ಬೆರಳಚ್ಚು ಸಂವೇದಕ: ನಿಮಗೆ ಗೊತ್ತಿರದ ಆರು ಉಪಯೋಗಗಳು.

|

ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿರುವಾಗ, ಸ್ಮಾರ್ಟ್ ಫೋನುಗಳ ಸುರಕ್ಷತೆ ಪ್ರಮುಖವಾಗಿಬಿಟ್ಟಿದೆ, ಸ್ಮಾರ್ಟ್ ಫೋನುಗಳಿಂದ ಡೇಟಾ ಕದಿಯುವುದು ಸುಲಭವೂ ಹೌದು.

ಬೆರಳಚ್ಚು ಸಂವೇದಕ: ನಿಮಗೆ ಗೊತ್ತಿರದ ಆರು ಉಪಯೋಗಗಳು.

ಹ್ಯಾಕಿಂಗ್ ಮತ್ತು ಇತರೆ ಸಮಾಜ ವಿರೋಧಿ ಚಟುವಟಿಕೆಗಳನ್ನು ನಿಯಂತ್ರಿಸುವುದಕ್ಕಾಗಿ ಸ್ಮಾರ್ಟ್ ಫೋನ್ ತಯಾರಕರು ಅತ್ಯುತ್ತಮ ರಕ್ಷಣಾ ತಂತ್ರಜ್ಞಾನವನ್ನು ಸ್ಮಾರ್ಟ್ ಫೋನುಗಳಲ್ಲಿ ಅಳವಡಿಸಿದ್ದಾರೆ - ಅದೇ ಬೆರಳಚ್ಚು ಸಂವೇದಕ, ಫಿಂಗರ್ ಪ್ರಿಂಟ್ ಸ್ಕ್ಯಾನರ್. ಇತರೆಲ್ಲಾ ತಂತ್ರಜ್ಞಾನಗಳಂತೆ ಬೆರಳಚ್ಚು ತಂತ್ರಜ್ಞಾನವೂ ಅಪಾರವಾಗಿ ಮುಂದುವರೆದಿದೆ.

ಹಳೆಯದು ಮತ್ತು ದೊಡ್ಡದು!

ಬೆರಳಚ್ಚು ಸಂವೇದಕ ಮೂರು ರೀತಿಯಲ್ಲಿ ಬರುತ್ತದೆ - ಆಪ್ಟಿಕಲ್, ಕೆಪಾಸಿಟೇಟಿವ್ ಮತ್ತು ಅಲ್ಟ್ರಾಸೋನಿಕ್ ಸ್ಕ್ಯಾನರ್. ಆಪ್ಟಿಕಲ್ ಸ್ಕ್ಯಾನರ್ರುಗಳು ತುಂಬ ಹಳೆಯದು, ಇದರಲ್ಲಿ ಆಪ್ಟಿಕಲ್ ಚಿತ್ರವನ್ನು ಸೆರೆಹಿಡಿಯಲಾಗುತ್ತದೆ. ಈ ಚಿತ್ರದಲ್ಲಿರುವ ವಿವಿಧ ಗುಣ ಲಕ್ಷಣಗಳ ಆಧಾರದಲ್ಲಿ ಬೆರಳಚ್ಚನ್ನು ಕಂಡುಹಿಡಿಯಲಾಗುತ್ತದೆ.

ಓದಿರಿ: 2016 ಸೆಪ್ಟೆಂಬರ್ ನಲ್ಲಿ ತಪ್ಪಿಸಿಕೊಳ್ಳಬಾರದ ಟಾಪ್ 10 ಅಮೆಜಾನ್ ಡೀಲುಗಳು!

ಇದರ ದೊಡ್ಡ ಹಿನ್ನಡೆಯೆಂದರೆ, ಈ ಆಪ್ಟಿಕಲ್ ಸ್ಕ್ಯಾನರ್ ಸ್ಮಾರ್ಟ್ ಫೋನಿಗೆ ತುಂಬಾ ದೊಡ್ಡದು ಮತ್ತು ಇದು 2ಡಿ ಚಿತ್ರಗಳನ್ನಷ್ಟೇ ಸೆರೆಹಿಡಿಯಬಲ್ಲದು.

ಕೆಪಾಸಿಟೇಟಿವ್ ಎಲೆಕ್ಟ್ರಿಕ್ ಚಾರ್ಜ್ ಗಳನ್ನು ಹಿಡಿಯುತ್ತದೆ.

ಮತ್ತೊಂದೆಡೆ, ಈಗ ಹೆಚ್ಚು ಬಳಕೆಯಲ್ಲಿರುವುದು ಕೆಪಾಸಿಟೇಟಿವ್ ಸ್ಕ್ಯಾನರ್ರುಗಳು. ಇದರಲ್ಲಿ ಕೆಪಾಸಿಟರ್ ಇರುವುದರಿಂದ ತುಂಬಾ ಕಡಿಮೆ ಜಾಗ ಸಾಕು. ಬಳಕೆದಾರರ ಬೆರಳಚ್ಚುಗಳನ್ನು ಕಂಡುಹಿಡಿಯಲು ಈ ಸ್ಕ್ಯಾನರ್ರಿನಲ್ಲಿ ಚಿಕ್ಕ ಕೆಪಾಸಿಟರ್ ಸರ್ಕ್ಯೂಟುಗಳಿವೆ.

ಟಚ್ ಮಾಡಿ ಅನ್ ಲಾಕ್ ಮಾಡಿ!

ಬೆರಳಚ್ಚು ಸಂವೇದಕ: ನಿಮಗೆ ಗೊತ್ತಿರದ ಆರು ಉಪಯೋಗಗಳು.

ಕೆಪಾಸಿಟರ್ ಸರ್ಕ್ಯೂಟನ್ನು ಸ್ಕ್ಯಾನರ್ರಿನ ಮೇಲ್ಮೆಗೆ ಸಂಪರ್ಕಿಸಲಾಗಿರುತ್ತದೆ, ಬೆರಳಚ್ಚಿನ ವಿವರಗಳು ಎಲೆಕ್ಟ್ರಿಕ್ ಚಾರ್ಜ್ ಮೂಲಕ ಈ ಸರ್ಕ್ಯೂಟನ್ನು ತಲುಪುತ್ತದೆ. ಕೆಪಾಸಿಟರ್ ನಲ್ಲಿರುವ ಎಲೆಕ್ಟ್ರಿಕ್ ಚಾರ್ಜ್ ಬೆರಳನ್ನು ಸ್ಕ್ಯಾನರ್ ಮೇಲಿಟ್ಟಾಗ ಬದಲಾಗುತ್ತದೆ.

ಓದಿರಿ: ನೀವು ಖರೀದಿಸಿದ ಜಿಯೋ ಸಿಮ್ ಆಕ್ಟಿವೇಟ್ ಆಗಿದೆಯೇ? ಪರಿಶೀಲನೆ ಹೇಗೆ?

ಇದರಲ್ಲಿ ತುಂಬಾ ಹೆಚ್ಚಿನ ಕೆಪಾಸಿಟರ್ ಸರ್ಕ್ಯೂಟುಗಳು ಇರುವ ಕಾರಣದಿಂದಾಗಿ ಅನ್ ಲಾಕ್ ಮಾಡಲು ಹಲವಾರು ಬಾರಿ ಪ್ರಯತ್ನಿಸಬೇಕಾಗುತ್ತದೆ ಎಂದಲವರು ದೂರಿದ್ದಾರೆ. ನಿಧಾನಕ್ಕೆ ಇದರಲ್ಲೂ ಅಭಿವೃದ್ಧಿಯಾಗಿದೆ, ಒಂದು ಬಾರಿ ಟಚ್ ಮಾಡಿದರೆ ಅನ್ ಲಾಕ್ ಆಗುತ್ತದೆ.

ಬೆರಳಚ್ಚು ಸಂವೇದಕದ ಅತ್ಯಾಧುನಿಕ ತಂತ್ರಜ್ಞಾನ.

ಬೆರಳಚ್ಚು ಸಂವೇದಕ: ನಿಮಗೆ ಗೊತ್ತಿರದ ಆರು ಉಪಯೋಗಗಳು.

ಬೆರಳಚ್ಚು ಸಂವೇದಕದ ಹೊಸ ತಂತ್ರಜ್ಞಾನವು ಲಿ ಮ್ಯಾಕ್ಸ್ ಪ್ರೊ ಸ್ಮಾರ್ಟ್ ಫೋನಿನಲ್ಲಿದೆ. ಇದು ಅಲ್ಟ್ರಾಸೋನಿಕ್ ಸಂವೇದಕ. ಅಲ್ಟ್ರಾಸೋನಿಕ್ ಸ್ಕ್ಯಾನರ್ ಅಥವಾ ಕ್ವಾಲ್ ಕಮ್ ಸೆನ್ಸ್ ಐಡಿಯಲ್ಲಿ ಟ್ರ್ಯಾನ್ಸ್ ಮಿಟರ್ ಮತ್ತು ರಿಸೀವರ್ ಇದೆ.

ಈ ಪ್ರಕ್ರಿಯೆಯಲ್ಲಿ, ಅಲ್ಟ್ರಾಸೋನಿಕ್ ಪಲ್ಸ್ ಅನ್ನು ಬೆರಳಿಗೆ ಕಳುಹಿಸಲಾಗುತ್ತದೆ. ಈ ಅಲೆಗಳನ್ನು ಬೆರಳು ಸ್ವಲ್ಪಮಟ್ಟಿಗೆ ಹೀರಿಕೊಳ್ಳುತ್ತದೆ, ಸ್ವಲ್ಪ ಮಟ್ಟಿಗೆ ಮತ್ತೆ ಫೋನಿನ ಮೇಲ್ಮೈಗೆ ಪ್ರತಿಫಲಿಸುತ್ತದೆ, ಇದು ಬೆರಳಿನಲ್ಲಿರುವ ಏರಿಳಿತಗಳ (ರಿಡ್ಜಸ್ ಮತ್ತು ಪೋರ್ಸ್) ಮೇಲೆ ಅವಲಂಬಿಸಿದೆ. ಈ ಪ್ರಕ್ರಿಯೆ ಮುಗಿದಾಗ, ಬೆರಳಚ್ಚಿನ 3ಡಿ ಪ್ರತಿ ಮೂಡುತ್ತದೆ!

ಮೂರು ಹಂತದಲ್ಲಿ ಇದು ಕೆಲಸ ಮಾಡುತ್ತದೆ.

ಹಂತ 1: ಸ್ಕ್ಯಾನರ್ ಮೇಲೆ ನಮ್ಮ ಬೆರಳನ್ನು ಇಟ್ಟಾಗ, ಫೋನಿನಲ್ಲಿರುವ ತಂತ್ರಜ್ಞಾನವನ್ನು ಬಳಸಿಕೊಂಡು ಕಪ್ಪು ಬಿಳುಪಿನ ಫೋಟೋ ತೆಗೆಯಲಾಗುತ್ತದೆ.

ಹಂತ 2: ನಂತರ, ಬೆರಳಚ್ಚನ್ನು ಒಂದು ಅಂಕಿ ಸಂಖ್ಯೆಯ ಮಾದರಿಯಲ್ಲಿ ಸ್ಟೋರ್ ಮಾಡಲಾಗುತ್ತದೆ. ಇದು ಎನ್ಕ್ರಿಪ್ಟೆಡ್ ಮಾಹಿತಿಯಾಗಿರುತ್ತದೆ. ಈ ಎನ್ಕ್ರಿಪ್ಟೆಡ್ ಮಾಹಿತಿಯನ್ನು ನಿಮ್ಮ ಫೋನಿನ ಡೇಟಾಬೇಸಿನಲ್ಲಿ ಸೇವ್ ಮಾಡಲಾಗುತ್ತದೆ.

ಹಂತ 3: ಮುಂದಿನ ಸಲ, ಸ್ಕ್ಯಾನರ್ ಮೇಲೆ ನಿಮ್ಮ ಬೆರಳನ್ನು ಇಟ್ಟಾಗ, ಎನ್ಕ್ರಿಪ್ಟೆಡ್ ಮಾಹಿತಿಯು ಫೋನಿನಲ್ಲಿ ಸೇವ್ ಆಗಿರುವ ಅಂಕಿ ಸಂಖೈಯ ಮಾದರಿಯೊಂದಿಗೆ ಹೋಲಿಕೆ ಮಾಡುತ್ತದೆ.

ಬೆರಳಚ್ಚು ಸಂವೇದಕ: ನಿಮಗೆ ಗೊತ್ತಿರದ ಆರು ಉಪಯೋಗಗಳು.

ಬೆರಳಚ್ಚು ಸಂವೇದಕದ ಉಪಯೋಗಗಳು.

ಆ್ಯಪ್ ಮತ್ತು ಫೋಲ್ಡರ್ ಲಾಕ್: ನಿಮ್ಮ ಮೊಬೈಲಿನ ಬೆರಳಚ್ಚನ್ನು ಉಪಯೋಗಿಸಿಕೊಂಡು ನಿರ್ದಿಷ್ಟ ಫೋಲ್ಡರುಗಳು, ಗ್ಯಾಲರಿಯನ್ನು ಲಾಕ್ ಮಾಡಬಹುದು. ಬಹಳಷ್ಟು ಮೊಬೈಲುಗಳಲ್ಲಿ ಈ ಆಯ್ಕೆಯನ್ನು ಅವರೇ ಕೊಟ್ಟಿರುತ್ತಾರೆ, ಇಲ್ಲವಾದಲ್ಲಿ ಆ್ಯಪ್ ಸ್ಟೋರಿನಿಂದ ಥರ್ಡ್ ಪಾರ್ಟಿ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬಹುದು.

ಓದಿರಿ: ಐಫೋನ್‌ಗಳನ್ನೇ ಮೀರಿಸುವ ಬಜೆಟ್ ದರದ ಕ್ಲೋನ್ ಐಫೋನ್‌ಗಳು

ಆ್ಯಪ್ ಜೊತೆ ಸಂವಹಿಸಿ.

ಕೆಲವು ಸ್ಮಾರ್ಟ್ ಫೋನುಗಳಲ್ಲಿ ಬೆರಳಚ್ಚು ಸಂವೇದಕವನ್ನು ಉಪಯೋಗಿಸಿಕೊಂಡು ಸೆಲ್ಫಿ ತೆಗೆದುಕೊಳ್ಳಬಹುದು, ಹಾಡುಗಳನ್ನು ಬದಲಿಸಬಹುದು, ನೋಟಿಫಿಕೇಷನ್ ಬಾರ್ ಅನ್ನು ತೆಗೆಯಬಹುದು. ಈ ಸೌಲಭ್ಯಗಳೆಲ್ಲವೂ ಹುವಾಯಿ ಪಿ9 ಸ್ಮಾರ್ಟ್ ಫೋನಿನಲ್ಲಿದೆ.

ಶಾರ್ಟ್ ಕಟ್ಟಿಗಾಗಿ ಉಪಯೋಗಿಸಿ.

ಸ್ಕ್ಯಾನರನ್ನು ಉಪಯೋಗಿಸಿಕೊಂಡು ನೀವು ಕೆಲವು ಶಾರ್ಟ್ ಕಟ್ಟುಗಳನ್ನೂ ಸೃಷ್ಟಿಸಬಹುದು. ಹೋಮ್ ಸ್ಕ್ರೀನ್ ಮೆನುವಿಗೆ ಹೋಗಿ, ಕಡತಗಳನ್ನು ಹುಡುಕುವ ಬದಲು, ನಿರ್ದಿಷ್ಟ ಆ್ಯಪ್ ಗಳನ್ನು ತೆರೆಯಲು ಸ್ಕ್ಯಾನರನ್ನು ಉಪಯೋಗಿಸಬಹುದು.

ಸೆಲ್ಫಿ ತೆಗೆಯಿರಿ.

ಸೆಲ್ಫಿ ತೆಗೆಯಲು ಹಲವು ಆ್ಯಪ್ ಗಳಿವೆ. ಫೋನಿನ ಹಿಂಬದಿಯಲ್ಲಿರುವ ಬೆರಳಚ್ಚು ಸಂವೇದಕವನ್ನು ಉಪಯೋಗಿಸುವುದು ಸುಲಭದ ವಿಧಾನಗಳಲ್ಲೊಂದು.

ನೋಟಿಫೀಕೇಷನ್ ನೋಡಿ.

ಚೀನಾದ ಮೊಬೈಲುಗಳಲ್ಲಿ ಈ ಸೌಕರ್ಯವಿದೆ. ಕೆಳಗೆ ಸ್ವೈಪ್ ಮಾಡುವ ಮೂಲಕ ನೋಟಿಫಿಕೇಷನ್ ಪ್ಯಾನೆಲ್ ಅನ್ನು ತೆರೆಯಬಹುದು. ಇದು ಹುವಾಯಿ ಮತ್ತು ಶಿಯೋಮಿ ಸ್ಮಾರ್ಟ್ ಫೋನುಗಳಲ್ಲಿ ಲಭ್ಯವಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Amid the rapid growth in technology, the security has become a very important factor in smartphones, as most of them are vulnerable to data theft!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X