನು ಕೊಳ್ಳಬಹುದು ಎಂದು ತಿಳಿಸುವ 7 ಕಾರಣಗಳನ್ನು ಇಲ್ಲಿ ಕೊಡಲಾಗಿದೆ. 1. ದೊಡ್ಡ ಡಿಸ್ಪ್ಲೇ- ಈ...
ಕಾಮದ ಸುಖ ಬೇಡ, ಮೊಬೈಲ್ ಬೇಕು:Ipsos ಸಮೀಕ್ಷೆ
“ಐಲು ಐಲು ಐಲು ಕೈಲಿದ್ರೆ ಮೊಬೈಲು” ಅನ್ನೋ ಹಾಡೊಂದು ಬಹಳ ವರ್ಷಗಳ ಹಿಂದೆ ಫೇಮಸ್ ಆಗಿತ್ತು. ಮೊಬೈಲ್ ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದೇ ಇಟ್ಟಿದ್ದು, ದಿನನಿತ್ಯದ ಜೀವನ ಶೈಲಿಯನ್ನೇ ಬದಲಾಯಿಸುವ ಮಟ್ಟಿಗೆ ಹೋಗಿದೆ. ಬೆಳಗ್ಗೆ ಎದ್ದರೆ ಮೊಬೈಲ್, ಹಲ್ಲು ಉಜ್ಜುವಾಗ ಮೊಬೈಲ್, ಸ್ನಾನ ಮಾಡುವಾಗ ಮೊಬೈಲ್, ಊಟ ಮಾಡುವಾಗ ಮೊಬೈಲ್, ಕೊನೆಗೆ ಮಲಗುವಾಗ ತಲೆದಿಂಬಿನ ಕೆಳಗೂ ಮೊಬೈಲ್ ಇರಬೇಕು. ಅಷ್ಟೊಂದು ದಾಸರಾಗಿದ್ದೇವೆ ನಾವು, ಈ ಮೊಬೈಲಿಗೆ. ಮೊಬೈಲ್ ಬಳಸಿ ಅಶ್ಲೀಲ ಮೆಸೇಜುಗಳನ್ನು, ಫೋಟೋಗಳನ್ನು ಹಾಗು ವೀಡಿಯೋಗಳನ್ನು ನೋಡುವುದು,...
ಸ್ಯಾಮ್ಸಂಗ್ ತರಲಿದೆ ಹೊಸ ವಿಂಡೋಸ್ ಫೋನ್
ಸ್ಮಾರ್ಟ್ ಫೋನುಗಳ ಮಾರುಕಟ್ಟೆಯಲ್ಲಿ ಈಗಾಗಲೇ ಪ್ರಭುತ್ವ ಸಾಧಿಸಿರುವ ಸ್ಯಾಮ್ಸಂಗ್ ಈಗ ನೋಕಿಯಾದ ವಿಂಡೋಸ್ ಮೊಬೈಲಿಗೂ ಸಡ್ಡು ಹೊಡೆಯಲು ಸಿದ್ಧವಾಗಿದ್ದು, ವಿಂಡೋಸ್ ಆಧಾರಿತ ಸ್ಮಾರ್ಟ್ ಫೋನ್ ಒಂದನ್ನು ಘೋಷಿಸಿದೆ. ಸ್ಯಾಮ್ಸಂಗ್ ಒಮ್ನಿಯ M ಹೆಸರಿನ ಈ ಸ್ಮಾರ್ಟ್ ಫೋನ್, ನೋಕಿಯಾ ಲುಮಿಯ 610 ಮಾಡಲ್ ಗೆ ನೇರ ಸ್ಪರ್ಧೆ ಒಡ್ಡಲಿದೆ ಎಂಬುದು ಮಾರುಕಟ್ಟೆಯ ಅಭಿಪ್ರಾಯ. ಸುಮಾರು 11,000 ರೂಪಾಯಿಗೆ ಈ ಸ್ಮಾರ್ಟ್ ಫೋನ್ ಬಿಡುಗಡೆಯಾಗಲಿದ್ದು, ಈ ಫೋನಿನ ಫೀಚರುಗಳು ಈ ರೀತಿ ಇವೆ: 4 ಇಂಚಿನ ಸೂಪರ್ AMOLED ಡಿಸ್ಪ್ಲೇ...
ಬಿಸಿನೆಸ್ ಕಾರ್ಡ್ ಸ್ಕ್ಯಾನ್ ಮಾಡುವ App
ಬ್ಯುಸಿ ಇರುವ ಈ ದಿನಗಳಲ್ಲಿ ನಾವು ಹಲವಾರು ಜನರನ್ನು ಭೇಟಿ ಮಾಡುತ್ತೇವೆ, ಹಾಗಾಗಿ ಕಾಂಟಾಕ್ಟ್ ತಪ್ಪಿ ಹೋಗದೆ ಇರಲಿ ಅಂತ ಫೋನ್ ನಂಬರ್ ಅನ್ನು ತೆಗೆದುಕೊಳ್ಳುತ್ತೇವೆ. ಕೆಲವು ಬಾರಿ ಬಿಸಿನೆಸ್ ಕಾರ್ಡ್ ಕೂಡ ತೆಗೆದುಕೊಳ್ಳುತ್ತೇವೆ. ಆದರೆ ಕಾಲಾಂತರದಲ್ಲಿ ಎಲ್ಲೊ ಇಟ್ಟು ಮರೆತುಹೋಗುವ ಸಾಧ್ಯತೆ ಇರುತ್ತದೆ. ಫೋನ್ ನಂಬರ್ ಇದ್ದರೂ ವ್ಯಕ್ತಿಗಳ ವಿಳಾಸ ಕಾರ್ಡ್ನಲ್ಲಿ ಇರುವುದರಿಂದ ಮತ್ತೆ ಅವರನ್ನು ಫೋನ್ ಮಾಡಿ ವಿಳಾಸ ಕೇಳುವುದು ಚೆನ್ನಾಗಿರುವುದಿಲ್ಲ. NFC ಹಾಗು ಬ್ಲೂಟೂತ್ ಇದ್ದರೂ ಕೂಡ ವಿಸಿಟಿಂಗ್ ಕಾರ್ಡ್ ಕೆಲವೊಮ್ಮೆ ಬೇಕಾಗುತ್ತದೆ....
Ken Xin Da ಜೇಮ್ಸ್ ಬಾಂಡ್ ಮೊಬೈಲ್
ನೀವು ಅಣ್ಣಾ ಬಾಂಡ್, ಕ್ಷಮಿಸಿ, ಜೇಮ್ಸ್ ಬಾಂಡ್ ಚಿತ್ರ ನೋಡಿದ್ದೀರ ತಾನೇ? ಬಾಂಡ್ ಉಪಯೋಗಿಸುವ ಕಾರ್, ಗನ್, ಕ್ಯಾಮರಾ, ಪತ್ತೇದಾರಿ ಉಪಕರಣಗಳು ಒಂದು ರೀತಿ ಡಿಫರೆಂಟ್ ಆಗಿರುತ್ತವೆ. ಅವುಗಳನ್ನು ನೋಡಿದರೆ ನಮಗೂ ಕೊಳ್ಳಲು ಆಸೆ ಆಗುತ್ತದೆ. ಆದರೆ ಏನ್ ಮಾಡೋದು ಅವೆಲ್ಲ ಫಿಲಂಗೆ ಅಂತಾ ಉಪಯೋಗಿಸೋದು . ಆದರೆ ಈ ರೀತಿಯ ಕಲ್ಪನೆ ಇರುವ ಚೀನಾ ದೇಶದ Ken Xin Da ಎಂಬ ಕಂಪನಿಯೊಂದು ಸಿಗರೆಟ್ ಲೈಟರ್ ನಷ್ಟೇ ಚಿಕ್ಕದಾದ ದ್ವಿ-ಸಿಮ್ ಇರುವ ಫೋನ್ ಒಂದನ್ನು ಮಾರುಕಟ್ಟೆಗೆ...
“ಅಮ್ಮನ ದಿನ” ಕ್ಕೆ ಈ ಮೊಬೈಲ್ ಕೊಡಿಸಿ
ನಾಳೆ (ಮೇ 13) ವಿಶ್ವದೆಲ್ಲೆಡೆ ತಾಯಿಯ ದಿನವನ್ನು ಆಚರಿಸಲಾಗುತ್ತದೆ. ತಾಯಿಗೆ ಸರಿಸಾಟಿಯಿಲ್ಲದ ದೇವರು ಈ ಭೂಮಿಯಲ್ಲಿ ಇಲ್ಲ. ಹಾಗಾಗಿಯೇ ನಾವು ಆಕೆಯನ್ನು ಗೌರವಿಸುತ್ತೇವೆ, ಪೂಜಿಸುತ್ತೇವೆ ಹಾಗು ಹೃದಯದಲ್ಲಿ ಆರಾಧಿಸುತ್ತೇವೆ. ನಾಳೆ ನೀವು ಆಕೆಗೊಂದು ಗಿಫ್ಟ್ ಕೊಟ್ಟು ವಿಶ್ ಮಾಡುವ ಆಸೆ ಇದ್ದರೆ ನಮ್ಮ ಕನ್ನಡ ಗಿಜ್ಬಾಟ್ ನಿಂದ ನಿಮಗೊಂದು ಸಲಹೆ. ಬಹುತೇಕ ಮೊಬೈಲ್ ಕಂಪನಿಗಳು ಹೆಂಗಸರನ್ನು ಗಮನದಲ್ಲಿಟ್ಟುಕೊಂಡು ಹಲವಾರು ಮಾಡಲುಗಳನ್ನು ಬಿಡುಗಡೆ ಮಾಡಿವೆ. ಆದರೆ ಕಳೆದ ವರ್ಷ ಮೈಕ್ರೋ ಮ್ಯಾಕ್ಸ್ ಬಿಡುಗಡೆ ಮಾಡಿದ ಬ್ಲಿಂಗ್ 2 ಎಂಬ...




























Follow us on