ಮಕ್ಕಳಿಗಾಗಿ ಇರುವ ಅಪ್ಲಿಕೇಶನ್ ನೋಡಿರುವರಾ?

By Shwetha
|

ಗ್ರಾಮಿಣ ಮಟ್ಟದಿಂದ ಹಿಡಿದು ನಗರ ಜೀವನದವರೆಗೆ ತಂತ್ರಜ್ಞಾನ ತನ್ನ ಪರಿಣಾಮವನ್ನು ಬೀರಿದೆ. ನಗರದಲ್ಲಿರುವಂತೆ ಈಗ ಹಳ್ಳಿಗಳೂ ಕೂಡ ತಾಂತ್ರಿಕ ಅವಶ್ಯಕತೆಗಳನ್ನು ಪೂರೈಸಿಕೊಳ್ಳತೊಡಗಿದೆ.

ಫೋನ್‌ ವ್ಯವಸ್ಥೆ, ಇಂಟರ್ನೆಟ್ ಸೌಲಭ್ಯ, ಲ್ಯಾಪ್‌ಟಾಪ್ ವ್ಯವಸ್ಥೆ ಹೀಗೆ ಹತ್ತು ಹಲವು ತಂತ್ರಜ್ಞಾನ ಅವಿಷ್ಕಾರಗಳನ್ನು ಹಳ್ಳಿಗಳು ಪಡೆದುಕೊಳ್ಳುತ್ತಿವೆ. ಅಂತೂ ಮೊಬೈಲ್ ತಂತ್ರಜ್ಞಾನ ಮತ್ತು ಇಂಟರ್ನೆಟ್ ವ್ಯವಸ್ಥೆ ಹಳ್ಳಿಗಳಿಗೂ ಕಾಲಿಟ್ಟಿದೆ ಎಂದಾಯಿತು.

5 ವರ್ಷದ ಮಗುವಿಗೂ ಸಹಾಯಕ ಈ ಅಪ್ಲಿಕೇಶನ್

ಶಿಕ್ಷಣ ರಂಗದಲ್ಲಿ ಕೂಡ ತಂತ್ರಜ್ಞಾನ ಬಹು ಹೆಚ್ಚು ಕ್ರಾಂತಿಯನ್ನು ಮಾಡಿದೆ. ಈಗೀಗ ಬರುತ್ತಿರುವ ಹೊಸ ಶಿಕ್ಷಣ ಪ್ರಕಾರಗಳು ಅದೂ ಕೂಡ ಕಂಪ್ಯೂಟರ್ ಹಾಗೂ ಟ್ಯಾಬ್ಲೆಟ್ ಅನ್ನು ಬಳಸಿಕೊಂಡು ನಿಜಕ್ಕೂ ಮೂಗಿನ ಮೇಲೆ ಬೆರಳಿಡುವಂತೆ ನಮ್ಮನ್ನು ಬೆರಗಾಗಿಸಿದೆ. ಈಗ ಇದೇ ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿ ಎಂಬಂತೆ ಮುದ್ದು ಪುಟಾಣಿ ಮಕ್ಕಳಿಗಾಗಿ ಹಾಗೂ ಅವರ ತಾಯಂದಿರಿಗೆ ಪಾಠ ಹೇಳಿಕೊಡಲು ಸಹಾಯಕವಾಗುವಂತೆ ಒಂದು ಅಪ್ಲಿಕೇಶನ್ ಅನ್ನು AT&T ಸ್ಥಾಪಿಸಿದೆ.

ಈ ಅಪ್ಲಿಕೇಶನ್ ಅನ್ನು ಬಳಸಿಕೊಂಡು ಟಿವಿಯ ಮೂಲಕ ಮಕ್ಕಳಿಗೆ ತಾಯಂದಿರು ಪಾಠ ಹೇಳಿಕೊಡಬಹುದು. ಮೂಲ ಶಿಕ್ಷಣವನ್ನು ನೀಡಬಹುದು ಎಂದು ಕಂಪೆನಿ ತಿಳಿಸಿದೆ. ವಿ ವರ್ಸ್‌ನಲ್ಲಿರುವ ಬೇಬಿ ಫಸ್ಟ್ ಚಾನಲ್‌ನೊಂದಿಗೆ ಈ ಅಪ್ಲಿಕೇಶನ್ ಸಂಯೋಜನೆಗೊಂಡು ಕಂದಮ್ಮಗಳು ಮಗುವಿನ ತಾಯಿಗೆ ಚಿತ್ರವನ್ನು ರಚಿಸಲು ಪದಗಳನ್ನು ಬರೆಯಲು ಸಹಾಯಕವಾಗಲಿದೆ. ಹೀಗೆ ಟ್ಯಾಬ್‌ನಲ್ಲಿ ಅಪ್ಲಿಕೇಶನ್ ಮೂಲಕ ಬರೆದ ಚಿತ್ರ ಪದಗಳು ಟಿವಿ ಸ್ಕ್ರೀನ್ ಮೇಲೆ ಗೋಚರವಾಗುತ್ತದೆ.

ಕಂಪೆನಿಯು ಈ ಅಪ್ಲಿಕೇಶನ್ ಅನ್ನು ಐದು ವರ್ಷದ ಒಳಗಿನ ಮಕ್ಕಳಿಗಾಗಿ ಸಿದ್ಧಪಡಿಸಿದ್ದು ವಿಶೇಷವಾಗಿ ಇದನ್ನು ಮಕ್ಕಳ ಅಭಿವೃದ್ಧಿ ತಜ್ಞರು ಸಿದ್ಧಪಡಿಸಿದ್ದಾರೆ. ಇದು ಸಣ್ಣ ಮಕ್ಕಳಿಗೆ ಚಿತ್ರಗಳನ್ನು ಕಂಡುಹಿಡಿಯಲು, ಬಣ್ಣಗಳನ್ನು ತುಂಬಲು ಸಹಕಾರಿಯಾಗಲಿದೆ. ಈ ಅಪ್ಲಿಕೇಶನ್ ಮಕ್ಕಳ ಕಣ್ಣಿಗೆ ಯಾವುದೇ ತೊಂದರೆಯನ್ನು ಉಂಟು ಮಾಡುವುದಿಲ್ಲ ಮತ್ತು ವಿಶೇಷ ತಾಂತ್ರಿಕ ವರ್ಗದಿಂದ ಇದನ್ನು ಸಿದ್ಧಪಡಿಸಲಾಗಿದೆ ಎಂದು ತಿಳಿಸಿದೆ.

ಅಪ್ಲಿಕೇಶನ್ ಎರಡು ವಿಭಾಗಗಳನ್ನು ಹೊಂದಿದ್ದು ಒಂದು "ಚಟುವಟಿಕೆ ಕೊಠಡಿ" ಯಾಗಿದ್ದು ಇಲ್ಲಿ ಮಕ್ಕಳು ಬಣ್ಣ ಬಣ್ಣದ ಆಕಾರಗಳು ಹಾಗೂ ಅಂಶಗಳನ್ನು ಡಿಜಿಟಲ್ ಟಿವಿಗೆ ಸೇರಿಸಬಹುದಾಗಿದ್ದು ಅದು ಬಣ್ಣ ಬಣ್ಣದ ಪುಸ್ತಕವಾಗಿ ಕೂಡ ಹೊರಹೊಮ್ಮುತ್ತದೆ.

ಬೇಬಿ ಫಸ್ಟ್ ಅಪ್ಲಿಕೇಶನ್ ಅನ್ನು ಆಪಲ್‌ನ ಆಪ್ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X