ಭಾರತದಲ್ಲಿ ಬಿಡುಗಡೆಯಾಗಿರುವ ಬೆಸ್ಟ್ ಸ್ಮಾರ್ಟ್‌ಫೋನ್‌ಗಳು

By Shwetha
|

ಈಗಾಗಲೇ ಮೋಟೋ ಇ ಗೆ ಸರಿಯಾದ ಪೈಪೋಟಿ ನೀಡುವುದಕ್ಕಾಗಿ ಭಾರತೀಯ ಮೂಲದ ಸ್ಮಾರ್ಟ್‌ಫೋನ್ ಕಂಪೆನಿ ಮೈಕ್ರೋಮ್ಯಾಕ್ಸ್ ಯುನೈಟ್ 2 ಹಾಗೂ ಕ್ಯಾನ್‌ವಾಸ್ ಎಂಗೇಜ್ ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಇದರೊಂದಿಗೆ ಲಾವಾ ಕೂಡ ಐರಿಸ್ X1 ಅನ್ನು ಲಾಂಚ್ ಮಾಡುವ ಮೂಲಕ ತನ್ನದೇ ಆದ ಗ್ರಾಹಕರ ಪ್ರಮಾಣವನ್ನು ಏರಿಸಿಕೊಂಡಿತ್ತು.

ಈ ಸ್ಮಾರ್ಟ್‌ಫೋನ್‌ಗಳಲ್ಲಾ ಮಧ್ಯಮ ಕ್ರಮಾಂಕದ ದರವನ್ನು ಒಳಗೊಂಡು ಇತ್ತೀಚಿನ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆವೃತ್ತಿಯನ್ನು ಹೊಂದಿದೆ. ಇದರೊಂದಿಗೆ ಇದೇ ವಾರ ಬಿಡುಗಡೆಯಾಗಿರುವ ಸ್ಮಾರ್ಟ್‌ಫೋನ್‌ಗಳ ಶ್ರೇಣಿಯನ್ನೇ ಗಿಜ್‌ಬಾಟ್ ಇಂದಿನ ಲೇಖನದಲ್ಲಿ ಹೊರತಂದಿದ್ದು ನಿಮ್ಮ ಕಣ್ಣನ್ನು ಇವುಗಳು ತಣಿಸಲಿವೆ. ಇಲ್ಲಿ ನಾವು ನೀಡಿರುವ ಐದು ಉತ್ತಮ ಗುಣಮಟ್ಟದ ಸ್ಮಾರ್ಟ್‌ಫೋನ್ ವಿವರಗಳು ಗ್ಯಾಜೆಟ್‌ ಲೋಕದ ಅದ್ಭುತವನ್ನು ನಿಮ್ಮ ಕಣ್ಣ ಮುಂದೆ ತೆರೆದಿಡಲಿದೆ

#1

#1

ಬೆಲೆ ರೂ. 45,400

5.9- ಇಂಚಿನ ಡಿಸ್‌ಪ್ಲೇ ಹಾಗೂ 1920 x 1080 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ ಬಂದಿರುವ ಎಲ್‌ಜಿ ಪ್ರೊ 2 ನಲ್ಲಿ ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಚಾಲನೆಯಾಗುತ್ತದೆ. ಇದು 2.26GHz ಕ್ವಾಡ್ - ಕೋರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 800 ಪ್ರೊಸೆಸರ್ ಎಲ್‌ಜಿ ಪ್ರೊ ನಲ್ಲಿದ್ದು ರ್‌ಯಾಮ್ 3ಜಿಬಿ ಹಾಗೂ 16ಜಿಬಿ/ 32ಜಿಬಿ ಆಂತರಿಕ ಸಂಗ್ರಹಣೆ ಫೋನ್‌ನ ವಿಶೇಷತೆಯಾಗಿದೆ. 13 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾದೊಂದಿಗೆ OIS+ (ಎಲ್‌ಇಡಿ ಫ್ಲ್ಯಾಶ್, 2.1 ಮೆಗಾಪಿಕ್ಸೆಲ್ ಫ್ರಂಟ್ ಫೇಸಿಂಗ್ ಕ್ಯಾಮೆರಾ) ಫೋನ್‌ನಲ್ಲಿದೆ. ಸಂಪರ್ಕ ವೈಶಿಷ್ಟ್ಯಗಳು 3ಜಿ, ವೈ-ಫೈ, ಬ್ಲೂಟೂತ್, GPS/A-GPS ಹಾಗೂ ಇನ್ನಷ್ಟು. ಈ ಸೆಟ್ ನಿಮಗೆ ಟೈಟನ್ ಬ್ಲಾಕ್, ಸಿಲ್ವರ್ ಮತ್ತು ಬಿಳಿ ಬಣ್ಣಗಳ ಶ್ರೇಣಿಯಲ್ಲಿ ಲಭ್ಯವಿದೆ.

#2

#2

ಬೆಲೆ ರೂ. 11,990

ವಾಮ್ಮಿ ನಿಯೋ 5 ಇಂಚಿನ ಐಪಿಎಸ್ ಡಿಸ್‌ಪ್ಲೇಯನ್ನು ಹೊಂದಿದ್ದು 1280 x 720 ಪಿಕ್ಸೆಲ್ ರೆಸಲ್ಯೂಶನ್ ಇದರಲ್ಲಿದೆ. ಮೀಡಿಯಾ ಟೆಕ್ ಓಕ್ಟಾ ಕೋರ್ ಪ್ರೊಸೆಸರ್ ಇದರಲ್ಲಿದ್ದು 2 ಜಿಬಿ ರ್‌ಯಾಮ್ ಫೋನ್‌ನಲ್ಲಿದೆ. ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಆವೃತ್ತಿ ಫೋನ್‌ನಲ್ಲಿ ಚಾಲನೆಯಾಗುತ್ತಿದ್ದು ಇದನ್ನು 4.4 ಕಿಟ್‌ಕ್ಯಾಟ್ ಓಎಸ್‌ಗೆ ಅಪ್‌ಗ್ರೇಡ್ ಮಾಡಬಹುದು. ಫೋನ್‌ನಲ್ಲಿ 13 ಮೆಗಾಪಿಕ್ಸೆಲ್ ಸ್ನಾಪರ್ ಮತ್ತು 5 ಮೆಗಾಪಿಕ್ಸೆಲ್ ಫ್ರಂಟ್ ಫೇಸಿಂಗ್ ಕ್ಯಾಮೆರಾ ಇದೆ.

#3

#3

ಬೆಲೆ ರೂ. 14,999

ಕ್ಸೋಲೋ Q1200 ಆಂಡ್ರಾಯ್ಡ್‌ನ ಹಳೆಯ ಆವೃತ್ತಿ ಚಾಲನೆಗೊಳ್ಳುತ್ತಿದೆ. ಇದು 5-ಇಂಚಿನ (1280 x 720 pixels) ಎಚ್‌ಡಿ ಐಪಿಎಸ್ ಡಿಸ್‌ಪ್ಲೇಯನ್ನು ಹೊಂದಿದ್ದು ಗೋರಿಲ್ಲಾ ಗ್ಲಾಸ್ 3 ಸುರಕ್ಷತೆ ಫೋನ್‌ಗಿದೆ. ಇದು 1.3 GHz ಪ್ರೊಸೆಸರ್‌ನೊಂದಿಗೆ ಬಂದಿದ್ದು 1ಜಿಬಿ ರ್‌ಯಾಮ್‌ನೊಂದಿಗೆ ವಿಶಿಷ್ಟವಾಗಿದೆ. ಈ ಫೋನ್‌ನಲ್ಲಿ ಆಂಡ್ರಾಯ್ಡ್ 4.2 (ಜೆಲ್ಲಿ ಬೀನ್) ಆವೃತ್ತಿ ಇದ್ದು ಇದನ್ನು ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆವೃತ್ತಿ 4.4 ಗೆ ನವೀಕರಿಸಬಹುದು) 8ಎಂಪಿ ಕ್ಯಾಮೆರಾದೊಂದಿಗೆ ಡ್ಯುಯೆಲ್ ಎಲ್‌ಇಡಿ ಫ್ಲ್ಯಾಶ್ ಅನ್ನು ಹೊಂದಿರುವ ಈ ಸ್ಮಾರ್ಟ್‌ಫೋನ್‌ನ ಸಂಗ್ರಹಣೆ ಸಾಮರ್ಥ್ಯ 8ಜಿಬಿಯಾಗಿದೆ ಮತ್ತು ಮೈಕ್ರೋ ಎಸ್‌ಡಿ ಕಾರ್ಡ್ ಮೂಲಕ ಇದನ್ನು ವಿಸ್ತರಿಸಬಹುದು.

#4

#4

ಬೆಲೆ ರೂ. 16,999

ಅಲೆಕ್ಟಾಲ್ ಒನ್ ಟಚ್ IDOL X+ 5 ಇಂಚಿನ ಪೂರ್ಣ ಎಚ್‌ಡಿ 1080ಪಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದರ ಡೆನ್ಸಿಟಿ 441ppi ಆಗಿದೆ. 2GHz ಓಕ್ಟಾ - ಕೋರ್ ಮೀಡಿಯಾಟೆಕ್ MT6592 ಚಿಪ್‌ಸೆಟ್ ಇದರಲ್ಲಿದ್ದು 2ಜಿಬಿ ರ್‌ಯಾಮ್ ಫೋನ್‌ನಲ್ಲಿದೆ. ಇದು ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಅನ್ನು ಬೆಂಬಲಿಸುತ್ತಿದ್ದು, 16ಜಿಬಿಯನ್ನು ಫೋನ್ ತಯಾರಕರು ಇದರಲ್ಲಿ ಸೇರಿಸಿದ್ದು 13.1 ಮೆಗಾಪಿಕ್ಸೆಲ್ ಆಟೋ ಫೋಕಸ್ ರಿಯರ್ ಕ್ಯಾಮೆರಾ ಫೋನ್‌ ವಿಶೇಷತೆಯಾಗಿದೆ. ಇದರಲ್ಲಿ 2 ಮೆಗಾಪಿಕ್ಸೆಲ್ ಫ್ರಂಟ್ ಫೇಸಿಂಗ್ ಕ್ಯಾಮೆರಾ ಇದ್ದು ಫೋನ್‌ನ ಬ್ಯಾಟರಿ 2500mAh ಆಗಿದೆ.

#5

#5

ಬೆಲೆ ರೂ 15,499
ಇದು 5 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದರ ರೆಸಲ್ಯೂಶನ್ 800 x 480 ಪಿಕ್ಸೆಲ್‌ಗಳಾಗಿವೆ. 1.2GHz ಡ್ಯುಯೆಲ್ ಕೋರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 200 ಮೊಬೈಲ್ ಪ್ರೊಸೆಸರ್ ಫೋನ್‌ನಲ್ಲಿದ್ದು, 1ಜಿಬಿ ರ್‌ಯಾಮ್ ಫೋನ್‌ನಲ್ಲಿದೆ. ಈ ಫೋನ್ 4ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದ್ದು ಇದನ್ನು ಮೈಕ್ರೋ ಕಾರ್ಡ್ ಸ್ಲಾಟ್ ಮೂಲಕ ವಿಸ್ತರಿಸಬಹುದಾಗಿದೆ. ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ 5 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾ ಇದ್ದು ವಿಜಿಎ ಗುಣಮಟ್ಟದ ಫ್ರಂಟ್ ಫೇಸಿಂಗ್ ಕ್ಯಾಮೆರಾವನ್ನು ಫೋನ್ ಹೊಂದಿದೆ. ಇದರಲ್ಲಿ ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಚಾಲನೆಯಾಗುತ್ತಿದ್ದು, 2540mAh ಬ್ಯಾಟರಿಯನ್ನು ಫೋನ್ ಒಳಗೊಂಡಿದೆ. ಸಂಪರ್ಕ ವೈಶಿಷ್ಟ್ಯಗಳು ವೈ-ಫೈ 3ಜಿ, ಎಫ್ ಎಂ ರೇಡಿಯೋ, ಜಿಪಿಎಸ್, ಹಾಗೂ ಇತರ ವೈಶಿಷ್ಟ್ಯಗಳಿಂದ ಶ್ರೀಮಂತವಾಗಿವೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X