ಗುಜರಿ ಸೇರಿರುವ ಮೊಬೈಲ್ ತಂತ್ರಜ್ಞಾನಗಳು

By Super
|


ನೆನ್ನೆ ಬಿಟ್ಟಿರುವ ಮೊಬೈಲೇ ಇವತ್ತಿಗೆ ಹಳೆಯದಾಗಿಬಿಟ್ಟಿರುತ್ತೆ. ಅಷ್ಟರ ಮಟ್ಟಿಗೆ ತಂತ್ರಜ್ಞಾನ ಬೆಳೆಯುತ್ತಿದೆ. ನಿಮಗೆ ಜ್ಞಾಪಕವಿರಬಹುದು, ಜಸ್ಟ್ 10 ವರ್ಷಗಳಿಗೆ ಮುಂಚೆ ಮೊಬೈಲ್ ಇನ್ನೂ ಕಾಸ್ಟ್ಲಿ ಆಗಿರುವ ಸಮಯದಲ್ಲಿ ಸುಮಾರು ಜನ ಸೊಂಟಕ್ಕೆ ಪೇಜರ್ ಇಟ್ಟುಕೊಂಡು ಓಡಾಡುತ್ತಿದ್ದರು. ಆ ಕಾಲಕ್ಕೆ ಪೇಜರ್ ನಲ್ಲಿ ಮೆಸೇಜ್ ತೆಗೆದು ಎಲ್ಲರ ಮುಂದೆ ಓದೋದೇ ಒಂದು ಶೋಕಿಯಾಗಿತ್ತು.

ಈಗ ಅದೇ ಪೇಜರ್ ಅನ್ನ ಯಾವ ಮಗೂಗೆ ಕೊಟ್ಟರೂ ಅದನ್ನು ಅಡಕ್ಕೂ ತಗೋಳಲ್ಲ. ಅದೇ ಥರ ಮೊಬೈಲ್ ನಲ್ಲೆ ಬಳಸಲ್ಪಡುತ್ತಿದ್ದ ಹಲವಾರು ತಂತ್ರಜ್ಞಾನಗಳು ಈಗ ಓಬೀರಾಯನ ಕಾಲದ್ದಾಗಿದೆ. ಅದು ಯಾವುದು ಅಂತ ಒಂದು ಸಲಿ ಓದಿ. ನಿಮ್ಮ ಮೊಬೈಲ್ ನಲ್ಲೂ ಅದು ಇದ್ದರೆ ಬೇಜಾರ್ ಮಾಡ್ಕೋಬೇಡಿ ಅಷ್ಟೇ :)1) ಬ್ಲಾಕ್ & ವೈಟ್ ಸ್ಕ್ರೀನ್

ಚೀನೀ ಮೊಬೈಲುಗಳು ಬಂದ ಮೇಲಂತೂ ಯಾವ ಉತ್ಪಾದಕನೂ ಬ್ಲಾಕ್ & ವೈಟ್ ಮೊಬೈಲ್ ಅನ್ನು ಉತ್ಪಾದನೆ ಮಾಡುತ್ತಿಲ್ಲ. ಅಪ್ಪಿ ತಪ್ಪಿ ಯಾರಾದರೂ ಹಳೆ ನೋಕಿಯಾ 310 ಮತ್ತು 1100 ಫೋನ್ ಉಪಯೋಗಿಸುತ್ತಿದ್ದರೆ ನೋಡಬೇಕಷ್ಟೇ.2) ರೆಸಿಸ್ಟಿವ್ ಟಚ್ ಸ್ಕ್ರೀನ್


ಆಪಲ್ ಕಂಪನಿ ಕೆಪಾಸಿಟಿವ್ ಟಚ್ ಸ್ಕ್ರೀನ್ ಇರುವ ಮೊಬೈಲ್ ಬಿಟ್ಟಿದ್ದೇ ಬಿಟ್ಟಿದ್ದು, ಇತರೆ ಮೊಬೈಲುಗಳೂ ರೆಸಿಸ್ಟಿವ್ ಟಚ್ ಸ್ಕ್ರೀನ್ ಇರುವ ಸ್ಮಾರ್ಟ್ ಫೋನ್ ಗಳನ್ನೇ ಉತ್ಪಾದಿಸುತ್ತಿವೆ.3 ) ಇನ್ಫ್ರಾರೆಡ್ ಸೌಲಭ್ಯ

ಕೆಂಪು ಕಲರ್ ಚಿನ್ಹೆ ಇರುವ ಇನ್ಫ್ರಾರೆಡ್ ಇರುವ ಫೋನ್ ನಿಂದ ಮೊದಲೆಲ್ಲಾ ಹಾಡುಗಳನ್ನು ಲೇಟಾದರೂ ಪರವಾಗಿಲ್ಲ ಅಂದುಕೊಂಡು ಕಾಪಿ ಮಾಡುತ್ತಿದ್ದೆವು. ಬ್ಲೂಟೂತ್ ಹಾಗು ವೈಫೈ ಬಂದಮೇಲೆ ಅದಕ್ಕೆ ಮೊಬೈಲ್ ನಲ್ಲಿ ಸ್ಥಾನವೇ ಇಲ್ಲ.4) ಟ್ರ್ಯಾಕ್ ಪ್ಯಾಡ್


ಹಳೆಯ ಸೋನಿ ವಾಕ್ ಮ್ಯಾನ್ ಫೋನು ನೋಡಿದರೆ ಗೊತ್ತಾಗುತ್ತೆ, ಅಕ್ಕ ಪಕ್ಕ, ಮೇಲೆ ಕೆಳಗೆ, ಈ ರೀತಿ ವಿವಿಧ menu ಗಳಿಗೆ ಹೋಗಲು ಇದು ಬಳಸಲಾಗುತ್ತಿತ್ತು. ಈಗ ಎಲ್ಲ ಟಚ್ ಸ್ಕ್ರೀನ್ ಇರುವುದರಿಂದ ಇದಕ್ಕೆ ಕೊಕ್ ಕೊಡಲಾಗಿದೆ.5) ಸಿಮ್ಬಿಯನ್ ತಂತ್ರಾಂಶ

ಅದ್ಯಾವ ಮಹೂರ್ತದಲ್ಲಿ ಉಚಿತವಾದ ಆಂಡ್ರಾಯ್ಡ್ ತಂತ್ರಾಂಶವನ್ನು ಗೂಗಲ್ ಸಿದ್ಧಪದಿಸಿತೋ, ಆವತ್ತೇ ನೋಕಿಯಾದ ಸ್ಮಾರ್ಟ್ ಫೋನುಗಳಲ್ಲಿ ಹೆಚ್ಚಾಗಿ ಬಳಸುತ್ತಿದ್ದ ಸಿಮ್ಬಿಯನ್ ಗೆ ಎಳ್ಳು ನೀರು ಬಿಡುವ ಪ್ರಕ್ರಿಯೆ ಶುರುವಾಯ್ತು.

ಇಲ್ಲಿಗೆ ಮೊಬೈಲ್ ನಲ್ಲಿ ಈಗ ಅಸ್ತಿತ್ವದಲ್ಲಿ ಇಲ್ಲದ ತಂತ್ರಜ್ಞಾನಗಳ ಕಥೆ ಮುಕ್ತಾಯವಾಯಿತು. ಹಳೆ ಫೋನು ಇಟ್ಟುಕೊಂಡಿರುವ ಎಲ್ಲರಿಗೂ ಮಂಗಳವಾಗಲಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X