ಸ್ಮಾರ್ಟ್‌ಫೋನ್ ಕಳ್ಳತನಕ್ಕೆ ಬೆಂಗಾವಲು ಈ ಆಪ್ಲಿಕೇಶನ್

By Shwetha
|

ನೀವು ಎಷ್ಟೇ ದುಬಾರಿಯ ವಸ್ತುಗಳನ್ನು ಖರೀದಿಸಿ ಅದನ್ನು ಜೋಪಾನ ಮಾಡಿ. ಆದರೂ ಅದು ಒಮ್ಮೊಮ್ಮೆ ನಮಗೆ ಗೊತ್ತಿಲ್ಲದೆ ಕಳ್ಳರ ಪಾಲಾಗುತ್ತದೆ, ಎಲ್ಲಿಯೋ ಮಿಸ್ ಆಗುತ್ತದೆ. ಆಗ ನಮಗಾಗುವ ದುಃಖ ನಿಜಕ್ಕೂ ಹೇಳತೀರದ್ದು.

ನಿಮ್ಮ ದುಬಾರಿ ವಸ್ತು ಕಳುವಾದರೂ ಕದ್ದವರ ಮಾಹಿತಿ ಮಿಸ್ ಆದದ್ದರ ಬಗ್ಗೆ ಸುಳಿವು ದೊರೆತರೆ ಎಷ್ಟು ಉತ್ತಮ ಅಲ್ಲವೇ? ಹೌದು ಇಂತಹ ಲಾಜಿಕ್ ನಿಮ್ಮ ದುಬಾರಿ ವಸ್ತು, ಉಸಿರು ಎಂದೇ ಕರೆಯಲಾದ ಸ್ಮಾರ್ಟ್‌ಫೋನ್ ವಿಚಾರದಲ್ಲಿ ನಿಜವಾಗುತ್ತಿದೆ.

ಸ್ಮಾರ್ಟ್‌ಫೋನ್ ಕಳ್ಳತನಕ್ಕೆ ಬೆಂಗಾವಲು ಈ ಆಪ್ಲಿಕೇಶನ್

ನಿಮ್ಮ ಫೋನ್ ಅನ್ನು ಕಳುವು ಮಾಡಿದರೆ ಅದರ ಬಗ್ಗೆ ಕೂಡಲೇ ನಿಮಗೆ ಎಚ್ಚರಿಕೆಯ ಘಂಟೆ ಬಡಿಯುತ್ತದೆ. ಅದು ಹೇಗೆಂದು ವಿಷದವಾಗಿ ನಿಮಗೆ ತಿಳಿಯಬೇಕೆಂದರೆ ಲೇಖನವನ್ನು ಓದಿ.

ಇತ್ತೀಚೆಗೆ ಬಿಡುಗಡೆಯಾಗಿರುವ ಒಂದು ಅಪ್ಲಿಕೇಶನ್ ನಿಮ್ಮ ಫೋನ್ ಅನ್ನು ಕಳ್ಳತನದಿಂದ ರಕ್ಷಿಸುತ್ತದೆ. ಸಂಶಯಾಸ್ಪದ ಚಟುವಟಿಕೆ ಜರಗಿದಲ್ಲಿ ಇದು ಕೂಡಲೇ ಮಾಲೀಕರಿಗೆ ಎಚ್ಚರಿಕೆಯ ಘಂಟೆಯನ್ನು ಬಡಿಯುತ್ತದೆ. ಈ ಅಪ್ಲಿಕೇಶನ್ ಮೂಲಕ ಬಳಕೆದಾರರು ತಮ್ಮ ಕದ್ದ ಅಥವಾ ಮಿಸ್ ಆದ ಫೋನ್ ಅನ್ನು ಹುಡುಕಿಕೊಳ್ಳಬಹುದು.

ಆಂಡ್ರಾಯ್ಡ್ ಫೋನ್‌ಗಳಲ್ಲಿ, ಸಿಮ್ ಕಾರ್ಡ್ ತೆಗೆಯುವುದು, ಏರ್‌ಪ್ಲೇನ್ ಮೋಡ್ ಸಕ್ರಿಯಗೊಳಿಸುವುದು, ಫೋನ್ ಅನ್ನು ಆಫ್ ಮಾಡುವುದು ಮುಂತಾದ ವಿಧಾನಗಳನ್ನು ಅನುಸರಿಸುವುದರ ಮೂಲಕ ನಿಮ್ಮ ಫೋನ್‌ನಲ್ಲಿ ನಡೆದಿರುವಂತಹ ಕ್ರಿಯೆಗಳ ಪಟ್ಟಿಯನ್ನು ತೋರಿಸುತ್ತದೆ. ಇದು ಎಚ್ಚರಿಕೆಯನ್ನು ಕೂಡ ನಿಮಗೆ ಟ್ರಿಗ್ಗರ್ ಮಾಡುತ್ತದೆ.

ಐಓಎಸ್ ಬಳಕೆದಾರರಿಗೆ ಕಳ್ಳತನದ ಎಚ್ಚರಿಕೆಗಳು ಸಿಮ್ ಕಾರ್ಡ್‌ ಅನ್ನು ತೆಗೆದಾಗ ಮತ್ತು ಏರ್‌ಪ್ಲೇನ್ ಮೋಡ್ ಅನ್ನು ಸಕ್ರಿಯಗೊಳಿಸಿದಾಗ ಸಿಗುತ್ತವೆ. ಎಚ್ಚರಿಕೆ ಮೊಳಗಿದಾಗ ಡಿವೈಸ್‌ನ (ಆಂಡ್ರಾಯ್ಡ್ ಬಳಕೆದಾರರು) ಮುಂಭಾಗ ಕ್ಯಾಮೆರಾವು ಫೋಟೋವನ್ನು ತೆಗೆಯುತ್ತದೆ ಹಾಗೂ ಡಿವೈಸ್ ಇರುವ ನಿಖರವಾದ ಸ್ಥಳವನ್ನು ದಾಖಲಿಸುತ್ತದೆ.

ಬಳಕೆದಾರರಿಗೆ ಕಳ್ಳನ ಫೋಟೋದೊಂದಿಗೆ ಫೋನ್ ಇರುವ ಪ್ರದೇಶದ ಮಾಹಿತಿಯು ಇಮೇಲ್‌ನಲ್ಲಿ ದೊರೆಯುತ್ತದೆ ಮತ್ತು ನಿಮಗೆ ಇದರಿಂದ ಸುಲಭವಾಗಿ ನಿಮ್ಮ ಫೋನ್ ಅನ್ನು ಗುರುತಿಸಬಹುದು.

ಐಒಎಸ್ ಮತ್ತು ಆಂಡ್ರಾಯ್ಡ್ ಅಪ್ಲಿಕೇಶನ್‌ಗಳೆರಡೂ ಉಚಿತವಾಗಿದ್ದು, ಆದರೆ ಥೆಫ್ಟ್ ಅಲರ್ಟ್‌ಗಳಿಗೆ ಚಂದಾದಾರಿಕೆಯ ಅವಶ್ಯಕತೆಯಿದೆ. ಸಪ್ಟೆಂಬರ್‌ವರೆಗೆ ಈ ಥೆಫ್ಟ್ ಅಲರ್ಟ್‌ಗಳನ್ನು ಬಳಕೆದಾರರು ಚಂದಾದಾರಿಕೆಯಿಲ್ಲದೆ ಬಳಸಬಹುದಾಗಿದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X