ಆಪಲ್ ಐಫೋನ್ 6 ಡಿಸ್‌ಪ್ಲೇ ಕಲ್ಲಿಗಿಂತ ಗಟ್ಟಿ

By Shwetha
|

ಆಪಲ್‌ನ ಮುಂಬರಲಿರುವ 4.7 ಇಂಚಿನ ಇಂಚಿನ ಐಫೋನ್ 6 ನ ಹೊಸ ಡಿಸ್‌ಪ್ಲೇಯ ಮೇಲೆ ಹರಿತವಾದ ಚಾಕುವಿನಿಂದ ಇರಿದರೂ ಕೂಡ ಇದಕ್ಕೆ ಯಾವುದೇ ಸ್ಕ್ರಾಚ್ ಉಂಟಾಗುವುದಿಲ್ಲ.

ಯೂಟ್ಯೂಬ್ ಬಳಕೆದಾರ ಮಾರ್ಕಸ್ ಬ್ರೌನ್‌ಲೀ ಹೇಳುವಂತೆ ಈ ಅತ್ಯಾಕರ್ಷಕ ಸೂಪರ್ ಡ್ಯುರೇಬಲ್ ಸಫೈರ್ ಕ್ರಿಸ್ಟಲ್ ಡಿಸ್‌ಪ್ಲೇಗೆ ಎಷ್ಟು ಬಡಿದರೂ ಗೀರು ಉಂಟುಮಾಡಿದರೂ ಅದು ಹೇಗಿದೆಯೋ ಹಾಗೆಯೇ ಇದೆ. ಯಾವುದೇ ಕಲೆ ಇದರಲ್ಲಿ ಕಂಡುಬರಲಿಲ್ಲ ಎಂದವರು ಆಶ್ಚರ್ಯಗೊಂಡಿದ್ದಾರೆ.

ಇದು ಯಾವುದೇ ಸುಳ್ಳು ಸುದ್ದಿಯಲ್ಲ ಎಂದು ಮಾರ್ಕಸ್ ಹೇಳಿದ್ದು, ಇದು ನಿಜವಾಗಿದ್ದು ಐಫೋನ್ 6 ಆಪಲ್‌ನ ಭಾಗದಿಂದ ಬಂದಂತಹ ಡಿವೈಸ್ ಆಗಿದೆ ಎಂದವರು ಹೇಳಿದ್ದಾರೆ.

ಐಫೋನ್ 6 ಡಿಸ್‌ಪ್ಲೇ ಎಷ್ಟು ಬಲಶಾಲಿ ಗೊತ್ತೇ?

ಲಾಂಚ್‌ನ ಮುಂಚೆಯೇ ಆಪಲ್‌ನ ಬಿಡಿಭಾಗಗಳನ್ನು ಸಂಗ್ರಹಿಸಿರುವ ಸೋನಿ ಡಿಕ್ಸನ್‌ಗೆ ಧನ್ಯವಾದಗಳನ್ನು ಅರ್ಪಿಸಿರುವ ಬ್ರೌನ್‌ಲೀ ಇಷ್ಟೊಂದು ಮಹತ್ವಪೂರ್ಣವಾದ ಡಿಸ್‌ಪ್ಲೇಯನ್ನು ನೋಡುವ ಅದೃಷ್ಟ ತಮಗೆ ದೊರಕಿತೆಂದು ಆನಂದ ಪಟ್ಟಿದ್ದಾರೆ.

ಗೋರಿಲ್ಲಾ ಗ್ಲಾಸ್‌ನಂತೆಯೇ, ಐಫೋನ್ 5s ನಲ್ಲಿನ ರಕ್ಷಣಾ ವಲಯ, ಸಫೈರ್ ಕ್ರಿಸ್ಟಲ್ ತಿನ್ (ಕಾಗದದ ನಿಜವಾದ ದಪ್ಪ) ಇದು ಹೆಚ್ಚಿನ ಒತ್ತಡವನ್ನು ತಾಳಿಕೊಳ್ಳುವ ಶಕ್ತಿಯನ್ನು ಹೊಂದಿದೆ. ಆಪಲ್ ಈಗಾಗಲೇ ತನ್ನ ಐಫೋನ್ 5s ಕ್ಯಾಮೆರಾದಲ್ಲಿ ಸಫೈರ್ ಕ್ರಿಸ್ಟಲ್ ಅನ್ನು ಬಳಸಿಕೊಂಡಿದ್ದು, ಈ ಸಾಮಾಗ್ರಿಯನ್ನು ದುಬಾರಿ ವಾಚ್‌ಗಳು ಮತ್ತು ಇತರ ಕ್ಯಾಮೆರಾ ಲೆನ್ಸ್‌ಗಳಲ್ಲಿ ಕಾಣಬಹುದಾಗಿದೆ.

ಈ ಚಮತ್ಕಾರವನ್ನು ನಿಮಗೆ ತೋರಿಸುವ ವೀಡಿಯೋವನ್ನು ಕೂಡ ಈ ಲೇಖನದಲ್ಲಿ ನಾವು ಲಗತ್ತಿಸಿದ್ದು ಡಿಸ್‌ಪ್ಲೇಯ ಮೇಲೆ ನಡೆಯುವಂತಹ ಪ್ರಯೋಗಗಳನ್ನು ನೀವು ಗಮನಿಸಿ ಆಪಲ್ ಐಫೋನ್ 6 ಡಿಸ್‌ಪ್ಲೇ ಎಷ್ಟು ಬಲಶಾಲಿ ಎಂಬುದನ್ನು ಅರ್ಥಮಾಡಿಕೊಳ್ಳಬಹುದಾಗಿದೆ. ಇಲ್ಲಿ ಮಾರ್ಕಸ್ ತಮ್ಮ ಶೂವನ್ನು ಬಳಸಿ ಡಿಸ್‌ಪ್ಲೇಯನ್ನು ಮಡಚುವುದು ತುಂಡುಮಾಡಲು ಪ್ರಯತ್ನಿಸಿದ್ದನ್ನೂ ತೋರಿಸಲಾಗಿದೆ

ಇದರ್ಥ ಮುಂಬರಲಿರುವ ಐಫೋನ್ ಸ್ಕ್ರಾಚ್‌ಗೆ ಒಳಗಾಗುವುದಿಲ್ಲ ಎಂದಾಗಿಲ್ಲ, ಆದರೆ ಬಳಕೆದಾರರು ಈ ಫೋನ್‌ಗೆ ಸ್ಕ್ರೀನ್ ಪ್ರೊಟೆಕ್ಟರ್ ಅನ್ನು ಹಾಕಬೇಕಾದ ಅಗತ್ಯವಿಲ್ಲ ಎಂದಾಗಿದೆ.

<center><iframe width="100%" height="360" src="//www.youtube.com/embed/5R0_FJ4r73s?feature=player_embedded" frameborder="0" allowfullscreen></iframe></center>

Best Mobiles in India

Read more about:
English summary
This article tells that Even a knife cant scratch this iPhone 6 display and that kind of strong building technology it is having.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X