ಸ್ಲಿಮ್ ಫೋನ್‌ಗಳ ಸಾಲಿಗೆ ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ ಎ8 ಸೇರ್ಪಡೆ

By Shwetha
|

ಮೆಟಲ್ ಕ್ಲಾಡ್ ಫೋನ್ ಬಯಸುವವರಿಗೆ ಸ್ಯಾಮ್‌ಸಂಗ್ ಅದ್ಭುತ ಕೊಡುಗೆಯನ್ನು ನೀಡಿದೆ. ಗ್ಯಾಲಕ್ಸಿ ಎ8 ಸ್ಲಿಮ್ ಫೋನ್ ಎಂದೆನಿಸಿದ್ದು ಸ್ಯಾಮ್‌ಸಂಗ್‌ನ ಹೆಚ್ಚು ತೆಳು ಫೋನ್ ಎಂಬ ಹೆಗ್ಗಳಿಕೆಗೆ ಈ ಡಿವೈಸ್ ಪಾತ್ರವಾಗಿದೆ. ಗ್ಯಾಲಕ್ಸಿ ಎಸ್6 ಡಿವೈಸ್‌ನಂತೆಯೇ ಅದೇ ವಿನ್ಯಾಸ ಗುಣಮಟ್ಟವನ್ನು ಈ ಫೋನ್ ಕೂಡ ಒಳಗೊಂಡಿದ್ದು 5.7 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದೆ.ದೊಡ್ಡ ಗಾತ್ರ ಮತ್ತು ತೆಳು ಮೂಲೆಗಳನ್ನು ಈ ಫೋನ್ ಹೊಂದಿದೆ.

ಓದಿರಿ: ಭಾರತದಲ್ಲಿ ಗ್ಯಾಲಕ್ಸಿ ಎಸ್6 ಲಾಂಚ್‌ನೊಂದಿಗೆ ಸ್ಯಾಮ್‌ಸಂಗ್ ಭರ್ಜರಿ ಆಟ

ಸೊಗಸಾದ ನೋಟ

ಸೊಗಸಾದ ನೋಟ

ಫೋನ್‌ನ ಮೂಲೆಗಳು ಅತ್ಯಂತ ಸೊಗಸಾದ ನೋಟವನ್ನು ಡಿವೈಸ್‌ಗೆ ನೀಡಿದ್ದು ಧ್ವನಿ ನಿಯಂತ್ರಣಕ್ಕಾಗಿ ಮೆಟಲ್ ಕೀಗಳನ್ನು ಹೊಂದಿದೆ. ಸಿಮ್ ಹಾಗೂ ಎಸ್‌ಡಿ ಕಾರ್ಡ್‌ ಸ್ಲಾಟ್ ಇದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಗ್ಯಾಲಕ್ಸಿ ಎ8, 5.7 ಇಂಚಿನ ಸೂಪರ್ ಅಮೋಲೆಡ್ ಪೂರ್ಣ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದೆ. ಇದು ಬ್ರೈಟ್ ಮತ್ತು ವೈವಿಧ್ಯಮಯವಾಗಿದ್ದು ಅತ್ಯಾಕರ್ಷಕವಾಗಿದೆ.ಕ್ಯಾಮೆರಾ ಲೆನ್ಸ್, ಎಲ್‌ಇಡಿ ಫ್ಲ್ಯಾಶ್ ಮತ್ತು ಸಣ್ಣ ಸ್ಪೀಕರ್ ಇದರಲ್ಲಿದೆ. ಇನ್ನು ಲೆನ್ಸ್‌ಗೆ ಪೆಟ್ಟಾಗದಂತೆ ವರ್ತುಲ ಸಂರಕ್ಷಣೆಯನ್ನು ಪಡೆದುಕೊಂಡಿದೆ.

ಪ್ರೊಸೆಸರ್

ಪ್ರೊಸೆಸರ್

64 ಬಿಟ್ ಸ್ಯಾಮ್‌ಸಂಗ್ ಎಕ್ಸೋನಸ್ ಓಕ್ಟಾ ಕೋರ್ ಪ್ರೊಸೆಸರ್ ಇದಾಗಿದೆ. 2ಜಿಬಿ RAM ಅನ್ನು ಡಿವೈಸ್ ಹೊಂದಿದ್ದು 32ಜಿಬಿ ಸಂಗ್ರಹಣಾ ಸಾಮರ್ಥ್ಯ ಇದರಲ್ಲಿದೆ. ಫೋನ್ ಡ್ಯುಯಲ್ ಸಿಮ್ ವಿಶೇಷತೆಯೊಂದಿಗೆ ಬಂದಿದೆ.

ಲಾಲಿಪಪ್

ಲಾಲಿಪಪ್

ಆಂಡ್ರಾಯ್ಡ್ ಲಾಲಿಪಪ್ 5.1 ಇದರಲ್ಲಿದ್ದು ಸ್ಯಾಮ್‌ಸಂಗ್ ಟಚ್‌ವಿಜ್ ಯುಐ ಇದರಲ್ಲಿದೆ. ಇನ್ನು ಡಿವೈಸ್‌ನಲ್ಲಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಇದ್ದು ಫೋನ್‌ನ ಹೋಮ್ ಬಟನ್‌ನೊಂದಿಗೆ ಇಂಟಿಗ್ರೇಟ್ ಆಗಿದೆ.

ಕ್ಯಾಮೆರಾ

ಕ್ಯಾಮೆರಾ

ಇನ್ನು ಡಿವೈಸ್ ರಿಯರ್ ಕ್ಯಾಮೆರಾ 16 ಎಮ್‌ಪಿಯಾಗಿದ್ದು ಮುಂಭಾಗ ಕ್ಯಾಮೆರಾ 5 ಎಮ್‌ಪಿಯಾಗಿದೆ.

ಬ್ಯಾಟರಿ

ಬ್ಯಾಟರಿ

ಫೋನ್ ಬ್ಯಾಟರಿ 3050mAh ಆಗಿದ್ದು ವೈಫೈಗೆ ಬೆಂಬಲವನ್ನು ಒದಗಿಸುತ್ತಿದೆ.

Best Mobiles in India

English summary
Samsung's Galaxy A-series targets users who want metal-clad phones with premium build quality but don't want to spend a lot of money on flagships. The company's latest offering in the range is Galaxy A8.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X