5000mAh ಬ್ಯಾಟರಿ ಸಾಮಾರ್ಥ್ಯದ ಆಸಸ್ ಜೆನ್‌ಪೋನ್ ಪೆಗಾಸಸ್ 3ಎಸ್

ಸದ್ಯ ಜೆನ್‌ಪೋನ್ ಸರಣಿಯಲ್ಲಿ ಪೆಗಾಸಸ್ 3ಎಸ್ ಎಂಬ 5000mAh ಬ್ಯಾಟರಿ ಸಾಮಾರ್ಥ್ಯದ ಪೋನೊಂದನ್ನು ಪರಿಚಯಿಸಿದ್ದು, ದೀರ್ಘಕಾಲದ ಬ್ಯಾಟರಿ ಬ್ಯಾಕಪ್‌ಗಾಗಿ ಈ ಪೋನು ಹೇಳಿ ಮಾಡಿಸಿದಂತೆ. ಹಾಗಾಗಿ ಈ ಪೋನಿನ ವಿಶೇಷತೆಗಳೇನು ಎಂಬುದನ್ನು ನೋಡುವುದಾದರೆ.

|

ಸದ್ಯ ಭಾರತೀಯ ಸ್ಮಾರ್ಟ್‌ಪೋನ್ ಮಾರುಕಟ್ಟೆಯಲ್ಲಿ ಒಂದು ಕಡೆ 4G ಸ್ಮಾರ್ಟ್‌ಪೋನುಗಳ ಹಾವಳಿಯಾದರೆ ಇನ್ನೊಂದು ಕಡೆ ಹೆಚ್ಚಿನ ಬ್ಯಾಟರಿ ಸಾಮಾರ್ಥ್ಯದ ಪೋನುಗಳು ಗ್ರಾಹಕರನ್ನು ಸೆಳೆಯಲು ಪೈಪೋಟಿ ನಡೆಸುತ್ತಿವೆ. ಈ ಸ್ಪರ್ಧೆಯಲ್ಲಿ ಆಸಸ್ ಸಹ ಭಾಗಿಯಾಗಿದೆ.

5000mAh ಬ್ಯಾಟರಿ ಸಾಮಾರ್ಥ್ಯದ ಆಸಸ್ ಜೆನ್‌ಪೋನ್ ಪೆಗಾಸಸ್ 3ಎಸ್

ಜಿಯೋ APN ನಂಬರ್ ಜೇಂಜ್ ಮಾಡಿ.... ಆಮೇಲೆ ಸ್ಪೀಡ್ ನೋಡಿ!!

ಸದ್ಯ ಜೆನ್‌ಪೋನ್ ಸರಣಿಯಲ್ಲಿ ಪೆಗಾಸಸ್ 3ಎಸ್ ಎಂಬ 5000mAh ಬ್ಯಾಟರಿ ಸಾಮಾರ್ಥ್ಯದ ಪೋನೊಂದನ್ನು ಪರಿಚಯಿಸಿದ್ದು, ದೀರ್ಘಕಾಲದ ಬ್ಯಾಟರಿ ಬ್ಯಾಕಪ್‌ಗಾಗಿ ಈ ಪೋನು ಹೇಳಿ ಮಾಡಿಸಿದಂತೆ. ಹಾಗಾಗಿ ಈ ಪೋನಿನ ವಿಶೇಷತೆಗಳೇನು ಎಂಬುದನ್ನು ನೋಡುವುದಾದರೆ.

5000mAh ಬ್ಯಾಟರಿ ಸಾಮಾರ್ಥ್ಯ

5000mAh ಬ್ಯಾಟರಿ ಸಾಮಾರ್ಥ್ಯ

ಜೆನ್‌ಪೋನ್ ಪೆಗಾಸಸ್ 3ಎಸ್ ಸ್ಮಾರ್ಟ್‌ಪೋನು ಜೆನ್‌ಪೋನ್ ಸರಣಿಯಲ್ಲಿ ಅತೀ ಹೆಚ್ಚಿನ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗಿದೆ. ಕಂಪನಿ ಹೇಳುವಂತೆ ಈ ಪೋನು 30 ದಿನಗಳ ಕಾಲ ಸ್ಟಾಂಡ್‌ಬೈ ಹೊಂದಿದೆಯಂತೆ. ದೀರ್ಘಕಾಲದ ವಿಡಿಯೋ ವೀಕ್ಷಣೆಗೆ ಸಹಾಯಕಾರಿಯಾಗಿದೆ.

HD  ಡಿಸ್‌ಪ್ಲೇ

HD ಡಿಸ್‌ಪ್ಲೇ

5.2 ಇಂಚಿನ IPS HD ಡಿಸ್‌ಪ್ಲೇ ಈ ಪೋನಿನಲ್ಲಿದ್ದು, ಇದರೊಂದಿಗೆ 2.5D ಗ್ಲಾಸ್ ಇದೆ. ಇದರಿಂದ ಉತ್ತಮ ಗುಣಮಟ್ಟದ ವಿಡಿಯೋವನ್ನು ನೋಡಬಹುದಾಗಿದೆ. ಕಲರ್ ಫುಲ್ ಆಗಿರುವ ಡಿಸ್‌ಪ್ಲೇಯಲ್ಲಿ ಗೇಮಿಂಗ್ ಸಹ ಉತ್ತಮವಾಗಿದೆ.

ಅತ್ಯಂತ ವೇಗದ ಪ್ರೋಸೆಸರ್

ಅತ್ಯಂತ ವೇಗದ ಪ್ರೋಸೆಸರ್

ಆಂಡ್ರಾಯ್ಡ್ 7.0 ನ್ಯಾಗಾ ಮತ್ತು ಆಸಸ್ ZenUI 3.1ನಲ್ಲಿ ಈ ಪೋನ್ ವರ್ಕ್ ಆಗಲಿದ್ದು, ವೇಗಕ್ಕಾಗಿ 3GB RAM ಇದರಲಿದೆ. ಕ್ವಾಡ್‌ಕೋರ್ ಮಿಡಿಯಾ ಟೆಕ್ MT6750 ಪ್ರೋಸೆರ್ ಇದೆ. ಎಸ್‌ಡಿ ಕಾರ್ಡ್‌ ಹಾಕುವ ಸಲುವಾಗಿ 2TB ವರೆಗೂ ವಿಸ್ತರಿಸಿಕೊಳ್ಳುವ ಅವಕಾಶವನ್ನು ನೀಡಲಾಗಿದೆ.

ಕ್ಯಾಮೆರಾ ಗುಣಮಟ್ಟ

ಕ್ಯಾಮೆರಾ ಗುಣಮಟ್ಟ

ಈ ಸ್ಮಾರ್ಟ್‌ಪೋನಿನಲ್ಲಿ 13 MP ಹಿಂಬದಿ ಕ್ಯಾಮೆರಾ ಇದ್ದು, f/2.0 ಆಪರ್ಚರ್ ಮತ್ತು LED ಫ್ಲಾಷ್ ಜೊತೆಗೆ ಆಟೋ ಪೋಕಸ್ ಸಹ ಇದೆ. ಮುಂಭಾಗದಲ್ಲಿ ಸೆಲ್ಫಿಗಾಗಿಯೇ 8 MP ಕ್ಯಾಮೆರಾವನ್ನು ಅಳಡಿಸಲಾಗಿದೆ. ಗುಣಮಟ್ಟದ ಪೋಟೋಗಾಗಿ ಇದರೊಂದಿಗೆ ಪಿಕ್ಸಲ್ ಮಾಸ್ಟರ್ ಟೆಕ್ನಾಲಜಿಯನ್ನು ಹೊಂದಿದೆ.

ಇತರೆ ವಿಶೇಷತೆಗಳು

ಇತರೆ ವಿಶೇಷತೆಗಳು

ಪೆಗಾಸಸ್ 3ಎಸ್ ಸ್ಮಾರ್ಟ್‌ಪೋನಿನಲ್ಲಿ 4G VoLTE, Wi-Fi 802.11, GPS, ಬ್ಲೂಟೂತ್ 4.0, ಮೈಕ್ರೊ-USB ಜೊತೆಗೆ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಸಹ ಇದ್ದು, ಇದರಲ್ಲಿ ಐದಕ್ಕೂ ಹೆಚ್ಚು ಫಿಂಗರ್‌ಗಳನ್ನು ಸ್ಕ್ಯಾನ್ ಮಾಡಿ ಇಡಬಹುದಾಗಿದೆ.

Best Mobiles in India

Read more about:
English summary
Asus has launched a new smartphone in China - the ZenFone Pegasus 3S - the successor to ZenFone Pegasus 3 that was launched. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X