ಗೆಲಾಕ್ಸಿ ಎಸ್‌5 ಫಿಂಗರ್‌ ಪ್ರಿಂಟ್ ಸ್ಕ್ಯಾನರ್‍ ಹ್ಯಾಕ್‌

By Ashwath
|

ಕಂಪೆನಿಗಳು ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರೆದರೂ ಹ್ಯಾಕರ್‌ಗಳು ಕಂಪೆನಿಗಳ ಆ ತಂತ್ರಜ್ಞಾನವನ್ನೇ ಬುಡಮೇಲು ಮಾಡುವುದು ಈಗ ಸಾಮಾನ್ಯವಾಗಿಬಿಟ್ಟಿದೆ. ಇದಕ್ಕೆ ಹೊಸ ಸೇರ್ಪಡೆಯಾಗಿ ಸ್ಯಾಮ್‌ಸಂಗ್‌ನ ಈ ವರ್ಷದ ದುಬಾರಿ ಬೆಲೆಯ ಗೆಲಾಕ್ಸಿ ಎಸ್‌‌5ನಲ್ಲಿರುವ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ತಂತ್ರಜ್ಞಾನವನ್ನು ಹ್ಯಾಕರ್‌‌‌‌‌ಗಳು ಹ್ಯಾಕ್‌ ಮಾಡಿದ್ದಾರೆ.

ಜರ್ಮ‌ನಿಯ ಸೆಕ್ಯುರಿಟಿ ರಿಸರ್ಚ್‌ ಲ್ಯಾಬ್‌ನ ಸಂಶೋಧಕರು ಗೆಲಾಕ್ಸಿ ಎಸ್‌‌5ಯನ್ನು ಹ್ಯಾಕ್‌ ಮಾಡಿದ್ದಾರೆ.ಆಪಲ್‌ ಮತ್ತು ಸ್ಯಾಮ್‌ಸಂಗ್‌ ಬೇರೆ ಬೇರೆ ರೀತಿಯ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ತಂತ್ರಜ್ಞಾನವನ್ನು ಹೊಂದಿದ್ದರೂ ಐಫೋನ್‌ 5 ಎಸ್‌ನಂತೆ ಗೆಲಾಕ್ಸಿ ಎಸ್‌5ಯನ್ನು ಹ್ಯಾಕ್‌ ಮಾಡಬಹುದು ಎಂದು ಹೇಳಿದ್ದಾರೆ.

ಐಫೋನ್‌ 5 ಎಸ್‌‌ಗೆ ಹೋಮ್‌ ಬಟನ್‌ನಲ್ಲಿ ಟಚ್‌ ಐಡಿಯನ್ನು ಆಪಲ್‌ ನೀಡಿದ್ದರೆ, ಸ್ಯಾಮ್‌ಸಂಗ್‌ ತನ್ನ ಸ್ಕ್ರೀನ್‌ಲ್ಲೇ ಫಿಂಗರ್‌ ಪ್ರಿಂಟ್‌ ಸೆನ್ಸರ್‌ನ್ನು ನೀಡಿತ್ತು.

ಐಫೋನ್‌ 5 ಎಸ್‌ ಬಿಡುಗಡೆಯ ಸಂದರ್ಭದಲ್ಲಿ ಆಪಲ್‌ ತನ್ನ ಫಿಂಗರ್‌ ಪ್ರಿಂಟ್‌ ತಂತ್ರಜ್ಞಾನವನ್ನು ಯಾರಿಂದಲೂ ಹ್ಯಾಕ್‌ ಮಾಡಲು ಸಾಧ್ಯವಿಲ್ಲ ಎಂದು ಘೋಷಿಸಿಕೊಂಡಿತ್ತು. ಆಪಲ್‌ ಈ ರೀತಿ ಘಂಟಾಘೋಷವಾಗಿ ಹೇಳಿದ್ದೆ ತಡ, ಹ್ಯಾಕಿಂಗ್‌ ಸಂಘಟನೆಗಳು ಸಕ್ರಿಯಗೊಂಡು ಐಫೋನ್‌ 5ಎಸ್‌ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಹ್ಯಾಕಿಂಗ್‌ ಸ್ಪರ್ಧೆಯನ್ನು ಆರಂಭಿಸಿತ್ತು. ಜೊತೆಗೆ ವಿಜೇತರಾದವರಿಗೆ ಬಾರಿ ಮೊತ್ತದ ಬಹುಮಾನವನ್ನು ನೀಡಲಾಗುವುದು ಎಂದು ಹೇಳಿತ್ತು.

ಆಪಲ್‌ ಐಫೋನ್‌ 5 ಎಸ್‌ನ್ನು ಬಿಡುಗಡೆ ಮಾಡಿದ ಒಂದೇ ವಾರದೊಳಗೆ ಹ್ಯಾಕರ್‌ಗಳು ಫಿಂಗರ್‌ ಪ್ರಿಂಟ್‌ ತಂತ್ರಜ್ಞಾನವನ್ನು ಹ್ಯಾಕ್‌ ಮಾಡಿ ಆಪಲ್‌‌‌ಗೆ ಬಿಸಿ ಮುಟ್ಟಿಸಿದ್ದರು. ಐಫೋನ್‌ 5 ಎಸ್‌ ಹ್ಯಾಕ್‌ ಆದಂತೆ ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌5 ಹ್ಯಾಕ್‌ ಆಗಲು ಸಾಧ್ಯವಿಲ್ಲ.ಫಿಂಗರ್‌ ಪ್ರಿಂಟ್‌ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಂಶೋಧನೆ ನಡೆಸಿದ ಬಳಿಕ ಮತ್ತಷ್ಟು ಸುರಕ್ಷತೆಯೊಂದಿಗೆ ಫಿಂಗರ್‌‌‌ ಪ್ರಿಂಟ್‌ ಸ್ಕ್ಯಾನರ್‌ನ್ನು ಎಸ್‌5 ನೀಡಿದ್ದೇವೆ ಎಂದು ಟೆಕ್‌ ಪಂಡಿತರಿಗೆ ಸ್ಯಾಮ್‌ಸಂಗ್‌ ಭರವಸೆ ನೀಡಿತ್ತು.ಆದರೆ ಸ್ಯಾಮ್‌ಸಂಗ್‌ನ ಭರವಸೆ ಹುಸಿಯಾಗಿದ್ದು,ಮಾರುಕಟ್ಟೆಗೆ ಬಿಡುಗಡೆಯಾದ ಒಂದೇ ವಾರದೊಳಗೆ ಹ್ಯಾಕರ್‌‌‌ಗಳು ಹ್ಯಾಕ್‌ ಮಾಡಿದ್ದಾರೆ. ಈ ಮೂಲಕ ಹ್ಯಾಕರ್‌ಗಳ ಮುಂದೆ ಯಾವ ತಂತ್ರಜ್ಞಾನ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬಿತಾಗಿದೆ.

ಸ್ಯಾಮ್‌ಸಂಗ್‌ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ನ್ನು ಹ್ಯಾಕ್‌ ಮಾಡಿದ್ದರಿಂದ ಪೇಪಾಲ್‌ ಸಂಕಷ್ಟಕ್ಕೆ ಕಾರಣವಾಗಿದೆ. ಪೇಪಾಲ್‌ ಗೆಲಾಕ್ಸಿ ಎಸ್‌ 5ಗೆ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ತಂತ್ರಜ್ಞಾನಕ್ಕೆ ಬೆಂಬಲ ನೀಡುವ ಪಾವತಿ ಅಪ್ಲಿಕೇಶನ್ ಬಿಡುಗಡೆ ಮಾಡಿತ್ತು.

ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ಸ್ಮಾರ್ಟ್‌ಫೋನ್‌ನ್ನು ವಿಶ್ವಕ್ಕೆ ಮೊದಲು ಪರಿಚಯಿಸಿದ ಕಂಪೆನಿ ಮೋಟರೋಲಾ. 2011ರಲ್ಲಿ ಬಿಡುಗಡೆ ಮಾಡಿದ್ದ ಆಟ್ರಿಕ್ಸ್‌ (Atrix) ಹೆಸರಿನ ಸ್ಮಾರ್ಟ್‌‌‌ಫೋನಿಗೆ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ನ್ನು ನೀಡಿತ್ತು.ಸ್ಯಾಮ್‌ಸಂಗ್‌,ಆಪಲ್‌ ಸ್ಮಾರ್ಟ್‌ಫೋನ್‌ಗಳಲ್ಲಿ ಮುಂದುಗಡೆ ಫಿಂಗರ್‌ ಪ್ರಿಂಟ್‌ ಸ್ಕ್ಯಾನರ್‌ ತಂತ್ರಜ್ಞಾನವಿದ್ದರೆ,ಮೋಟರೋಲಾದಲ್ಲಿ ಹಿಂದುಗಡೆ ಇತ್ತು.

ವಿಶ್ವದಲ್ಲಿ ಆಪಲ್‌,ಸ್ಯಾಮ್‌ಸಂಗ್‌,ಎಚ್‌ಟಿಸಿ ಕಂಪೆನಿಗಳು ಫಿಂಗರ್‌‌‌ ಪ್ರಿಂಟ್‌ ಸ್ಕ್ಯಾನರ್‌‌ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದ್ದು ಕಂಪೆನಿಗಳ ಸ್ಮಾರ್ಟ್‌ಫೋನ್‌‌ಗಳು ಪ್ರಸ್ತುತ ಭಾರತದ ಮಾರುಕಟ್ಟೆಯಲ್ಲಿ ಲಭ್ಯವಿದೆ.

ನಿರಂತರ ಸುದ್ದಿಗಾಗಿ ಕನ್ನಡ ಗಿಝ್‌‌ಬಾಟ್‌‌ನ್ನು ಫೇಸ್‌ಬುಕ್‌ನಲ್ಲಿ Like ಮಾಡಿ, ಟ್ವೀಟರ್‌ನಲ್ಲಿ Follow ಮಾಡಿ‌.

ಗೆಲಾಕ್ಸಿ ಎಸ್‌5 ಫಿಂಗರ್‌ ಪ್ರಿಂಟ್ ಸ್ಕ್ಯಾನರ್‍ ಹ್ಯಾಕ್‌

ವಿಡಿಯೋ ವೀಕ್ಷಿಸಿ

ಗೆಲಾಕ್ಸಿ ಎಸ್‌5 ಫಿಂಗರ್‌ ಪ್ರಿಂಟ್ ಸ್ಕ್ಯಾನರ್‍ ಹ್ಯಾಕ್‌

ಗೆಲಾಕ್ಸಿ ಎಸ್‌5 ಫಿಂಗರ್‌ ಪ್ರಿಂಟ್ ಸ್ಕ್ಯಾನರ್‍ ಹ್ಯಾಕ್‌

ಐಫೋನ್‌ 5ಎಸ್‌

ಗೆಲಾಕ್ಸಿ ಎಸ್‌5 ಫಿಂಗರ್‌ ಪ್ರಿಂಟ್ ಸ್ಕ್ಯಾನರ್‍ ಹ್ಯಾಕ್‌

ಗೆಲಾಕ್ಸಿ ಎಸ್‌5 ಫಿಂಗರ್‌ ಪ್ರಿಂಟ್ ಸ್ಕ್ಯಾನರ್‍ ಹ್ಯಾಕ್‌


ಒನ್‌ ಮ್ಯಾಕ್ಸ್‌

ಗೆಲಾಕ್ಸಿ ಎಸ್‌5 ಫಿಂಗರ್‌ ಪ್ರಿಂಟ್ ಸ್ಕ್ಯಾನರ್‍ ಹ್ಯಾಕ್‌

ಗೆಲಾಕ್ಸಿ ಎಸ್‌5 ಫಿಂಗರ್‌ ಪ್ರಿಂಟ್ ಸ್ಕ್ಯಾನರ್‍ ಹ್ಯಾಕ್‌


ಆಟ್ರಿಕ್ಸ್‌ (Atrix)

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X