ಅತಿದೊಡ್ಡ ಟೆಕ್ ಶೋನಲ್ಲಿ ಲಾಂಚ್ ಆಗಲಿರುವ ಡಿವೈಸ್‌ಗಳು

By Shwetha
|

ಕಳೆದ ವರ್ಷ, ಲಾಸ್ ವೇಗಸ್‌ನಲ್ಲಿ ನಡೆದ ಅಂತರಾಷ್ಟ್ರೀಯ ಗ್ರಾಹಕ ಇಲೆಕ್ಟ್ರಾನಿಕ್ಸ್ ಶೋ (ಸಿಇಎಸ್) ಗೆ ಅಂದಾಜು 160,498 ಟ್ರೇಡ್ ಹಾಜರಾತಿಗಳನ್ನು ನಿರೀಕ್ಷಿಸಲಾಗಿತ್ತು. ಅದೇ ರೀತಿ ಈ ಬಾರಿಯ ಸಿಇಎಸ್‌ನಲ್ಲಿ ಕೂಡ ಇದಕ್ಕಿಂತಲೂ ಹೆಚ್ಚಿನ ಗ್ರಾಹಕ ಹಾಜರಾತಿಗಳನ್ನು ಎದುರು ನೋಡಲಾಗುತ್ತಿದೆ. 2015 ರ ಅತ್ಯಂತ ದೊಡ್ಡ ಟೆಕ್ ಈವೆಂಟ್ ಆಗಿರುವ ಸಿಇಎಸ್ ಲಾಸ್‌ವೇಗಸ್‌ನಲ್ಲಿ ನಡೆಯುತ್ತಿದ್ದು ಹೆಚ್ಚಿನ ಪ್ರತಿನಿಧಿಗಳನ್ನು ಆಕರ್ಷಿಸುತ್ತಿದೆ.

ಇದನ್ನೂ ಓದಿ: ಉಚಿತ ಎಸ್‌ಎಮ್‌ಎಸ್‌ಗಳನ್ನು ಕಳುಹಿಸುವುದು ಹೇಗೆ?

ಇನ್ನು ಸಿಇಎಸ್‌ನ ಮುಖ್ಯ ಆಕರ್ಷಣೆಯಾಗಿರುವ ಟೆಲಿವಿಶನ್ ಈ ಬಾರಿ ಹೆಚ್ಚು ಬಳಕೆದಾರರ ಮನವನ್ನು ಕದಿಯಲಿದೆ. ಹೆಚ್ಚಿನ ಟೆಲಿವಿಶನ್ ಮಾಡೆಲ್‌ಗಳನ್ನು ಈ ಈವೆಂಟ್‌ನಲ್ಲಿ ನಮಗೆ ಕಾಣಬಹುದಾಗಿದೆ.

ಇನ್ನು ಈ ಈವೆಂಟ್‌ನಲ್ಲಿ ಮುಂಬರಲಿರುವ ಅತ್ಯಾಧುನಿಕ ತಂತ್ರಜ್ಞಾನಗಳ ಮೊಬೈಲ್ ಡಿವೈಸ್‌ ಅನ್ನು ನಮಗೆ ಕಾಣಬಹುದಾಗಿದ್ದು ಅಸೂಸ್, ಏಸರ್, ಲೆನೊವೊ, ಸೋನಿ ಹೀಗೆ ದೊಡ್ಡ ದೊಡ್ಡ ಕಂಪೆನಿಗಳು ತಮ್ಮ ಡಿವೈಸ್‌ಗಳನ್ನು ಲಾಂಚ್ ಮಾಡಲಿವೆ. ಹಾಗಿದ್ದರೆ ಇಂದಿನ ಲೇಖನದಲ್ಲಿ ಸಿಇಎಸ್‌ನ ಹೊಸ ಹೊಸ ಮೊಬೈಲ್ ಝಲಕ್‌ಗಳು ಯಾವುವು ಎಂಬುದನ್ನು ನೋಡೋಣ.

#1

#1

5.2-ಇಂಚಿನ QHD ಪರದೆ
ಆಂಡ್ರಾಯ್ಡ್ 5.0 ಲಾಲಿಪಪ್
ಸ್ನ್ಯಾಪ್‌ಡ್ರಾಗನ್ 810 ಪ್ರೊಸೆಸರ್
3ಜಿಬಿ RAM
20.7 ಎಮ್‌ಪಿ ರಿಯರ್ ಕ್ಯಾಮೆರಾ
5 ಎಮ್‌ಪಿ ಮುಂಭಾಗ
4ಜಿ LTE-A,
ದೀರ್ಘ ಬ್ಯಾಟರಿ ಲೈಫ್

#2

#2

ನಿರೀಕ್ಷಿತ ಸಿಇಎಸ್‌ನಲ್ಲಿ ಎಲ್‌ಜಿ ಜಿ ಫ್ಲೆಕ್ಸ್ 2 ಕ್ವಾಲ್‌ಕಾಮ್ ಮೋಡ್‌ನೊಂದಿಗೆ ಬಂದಿದೆ. ಇನ್ನು ಇದರ ಮೂಲ ಡಿವೈಸ್‌ಗೆ ಹೋಲಿಸಿದಾಗ ಇದು ತುಂಬಾ ಸಣ್ಣದಾಗಿದ್ದು 4ಜಿ ಎಲ್‌ಟಿಇ ಸಾಮರ್ಥ್ಯವಿರುವ ಬಜೆಟ್ ಸ್ಮಾರ್ಟ್‌ಫೋನ್ ಆಗಿ ಹೊರಹೊಮ್ಮಿದೆ.

#3

#3

ಡಿಸೈರ್ ಶ್ರೇಣಿಯಲ್ಲಿ ಎಚ್‌ಟಿಸಿ ಸಿಇಎಸ್‌ಗಾಗಿ ಫೋನ್ ಅನ್ನು ಲಾಂಚ್ ಮಾಡುವ ನಿಟ್ಟಿನಲ್ಲಿದ್ದು, ಫೋನ್ ಅತ್ಯಂತ ದೊಡ್ಡ ಕ್ಯಾಮೆರಾದೊಂದಿಗೆ ಮನಸೆಳೆಯಲಿದೆ. ಎಚ್‌ಟಿಸಿ ಒನ್ (ಎಮ್8) ನ ಸಕ್ಸೆಸರ್ ಆಗಿರುವ ಮುಂಬರಲಿರುವ ಫೋನ್ ತನ್ನ ಅಭಿವೃದ್ಧಿ ಕೋಡ್ ಹೆಸರು "ಹಿಮ" ದಿಂದ ಹೆಸರುವಾಸಿಯಾಗಿದೆ.

#4

#4

ಗೋಚರತೆ ಮತ್ತು ಲಾಭದಲ್ಲಿ ನಿಜಕ್ಕೂ ಹಬ್ಬವನ್ನೇ ಉಂಟುಮಾಡುವ ಶ್ಯೋಮಿ ಚೀನಾದ ಆಪಲ್ ಎಂದೇ ಜನಜನಿತ. ಇದು 5.5 ಇಂಚಿನ, ಕ್ಯುಎಚ್‌ಡಿ ಸ್ಕ್ರೀನ್ ನೊಡನೆ ಬಂದಿದ್ದು ಸ್ನ್ಯಾಪ್‌ಡ್ರಾಗನ್ 810 ಪ್ರೊಸೆಸರ್ ಇದರಲ್ಲಿದೆ. ಫೋನ್‌ನ RAM ಸಾಮರ್ಥ್ಯ 3ಜಿಬಿಯಾಗಿದ್ದು, ಆಂಡ್ರಾಯ್ಡ್ 5.0 ನವೀಕರಣವನ್ನು ಡಿವೈಸ್ ಒಳಗೊಂಡಿದೆ. ಇದು ದೀರ್ಘ ಬಾಳಿಕೆಯುಳ್ಳ ಬ್ಯಾಟರಿಯನ್ನು ಕೂಡ ಹೊಂದಿದೆ.

#5

#5

ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾವನ್ನು ಅಸೂಸ್‌ನ ಹೊಸ ಫೋನ್ ಹೊಂದಿದ್ದು ಸಿಇಎಸ್‌ನಲ್ಲಿ ಹೆಚ್ಚು ನಿರೀಕ್ಷಿತ ಎಂದೆನಿಸಿದೆ. ಕೈಗೆಟಕುವ ಸ್ಮಾರ್ಟ್‌ಫೋನ್ ಆಗಿ ಅಸೂಸ್ ಫೋನ್ ಲಾಂಚ್ ಆಗಲಿದೆ.

#6

#6

ಸಿಇಎಸ್ 2015 ರಲ್ಲಿ ಕೊಡಾಕ್ ಮೊತ್ತ ಮೊದಲ ಡಿವೈಸ್ ಅನ್ನು ಲಾಂಚ್ ಮಾಡುತ್ತಿದೆ. ಬ್ರಿಟಿಷ್ ಕಂಪೆನಿ ಮತ್ತು ಬುಲ್ಲೆಟ್ ಗ್ರೂಪ್ ಸಂಯೋಜನೆಯಲ್ಲಿ ಹೊರಬರಲಿರುವ ಈ ಡಿವೈಸ್ ತನ್ನ ಆಕರ್ಷಕ ಫೋನ್‌ನಿಂದ ಪ್ರಸಿದ್ಧಿಯನ್ನು ಪಡೆಯುವ ನಿಟ್ಟಿನಲ್ಲಿದೆ. ಗೂಗಲ್‌ನ ಆಂಡ್ರಾಯ್ಡ್ ಓಎಸ್‌ ಅನ್ನು ಹ್ಯಾಂಡ್‌ಸೆಟ್ ಚಾಲನೆ ಮಾಡಲಿದೆ.

#7

#7

64 ಬಿಟ್ ಸ್ನ್ಯಾಪ್‌ಡ್ರಾಗನ್ 410 ಕ್ವಾಡ್ - ಕೋರ್ ಪ್ರೊಸೆಸರ್ ಜೊತೆಗೆ 2 ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದೆ. 5.5 ಇಂಚಿನ ಪೂರ್ಣ ಎಚ್‌ಡಿ ಓಜಿಎಸ್ ಡಿಸ್‌ಪ್ಲೇಯೊಂದಿಗೆ 13 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು 4ಜಿ ಎಲ್‌ಟಿಇ ಸಾಮರ್ಥ್ಯವನ್ನು ಡಿವೈಸ್ ಹೊಂದಿದೆ.

#8

#8

2015 ರ ಸಿಇಎಸ್‌ನಲ್ಲಿ ಹೆಚ್ಚು ಪೈಪೋಟಿಯೊಂದಿಗೆ ಬರಲಿರುವ ಫೋನ್ ಆಗಿ ಲೆನೊವೊ 4ಜಿ ಎಲ್‌ಟಿಇ ಕಂಡುಬಂದಿದೆ. ಇದು 1.2 GHZ ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ ಡಿವೈಸ್‌ನಲ್ಲಿದ್ದು, 16 ಜಿಬಿ ಸಂಗ್ರಣಾ ಸಾಮರ್ಥ್ಯವನ್ನು ಫೋನ್ ಹೊಂದಿದೆ. 1ಜಿಬಿ RAM ಡಿವೈಸ್‌ನಲ್ಲಿದ್ದು, ಇದನ್ನು ಎಸ್‌ಡಿ ಕಾರ್ಡ್ ಬಳಸಿ ಸಂಗ್ರಹಣಾ ಸಾಮರ್ಥ್ಯವನ್ನು ವಿಸ್ತರಿಸಹುದಾಗಿದೆ.

#9

#9

ನಿಕ್ಕಿ ವರದಿ ಪ್ರಕಾರ, ಜಪಾನೀಸ್ ಮೊಬೈಲ್ ನೆಟ್‌ವರ್ಕ್ ಜೊತೆಗೂಡಿ ಜಪಾನ್‌ನ ಇಂಡಸ್ಟ್ರಿಯಲ್ ಪಾಲುದಾರ ಸಂಸ್ಥೆ ವಯೋ ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲಿದೆ. ಇದು 5 ಇಂಚಿನ ಆಂಡ್ರಾಯ್ಡ್ ಪವರ್ ಉಳ್ಳ ಹ್ಯಾಂಡ್‌ಸೆಟ್ ಆಗಿದ್ದು ಸಿಇಎಸ್‌ನಲ್ಲಿ ಅದ್ಭುತವನ್ನು ಉಂಟುಮಾಡಲಿದೆ.

#10

#10

ಸಿಇಎಸ್‌ನಲ್ಲಿ ಕಡಿಮೆ ದರದ ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡುವ ನಿಟ್ಟಿನಲ್ಲಿದೆ. 4ಜಿ ಎಲ್‌ಟಿಇ ಅನ್ನು ಏಸರ್‌ನ ಲಿಕ್ವಿಡ್ ಶ್ರೇಣಿ ಬೆಂಬಲಿಸುತ್ತದೆ.

Best Mobiles in India

English summary
Last year alone, an estimated 160,498 trade attendees, visited the International Consumer Electronics Show (CES) in Las Vegas.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X