5 ವರ್ಷದಲ್ಲಿ ಎರಡನೇ ಚೀನಾ ಆಗಲಿದೆ ಬೆಂಗಳೂರು!!

ಚೀನಾದ ಹಲವು ಸ್ಮಾರ್ಟ್‌ಫೋನ್‌ ಕಂಪೆನಿಗಳು ಬೆಂಗಳೂರಿನಲ್ಲಿ ತಮ್ಮ ಉದ್ಯಮವನ್ನು ಶುರುಮಾಡಲು ಮುಂದಾಗಿವೆ.ಶಿಯೋಮಿ, ಲಿ ಇಕೊ, ಹುವಾವೆ ಮತ್ತು ಕೂಲ್‌ ಪ್ಯಾಡ್‌ ಕಂಪೆನಿಗಳು ಬೆಂಗಳೂರನ್ನು ತಮ್ಮ ಪ್ರಮುಖ ಕೇಂದ್ರವಾಗಿ ಮಾಡಿಕೊಳ್ಳುತ್ತಿವೆ.

|

ಬೆಂಗಳೂರು ಎಷ್ಟು ವೇಗವಾಗಿ ಬದಲಾಗುತ್ತಿದೆ ಎಂದರೆ ಪ್ರಪಂಚದಲ್ಲಿ ಅತಿವೇಗವಾಗಿ ಬೆಳೆಯುತ್ತಿರುವ ಟಾಪ್‌ 10 ನಗರಗಳಲ್ಲಿ ಬೆಂಗಳೂರು ಒಂದು.! ಉದ್ಯಮಿಗಳ ಸ್ವರ್ಗವಾಗಿರುವ ಸಿಲಿಕಾನ್‌ ಸಿಟಿ ಇನ್ನು ಕೇವಲ ಐದು ವರ್ಷಗಳಲ್ಲಿ ಎರಡನೇ ಚೀನಾ ಆಗಲಿದೆ ಎನ್ನುವ ಮಾತು ಎಲ್ಲಡೇ ಹರಿದಾಡಿದೆ.

ಹೌದು, ಭಾರತದಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿರುವ ಚೀನಾದ ಹಲವು ಸ್ಮಾರ್ಟ್‌ಫೋನ್‌ ಕಂಪೆನಿಗಳು ಬೆಂಗಳೂರಿನಲ್ಲಿ ತಮ್ಮ ಉದ್ಯಮವನ್ನು ಶುರುಮಾಡಲು ಮುಂದಾಗಿವೆ. ಶಿಯೋಮಿ, ಲಿ ಇಕೊ, ಹುವಾವೆ ಮತ್ತು ಕೂಲ್‌ ಪ್ಯಾಡ್‌ ಕಂಪೆನಿಗಳು ಬೆಂಗಳೂರನ್ನು ತಮ್ಮ ಪ್ರಮುಖ ಕೇಂದ್ರವಾಗಿ ಮಾಡಿಕೊಳ್ಳುತ್ತಿವೆ.

ಆಧಾರ್ ಇ-ಕೆವೈಸಿ ಪರಿಶೀಲನೆ ಮಾಡಿಸದಿದ್ದರೆ ನಿಮ್ಮ ಸಿಮ್ ವರ್ಕ್ ಆಗೊಲ್ಲಾ!!

ಇನ್ನು ಆಪಲ್ ಕೂಡ ಬೆಂಗಳುರಿನಲ್ಲಿಯೇ ತನ್ನ ತಯಾರಿಕಾ ಕಾರ್ಖಾನೆಯನ್ನು ನಿರ್ಮಿಸುತ್ತಿದ್ದು, ಇನ್ನು ಪ್ರಪಂಚದ ಬಹುತೇಕ ಸ್ಮಾರ್ಟ್‌ಫೋನ್‌ಗಳು ಬೆಂಗಳೂರಿನಲ್ಲಿಯೇ ತಯಾರಾಗಲಿವೆ.! ಹಾಗಾದರೆ, ಚೀನಾದ ಯಾವ ಯಾವ ಸ್ಮಾರ್ಟ್‌ಫೋನ್‌ ಕಂಪೆನಿಗಳು ಬೆಂಗಳೂರಿನಲ್ಲಿ ಏನೆಲ್ಲಾ ಹೂಡಿಕೆ ಮಾಡುತ್ತಿವೆ ಮತ್ತು ಬೆಂಗಳೂರು ಆಯ್ಕೆ ಯಾಕೆ ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಹುವಾವೆ ಕಂಪೆನಿ.

ಹುವಾವೆ ಕಂಪೆನಿ.

ಚೀನಾದ ಮೊಬೈಲ್‌ ದಿಗ್ಗಜ ಹುವಾವೆ ಬೆಂಗಳುರಿನಲ್ಲಿ ಆರ್‌ ಅಂಡ್ ಡಿ ಕೇಂದ್ರವನ್ನು ಆರಂಭಿಸಿದೆ. ಚೀನಾದ ಹೊರಗೆ ಹುವಾವೆಯ ಅತಿ ದೊಡ್ಡ ಸಂಶೋಧನಾ ಕೇಂದ್ರ ಇದಾಗಿದ್ದು, 5000 ಎಂಜಿನಿಯರ್‌ಗಳು ಇಲ್ಲ ಕೆಲಸ ಮಾಡುತ್ತಾರೆ ಎನ್ನುವ ಮಾಹಿತಿ ಇದೆ.

ಕ್ಸಿಯೋಮಿ ಕಂಪೆನಿ.

ಕ್ಸಿಯೋಮಿ ಕಂಪೆನಿ.

ಭಾರತದಲ್ಲಿ ಪ್ರಸ್ತುತ ಹೆಚ್ಚು ಮಾರಾಟವಾಗುತ್ತರುವ ಕ್ಸಿಯೋಮಿ ಸ್ಮಾರ್ಟ್‌ಫೋನ್‌ಗಳು ಭಾರತೀಯರ ಮನಗೆದ್ದಿವೆ. ಹಾಗಾಗಿ, ಬೆಂಗಳೂರಿನ ಸೆನ್ನಾ ಬಿಸಿನೆಸ್ ಪಾರ್ಕ್‌ನಲ್ಲಿ ಶಿಯೋಮಿ ತನ್ನ ಆರ್‌ ಅಂಡ್ ಡಿ ಕೇಂದ್ರವನ್ನು ಹೊಂದಿದೆ.

ಲಿ ಇಕೋ ಕಂಪೆನಿ.

ಲಿ ಇಕೋ ಕಂಪೆನಿ.

ಇತ್ತೀಚಿಗೆ ಲಿ ಇಕೋ ಸ್ಮಾರ್ಟ್‌ಫೋನ್‌ ಭಾರತದ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಬೆಂಗಳೂರಿನಲ್ಲಿ ತನ್ನ ಕೇಂದ್ರ ತೆರೆಯುವುದಾಗಿ ಹೇಳಿಕೊಂಡಿದೆ. ಬೆಂಗಳೂರನಲ್ಲಿನ ಮಾನವ ಸಂಪನ್ಮೂಲವನ್ನು ಉಪಯೋಗಿಸಿಕೊಳ್ಳುವುದಾಗಿ ಲಿ ಇಕೋ ತಿಳಿಸಿದೆ.

ಚೀನಾದ ಮೊಬೈಲ್ ಕಂಪೆನಿಗಳಿಗೆ ಬೆಂಗಳೂರು ಯಾಕೆ ಬೇಕು?

ಚೀನಾದ ಮೊಬೈಲ್ ಕಂಪೆನಿಗಳಿಗೆ ಬೆಂಗಳೂರು ಯಾಕೆ ಬೇಕು?

ಅತ್ಯುತ್ತಮ ಮಾನವ ಸಂಪನ್ಮೂಲವನ್ನು ಹೊಂದಿರುವ ಬೆಂಗಳೂರಿನಲ್ಲಿ ಉತ್ತಮ ಕೆಲಸಗಾರರು ದೊರೆಯುತ್ತಾರೆ ಎನ್ನುವುದು ಚೀನಾ ಕಂಪೆನಿಗಳ ಲೆಕ್ಕಾಚಾರ. ಇನ್ನು ಸಿಲಿಕಾನ್ ಮಾರುಕಟ್ಟೆಯೂ ಬೃಹತ್‌ ಆಗಿರುವುದರಿಂದ ದೇಶದ ಎಲ್ಲಾ ಪಟ್ಟಣಗಳಿಗಿಂತ ಬೆಂಗಳೂರು ಬೆಸ್ಟ್ ಎನ್ನಬಹುದು.

Best Mobiles in India

English summary
Exponential growth in smartphone business in Bengaluru. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X