ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮೆರೆಯುತ್ತಿರುವ ಚೀನಾ ಕಂಪನಿಗಳು ಯಾವುವು..?

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತಮ್ಮ ಹಿಡಿತವನ್ನು ದಿನೇ ದಿನೇ ಗಟ್ಟಿಗೊಳಿಸಿಕೊಂಡು ಹೋಗುತ್ತಿವೆ. ಈ ಹಿನ್ನಲೆಯಲ್ಲಿ ಚೀನಾ ಮೂಲದ ಸ್ಮಾರ್ಟ್‌ಪೋನ್ ತಯಾರಿಕ ಕಂಪನಿಗಳಾವುವು..?, ಅವುಗಳ ವಿಶೇಷತೆ ಏನು ಎಂಬುದನ್ನು ತಿಳಿಯಬೇಕಾಗಿದೆ.

|

ಭಾರತೀಯ ಸ್ಮಾರ್ಟ್‌ಫೋನ್ ಲೋಕದಲ್ಲಿ ಮೆರೆಯುತ್ತಿರುವ ಚೀನಾ ಮೂಲದ ಕಂಪನಿಗಳೂ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ತಮ್ಮ ಹಿಡಿತವನ್ನು ದಿನೇ ದಿನೇ ಗಟ್ಟಿಗೊಳಿಸಿಕೊಂಡು ಹೋಗುತ್ತಿವೆ. ಈ ಹಿನ್ನಲೆಯಲ್ಲಿ ಚೀನಾ ಮೂಲದ ಸ್ಮಾರ್ಟ್‌ಪೋನ್ ತಯಾರಿಕಾ ಕಂಪನಿಗಳಾವುವು ಅವುಗಳ ವಿಶೇಷತೆ ಏನು ಎಂಬುದನ್ನು ತಿಳಿಯಬೇಕಾಗಿದೆ.

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಮೆರೆಯುತ್ತಿರುವ ಚೀನಾ ಕಂಪನಿಗಳು ಯಾವುವು..?

ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಮಧ್ಯಮ ಬೆಲೆಯ ಫೋನ್‌ಗಳು ಹಾಗೂ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳನ್ನು ಚೀನಾ ಮೂಲಕದ ತಯಾರಿಕ ಕಂಪನಿಗಳು ಭಾರತೀಯ ಮಾರುಕಟ್ಟೆಗೆ ಪರಿಚಯಿಸುತ್ತಿದ್ದು, ಈ ಹಿನ್ನಲೆಯಲ್ಲಿ ಭಾರತೀಯರು ಸಹ ಹೆಚ್ಚಾಗಿ ಚೀನಾ ಮೊಬೈಲ್ ಕಂಪನಿಗಳನ್ನೇ ಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಹುವಾವೆ:

ಹುವಾವೆ:

ಜಾಗತಿಕವಾಗಿ ಗುರುತಿಸಿಕೊಂಡಿರುವ ಹುವಾವೆ, ಚೀನಾ ಮೂಲದ ಕಂಪನಿಯಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿಯೂ ತನ್ನ ಪ್ರಭಾವನ್ನು ಉಳಿಸಿಕೊಂಡಿದೆ. ನಮ್ಮ ಬೆಂಗಳೂರಿನಲ್ಲಿ ತನ್ನ ಕೇಂದ್ರ ಕಚೇರಿಯನ್ನು ಆರಂಭಿಸಿರುವ ಹುವಾವೆ, ಆನ್‌ಲೈನ್ ಮಾತ್ತು ಆಫ್‌ಲೈನ್ ಮಾರುಕಟ್ಟೆಯನ್ನು ಅವಲಂಬಿಸಿದೆ. ಅಲ್ಲದೇ ಭಾರತದಲ್ಲೇ ತನ್ನ ಫೋನ್ ತಯಾರಿಯನ್ನು ಆರಂಭಿಸಿದೆ.

ಚೆನ್ನೈನಲ್ಲಿ ತನ್ನ ತಯಾರಿಕಾ ಘಟಕವನ್ನು ಆರಂಭಿಸಿರುವ ಹುವಾವೆ, ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್‌ಗಳ ಉತ್ಪಾದನೆಯಲ್ಲಿ ಮುಂಚುಣಿಯಲ್ಲಿದೆ ಎಂದು ಹೇಳಬಹುದಾಗಿದ್ದು, ಮುಂದಿನ ದಿನಗಳಲ್ಲಿ ತನ್ನ ಪ್ರಭಾವನ್ನು ಹೆಚ್ಚಿಸಿಕೊಳ್ಳಲು ಸಿದ್ಧತೆ ನಡೆಸಿದೆ.

ಶಿಯೋಮಿ:

ಶಿಯೋಮಿ:

ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇಂದಿನ ದಿನದಲ್ಲಿ ಹೆಚ್ಚಾಗಿ ಕೇಳಿ ಬರುತ್ತಿರುವ ಹೆಸರು ಶಿಯೋಮಿ. ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಶಿಯೋಮಿ ಭಾರತೀಯ ಮಾರುಕಟ್ಟೆಯಲ್ಲಿ ಹೊಸ ಮಾದರಿಯ ಕ್ರಾಂತಿಯನ್ನು ಶುರುಮಾಡಿದೆ.

ಸದ್ಯ ಭಾರತದಲ್ಲಿ ತನ್ನ ಸ್ಮಾರ್ಟ್‌ಫೋನ್ ತಯಾರಿಕೆಯನ್ನು ಆರಂಭಿಸಿರುವ ಶಿಯೋಮಿ, ಹೆಚ್ಚಾಗಿ ಆನ್‌ಲೈನ್ ಮಾರುಕಟ್ಟೆಯನ್ನು ಅವಲಂಬಿಸಿದ್ದು, ಇತ್ತೀಚೆಗೆ ಆಫ್‌ಲೈನ್ ಮಾರುಕಟ್ಟೆಯಲ್ಲಿ ಸಖತ್ ಹವಾ ಕ್ರಿಯೆಟ್ ಮಾಡಿದೆ.

ಓಪ್ಪೋ:

ಓಪ್ಪೋ:

ಇತ್ತೀಚಿನ ದಿನದಲ್ಲಿ ಓಪ್ಪೋ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಅದರಲ್ಲೂ ಆಫ್‌ಲೈನ್ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಬಂಡವಾಳವನ್ನು ಹೂಡಿಕೆ ಮಾಡಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ತನ್ನ ವಿಸ್ತಾರ ಮತ್ತು ಹಿಡಿತವನ್ನು ಹೊಂದಲು ಯೋಜನೆಯನ್ನು ಸಿದ್ಧಪಡಿಸಿಕೊಂಡತೆ ಕಾಣುತ್ತಿದೆ.

ನೋಯ್ಡದಲ್ಲಿ ತನ್ನ ಉತ್ಪಾದನಾ ಘಟಕವನ್ನು ಆರಂಭಿಸಿರುವ ಓಪ್ಪೋ, ಕ್ಯಾಮೆರಾ ಫೋನ್ ತಯಾರಿಕೆಯಲ್ಲಿ ಹೆಚ್ಚಿನ ಪ್ರೌಡಿಮೆ ಸಾಧಿಸಿದೆ. ಚೀನಾ ಮಾರುಕಟ್ಟೆಯಲ್ಲಿಯೂ ಸದ್ದು ಮಾಡುತ್ತಿರುವ ಓಪ್ಪೋ ಭಾರತೀಯ ಮಾರುಕಟ್ಟೆಯಲ್ಲಿಯೂ ಮೆರೆಯುವ ಸಾಧ್ಯತೆ ಇದೆ.

ಜಿಯೋನಿ:

ಜಿಯೋನಿ:

ಚೀನಾ ಮೂಲದ ಜಿಯೋನಿ, ಆರಂಭದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ತನ್ನ ಸ್ಮಾರ್ಟ್‌ಫೋನ್‌ಗಳ ವಿನ್ಯಾಸದಿಂದಲೇ ಗ್ರಾಹಕರನ್ನು ಸೆಳೆಯುವ ತಂತ್ರವನ್ನು ಬಹುವಾಗಿ ನೆಚ್ಚಿಕೊಂಡಿತ್ತು. ಜಿಯೋನಿ ಆರಂಭಿಕ ಬೆಲೆಯ ಸ್ಮಾರ್ಟ್‌ಫೋನ್‌ಗಳಿಂದ ಹಿಡಿದು ಟಾಪ್‌ಎಂಡ್ ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ.

ಸದ್ಯ ಹರಿಯಾಣದಲ್ಲಿ ತನ್ನ ಘಟಕವನ್ನು ಶುರು ಮಾಡಿರುವ ಜಿಯೋನಿ, ಶೇ.60 ಸ್ಮಾರ್ಟ್‌ಫೋನ್‌ಗಳನ್ನು ಇಲ್ಲಿಯೇ ತಯಾರು ಮಾಡುತ್ತಿದೆ. ಇದು ಸಹ ಮಧ್ಯಮ ಬೆಲೆಯ ಸ್ಮಾರ್ಟ್‌ಫೋನ್‌ ಉತ್ಪಾದನೆಯಲ್ಲಿ ಮುಂಚುಣಿಯಲ್ಲಿದೆ.

ವಿವೋ:

ವಿವೋ:

ಚೀನಾ ಮೂಲಕದ ಕಂಪನಿಗಳಲ್ಲಿ ಆಫ್‌ಲೈನ್ ಮಾರುಕಟ್ಟೆಯಲ್ಲಿ ಓಪ್ಪೋ ನಂತೆಯೇ ಅತೀ ಹೆಚ್ಚಿನ ಹೂಡಿಕೆಯನ್ನು ಮಾಡಿರುವುದು ವಿವೋ ಮಾತ್ರವೇ, ಇದು ಸಹ ಉತ್ತಮ ಗುಣಮಟ್ಟದ ಕ್ಯಾಮೆರಾ ಫೋನ್ ಉತ್ಪಾದನೆಯಲ್ಲಿ ಖ್ಯಾತಿಯನ್ನು ಗಳಿಸಿದೆ. ವಿವೋ ಆರಂಭಿಕ ಬೆಲೆಯ ಫೋನ್‌ಗಳಿಗಿಂತ ಮಧ್ಯಮ ವರ್ಗದ ಸ್ಮಾರ್ಟ್‌ಫೋನ್‌ಗಳನ್ನೇ ಹೆಚ್ಚಾಗಿ ತಯಾರು ಮಾಡುತ್ತಿದೆ.

ಚನ್ನೈನಲ್ಲಿ ಉತ್ಪಾದನ ಘಟಕ ಹೊಂದಿರುವ ವಿವೋ ಸದ್ಯ ಹೆಚ್ಚಿನ ಬಂಡವಾಳವನ್ನು ಹೂಡಿಕೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

Best Mobiles in India

Read more about:
English summary
Huawei, Oppo and vivo are now offering premium-level smartphones with the best of features as well as mid-range ones to suit all tastes. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X