ಈ ಐದು ಕಾರಣಗಳಿಗೆ ಮೋಟೋರೋಲಾ ದಿ ಬೆಸ್ಟ್

By Shwetha
|

ತಮ್ಮ ಜೇಬಿಗೆ ಕತ್ತರಿ ಹಾಕುವಂತಹ ಉತ್ಪನ್ನಕ್ಕೆ ಬೈಬೈ ಹೇಳುವ ಕಾಲ ಬಂದಾಯಿತು. ಹೌದು ಮೋಟೋರೋಲಾ ನಿಮ್ಮಲ್ಲಿರುವ ಹಣಕ್ಕೆ ಉತ್ತಮ ಮೌಲ್ಯವನ್ನು ವರ್ಧಿಸಿ ದಿ ಬೆಸ್ಟ್ ಪೋನ್ ಆಗಲಿದೆ.

ಪೋನ್‌ನಲ್ಲಿರಬೇಕಾದ ಎಲ್ಲಾ ಅತ್ಯುತ್ತಮ ಅಂಶಗಳನ್ನು ಹಾಗೆಯೇ ಭಟ್ಟಿ ಇಳಿಸಿ ಗ್ರಾಹಕರ ಮನಗೆದ್ದಿರುವ ಅಮೇರಿಕಾ ಕಂಪೆನಿ ಮೋಟೋರೋಲಾ ಕಡಿಮೆ ವೆಚ್ಚದ ಹ್ಯಾಂಡೀ ಫೋನ್‌ಗಳ ಸುರಿಮಳೆಯನ್ನೇ ತನ್ನ ಗ್ರಾಹಕರಿಗಾಗಿ ಬಿಡುಗಡೆಗೊಳಿಸಿದೆ. ಅದ್ಭುತ ಡಿಸ್‌ಪ್ಲೇ, ಉತ್ತಮ ಶ್ರೇಣಿಯ ಮುಂಭಾಗ ಹಿಂಭಾಗ ಕ್ಯಾಮೆರಾಗಳು, ನಿಮ್ಮ ಮನಮೆಚ್ಚುವ ಬಣ್ಣ, ಸುಂದರ ಆಡಿಯೋ ಹೀಗೆ ಹತ್ತು ಹಲವು ವೈಶಿಷ್ಟ್ಯಗಳಿಂದ ಪ್ರಸಿದ್ಧಿಯಾಗಿದೆ.

ಹಾಗಿದ್ದರೆ ನಿಮಗೆ ಮೋಟೋರಾಲಾ ದಿ ಬೆಸ್ಟ್ ಏಕೆ ಎಂಬ ಪ್ರಶ್ನೆ ಮನದಲ್ಲಿ ಮೂಡಬಹುದು. ಆಂಡ್ರಾಯ್ಡ್‌ನ ಎಲ್ಲಾ ಅತ್ಯುತ್ತಮ ಓಎಸ್‌ಗಳನ್ನು ಹಾಗೆಯೇ ತನ್ನಲ್ಲಿ ಪ್ಯಾಕೇಜ್ ಮಾಡಿಕೊಂಡು ವಿಶಿಷ್ಟವಾಗಿರುವ ಈ ಫೋನ್‌ಗಳು ನಿಮಗೆ ಉತ್ತಮ ಕ್ಲಾರಿಟಿಯನ್ನು ನೀಡಲಿದೆ. ಹಾಗಿದ್ದರೆ ಈ ಫೋನ್‌ಗಳ ವಿಶಿಷ್ಟತೆಗಳನ್ನು ನೋಡಿಕೊಂಡು ಬರೋಣ.

#1

#1

ಗೂಗಲ್ ಫೋನ್‌ಗಿರುವ ದರ ಹಾಗೂ ಗುಣಮಟ್ಟ ನೀತಿಯನ್ನು ಮೋಟೋರೋಲಾ ಕೂಡ ಈಗ ಪಾಲಿಸಿಕೊಂಡು ಬಂದಿದೆ. ಮೋಟೋ ಜಿ ಹಾಗೂ ಮೋಟೋ ಇ ಮೋಟೋರೋಲಾದ ದರಕ್ಕೆ ಉತ್ತಮ ನಿದರ್ಶನವಾಗಿರುವ ಫೋನ್‌ಗಳಾಗಿದ್ದು ನಿಮ್ಮ ಮನವನ್ನು ಖಂಡಿತ ಗೆಲ್ಲಲಿದೆ. ಇದು ಉತ್ತಮ ಬೆಲೆಯೊಂದಿಗೆ ಉತ್ತಮ ನಿರ್ದಿಷ್ಟತೆಗಳನ್ನು ನೀಡಲಿದೆ.

#2

#2

ಮೋಟೋರೋಲಾದ ವಿಷಯದಲ್ಲಿ ಎಲ್ಲಾ ನಿರ್ದಿಷ್ಟತೆಗಳನ್ನು ಚೆನ್ನಾಗಿಯೇ ನಿರ್ವಹಿಸಲಾಗಿದೆ. ಈ ಫೋನ್‌ಗಳಲ್ಲಿ ನೀವು ಅಮೊಲೆಡ್ ಡಿಸ್‌ಪ್ಲೇ, ಡ್ಯುಯೆಲ್ ಸಿಮ್ ಹಾಗೂ ಉತ್ತಮ ಚಿಪ್ ಮೇಕರ್ ಅನ್ನು ಹೊಂದಿರುವಿರಿ. ಈ ಪೋನ್‌ಗಳಲ್ಲಿ ಉತ್ತಮ ಬ್ಯಾಟರಿ ಸಾಮರ್ಥ್ಯವಿದ್ದು ಎಲ್ಲದಕ್ಕಿಂತಲೂ ಬೆಸ್ಟ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

#3

#3

ಗೂಗಲ್‌ನ ನೇತೃತ್ವದಲ್ಲಿ ನಿರ್ಮಾಣವಾದ ಮೋಟೋರೋಲಾ ಡಿವೈಸ್‌ಗಳು ಇತ್ತೀಚಿನ ಆಂಡ್ರಾಯ್ಡ್ ಆವೃತ್ತಿಗಳಿಂದ ಆಹ್ವಾನವಾದಂತವು. ಕೇವಲ ರೂ 6,999 ಕ್ಕೆ ಕಿಟ್‌ಕ್ಯಾಟ್ ಆವೃತ್ತಿಯನ್ನು ನಿಮಗೆ ಮೋಟೋರೋಲಾ ಮೋಟೋ ಇಯಲ್ಲಿ ನೀಡುತ್ತಿದೆ. ಇದರಲ್ಲಿ ಸನ್ನೆ ನಿಯಂತ್ರಣ, ಧ್ವನಿ ನಿಯಂತ್ರಣ ಮೊದಲಾದ ನಿರ್ದಿಷ್ಟತೆಗಳಿದ್ದು ನಿಮಗೆ ಬಳಸಲು ಅನುಕೂಲಕರವಾಗಿದೆ.

#4

#4

ಹೆಚ್ಚಿನ ಸಾಫ್ಟ್‌ವೇರ್ ಹಾಗೂ ಹಾರ್ಡ್‌ವೇರ್ ಸೌಲಭ್ಯಗಳನ್ನು ಮೋಟೋರೋಲಾ ತನ್ನ ಹ್ಯಾಂಡ್‌ಸೆಟ್‌ನಲ್ಲಿ ನೀಡಲಿದೆ. ಕಡಿಮೆ ಬೆಲೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿರುವ ಫೋನ್ ಉತ್ತಮವಾಗಿ ಮೇಲೇರುವ ಸಾಧ್ಯತೆಯನ್ನು ಪ್ರಾರಂಭದಲ್ಲೇ ತೋರಿಸಿದೆ.

#5

#5

ಎಲ್ಲಾ ವೈಶಿಷ್ಟ್ಯಗಳನ್ನು ಚೆನ್ನಾಗಿಯೇ ಹೊಂದಿರುವ ಫೋನ್ ಹೆಸರಾಂತ ರೀಟೈಲ್ ತಾಣವಾದ ಫ್ಲಿಪ್‌ಕಾರ್ಟ್‌ನೊಂದಿಗೆ ಪಾಲುದಾರಿಕೆಯನ್ನು ಹೊಂದಿದೆ. ಅಂತೂ ಮಧ್ಯಮ ಶ್ರೇಣಿಯ ಫೋನ್ ಪಟ್ಟಿಯಲ್ಲಿ ನಿಧಾನವಾಗಿ ಮೇಲೇರುತ್ತಿರುವ ಮೋಟೋರೋಲಾ ಇತರ ಫೋನ್ ದಿಗ್ಗಜ ಕಂಪೆನಿಗಳಾದ ಸ್ಯಾಮ್‌ಸಂಗ್, ಎಲ್‌ಜಿ, ಸೋನಿ ಸಮಾನಕ್ಕೆ ಮೇಲೇರುವ ಹವಣಿಕೆಯಲ್ಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X