ಅಸೂಸ್ 4 ಕಡಿಮೆ ದರದಲ್ಲಿ ಲಾಭದಾಯಕ ಫೋನ್

By Shwetha
|

ಭಾರತೀಯ ಫೋನ್ ಮಾರುಕಟ್ಟೆಯ ಅದೃಷ್ಟ ಖುಲಾಯಿಸಿದೆ ಎಂದೇ ಹೇಳಬಹುದು. ಏಕೆಂದರೆ ಜಗತ್ತಿನ ದೊಡ್ಡ ದೊಡ್ಡ ಸ್ಮಾರ್ಟ್‌ಫೋನ್ ತಯಾರಿಕಾ ಕಂಪೆನಿಗಳೂ ಕೂಡ ತಮ್ಮ ಅದೃಷ್ಟವನ್ನು ಜಗತ್ತಿನ ಅತ್ಯಂತ ಮುನ್ನಡೆಯಲ್ಲಿರುವ ಫೋನ್ ಮಾರುಕಟ್ಟೆ ಎಂದೇ ಖ್ಯಾತವಾಗಿರುವ ಭಾರತದಲ್ಲಿ ಪರೀಕ್ಷಿಸಿಕೊಳ್ಳುತ್ತಿದೆ. ಅಸೂಸ್ ತನ್ನ ಜೆನ್‌ಫೋನ್ ಶ್ರೇಣಿಯ ಮೂಲಕ ಭಾರತದ ಮಾರುಕಟ್ಡೆಗೆ ಕಾಲಿಟ್ಟ ಕ್ಷಣದಿಂದ ಈ ಫೋನ್‌ ಬಗ್ಗೆ ಕುತೂಹಲ ಹೆಚ್ಚಾಗುತ್ತಿದೆ.

ತೈವಾನ್ ಮೂಲವಾದ ಅಸೂಸ್, ಒಮ್ಮೆಗೆ ಮೂರು ಫೋನ್‌ಗಳನ್ನು ಮಾರುಕಟ್ಟೆಗೆ ಲಾಂಚ್ ಮಾಡುವ ಮೂಲಕ ತನ್ನ ದಾಳವನ್ನು ಉರುಳಿಸಿದೆ. ಜೆನ್‌ಫೋನ್ 4, 5 ಮತ್ತು 6 ಹೆಸರನ್ನು ಹೊಂದಿರುವ ಈ ಫೋನ್‌ಗಳು ಅತ್ಯಾಕರ್ಷಕ ವೈಶಿಷ್ಟ್ಯಗಳಿಂದ ಕಣ್ಸೆಳೆಯುವಂತಿದೆ. ಭಾರತದಲ್ಲಿ ಮೋಟೋರೋಲಾ ಮೋಟೋ ಇ ತನ್ನ ಯಶಸ್ಸನ್ನು ಭರ್ಜರಿಯಾಗಿ ಗಳಿಸಿಕೊಂಡ ನಂತರ, ಈ ಕಿರೀಟವನ್ನು ತನ್ನ ಮುಡಿಗೇರಿಸಿಕೊಳ್ಳುವ ಧಾವಂತದಲ್ಲಿ ಅಸೂಸ್ ಫೋನ್ ಇದೆ.

ಅಸೂಸ್ ಜೆನ್‌ಫೋನ್ 4 ವಿಶಿಷ್ಟ ವಿಮರ್ಶೆ

ಜುಲೈ 9 ರಂದು ಅಸೂಸ್ ಪತ್ರಿಕಾ ಗೋಷ್ಟಿಯನ್ನು ನಡೆಸಿದ ನಂತರ ಈ ಲೋ ಎಂಡ್ ಹ್ಯಾಂಡ್‌ಸೆಟ್‌ಗಳ ಕುರಿತಾದ ಇನ್ನಷ್ಟು ಮಾಹಿತಿಯನ್ನು ತಿಳಿಯಲು ನಮಗೆ ಹೆಚ್ಚು ಸಹಾಯಕವಾಗಿದೆ. ಇಂದಿನ ಲೇಖನದಲ್ಲಿ ಜೆನ್‌ಫೋನ್ 4 ಕುರಿತಾದ ವಿಶಿಷ್ಟ ವಿಮರ್ಶೆಯನ್ನು ತಿಳಿಯೋಣ.

ಮೋಟೊ ಇ ಮತ್ತು ಯುನೈಟ್ 2 ಫೋನ್‌ಗಳ ದರದಲ್ಲೇ ಬರುವ ಅಸೂಸ್ ಜೆನ್‌ಫೋನ್ 4 ಕಂಪೆನಿಯು ಲಾಂಚ್ ಮಾಡಿದ ಕಡಿಮೆ ದರದ ಫೋನ್‌ನಲ್ಲಿ ಒಂದಾಗಿದೆ. ಇದು 4 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದೆ. ಡಿವೈಸ್ ಬಂದಿರುವ ಬಣ್ಣಗಳು ಕಪ್ಪು, ಬಿಳಿ, ಕೆಂಪು, ಹಳದಿ ಮತ್ತು ನೀಲಿಯಾಗಿದೆ. ಇದೇ ಮಾದರಿಯಲ್ಲಿರುವ ಇತರ ಪ್ರಖ್ಯಾತ ಫೋನ್‌ಗಳಿಗೆ ಹೋಲಿಸುವಾಗ ಜೆನ್‌ಫೋನ್ 4 ವಿಭಿನ್ನವಾಗಿದೆ. ಇದನ್ನು ಹೊಳೆಯುವ ಪೋಲಿಕಾರ್ಬೋನೇಟ್ ಪ್ಲಾಸ್ಟಿಕ್‌ನಿಂದ ತಯಾರಿಸಲಾಗಿದೆ. ಇದನ್ನು ಕೈಯಲ್ಲಿ ಹಿಡಿದುಕೊಳ್ಳಲು ಬಹು ಮಜುಬೂತಾಗಿದ್ದು ತೂಕ 115 ಗ್ರಾಮ್‌ಗಳಾಗಿದೆ.

ಇದರ ಬೆಲೆ ರೂ 5,999 ಆಗಿದ್ದು ಕಡಿಮೆ ಬಜೆಟ್‌ನಲ್ಲಿ ತಯಾರಾದ ಸೂಪರ್ ಫೋನ್ ಎಂದು ಹೇಳುವಲ್ಲಿ ಯಾವುದೇ ವಿರೋಧವಿಲ್ಲ. ಇದು ಆಂಡ್ರಾಯ್ಡ್ ಜೆಲ್ಲಿ ಬೀನ್ 4.3 ಯೊಂದಿಗೆ ಬಂದಿದ್ದು ಅಸೂಸ್‌ನ ZenUI ಮೆಲ್ಭಾಗದಲ್ಲಿ ಇರಿಸಲಾಗಿದೆ. ಅಸೂಸ್ ಸ್ಥಳೀಯ ಅಪ್ಲಿಕೇಶನ್ ಅನ್ನು ತನ್ನ ಜೆನ್‌ಫೋನ್‌ನಲ್ಲಿ ಅಳವಡಿಸಿದ್ದು ಸಂಪೂರ್ಣಅನುಭವವನ್ನು ಸಂತೋಷಗೊಳಿಸುವ ನಿಟ್ಟಿನಲ್ಲಿ ಫೋನ್ ಅನ್ನು ಹೊರತಂದಿದೆ.

<center><iframe width="100%" height="360" src="//www.youtube.com/embed/vWYkDEXEsUU?feature=player_embedded" frameborder="0" allowfullscreen></iframe></center>

Best Mobiles in India

Read more about:
English summary
This article tells that Asus ZenFone 4 hands on and first look.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X