2016ರಲ್ಲಿ ಏಸಸ್ ಬಿಡುಗಡೆಗೊಳಿಸಿದ ಸಾಧನಗಳು.

2016ರಲ್ಲಿ ಏಸಸ್ ತಕ್ಕಮಟ್ಟಿನ ಯಶ ಕಂಡಿತು.

|

ವರುಷಗಳು ಉರುಳಿದಂತೆ ಸ್ಮಾರ್ಟ್ ಫೋನಿನೆಡೆಗಿನ ಆಕರ್ಷಣೆಯೂ ಹೆಚ್ಚುತ್ತಿದೆ. ಆ್ಯಪಲ್, ಸ್ಯಾಮ್ಸಂಗ್, ಒನ್ ಪ್ಲಸ್, ಎಲ್.ಜಿ ನಂತಹ ಸ್ಮಾರ್ಟ್ ಫೋನ್ ಬ್ರ್ಯಾಂಡುಗಳು ತೀರ್ವ ಸ್ಪರ್ಧೆಯಲ್ಲಿದ್ದ ವರುಷದಲ್ಲಿ ಹೆಚ್ಚೇನು ಸದ್ದೇ ಮಾಡದೆ ತೈವಾನಿನ ಕಂಪನಿಯೊಂದು ಹಲವಾರು ಉತ್ತಮ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

2016ರಲ್ಲಿ ಏಸಸ್ ಬಿಡುಗಡೆಗೊಳಿಸಿದ ಸಾಧನಗಳು.

ವರುಷದ ಆರಂಭವನ್ನು ಸ್ಮಾರ್ಟ್ ವಾಚ್ ಬಿಡುಗಡೆಯೊಂದಿಗೆ ಪ್ರಾರಂಭಿಸಿದ್ದ ಏಸಸ್, ವರುಷದ ಕೊನೆಗೂ ಸ್ಮಾರ್ಟ್ ವಾಚೊಂದನ್ನು ಬಿಡುಗಡೆಗೊಳಿಸಿತು. ಏಸಸ್ ನ ಪ್ರತಿಯೊಂದು ಉತ್ಪನ್ನವೂ ಗ್ರಾಹಕರನ್ನು ಸೆಳೆಯುವಲ್ಲಿ ಸಫಲವಾಯಿತು.

ಓದಿರಿ: 15,600mAh ಪವರ್ ಬ್ಯಾಂಕಿನ ಬೆಲೆ ಕೇವಲ ರೂ. 999....!!!!!

ಆದರೆ ಈ ವರ್ಷದ ಏಸಸ್ ಸಾಧನಗಳಲ್ಲಿ ಒಂದು ಪ್ರಮುಖ ಬದಲಾವಣೆಯಿತ್ತು. ಈ ವರ್ಷದ ಉತ್ಪನ್ನಗಳ ಬೆಲೆ ಹೆಚ್ಚಾಗಿಯೇ ಇತ್ತು. ಕೆಲವು ಸಾಧನಗಳ ಬೆಲೆ ಒಪ್ಪಿತವಾದರೂ ಹಲವು ಸಾಧನಗಳ ಬೆಲೆಯನ್ನು ಒಪ್ಪುವುದು ಕಷ್ಟವಿತ್ತು. 2016ರಲ್ಲಿ ಏಸಸ್ ಬಿಡುಗಡೆಗೊಳಿಸಿದ ಸಾಧನಗಳ ಪಟ್ಟಿಯಿಲ್ಲಿದೆ. ಒಮ್ಮೆ ಗಮನಿಸಿ.

ಏಸಸ್ ಝೆನ್ ವಾಚ್ 2.

ಏಸಸ್ ಝೆನ್ ವಾಚ್ 2.

ಏಸಸ್ ಹಲವು ಗುರಿಗಳೊಂದಿಗೆ ತನ್ನ ಮೊದಲ ಸ್ಮಾರ್ಟ್ ವಾಚ್ ಅನ್ನು ಬಿಡುಗಡೆಗೊಳಿಸಿತ್ತು. ಆದರೆ ಅದರ ದುಬಾರಿ ಬೆಲೆಯಿಂದಾಗಿ ವಿಫಲವಾಯಿತು. ಝೆನ್ ವಾಚ್ 2 ಅನ್ನು ಎರಡು ಆವೃತ್ತಿಗಳಲ್ಲಿ ಬಿಡುಗಡೆಗೊಳಿಸಲಾಗಿತ್ತು - 1.63 ಇಂಚಿನ ಪರದೆಯ ವಾಚು ಮತ್ತು 1.45 ಇಂಚಿನ ಪರದೆಯ ವಾಚು.

ಝೆನ್ ವಾಚ್ 2ರಲ್ಲಿ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 400 ಎಸ್.ಒ.ಸಿ ಪ್ರೊಸೆಸರ್ ಇದೆ. 512 ಎಂಬಿ ರ್ಯಾಮ್ ಹೊಂದಿರುವ ಇದರಲ್ಲಿ 4ಜಿಬಿಯಷ್ಟು ಆಂತರಿಕ ಸಂಗ್ರಹ ಸಾಮರ್ಥ್ಯವಿದೆ. ಎರಡರಿಂದ ಮೂರು ದಿನಗಳವರೆಗೆ ಬಾಳಿಕೆ ಬರುವ 400 ಎಂ.ಎ.ಹೆಚ್ ಬ್ಯಾಟರಿ ಇದರಲ್ಲಿದೆ.

ಏಸಸ್ ಝೆನ್ ಫೋನ್ ಝೂಮ್.

ಏಸಸ್ ಝೆನ್ ಫೋನ್ ಝೂಮ್.

ಏಸಸ್ ಝೆನ್ ಫೋನ್ ಝೂಮ್ 2015ರಲ್ಲಿ ಉತ್ತಮ ವಿನ್ಯಾಸಕ್ಕೆ ಪ್ರಶಸ್ತಿ ಪಡೆದುಕೊಂಡಿತ್ತು. ಡಿ.ಎಸ್.ಎಲ್.ಆರ್ ಗಳ ಬದಲಿಗೆ ಉಪಯೋಗಿಸಬಹುದಾದ ಫೋನಾಗಿ ಇದನ್ನು ಅಭಿವೃದ್ಧಿಪಡಿಸಲಾಗಿತ್ತಾದರೂ ಅದರ ಉದ್ದೇಶದಲ್ಲದು ವಿಫಲವಾಯಿತು. ಹೋಯಾ ಲೆನ್ಸ್ ಜೊತೆಗೆ 3ಎಕ್ಸ್ ಆಪ್ಟಿಕಲ್ ಝೂಮ್ ಇದರಲ್ಲಿತ್ತು. 4ಜಿಬಿ ರ್ಯಾಮ್ ಮತ್ತು ಕ್ವಾಡ್ ಕೋರ್ ಇಂಟೆಲ್ ಆಟಮ್ ಪ್ರೊಸೆಸರ್ ಇದ್ದ ಮೊದಲ ಫೋನಿದು.

5.5 ಇಂಚಿನ 1080ಪಿ ಪರದೆ, 32 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಮತ್ತು 3,000ಎಂ.ಎ.ಹೆಚ್ ಬ್ಯಾಟರಿ ಇದರಲ್ಲಿದೆ. 37,999 ರುಪಾಯಿಯ ಈ ಫೋನ್ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ.

ಏಸಸ್ ಝೆನ್ ಫೋನ್ ಮ್ಯಾಕ್ಸ್.

ಏಸಸ್ ಝೆನ್ ಫೋನ್ ಮ್ಯಾಕ್ಸ್.

2015ರ ಏಸಸ್ ಝೆನ್ ಫೋನ್ ಮ್ಯಾಕ್ಸ್ ನ ಅಪ್ಗ್ರೇಡೆಡ್ ಆವೃತ್ತಿಯನ್ನು 2016ರಲ್ಲಿ ಬಿಡುಗಡೆಗೊಳಿಸಲಾಯಿತು. 2/3ಜಿಬಿ ರ್ಯಾಮ್ ಹೊಂದಿದ್ದ ಈ ಫೋನಿನಲ್ಲಿ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 615 ಎಸ್.ಒ.ಸಿ ಪ್ರೊಸೆಸರ್ ಇತ್ತು. ವಿನ್ಯಾಸದಲ್ಲಿ ಯಾವುದೇ ಬದಲಾವಣೆಗಳಿರಲಿಲ್ಲ. 5000 ಎಂ.ಎ.ಹೆಚ್ ಸಾಮರ್ಥ್ಯದ ಬ್ಯಾಟರಿ ಇದರಲ್ಲಿತ್ತು. 2ಜಿಬಿ ಆವೃತ್ತಿಯ ಫೋನಿನ ಬೆಲೆ 9,999 ಹಾಗೂ 3ಜಿಬಿ ರ್ಯಾಮ್ ಆವೃತ್ತಿಯ ಬೆಲೆ 12,999 ರುಪಾಯಿ.

ಏಸಸ್ ಝೆನ್ ಫೋನ್ 3.

ಏಸಸ್ ಝೆನ್ ಫೋನ್ 3.

ಏಪ್ರಿಲ್ ನಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಯಾದ ಏಸಸ್ ಝೆನ್ ಫೋನ್ 3 ಏಸಸ್ ಝೆನ್ ಫೋನ್ 2 ಸರಣಿಯ ಮುಂದುವರಿಕೆಯಾಗಿತ್ತು. ಪ್ರೀಮಿಯಂ ಗಾಜು ಮತ್ತು ಲೋಹದ ದೇಹದ ವಿನ್ಯಾಸದ ಈ ಫೋನುಗಳು ನೋಡಲು ಆಕರ್ಷಕವಾಗಿತ್ತು. ಅದರಲ್ಲೂ ಚಿನ್ನದ ಬಣ್ಣದ ಫೋನು ಅತ್ಯಾಕರ್ಷಕವಾಗಿತ್ತು. 4ಜಿಬಿ ರ್ಯಾಮ್ ಹಾಗೂ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 625 ಪ್ರೊಸೆಸರ್ ಇದರಲ್ಲಿದೆ. ಎರಡು ಆವೃತ್ತಿಯಲ್ಲಿ ಇದು ಲಭ್ಯವಿದೆ - 5.2 ಇಂಚಿನ ಪರದೆಯ ಫೋನಿನ ಬೆಲೆ 21,999 ರುಪಾಯಿಯಿದ್ದರೆ 5.5 ಇಂಚಿನ ಪರದೆಯ ಫೋನಿನ ಬೆಲೆ 27,999 ರುಪಾಯಿಯಷ್ಟಿತ್ತು. ಏಸಸ್ ಝೆನ್ ಫೋನ್ 3 ಕಂಪನಿಗೆ ಯಶ ತಂದುಕೊಟ್ಟ ಸ್ಮಾರ್ಟ್ ಫೋನ್.

ಏಸಸ್ ಝೆನ್ ಫೋನ್ 3 ಮ್ಯಾಕ್ಸ್.

ಏಸಸ್ ಝೆನ್ ಫೋನ್ 3 ಮ್ಯಾಕ್ಸ್.

4,000 ಎಂ.ಎ.ಹೆಚ್ ಬ್ಯಾಟರಿ ಹೊಂದಿದ್ದ ಏಸಸ್ ಝೆನ್ ಫೋನ್ ಮ್ಯಾಕ್ಸ್ ಈ ವರ್ಷ ಬಿಡುಗಡೆಯಾಯಿತು. ಇದು ಕಂಪನಿಗೆ ಯಶ ತಂದುಕೊಟ್ಟಿದ್ದು ಹೌದಾದರೂ ಅದರ ದುಬಾರಿ ಬೆಲೆ ಒಪ್ಪುವಂತದ್ದಾಗಿರಲಿಲ್ಲ. ಇದರಲ್ಲಿದ್ದ ಪ್ರೊಸೆಸರ್ ಅನ್ನೇ ಹೊಂದಿದ್ದ ಶಿಯೋಮಿ ರೆಡ್ ಮಿ 3ಎಸ್ ನಂತಹ ಫೋನುಗಳು ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಲಭ್ಯವಿದ್ದವು.

ಏಸಸ್ ಝೆನ್ ಫೋನ್ 3 ಡಿಲಕ್ಸ್.

ಏಸಸ್ ಝೆನ್ ಫೋನ್ 3 ಡಿಲಕ್ಸ್.

ಇದು ಏಸಸ್ ಝೆನ್ ಫೋನ್ 3 ಸರಣಿಯ ಪ್ರೀಮಿಯಂ ಫೋನು, ಹಾಗಾಗಿ ಡಿಲಕ್ಸ್ ಎಂದು ಹೆಸರು. ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 821 ಚಿಪ್ ಇದ್ದ ಮೊದಲ ಏಸಸ್ ಫೋನಿದು. ಸ್ನಾಪ್ ಡ್ರಾಗನ್ 820ರ ಆವೃತ್ತಿಯನ್ನೂ ಬಿಡುಗಡೆಗೊಳಿಸಲಾಗಿತ್ತು. ಹಾರ್ಡ್ ವೇರ್ ನ ಎಲ್ಲಾ ವಿಭಾಗಗಳಲ್ಲೂ ಉತ್ತಮ ವಸ್ತುಗಳನ್ನು ಹೊಂದಿದ್ದ ಈ ಫೋನಿನ ಪರದೆಯ ರೆಸೊಲ್ಯೂಷನ್ ಮಾತ್ರ ಕೇವಲ 1080 ಪಿಕ್ಸೆಲ್ಸ್. ಸ್ನಾಪ್ ಡ್ರಾಗನ್ 821 ಆವೃತ್ತಿಯ ಬೆಲೆ 62,999 ರುಪಾಯಿ ಮತ್ತು ಸ್ನಾಪ್ ಡ್ರಾಗನ್ 820 ಆವೃತ್ತಿಯ ಬೆಲೆ 49,999 ರುಪಾಯಿ.

ಏಸಸ್ ಝೆನ್ ಫೋನ್ 3 ಅಲ್ಟ್ರಾ.

ಏಸಸ್ ಝೆನ್ ಫೋನ್ 3 ಅಲ್ಟ್ರಾ.

ಏಸಸ್ ಝೆನ್ ಫೋನ್ 3 ಅಲ್ಟ್ರಾದಲ್ಲಿನ ಯಾವೊಂದು ಅಂಶವೂ ಸರಿಯಿರಲಿಲ್ಲ! 4ಜಿಬಿ ರ್ಯಾಮ್ ಹೊಂದಿದ್ದ ಈ ಫೋನಿನಲ್ಲಿ ಸ್ನಾಪ್ ಡ್ರಾಗನ್ 652 ಪ್ರೊಸೆಸರ್ ಇದೆ. ಇದರ ಬೆಲೆ 49,999 ರುಪಾಯಿ. ಇದೇ ಹಾರ್ಡ್ ವೇರ್ ಹೊಂದಿರುವ ರೆಡ್ ಮಿ ನೋಟ್ 3ಯ ಬೆಲೆ ಇದಕ್ಕಿಂತ ಐದು ಪಟ್ಟು ಕಡಿಮೆ ಇತ್ತು. ಎಲ್ಲೆಡೆಯಿಂದಲೂ ಈ ಫೋನಿನ ಬಗ್ಗೆ ಟೀಕೆಗಳು ಕೇಳಿಬಂದವು.

ಏಸಸ್ ಝೆನ್ ಫೋನ್ 3 ಲೇಸರ್.

ಏಸಸ್ ಝೆನ್ ಫೋನ್ 3 ಲೇಸರ್.

ಸ್ಮಾರ್ಟ್ ಫೋನುಗಳೀಗ ಛಾಯಾಗ್ರಾಹಕರನ್ನು ಗುರಿಯಾಗಿಸಿಕೊಂಡಿದೆ. ಏಸಸ್ ಝೆನ್ ಫೋನ್ 3 ಲೇಸರ್ ನಲ್ಲಿ ಕಂಪನಿಯ ಟ್ರೇಡ್ ಮಾರ್ಕ್ ಆದ ಲೇಸರ್ ಆಟೋಫೋಕಸ್ ತಂತ್ರಜ್ಞಾನವಿದೆ. ಉತ್ತಮ ಹಾರ್ಡ್ ವೇರ್ ಕೂಡ ಈ ಫೋನಿನಲ್ಲಿದೆ. ಜೊತೆಗೆ ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಜೇಷನ್ ಕೂಡ ಈ ಫೋನಿನಲ್ಲಿದೆ. ಏಸಸ್ ಝೆನ್ ಫೋನ್ 3 ಲೇಸರ್ ನ ಬೆಲೆ 18,999 ರುಪಾಯಿ.

ಏಸಸ್ ಝೆನ್ ವಾಚ್ 3.

ಏಸಸ್ ಝೆನ್ ವಾಚ್ 3.

ಇದು 2016ರಲ್ಲಿ ಕಂಪನಿ ಬಿಡುಗಡೆಗೊಳಿಸಿದ ಕೊನೆಯ ಉತ್ಪನ್ನ. ಭಾರತದಲ್ಲಿ ಇತ್ತೀಚೆಗಷ್ಟೇ ಬಿಡುಗಡೆಯಾದ ಈ ಫೋನಿನ ಬೆಲೆ 17,599 ರುಪಾಯಿ. ಒಟ್ಟು ಮೂರು ಮಾದರಿಗಳನ್ನು ಕಂಪನಿಯು ಬಿಡುಗಡೆಗೊಳಿಸಿತು. ಕ್ವಾಲ್ ಕಮ್ ಸ್ನಾಪ್ ಡ್ರಾಗನ್ ವೇರ್ 2100 ಎಸ್.ಒ.ಸಿ ಪ್ರೊಸೆಸರ್ ಇರುವ ಈ ವಾಚುಗಳಲ್ಲಿ 512 ಎಂಬಿ ರ್ಯಾಮ್ ಮತ್ತು 4ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿದೆ.

ಹೊಸ ಸ್ಮಾರ್ಟ್‌ವಾಚ್ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Asus, the Taiwanese smartphone giant, had a good in a run in 2016. Here is the complete list of products released by Asus in 2016. Read on...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X