ನೀರಿನಲ್ಲಿ ತೇಲುವ ಸ್ಮಾರ್ಟ್‌ಫೋನ್ ಕ್ರಿಯೇಟ್ ಮಾಡಿದ ಬೆಂಗಳೂರಿನ ಹುಡುಗ

ಇದುವರೆಗೆ ಫೋನ್‌ ಬಳಕೆದಾರರೆಲ್ಲಾ ಆಂಟೆನಾ ಫೋನ್ಸ್, ಕ್ಯಾಮೆರಾ ಫೋನ್, ಸ್ಮಾರ್ಟ್‌ಫೋನ್, ನೀರು ನಿರೋಧಕ ಸ್ಮಾರ್ಟ್‌ಫೋನ್‌(Water Ressistant Smartphone) ನೋಡಿರುತ್ತೀರಿ. ಆದರೆ ಇಂದಿನ ಲೇಖನದಲ್ಲಿ ನೀರಿನಲ್ಲಿ ತೇಲುವ ಫೋನ್‌ ಬಗ್ಗೆ ತಿಳಿಯಿರ

By Suneel
|

ಪ್ರಪಂಚದಾದ್ಯಂತ ಹಲವರು ಹಲವಾರು ಹೊಸ ಆವಿಷ್ಕಾರಗಳನ್ನು ಕೈಗೊಳ್ಳುತ್ತಾರೆ. ಆದ್ರೆ ಏನ್ ಮಾಡೋದು, ಕಾರಣಾಂತರಗಳಿಂದ ಅರ್ಧಕ್ಕೆ ಕೈಬಿಟ್ಟು ಆವಿಷ್ಕಾರ ಅರ್ಧಕ್ಕೆ ಸ್ಟಾಪ್, ಇನ್ನೂ ಹಲವು ಆವಿಷ್ಕಾರಗಳು ಪೂರ್ಣಗೊಂಡರೂ ಯಾವುದೇ ಪ್ರಯೋಜನಕ್ಕೆ ಬರುವುದಿಲ್ಲ.

ಅಲ್ಲಾ ಯಾಕ್‌ ಹೀಗೆ ಆವಿಷ್ಕಾರದ ಬಗ್ಗೆ ಮಾತಾಡ್‌ತಿದಾರೆ ಎಂದು ಕನ್‌ಫ್ಯೂಸ್‌ ಆಗ್‌ಬೇಡಿ. ಯಾಕಂದ್ರೆ ನಾವು ಇಂದು ಪ್ರಪಂಚದಲ್ಲಿಯೇ ಫೋನ್‌ ಬಳಕೆದಾರರು ಗಾಬರಿಯಿಂದ ಕೇಳಬಹುದಾದ, ನೋಡಬಹುದಾದ ಅಚ್ಚರಿ ಮಾಹಿತಿಯೊಂದನ್ನು ಫೋನ್‌ ಬಗ್ಗೆಯೇ ಹೇಳುತ್ತಿದ್ದೇವೆ. ವಿಶೇಷ ಅಂದ್ರೆ ಈ ಮಾಹಿತಿ ಬೆಂಗಳೂರಿನ ಯುವಕನ ಫೋನ್‌ ಕುರಿತ ಸಾಧನೆ ಎಂಬುದನ್ನು ಮರೆಯದಿರಿ.

ದಿಪಾವಳಿ ಸೇಲ್: ಟಾಪ್ 10 ಹಳೆಯ ಸ್ಮಾರ್ಟ್‌ಫೋನ್‌ಗಳ ಮೇಲೆ 20,000 ರೂವರೆಗೆ ಎಕ್ಸ್‌ಚೇಂಜ್‌ ಆಫರ್

ಹೌದು, ಇದು ಫೋನ್‌ ಕುರಿತ ಅತ್ಯಾಧುನಿಕ ಆವಿಷ್ಕಾರ, ಅಭಿವೃದ್ದಿ ಎರಡು ಸಹ ಹೌದು. ಇದುವರೆಗೆ ಫೋನ್‌ ಬಳಕೆದಾರರೆಲ್ಲಾ ಆಂಟೆನಾ ಫೋನ್ಸ್, ಕ್ಯಾಮೆರಾ ಫೋನ್, ಸ್ಮಾರ್ಟ್‌ಫೋನ್, ನೀರು ನಿರೋಧಕ ಸ್ಮಾರ್ಟ್‌ಫೋನ್‌(Water Ressistant Smartphone) ನೋಡಿರುತ್ತೀರಿ, ಕೇಳಿದ್ದೀರಿ, ಅಲ್ಲದೇ ಹಲವರು ಬಳಕೆ ಮಾಡಿದ್ದೀರಿ. ಆದ್ರೆ ಇಂದು ನಾವು ಹೇಳುತ್ತಿರುವುದು ನೀರಿನಲ್ಲಿ ತೇಲುವ ಫೋನ್ ಬಗ್ಗೆ. ಈ ಫೋನ್‌ ಅನ್ನು ಆವಿಷ್ಕಾರ ಮಾಡಿರುವುದು ನಮ್ಮ ಬೆಂಗಳೂರಿನ ಯುವಕ. ಅವರು ಯಾರು, ಸ್ಮಾರ್ಟ್‌ಫೋನ್ ವಿಶೇಷತೆ ಏನು, ಎಂಬಿತ್ಯಾದಿ ಮಾಹಿತಿಗಳನ್ನು ಸ್ಲೈಡರ್‌ನಲ್ಲಿ ಮುಂದೆ ಓದಿರಿ.(Buoyant Smartphone)

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಾಮೆಟ್‌ ಕೋರ್ ಕಂಪನಿ -ಪ್ರಶಾಂತ್ ಅರಸ್ ರಾಜ್‌

ಕಾಮೆಟ್‌ ಕೋರ್ ಕಂಪನಿ -ಪ್ರಶಾಂತ್ ಅರಸ್ ರಾಜ್‌

ಕ್ಯಾಲಿಫೋರ್ನಿಯಾದ 'ಪಾಲ್‌ ಆಲ್ಟೋ' ಕಂಪನಿ ಮೂಲದ 'ಕಾಮೆಟ್ ಕೋರ್ (Comet Core)' ಅನ್ನು ಬೆಂಗಳೂರಿನ ಯುವಕ 'ಪ್ರಶಾಂತ್‌ ರಾಜ್‌ ಅರಸ್' ಸ್ಥಾಪಿಸಿದ್ದು, ಇವರು ಈಗ ಪ್ರಪಂಚದ ಮೊಟ್ಟ ಮೊದಲ ನೀರಿನಲ್ಲಿ ತೇಲುವ ಸ್ಮಾರ್ಟ್‌ಫೋನ್‌ ಅನ್ನು ವಿನ್ಯಾಸಗೊಳಿಸಿದ್ದಾರೆ. ಈ ಸ್ಮಾರ್ಟ್‌ಫೋನ್ ನೀರಿನಲ್ಲಿ ತೇಲುತ್ತದೆ. ಮುಂಬರುವ ದಿನಗಳಲ್ಲಿ ಯಾರಾದರೂ ಸ್ಮಾರ್ಟ್‌ಫೋನ್‌ ಖರೀದಿಸಲು ಬಯಸಿದರೆ ಈ ತೇಲುವ ಸ್ಮಾರ್ಟ್‌ಫೋನ್‌ ಅನ್ನೇ ಖರೀದಿಸಿ. ಯಾಕಂದ್ರೆ ನೀರಿನಲ್ಲಿ ಬಿದ್ದಲ್ಲಿ, ಅಥವಾ ಟಾಯ್ಲೆಟ್‌ ಬಸಿನ್‌ನಲ್ಲಿ ಬಿದ್ದರೂ ಸಹ ಸ್ಮಾರ್ಟ್‌ಫೋನ್ ಈಜುತ್ತಿರುತ್ತದೆ. ಆದರೆ ಯಾವ ಸಮಸ್ಯೆಯು ಆಗುವುದಿಲ್ಲ.

'Buoyant' ಆಂಡ್ರಾಯ್ಡ್ ಸ್ಮಾರ್ಟ್‌ಫೋನ್

'Buoyant' ಆಂಡ್ರಾಯ್ಡ್ ಸ್ಮಾರ್ಟ್‌ಫೋನ್

ಅಂದಹಾಗೆ ಕಾಮೆಟ್ ಸಂಸ್ಥಾಪಕರಾದ ಪ್ರಶಾಂತ್ ರಾಜ್‌ ಅರಸ್'ರವರು ವಿನ್ಯಾಸಗೊಳಿಸಿರುವ ಡಿವೈಶ್ ಅನ್ನು 'ತೇಲುವ'(Buoyant) ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಎಂದೇ ಕರೆಯಲಾಗಿದ್ದು, ಈ ಸ್ಮಾರ್ಟ್‌ಫೋನ್‌ಗೆ ಯಾವುದೇ ರೀತಿಯ ತೇಲುವ ಡಿವೈಸ್ ಅನ್ನು ಸೆಟ್ ಮಾಡಿಲ್ಲ. ಈ ಡಿವೈಸ್‌ಗಳನ್ನು ಅಭಿವೃದ್ದಿಗೊಳಿಸಲು ಹೆಚ್ಚು ಹಣ ಬೇಕಾಗಿದ್ದು, ಪ್ರಸ್ತುತದಲ್ಲಿ ಇಂಡೀಗೊಗೊ ಫಂಡ್ ಸಂಗ್ರಹ ನಡೆಸುತ್ತಿದೆ.

ಪ್ರಶಾಂತ್ ರಾಜ್‌ ಅರಸ್‌ ಹೇಳಿದ್ದೇನು?

ಪ್ರಶಾಂತ್ ರಾಜ್‌ ಅರಸ್‌ ಹೇಳಿದ್ದೇನು?

ಮೊಬೈಲ್‌ ಟೆಕ್ನಾಲಜಿ ನಿರಂತರವಾಗಿ ಬೆಳವಣಿಗೆ ಇಂದ ಹೊರಹೊಮ್ಮುತಲೇ ಇದೆ. ಇದುವರೆಗೆ ಆಂಟೆನಾ ಫೋನ್ಸ್, ಕ್ಯಾಮೆರಾ ಫೋನ್, ಸ್ಮಾರ್ಟ್‌ಫೋನ್, ನೀರು ನಿರೋಧಕ ಸ್ಮಾರ್ಟ್‌ಫೋನ್‌(Water Ressistant Smartphone) ಮೊಬೈಲ್ ಟೆಕ್ನಾಲಜಿಯಲ್ಲಿ ಅಭಿವೃದ್ದಿಗೊಂಡಿದೆ, ಈಗ ಕಾಮೆಟ್ ಒಂದು ಹೆಜ್ಜೆ ಮುಂದೆ ಹೋಗಿ ನೀರಿನಲ್ಲಿ ತೇಲುವ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಪರಿಚಯಿಸುತ್ತಿದೆ ಎಂದು ಹೇಳಿದ್ದಾರೆ.

 'Buoyant' ಆಂಡ್ರಾಯ್ಡ್ ಸ್ಮಾರ್ಟ್‌ಫೋನ್  ವಿಶೇಷತೆಗಳು!

'Buoyant' ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ವಿಶೇಷತೆಗಳು!

'Buoyant' ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ 16MP ಹಿಂಭಾಗ ಕ್ಯಾಮೆರಾ, 16MP ಸೆಲ್ಫಿ ಕ್ಯಾಮೆರಾ, 4.7 ಇಂಚಿನ ಸ್ಕ್ರೀನ್ ಸಪೋರ್ಟ್‌ ಹೊಂದಿದೆ. ತೇಲುವ ಸ್ಮಾರ್ಟ್‌ಫೋನ್ ಕ್ವಾಲ್ಕಂ ಸ್ನಾಪ್‌ಡ್ರಾಗನ್ 810 2GHz ಆಕ್ಟಾಕೋರ್ ಪ್ರೊಸೆಸರ್ ಮತ್ತು 4GB RAM ಫೀಚರ್ ಹೊಂದಿದೆ. ಡಿವೈಸ್ ಕಪ್ಪು, ಬಿಳಿ ಮತ್ತು ಗೋಲ್ಡ್‌ ಬಣ್ಣಗಳಲ್ಲಿ ಲಭ್ಯ.

 'Buoyant' ಆಂಡ್ರಾಯ್ಡ್ ಸ್ಮಾರ್ಟ್‌ಫೋನ್  ಇತರೆ ಫೀಚರ್‌ಗಳು

'Buoyant' ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಇತರೆ ಫೀಚರ್‌ಗಳು

* ಆಂಡ್ರಾಯ್ಡ್ 5.0 ಲಾಲಿಪಪ್ ಓಎಸ್
* 32GB/64GB/128GB ಆಂತರಿಕ ಮೆಮೊರಿ ವಿವಿಧತೆ ಡಿವೈಸ್‌ಗಳು
* ಜಾವಾ ಸಪೋರ್ಟ್
* ಪ್ರಾಕ್ಸಿಮಿಟಿ ಸೆನ್ಸಾರ್, ಆಂಬಿಎಂಟ್ ಲೈಟ್ ಸೆನ್ಸಾರ್, ಟೆಂಪೆರೇಚರ್ ಸೆನ್ಸಾರ್, ಇತರೆ ಸೆನ್ಸಾರ್‌ಗಳು.

 'Buoyant' ಆಂಡ್ರಾಯ್ಡ್ ಸ್ಮಾರ್ಟ್‌ಫೋನ್

'Buoyant' ಆಂಡ್ರಾಯ್ಡ್ ಸ್ಮಾರ್ಟ್‌ಫೋನ್

ಅಂದಹಾಗೆ 'Buoyant' ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಆದರೆ ಖರೀದಿಗೆ ನೀಡಲು ಡಿವೈಸ್‌ಗಳನ್ನು ಇನ್ನೂ ಸಹ ತಯಾರಿಸಲು ಆರಂಭಿಸಿಲ್ಲ. ಈ ಸ್ಮಾರ್ಟ್‌ಫೋನ್‌ನ ಆರಂಭಿಕ ಬೆಲೆ 32GB 16,000 ರೂ ಇಂದ ಆರಂಭವಾಗಲಿದೆ. 64GB ಡಿವೈಸ್ ಬೆಲೆ ರೂ.19,000. ಸ್ಮಾರ್ಟ್‌ಫೋನ್‌ ಅನ್ನು ಈಗಲೇ ಬುಕ್ ಮಾಡಬಹುದು.
'Buoyant' ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬುಕ್‌ ಮಾಡಲು ಕ್ಲಿಕ್ ಮಾಡಿ

ವೀಡಿಯೊ

'Buoyant' ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಗೆಗಿನ ವೀಡಿಯೊ ನೋಡಿ

Best Mobiles in India

English summary
Bengaluru Guy Created The World’s First Smartphone That Floats On Water. To know more about Buoyant android smartphone visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X