ಬಳಕೆದಾರ ಸ್ನೇಹಿ ಟಾಪ್ ಆಂಡ್ರಾಯ್ಡ್ ಅಪ್ಲಿಕೇಶನ್ಸ್

By Shwetha
|

ಆಂಡ್ರಾಯ್ಡ್ ಒಂದು ಮುಕ್ತ ಪ್ಲಾಟ್‌ಫಾರ್ಮ್ ಆಗಿರುವುದರಿಂದ ಕಸ್ಟಮೈಸೇಶನ್‌ಗಾಗಿ ಹಲವಾರು ಅವಕಾಶಗಳಿವೆ. ನಿಮ್ಮ ಫೋನ್ ಅನ್ನು ವೈಯಕ್ತೀಕರಿಸುವುದರಾಚೆಗೆ, ಕೆಲವೊಂದು ಸಲಹೆಗಳ ಮೂಲಕ ನಿಮ್ಮ ಫೋನ್ ಅನ್ನು ಇನ್ನಷ್ಟು ಸರಳ ಮತ್ತು ಸಂಘಟಿತವಾಗಿಸಬಹುದು.

ಓದಿರಿ: ಏರ್‌ಟೆಲ್‌ನಿಂದ ರೂ 4,000 ಕ್ಕೆ ಬಜೆಟ್ ಫೋನ್

ಫೋನ್‌ನ ಬ್ಯಾಟರಿ ದೀರ್ಘತೆ, ಆಗಾಗ್ಗೆ ಸ್ವಚ್ಛವಾಗಿಸುವುದು, ಕ್ಯಾಶ್ ಕ್ಲಿಯರ್ ಮಾಡುವುದು, ವೇಗವನ್ನು ಇನ್ನಷ್ಟು ಪಕ್ವಗೊಳಿಸುವುದು ಹೀಗೆ ನಿಮ್ಮ ಅಂಗೈಯಗಲದ ಡಿವೈಸ್ ಅನ್ನು ಇನ್ನಷ್ಟು ಉತ್ತಮಗೊಳಿಸಿ ನಿಮ್ಮ ಮುಂದಿಡುತ್ತದೆ.

ಹಾಗಿದ್ದರೆ ಇಂದಿನ ಲೇಖನದಲ್ಲಿ ನಾವು ನೀಡುತ್ತಿರುವ 10 ಆಂಡ್ರಾಯ್ಡ್ ಸ್ನೇಹಿ ಟಿಪ್ಸ್‌ಗಳನ್ನು ಅರಿತುಕೊಂಡು ನಿಮ್ಮ ಫೋನ್ ಅನ್ನು ಅತ್ಯುತ್ತಮಗೊಳಿಸಿ.

ಗೂಗಲ್ ನೌ ಹೊಂದಿಸಿ

ಗೂಗಲ್ ನೌ ಹೊಂದಿಸಿ

ನಿಮ್ಮ ವೈಯಕ್ತಿಕ ಸಹಚರನಾಗಿ ಗೂಗಲ್ ನೌ ಅನ್ನು ಹೊಂದಿಸಿ. ಗೂಗಲ್ ಅಪ್ಲಿಕೇಶನ್ ತೆರೆಯಿರಿ ಮತ್ತು ಗೂಗಲ್ ನೌ ಪಡೆದುಕೊಳ್ಳಲು ಸ್ಪರ್ಶಿಸಿ, ನಿಮ್ಮ ಆದ್ಯತೆಗಳನ್ನು ತುಂಬಿಸಿ.

ಲಾಂಚರ್‌ಗಳು ಮತ್ತು ಲಾಕ್ ಸ್ಕ್ರೀನ್ ರೀಪ್ಲೇಸ್‌ಮೆಂಟ್

ಲಾಂಚರ್‌ಗಳು ಮತ್ತು ಲಾಕ್ ಸ್ಕ್ರೀನ್ ರೀಪ್ಲೇಸ್‌ಮೆಂಟ್

ಒಂದೇ ರೀತಿಯ ಹವಾಮಾನ ವಿಜೆಟ್ ನೋಡಿ ಬೇಜಾರುಗೊಂಡಿರುವಿರಾ? ಗೂಗಲ್ ಪ್ಲೇ ಸ್ಟೋರ್‌ನಿಂದ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ ಮತ್ತು ನಿಮ್ಮ ಫೋನ್‌ನ ಇಂಟರ್ಫೇಸ್ ಅನ್ನೇ ಬದಲಾಯಿಸಿಕೊಳ್ಳಿ.

ಪವರ್ ಸೇವಿಂಗ್ ಮೋಡ್ ಸಕ್ರಿಯಗೊಳಿಸಿ

ಪವರ್ ಸೇವಿಂಗ್ ಮೋಡ್ ಸಕ್ರಿಯಗೊಳಿಸಿ

ಸೆಟ್ಟಿಂಗ್ಸ್ ಮೆನುವಿಗೆ ನ್ಯಾವಿಗೇಟ್ ಮಾಡಿ ಮತ್ತು ಬ್ಯಾಟರಿ ಜೀವನವನ್ನು ಉಳಿಸಲು ಪವರ್ ಸೇವಿಂಗ್ ಮೋಡ್ ಅನ್ನು ಆನ್ ಮಾಡಿ.

ಹೆಚ್ಚುವರಿ ಬ್ಯಾಟರಿ ಪಡೆದುಕೊಳ್ಳಿ

ಹೆಚ್ಚುವರಿ ಬ್ಯಾಟರಿ ಪಡೆದುಕೊಳ್ಳಿ

ಕೆಲವೊಂದು ಆಂಡ್ರಾಯ್ಡ್ ಫೋನ್‌ಗಳು ರಿಮೂವೇಬಲ್ ಬ್ಯಾಕ್‌ಗಳೊಂದಿಗೆ ಬರುತ್ತಿದ್ದು, ಹೊಸದರೊಂದಿಗೆ ಇದನ್ನು ಬದಲಾಯಿಸಿಕೊಳ್ಳಬಹುದು.

ಗೂಗಲ್ ಕ್ರೋಮ್‌ಗೆ ಸೈನ್ ಇನ್ ಮಾಡಿ

ಗೂಗಲ್ ಕ್ರೋಮ್‌ಗೆ ಸೈನ್ ಇನ್ ಮಾಡಿ

ನಿಮ್ಮ ಫೋನ್‌ನಲ್ಲಿ ಕ್ರೋಮ್ ಬ್ರೌಸರ್‌ನಲ್ಲಿ ಗೂಗಲ್ ಖಾತೆಗೆ ಸೈನ್ ಇನ್ ಮಾಡಿ.

ಫೋಲ್ಡರ್‌ಗಳಲ್ಲಿ ಅಪ್ಲಿಕೇಶನ್ ಸಂಘಟಿಸಿ

ಫೋಲ್ಡರ್‌ಗಳಲ್ಲಿ ಅಪ್ಲಿಕೇಶನ್ ಸಂಘಟಿಸಿ

ಬೇರೆ ಬೇರೆ ವರ್ಗಗಳಲ್ಲಿ ನಿಮ್ಮ ಅಪ್ಲಿಕೇಶನ್ ಇರಿಸುವಂತೆ ವಿಭಾಗಿಸುವ ಪೋಲ್ಡರ್‌ಗಳನ್ನು ನಿಮಗೆ ರಚಿಸಬಹುದು. ನಿಮಗೆ ಬೇಕಾದ್ದನ್ನು ತ್ವರಿತವಾಗಿ ಇದು ಹುಡುಕಿಕೊಡುತ್ತದೆ.

ಥರ್ಡ್ ಪಾರ್ಟಿ ಕೀಬೋರ್ಡ್ ಬಳಸಿ

ಥರ್ಡ್ ಪಾರ್ಟಿ ಕೀಬೋರ್ಡ್ ಬಳಸಿ

ಟೈಪ್ ಮಾಡುವುದಕ್ಕಿಂತಲೂ ಸ್ವೈಪ್ ಮಾಡುವುದು ಕೆಲವೊಮ್ಮೆ ಸರಳವಾಗಿರುತ್ತದೆ. ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಬೇಕಾದಷ್ಟು ಕೀಬೋರ್ಡ್ ಅಪ್ಲಿಕೇಶನ್‌ಗಳಿದ್ದು ನಿಮಗೆ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಕ್ರೋಮ್‌ನಲ್ಲಿ ಬ್ಯಾಂಡ್‌ವಿಡ್ತ್ ಮ್ಯಾನೇಜ್‌ಮೆಂಟ್ ಹೊಂದಿಸಿ

ಕ್ರೋಮ್‌ನಲ್ಲಿ ಬ್ಯಾಂಡ್‌ವಿಡ್ತ್ ಮ್ಯಾನೇಜ್‌ಮೆಂಟ್ ಹೊಂದಿಸಿ

"ರೆಡ್ಯೂಸ್ ಡೇಟಾ ಯೂಸೇಜ್" ಆಯ್ಕೆಯನ್ನು ಕ್ರೋಮ್‌ನಲ್ಲಿ ನಿಮಗೆ ಆನ್ ಮಾಡಿಕೊಳ್ಳಬಹುದು, ಇದು ಅನಗತ್ಯ ವೈಟ್ ಸ್ಪೇಸ್ ಅನ್ನು ತೊಡೆದುಹಾಕುತ್ತದೆ ಮತ್ತು ಚಿತ್ರಗಳನ್ನು ಸಣ್ಣ ಸ್ವರೂಪದಲ್ಲಿ ತೋರಿಸುತ್ತದೆ.

ಗೂಗಲ್ ಅಥೆಂಟಿಕೇಟರ್ ಬಳಸಿ

ಗೂಗಲ್ ಅಥೆಂಟಿಕೇಟರ್ ಬಳಸಿ

ನಿಮ್ಮ ಗೂಗಲ್ ಖಾತೆಗಾಗಿ ಎರಡು ಹಂತದ ದೃಢೀಕರಣ ಭದ್ರತೆಯನ್ನು ಇದು ಒದಗಿಸುತ್ತದೆ. ಆದ್ದರಿಂದ ನೀವು ಲಾಗಿನ್ ಮಾಡಿದಾಗ, ನಿಮ್ಮ ಪಾಸ್‌ವರ್ಡ್‌ಗೆ ಹೆಚ್ಚುವರಿಯಾಗಿ ಅಪ್ಲಿಕೇಶನ್ ರಚನೆ ಮಾಡಿರುವ ಕೋಡ್ ನಿಮಗೆ ಅಗತ್ಯವಿದೆ.

ಡೀಫಾಲ್ಟ್ ಆಪ್ಸ್ ಬದಲಾಯಿಸಿ

ಡೀಫಾಲ್ಟ್ ಆಪ್ಸ್ ಬದಲಾಯಿಸಿ

ನೀವು ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಫೋನ್ ಬಳಸುವ ಡೀಫಾಲ್ಟ್ ವೆಬ್ ಬ್ರೌಸರ್ ಅನ್ನು ಬದಲಾಯಿಸಬೇಕೆಂದಿರುವಿರಾ? ಸೆಟ್ಟಿಂಗ್ಸ್‌ಗೆ ನ್ಯಾವಿಗೇಟ್ ಮಾಡುವ ಮೂಲಕ ಇದನ್ನು ನಿಮಗೆ ಬದಲಾಯಿಸಬಹುದಾಗಿದೆ.

Best Mobiles in India

English summary
Since Android is an open platform, there’s plenty of room for customization. Here are 10 tips and tricks every Android user should know.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X