ಏರ್‌ಸೆಲ್‌ನಿಂದ ದ್ವಿತೀಯ 4 ಜಿ LTE ಸೇವೆ

By Shwetha
|

ಏರ್‌ಟೆಲ್ ನಂತರ, 4 ಜಿ LTE ಆಪರೇಟರ್‌ನಲ್ಲಿ ಏರ್‌ಸೆಲ್ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ. ಭಾರತದ ಮುನ್ನಡೆಯಲ್ಲಿರುವ ಟೆಲಿಕಾಮ್ ಆಪರೇಟರ್ ಆದ ಏರ್‌ಸೆಲ್, ತನ್ನ 4 ಜಿ ಸೇವೆಯನ್ನು ದೇಶದಲ್ಲಿ ಘೋಷಿಸಿದೆ.

ಭಾರತದ ಎಲ್ಲಾ ಕಡೆ ಏರ್‌ಸೆಲ್‌ನ 4 ಜಿ ಸೇವೆಯನ್ನು ಪಡೆಯುವುದು ಕೊಂಚ ದುಸ್ತರವಾಗಿದ್ದರೂ ಕಂಪೆನಿ ಈ ಬಗೆಯಲ್ಲಿ ತನ್ನ ಸೇವೆಯನ್ನು ಎಲ್ಲಾ ಕಡೆ ವಿಸ್ತರಿಸುವ ಪ್ರಯತ್ನವನ್ನು ಮಾಡುತ್ತಿದೆ.

ಏರ್‌ಟೆಲ್ 4 ಜಿ ಕಿರೀಟ ಇನ್ನು ಏರ್‌ಸೆಲ್‌ ತಲೆಗೆ

ಘೋಷಣೆಯಂತೆ, ಏರ್‌ಸೆಲ್ ತನ್ನ 4 ಜಿ ಸೇವೆಯನ್ನು ನಾಲ್ಕು ವಲಯಗಳಲ್ಲಿ ಪ್ರಾರಂಭಿಸುತ್ತಿದೆ ಅವುಗಳೆಂದರೆ ಆಂಧ್ರಪ್ರದೇಶ, ಅಸ್ಸಾಮ್, ಬಿಹಾರ್ ಮತ್ತು ಒರಿಸ್ಸಾ ಪ್ರಾಂತ್ಯಗಳಾಗಿವೆ. ಕಂಪೆನಿಯು 4 ಜಿ ಸೇವೆಯನ್ನು ಒದಗಿಸಲು 2300MHz ಬ್ಯಾಂಡ್ ಅನ್ನು ಬಳಸುತ್ತಿದೆ ಆದರೆ ಕಂಪೆನಿಯಿಂದ ಇನ್ನಷ್ಟು ಮಾಹಿತಿಗಳು ಇನ್ನೂ ಲಭ್ಯವಾಗಬೇಕಿದೆ.

ತನ್ನ 4 ಜಿ LTE ಸೇವೆಯ ಮೂಲಕ ಬಳಕೆದಾರರ ಅತ್ಯಾಗ್ರಹ ಅಂತರ್ಜಾಲ ಪೂರೈಕೆಯನ್ನು ನೆರವೇರಿಸಿಕೊಡುವ ನಿಟ್ಟಿನಲ್ಲಿ ಕಂಪೆನಿ ಇದ್ದು ಬಹುಬೇಗನೇ ತನ್ನೆಲ್ಲಾ ಗ್ರಾಹಕರಿಗೆ ಈ ಸೇವೆಯನ್ನು ಒದಗಿಸುವ ಆಶಾಭಾವನೆಯನ್ನು ಕಂಪೆನಿ ಹೊಂದಿದೆ.

ತನ್ನ 4 ಜಿ LTE ಸೇವೆಯ ಮೂಲಕ ಭಾರತದಲ್ಲಿ ಏರ್‌ಟೆಲ್‌ಗೆ ಏರ್‌ಸೆಲ್ ಅಪಾಯವನ್ನು ಒಡ್ಡುವುದು ನಿಶ್ಚಯವಾಗಿದ್ದು 4 ಜಿ ಸೇವೆಯಲ್ಲಿ ತನ್ನನ್ನು ಮೀರಿಸುವವರು ಯಾರೂ ಇಲ್ಲವೆಂದು ಬೀಗುತ್ತಿದ್ದ ಏರ್‌ಟೆಲ್ ಸೊಕ್ಕು ಮುರಿಯುವ ಕಾಲ ಸನ್ನಿಹಿತವಾಗಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Best Mobiles in India

Read more about:
English summary
Aircel launches Indias second 4g lte service

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X