ಆಪಲ್ ಐಫೋನ್ 6 ಪ್ಲಸ್‌ನ ಮನಸೆಳೆಯುವ ವಿಶೇಷತೆಗಳು

By Shwetha
|

ಈ ವರ್ಷದುದ್ದಕ್ಕೂ ಹೆಚ್ಚಿನ ಬದಲಾವಣೆಯನ್ನು ತರಲಿರುವ ಬ್ರ್ಯಾಂಡ್ ಹೊಸ ಐಫೋನ್‌ಗಳನ್ನು ಆಪಲ್ ಲಾಂಚ್ ಮಾಡಿದೆ. ಈ ಐಫೋನ್‌ಗಳೊಂದಿಗೆ ಆಪಲ್ ಏನೆಲ್ಲಾ ಕಮಾಲುಗಳನ್ನು ಮಾಡಿದೆ ಎಂಬುದನ್ನು ಮಾತ್ರವೇ ನಾವು ಅತ್ಯಾಶ್ಚಕರವಾಗಿ ಗಮನಿಸಬೇಕಾಗಿದೆ.

ನಿಮಗೆ ಈಗಾಗಲೇ ತಿಳಿದಿರುವಂತೆ, ಹೊಸ ಐಫೋನ್ ಎರಡು ಗಾತ್ರಗಳಲ್ಲಿ ಬಂದಿದೆ. 4.7 ಇಂಚಿನದ್ದು ಮತ್ತೊಂದು 5.5 ಇಂಚಿನದ್ದು ಇದು ಆಕರ್ಷಕ ವಿನ್ಯಾಸವನ್ನು ಹೊಂದಿದ್ದು ಶ್ರೀಮಂತ ಮತ್ತು ಮನಸೆಳೆಯುವ UI ವಿಶೇಷತೆಗಳನ್ನು ಹೊಂದಿವೆ. ದೊಡ್ಡದಾದ ಪರದೆಯನ್ನು ಕೂಡ ಈ ಐಫೋನ್‌ಗಳು ಹೊಂದಿವೆ.

ಇನ್ನೂ ಹೆಚ್ಚಾಗಿ, ಐಫೋನ್ 6 ಪ್ಲಸ್‌ನ ಹಿಂಭಾಗವು ಅಲ್ಯುಮಿನಿಯಮ್ ಕವರ್ ಅನ್ನು ಹೊಂದಿದ್ದು ಪೋನ್‌ನ ಸುತ್ತಲೂ ಸ್ಟೈನ್‌ಲೆಸ್ ಸ್ಟೀಲ್ ಅನ್ನು ಅಳವಡಿಸಲಾಗಿದೆ. ಇದೇ ಸಮಯಕ್ಕೆ ಬಂದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4, 7.1 ಎಮ್‌ಎಮ್ ಅಳತೆಯಲ್ಲಿದ್ದು ಮಾರುಕಟ್ಟೆಯಲ್ಲಿ ತೆಳುವಾದ ಫೋನ್ ಆಗಿ ಹೆಸರು ಗಳಿಸಿಲ್ಲ.

ಇನ್ನು ಕ್ಯಾಮೆರಾ ವಿಭಾಗದಲ್ಲಿ ಅತ್ಯಾಧುನಿಕ ಐಫೋನ್ 6 ಪ್ಲಸ್ 8 ಮೆಗಪಿಕ್ಸೆಲ್ iSight ರಿಯರ್ ಫೇಸಿಂಗ್ ಕ್ಯಾಮೆರಾವನ್ನು ಹೊಂದಿದ್ದು ಟ್ರು ಟೋನ್ ಡ್ಯುಯಲ್ LED ಫ್ಲ್ಯಾಶ್ ಅನ್ನು ಒಳಗೊಂಡಿದೆ. ಹೆಚ್ಚು ಆಸಕ್ತಿಕರವಾಗಿ ಐಫೋನ್ 6 ಪ್ಲಸ್ ಇದು ಅಪ್ಟಿಕಲ್ ಇಮೇಜ್ ಸ್ಟಿಬಿಲೈಸೇಶನ್ ವಿಶೇಷತೆಯನ್ನು ಕೂಡ ಹೊಂದಿದೆ.

ಇನ್ನೂ ಹೆಚ್ಚಾಗಿ, ಐಫೋನ್ 6 ಪ್ಲಸ್‌ನ ಹಿಂಭಾಗವು ಅಲ್ಯುಮಿನಿಯಮ್ ಕವರ್ ಅನ್ನು ಹೊಂದಿದ್ದು ಪೋನ್‌ನ ಸುತ್ತಲೂ ಸ್ಟೈನ್‌ಲೆಸ್ ಸ್ಟೀಲ್ ಅನ್ನು ಅಳವಡಿಸಲಾಗಿದೆ. ಇದೇ ಸಮಯಕ್ಕೆ ಬಂದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ 4, 7.1 ಎಮ್‌ಎಮ್ ಅಳತೆಯಲ್ಲಿದ್ದು ಮಾರುಕಟ್ಟೆಯಲ್ಲಿ ತೆಳುವಾದ ಫೋನ್ ಆಗಿ ಹೆಸರು ಗಳಿಸಿಲ್ಲ. ಆಪಲ್‌ನ ಐಫೋನ್ 6 ಪ್ಲಸ್ 64-bit A8 ಚಿಪ್‌ಸೆಟ್ ಸಾಮರ್ಥ್ಯವನ್ನು ಹೊಂದಿದ್ದು, ಕಂಪೆನಿ ಹೇಳುವಂತೆ ಇದು ಮೂಲ A7 ಪ್ರೊಸೆಸರ್‌ಗಿಂತ 50% ಹೆಚ್ಚು ಶಕ್ತಿಶಾಲಿಯಾಗಿದೆ. ಇದರ ಬಳಕೆದಾರ ಇಂಟರ್ಫೇಸ್ ಅನ್ನು ಕೂಡ ವಿಸ್ತರಿಸಲಾಗಿದ್ದು ಇದರ ದೊಡ್ಡ ಪರದೆ ಮತ್ತು ಸ್ಪಿಲ್ಟ್ ಸ್ಕ್ರೀನ್ ಮೋಡ್‌ಗೆ ಸರಿಹೊಂದುವಂತೆ ಮಾರ್ಪಡಿಸಲಾಗಿದೆ. ಐಫೋನ್ 6 ಪ್ಲಸ್ ಲ್ಯಾಂಡ್ ಸ್ಕೇಪ್ ಮೋಡ್‌ಗೂ ಬೆಂಬಲ ನೀಡುತ್ತದೆ.

ಇಂದಿನ ಲೇಖನದಲ್ಲಿ ಐಫೋನ್ ಕುರಿತ ಅದರ ವಿಶೇಷತೆಗಳತ್ತ ನೋಟ ಹರಿಸೋಣ. ಇದರಲ್ಲಿ ನಿಮ್ಮ ಮನಸೆಳೆಯುವ ಅಂಶಗಳಿದ್ದು ಖಂಡಿತ ಇದು ಮನಕೆ ಮುದ ನೀಡುವಂತಿದೆ.

#1

#1

ಇದು 4.7 ಇಂಚಿನ ಅಂಶದಿಂದ ಮನಸೆಳೆಯುವಂತಿದೆ. ಇದು ಹೆಚ್ಚು ಶಕ್ತಿಯುತವಾಗಿದ್ದು ಫೋನ್ ಕ್ಷೇತ್ರದಲ್ಲೇ ಜಾದೂವನ್ನು ಉಂಟು ಮಾಡುವ ಅಂಶಗಳಿಂದ ಮನಸೆಳೆಯುವಂತಿದೆ. ಫೋನ್‌ನ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಅಂತೂ ಬಲುಮಜಬೂತಾಗಿದ್ದು ನಿಜಕ್ಕೂ ಅತ್ಯಾಶ್ಚರ್ಯವನ್ನುಂಟು ಮಾಡುವ ವಿಶೇಷತೆಗಳಿಂದ ಕೂಡಿದೆ.

#2

#2

ರೆಟಿನಾ ಎಚ್‌ಡಿ ಡಿಸ್‌ಪ್ಲೇ ಐಫೋನ್‌ನಲ್ಲಿದ್ದು ಪೂರ್ಣ sRGB ಬಣ್ಣದಿಂದ ಇದರ ಡಿಸ್‌ಪ್ಲೇ ಕೂಡಿದೆ. ಇದು ನಿಜಕ್ಕೂ ಅಮೋಘವಾಗಿದ್ದು ಮಾರುಕಟ್ಟೆಯಲ್ಲಿ ಇಲ್ಲಿಯವರೆಗೆ ಹೆಚ್ಚು ಮನಸೆಳೆದಿರುವ ಟಾಪ್ ಉತ್ಪನ್ನಗಳಲ್ಲಿ ಇದು ಸ್ಥಾನ ಗಳಿಸುವುದು ನಿಜಕ್ಕೂ ಸತ್ಯವಾಗಿದೆ.

#3

#3

ಹೊಸ ಐಫೋನ್ 6 A8 ಚಿಪ್ ಬಿಲ್ಟ್‌ನಿಂದ ಕೂಡಿದ್ದು M8 ಮೋಶನ್ ಕೋ ಪ್ರೊಸೆಸರ್ ಇದರಲ್ಲಿದೆ. ಸುಧಾರಿತ ಸೆನ್ಸಾರ್‌ಗಳನ್ನು ಕೂಡ ಐಫೋನ್ ಹೊಂದಿದ್ದು ಉತ್ತಮ ಬ್ಯಾಟರಿ ಬಾಳಿಕೆಯನ್ನು ಹೊಂದಿ ನಿಮ್ಮಲ್ಲಾ ಚಟುವಟಿಕೆಗಳಿಗೆ ಈ ಫೋನ್ ಪೂರಕವಾಗಿದೆ.

#4

#4

1.5 ಮೈಕ್ರೋನ್ ಪಿಕ್ಸೆಲ್‌ಗಳು ಮತ್ತು ƒ/2.2 ಅಪಾರ್ಚರ್ ಅನ್ನು ಐಫೋನ್ ಹೊಂದಿದ್ದು, ಜಗತ್ತಿನ ಉತ್ತಮ ಕ್ಯಾಮೆರಾವನ್ನು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಸೇರಿಸಿಕೊಂಡು ಇದರ ಕ್ಯಾಮೆರಾವನ್ನು ನಿರ್ಮಿಸಲಾಗಿದೆ. 60 fps ನಲ್ಲಿ 1080p HD ನ ಫೋಟೋವನ್ನು ತೆಗೆಯುವಂತಹ ವಿಶೇಷತೆಯನ್ನು ಇದರಲ್ಲಿ ಅಳವಡಿಸಲಾಗಿದೆ.

#5

#5

ಇತರ ಸಾಂಪ್ರದಾಯಿಕ ವಿಧಾನಗಳನ್ನು ಅನುಸರಿಸಿ ಈ ರೆಟೀನಾ HD ಡಿಸ್‌ಪ್ಲೇಯ ಫೋನ್ ಅನ್ನು ಪರಿಣಾಮಕಾರಿಯಾಗಿಸುವುದಕ್ಕಿಂತ ಆಪಲ್ ಇದಕ್ಕಾಗಿ ಹೆಚ್ಚು ಸುಧಾರಿತ ಪ್ರಕ್ರಿಯೆಯನ್ನು ಅಳವಡಿಸಿದೆ. ಇದರಲ್ಲಿರುವ ಯುವಿ ಲೈಟ್ ಡಿಸ್‌ಪ್ಲೇಯ ನಿಖರವಾದ ಸ್ಥಿತಿಯನ್ನು ಹಿಟಿದಿಟ್ಟು ಉತ್ತಮ ಫೋಟೋವನ್ನು ತೆಗೆಯಲು ಅನುಕೂಲಕರವಾಗಿದೆ.

#6

#6

ಈ ಡಿವೈಸ್‌ನ ವೀಕ್ಷಣೆ ಮಟ್ಟ ಹೆಚ್ಚು ಅದ್ಭುತವಾಗಿದ್ದು, ನಿಜಕ್ಕೂ ಮನಸೆಳೆಯುವಂತಿದೆ. ಮೂಲೆಯಿಂದ ಮೂಲೆಗೂ ಇದು ಬೆಳಕನ್ನು ಹಿಡಿದಿಟ್ಟುಕೊಳ್ಳುವ ವಿಧಾನವನ್ನು ಹೊಂದಿದ್ದು ನಿಜಕ್ಕೂ ಕಣ್ಮನ ಸೆಳೆಯುವಂತಿದೆ.

#7

#7

ಆಪಲ್ ವಿನ್ಯಾಸದ ವೀಡಿಯೊ ಎನ್‌ಕೋಡರ್ ಅನ್ನು ಐಫೋನ್ 6 ಹೊಂದಿದ್ದು ಇದು ಸುಧಾರಿತ ಕ್ಯಾಮೆರಾ ಮತ್ತು ವೀಡಿಯೊಗೆ ಬೆಂಬಲವನ್ನು ನೀಡಲಿದೆ. ಉತ್ತಮ ಗುಣಮಟ್ಟದ ಫೋಟೋ ಹಾಗೂ ವೀಡಿಯೊವನ್ನು ತೆಗೆಯಲು ಈ ಐಫೋನ್ ಹೇಳಿ ಮಾಡಿಸಿದಂತಿದೆ.

#8

#8

ಐಫೋನ್ 6 ಅತ್ಯಂತ ವೇಗವಾಗಿರುವ LTE ಡೌನ್‌ಲೋಡ್ ವೇಗವನ್ನು ಹೊಂದಿದೆ. ಇದು ಹೆಚ್ಚಿನ LTE ಬ್ಯಾಂಡ್‌ಗಳನ್ನು ಹೊಂದಿದೆ. ಇದು ಹೆಚ್ಚು ಸುಧಾರಿತ ವೈರ್‌ಲೆಸ್ ತಂತ್ರಜ್ಞಾನಕ್ಕೆ ಬೆಂಬಲವನ್ನು ನೀಡುತ್ತಿದ್ದು ನಿಮ್ಮ ಸಮೀಪದ ವಿಷಯಗಳಿಗೆ ವೇಗವಾಗಿ ಸಂಪರ್ಕವನ್ನು ಇದು ಒದಗಿಸುತ್ತದೆ.

#9

#9

ವೇಗವಾದ LTE ಬೆಂಬಲದೊಂದಿಗೆ ಐಫೋನ್ 6 ಬಳಕೆದಾರರು ವೇಗವಾದ ಡೌನ್‌ಲೋಡ್ ಮತ್ತು ಅಪ್‌ಲೋಡ್ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಮ್ಯೂಸಿಕ್ ಆಲಿಸಲು, ವೀಡಿಯೊ ಕರೆಗಳನ್ನು ಮಾಡಲು ಮತ್ತು ಇನ್ನಷ್ಟನ್ನು ನಿರ್ವಹಿಸಲು ಈ ಐಫೋನ್‌ನಿಂದ ಸಾಧ್ಯ.

#10

#10

ನಿಮ್ಮ ಐಫೋನ್ ನಿಮ್ಮ ಬೆರಳಚ್ಚನ್ನು ಪರಿಶೀಲಿಸಿ ನೀವು ಯಾರೆಂಬುದನ್ನು ತಿಳಿಸುತ್ತದೆ. ಮತ್ತು ಟಚ್ ಐಡಿ ನಿಮ್ಮ ಬಹು ಬೆರಳಚ್ಚನ್ನು ನಮೂದಿಸಲು ಅನುಮತಿಸುತ್ತದೆ.

Best Mobiles in India

English summary
This article tells about Apple iPhone 6 Officially Unveiled with 4.7-Inch Display: 10 Features That Mark its Evolution.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X