ಶಯೋಮಿ Mi3 ಸ್ಮಾರ್ಟ್‌ಫೋನ್ ಕಮಾಲಿನ ವಿಶೇಷತೆಗಳು

By Shwetha
|

ಹೊಸ ಶಯೋಮಿ Mi3 ನಿಮ್ಮ ಬಳಿ ಇದೆ ಎಂದಾದಲ್ಲಿ ಅದರಿಂದ ಜಾದೂವನ್ನೇ ಉಂಟುಮಾಡಬಹುದು ಎಂಬುದು ನಿಮಗೆ ಗೊತ್ತೇ? ಶಯೋಮಿ Mi3 ಯ ಲಾಂಚಿಂಗ್ ಫ್ಲಿಪ್‌ಕಾರ್ಟ್‌ನಲ್ಲಿ ನಡೆದಿರುವುದು ನಮಗೆಲ್ಲಾ ತಿಳಿದಿರುವ ವಿಷಯವಾಗಿದೆ. ಇದು 1,00,000 ನೋಂದಾವಣೆಯನ್ನು ಬರೇ 39 ನಿಮಿಷಗಳಲ್ಲಿ ಮಾಡಿ ದಾಖಲೆಯನ್ನು ಸೃಷ್ಟಿಸಿತ್ತು.

ನಿಜಕ್ಕೂ ಈ ಸ್ಮಾರ್ಟ್‌ಫೋನ್ ಫೋನ್ ಮಾರುಕಟ್ಟೆಯಲ್ಲಿ ಅದ್ಭುತವನ್ನೇ ಸೃಷ್ಟಿಸಿತ್ತು ಮತ್ತು ಮಾರುಕಟ್ಟೆ ಮೌಲ್ಯವನ್ನು ವರ್ಧಿಸಿತ್ತು. ಚೀನಾದ ಆಪಲ್ ಎಂಬ ಬಿರುದಿಗೆ ಭಾಜನವಾಗಿದ್ದ ಶಯೋಮಿಯ Mi3 ಯ ಜಾದೂ ಗ್ರಾಹಕರಲ್ಲಿ ನಿಜಕ್ಕೂ ಅದ್ಭುತವನ್ನೇ ಉಂಟುಮಾಡಿತ್ತು. ಈ ಫೋನ್‌ನ ವಿನ್ಯಾಸ ಮತ್ತು ವೈಶಿಷ್ಟ್ಯಗಳು ನಿಜಕ್ಕೂ ಅಚ್ಚರಿಯ ಪುಳಕವನ್ನೇ ಸೃಷ್ಟಿಸಿದ್ದವು ಎಂಬುದಂತೂ ನಿಜ.

ಇಂದಿನ ಲೇಖನದಲ್ಲಿ Mi3 ಯ ಇನ್ನಷ್ಟು ವಿಶಿಷ್ಟ ಅಂಶಗಳನ್ನು ನಾವು ನಿಮಗೆ ತೋರಿಸಲಿದ್ದು ಇದರಿಂದ ಹೇಗೆಲ್ಲಾ ಕಮಾಲನ್ನು ಉಂಟುಮಾಡಬಹುದು ಎಂಬುದನ್ನು ಅರಿತುಕೊಳ್ಳೋಣ.

#1

#1

Mi3 ಯು Mi ಕ್ಲೌಡ್‌ನೊಂದಿಗೆ ಬಂದಿದ್ದು ಇದರಿಂದ ಗ್ರಾಹಕರು ತಮ್ಮ ಸಂಪರ್ಕಗಳು, ಚಿತ್ರಗಳು ಮತ್ತು ಯಾವುದೇ ಬ್ರೌಸರ್‌ನಿಂದ ಟಿಪ್ಪಣಿಗಳನ್ನು ಸಕ್ರಿಯಗೊಳಿಸಬಹುದು. ತ್ವರಿತವಾಗಿ ಫೋಟೋಗಳನ್ನು ವೀಕ್ಷಿಸಿ ಮತ್ತು ವೆಬ್‌ನಿಂದಲೇ ಸಂದೇಶಗಳಿಗೆ ಉತ್ತರಿಸಬಹುದು.

#2

#2

ಮೊಬೈಲ್ ಡಿವೈಸ್‌ಗಳು ಯಾವಾಗಲೂ ಡೇಟಾ ಮಿತಿಗಳನ್ನು ಹೊಂದಿರುತ್ತವೆ, ಆದರೆ ಈ ವಿಷಯದಲ್ಲಿ MIUI ನ ಡೇಟಾ ಪ್ಲೇನರ್‌ಗೆ ಧನ್ಯವಾದಗಳನ್ನು ಅರ್ಪಿಸಬೇಕು ಇದರಲ್ಲಿರುವ ಓಎಸ್ ನೀವು ಡೇಟಾ ಮಿತಿಗಳನ್ನು ಮೀರಿದಾಗ ಸೂಚನೆಯನ್ನು ನೀಡುತ್ತದೆ. ಮತ್ತು ಹೆಚ್ಚುವರಿ ಡೇಟಾವನ್ನು ವಿನಿಯೋಗಿಸಿಕೊಳ್ಳಬಹುದಾದ ಅಪ್ಲಿಕೇಶನ್‌ಗಳ ಪಟ್ಟಿಯನ್ನು ಕೂಡ ಇದು ನಿಮಗೆ ತೋರಿಸುತ್ತದೆ.

#3

#3

ಫೋನ್‌ನಲ್ಲಿ ಸ್ಕ್ರೀನ್‌ಶಾಟ್ ಅನ್ನು ತೆಗೆಯುವುದೆಂದರೆ ಅದು ಅಷ್ಟೊಂದು ಸುಲಭದ ಮಾತಲ್ಲ! ಪವರ್ ಮತ್ತು ಡೌನ್ ವಾಲ್ಯೂಮ್ ಬಟನ್‌ಗಳನ್ನು ಜೊತೆಗೆ ಒತ್ತಿ ಸ್ಕ್ರೀನ್ ಶಾಟ್ ತೆಗೆಯುವ ಹಳೆಯ ನಿಯಮವನ್ನು ಮರೆತುಬಿಡಿ. ಇದೀಗ ನಿಮ್ಮ Mi3 ನಲ್ಲಿ ಪರದೆಯ ಮೇಲ್ಭಾಗದಲ್ಲಿ ಅಧಿಸೂಚನೆ ಪ್ಯಾನಲ್ ಅನ್ನು ತೆರೆಯಿರಿ, ಟಾಗಲ್ ಟ್ಯಾನ್ ಅನ್ನು ಒತ್ತಿರಿ, ಇಲ್ಲಿ ನಿಮಗೆ ಸ್ಕ್ರೀನ್ ಶಾಟ್ ಟ್ಯಾಬ್ ಕಂಡುಬರುತ್ತದೆ. ಇಲ್ಲಿ ನಿಮಗೆ ವೈಶಿಷ್ಟ್ಯವನ್ನು ಬಳಸಲು ಸೂಚನೆ ದೊರೆಯುತ್ತದೆ.

#4

#4

ಈ ಡಿವೈಸ್‌ನಲ್ಲಿ ಸಂದೇಶ ಮಾಡುವುದು ಹೆಚ್ಚು ಸುಲಭವಾಗಿದ್ದು ಬಹು ಜನರಿಗೆ ಒಮ್ಮೆಲೇ ಇದರಲ್ಲಿ ಸಂದೇಶಗಳನ್ನು ಕಳುಹಿಸಬಹುದು.

#5

#5

ಇತರ ಎಲ್ಲಾ ಫೋನ್‌ಗಳಂತೆ, ಇದರಲ್ಲಿ ಥೀಮ್‌ಗಳನ್ನು ಬದಲಾಯಿಸುವುದು ಹೆಚ್ಚು ಸುಲಭದ ಮಾತಾಗಿದೆ. ಹೊಸ ಶಯೋಮಿ Mi3 ನಲ್ಲಿ ಥೀಮ್‌ಗಳ ಅಸದಳ ಸಂಗ್ರಹವನ್ನು ನಿಮಗೆ ಕಾಣಬಹುದು.

#6

#6

Mi3 ನ ಟಚ್ ಸ್ಕ್ರೀನ್ ಅನ್ನು ಗ್ಲೋಸ್‌ನೊಂದಿಗೆ ನೀವು ಆಪರೇಟ್ ಮಾಡಬಹುದು. ಗ್ಲೋವ್ ಮೋಡ್‌ನಲ್ಲಿ ಕೂಡ ಶಯೋಮಿ Mi3 ಬೆಂಬಲವನ್ನು ಸೂಚಿಸುತ್ತದೆ. ಇತರ ಶಯೋಮಿ ಡಿವೈಸ್‌ಗಳು ಹೊಂದಿರದೇ ಇರುವ ಈ ಅದ್ಭುತ ವಿಶೇಷತೆಯನ್ನು Mi3 ಹೊಂದಿದೆ.

#7

#7

ಕತ್ತಲೆ ಎಂದರೆ ಭಯವೇ? ನಿಮ್ಮ ಪರಿಕರ ಫೋಲ್ಡರ್‌ನಲ್ಲಿ ಟಾರ್ಚ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡು ನಿಮ್ಮ ಕ್ಯಾಮೆರಾ ಫ್ಲ್ಯಾಶ್ ಅನ್ನು ಟಾರ್ಚ್ ಮೋಡ್‌ಗೆ ಬದಲಾಯಿಸಿ.

#8

#8

ಡಯಲ್ ಪ್ಯಾಡ್ ಆಧಾರಿತ ನೋಟ್ ಟೇಕಿಂಗ್ ಫೀಚರ್‌ನೊಂದಿಗೆ, ಒಂದೇ ಸ್ಥಳದಲ್ಲಿ ಸಂಪರ್ಕ ಅಡಿಯಲ್ಲಿ ಸಂಘಟನೆಗೊಂಡಿರುವ ಎಲ್ಲಾ ಟಿಪ್ಪಣಿಗಳನ್ನು ನಿಮಗೆ ವೀಕ್ಷಿಸಬಹುದು.

#9

#9

ಸೆಲ್ಫೀಯನ್ನು ಕ್ಲಿಕ್ ಮಾಡುವ ವ್ಯಕ್ತಿಯ ಲಿಂಗ ಹಾಗೂ ವಯಸ್ಸನ್ನು ತೋರಿಸುವ ಮುಂಭಾಗದ ಕ್ಯಾಮೆರಾದೊಂದಿಗೆ ಮೋಜನ್ನು ಅನುಭವಿಸಿರಿ.

#10

#10

ನಿಮ್ಮೆಲ್ಲಾ ಸಂವಾದಗಳನ್ನು ನಿಮ್ಮ ಸ್ನೇಹಿತರು ಮತ್ತು ಕುಟುಂಬದ ಸದಸ್ಯರೊಂದಿಗೆ ದಾಖಲಿಸಬಹುದು. ಹೆಚ್ಚಿನ ಸ್ಥಳದ ಅಗತ್ಯವಿಲ್ಲದೆ MP3 ಸ್ವರೂಪದಲ್ಲಿರುವ ದಾಖಲೆಗಳನ್ನು ಇದು ಕಂಪ್ರೆಸ್ ಮಾಡುತ್ತದೆ ಹಾಗೂ ನಿಮ್ಮೆಲ್ಲಾ ಸಂವಾದಗಳನ್ನು ದಾಖಲಿಸಲು ನಿಮ್ಮನ್ನು ಅನುಮತಿಸುತ್ತದೆ. ಇದು ಒಮ್ಮೊಮ್ಮೆ ಅಪಾಯವನ್ನು ಉಂಟುಮಾಡುತ್ತದೆ ಎಂಬುದು ನೆನಪಿರಲಿ.

Best Mobiles in India

English summary
This article tells about 10 Awesome Tricks You Didn’t Know About The Xiaomi Mi3!.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X