2017 ರಲ್ಲಿ ನೋಕಿಯಾ ಆಯ್ತು ಇದೀಗ ಬ್ಲಾಕ್‌ಬೆರ್ರಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್!!

ಹೌದು, 2017 ರಲ್ಲಿ ಬ್ಲಾಕ್‌ ಬೆರ್ರಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವುದಾಗಿ ಟಿಸಿಎಲ್ ಕಮ್ಯುನಿಕೇಶನ್ ತಿಳಿಸಿದೆ.

Written By:

ನೋಕಿಯಾ ತನ್ನ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತಿರುವುದು 2017 ನೇ ವರ್ಷದ ವಿಶೇಷತೆಗಳಲ್ಲಿ ಒಂದು.! ಇದು ಈಗಾಗಲೇ ಎಲ್ಲರಿಗೂ ತಿಳಿದಿರುವ ವಿಷಯ. ಆದರೆ, ಇದೀಗ ಬಂದಿರುವ ಹೊಸ ಸುದ್ದಿ ಏನೆಂದರೆ ಒಂದು ಕಾಲದಲ್ಲಿ ಆಪಲ್‌ಗಿಂತಲೂ ಹೆಚ್ಚು ಖ್ಯಾತಿ ಹೊಂದಿದ್ದ ಬ್ಲಾಕ್‌ಬೆರ್ರಿ ಇದೀಗ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತಿದೆ.!!

ಹೌದು, 2017 ರಲ್ಲಿ ಬ್ಲಾಕ್‌ ಬೆರ್ರಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವುದಾಗಿ ಟಿಸಿಎಲ್ ಕಮ್ಯುನಿಕೇಶನ್ ತಿಳಿಸಿದೆ. ಬ್ಲಾಕ್‌ಬೆರ್ರಿ ಮತ್ತು ಟಿಸಿಎಲ್ ಸಹಯೋಗದಲ್ಲಿ ನೂತನ ಬ್ಲಾಕ್‌ಬೆರ್ರಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು 2017 ರ ಮಧ್ಯಭಾಗದಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗುತ್ತವೆ ಎಂದು ಟಿಸಿಎಲ್ ತಿಳಿಸಿದೆ.

2017 ರಲ್ಲಿ ನೋಕಿಯಾ ಆಯ್ತು ಇದೀಗ ಬ್ಲಾಕ್‌ಬೆರ್ರಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್!!

ಶಾಕಿಂಗ್ ನ್ಯೂಸ್..ಜಿಯೋ ವೆಲಕಮ್ 2 ಆಫರ್ ಇಲ್ಲ!!?

ಇನ್ನು ಬ್ಲಾಕ್‌ಬೆರ್ರಿ ಮತ್ತು ಚೀನಾದ ಟಿಸಿಎಲ್ ಕಮ್ಯುನಿಕೇಶನ್ ಸಹಯೋಗದಲ್ಲಿ ನೂತನವಾಗಿ ಹೊರಬರುತ್ತಿರುವ ಬ್ಲಾಕ್‌ಬೆರ್ರಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ ಬಗ್ಗೆ ಕಂಪೆನಿ ಹೆಚ್ಚೇನು ಮಾಹಿತಿ ನೀಡಿಲ್ಲ. ಆದರೆ, ಸ್ಯಾಮ್‌ಸಂಗ್, ಆಪಲ್ ಮತ್ತು ನೋಕಿಯಾ ಕಂಪೆನಿಗಳಿಗೆ ಸೆಡ್ಡುಹೊಡೆಯುವಂತಹ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವುದಾಗಿ ಟಿಸಿಎಲ್ ಅಧ್ಯಕ್ಷ ಸ್ಟೀವ್ ಅವರು ಹೇಳಿದ್ದಾರೆ.

2017 ರಲ್ಲಿ ನೋಕಿಯಾ ಆಯ್ತು ಇದೀಗ ಬ್ಲಾಕ್‌ಬೆರ್ರಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್!!

ಇನ್ನು ಬ್ಲಾಕ್‌ಬೆರ್ರಿಯ ನೂತನ ಸ್ಮಾರ್ಟ್‌ಫೊನ್‌ ಬಗ್ಗೆ ರೂಮರ್ಸ್ ಹರಿದಾಡಿದ್ದು, 5 ಅಥವಾ 5.5 ಇಂಚ್‌ ಡಿಸ್‌ಪ್ಲೇ, 3GB RAM, ಮತ್ತು 3400mah ಬ್ಯಾಟರಿಯನ್ನು ಹೊಂದಿರಲಿದೆ. ಇನ್ನು ಆಂಡ್ರಾಯ್ಡ್ 7.0 ನೂಗಾ ಪ್ರೊಸೆಸರ್ ಮತ್ತು ಬ್ಲಾಕ್‌ಬೆರ್ರಿಯ ಸೆಕ್ಯುರಿಟಿ ಸಿಸ್ಟಮ್ ಒಳಗೊಂಡು ಸ್ಮಾರ್ಟ್‌ಫೋನ್‌ ಮಾರುಕಟ್ಟೆಗೆ ಬರುತ್ತದೆ ಎನ್ನಲಾಗಿದೆ.

2017 ರಲ್ಲಿ ನೋಕಿಯಾ ಆಯ್ತು ಇದೀಗ ಬ್ಲಾಕ್‌ಬೆರ್ರಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್!!

ಆಂಡ್ರಾಯ್ಡ್ ಮೊಬೈಲ್‌ಗಳಿಂದ ತನ್ನ ಮಾರುಕಟ್ಟೆಯನ್ನು ಕಳೆದುಕೊಂಡಿದ್ದ ಬ್ಲಾಕ್‌ಬೆರ್ರಿ ಮತ್ತು ನೋಕಿಯಾ ಕಂಪೆನಿಗಳು ಇದಿಗ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಮೂಲಕ ಮತ್ತೆ ಮೊಬೈಲ್ ಮಾರುಕಟ್ಟೆಗೆ ಕಾಲಿಡುತ್ತಿದ್ದು, 2017 ರಲ್ಲಿ ಬಹುದೊಡ್ಡ ಸ್ಮಾರ್ಟ್‌ಫೊನ್‌ ದರಸಮರವೇ ನಡೆಯಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
TCL has now said that it will launch new BlackBerry smartphones at the CES 2017 trade show. to know more visit to kannada.gizbot.com
Please Wait while comments are loading...
Opinion Poll

Social Counting