ಅತ್ಯಂತ ಸ್ಲಿಮ್ ಫೋನ್‌ ಖ್ಯಾತಿಗೆ ಜಿಯೋನಿ ಇಲೈಫ್ S5.1

By Shwetha
|

ಚೀನಾದಿಂದ ನೇರವಾಗಿ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬಂದು ವ್ಯವಹಾರದಲ್ಲಿ ಉನ್ನತಿಯನ್ನು ಕಾಣುತ್ತಿರುವ ಹೆಸರಾಗಿದೆ ಜಿಯೋನಿ. ಈಗಾಗಲೇ ಕಂಪೆನಿ ತನ್ನ ಹೆಚ್ಚುವರಿ ಸ್ಲಿಮ್ ಫೋನ್ ಅನ್ನು ಲಾಂಚ್ ಮಾಡಿದ್ದು ನಿಜಕ್ಕೂ ಫೋನ್ ಮಾರುಕಟ್ಟೆಯಲ್ಲಿ ಇದೊಂದು ದಾಖಲೆ ಎಂದೆನಿಸಿದೆ. ಕಂಪೆನಿಯು ತನ್ನ ಈ ಸಾಧನೆಗೆ ಪ್ರಶಂಸೆಯನ್ನು ಗಳಿಸಿಕೊಳ್ಳುತ್ತಿದೆ.

ಇನ್ನು ಜಿಯೋನಿಯ ಪ್ರಕಾರ, ಹೊಸ ಇಲೈಫ್ S5.1, 5.1mm ದೇಹ ವಿನ್ಯಾಸದೊಂದಿಗೆ ಬಂದಿದ್ದು, ಇದು ಜಗತ್ತಿನ ಸ್ಲಿಮ್ ಫೋನ್ ಎಂಬ ಹೆಗ್ಗಳಿಕೆಯೊಂದಿಗೆ ವಿಶ್ವದ ಗಿನ್ನಿಸ್ ಬುಕ್‌ಗೆ ದಾಖಲಾಗಿದೆ. ಇದು ನಿಜಕ್ಕೂ ದಾಖಲೆ ಎಂಬುದರಲ್ಲಿ ಸಂದೇಹವೇ ಇಲ್ಲ.

ಜಿಯೋನಿ ಇಲೈಫ್ S5.1 ಅನ್ನು ಚೀನಾದಲ್ಲಿ ರೂ 20,000 ದರವೆಂದು ಎಂದು ಅಂದಾಜುಪಡಿಸಲಾಗಿದೆ. ಇದು ಆಂಡ್ರಾಯ್ಡ್ 4.3 ಚಾಲನೆಯನ್ನು ಪಡೆದುಕೊಂಡಿದ್ದು 2.0 UIಬೋರ್ಡ್‌ನಲ್ಲಿದೆ. ಭಾರತದಲ್ಲಿ ನವೆಂಬರ್ ತಿಂಗಳಿಗಿಂತ ಮೊದಲೇ ಈ ಸೆಟ್ ಬಿಡುಗಡೆಯಾಗುವ ಸಾಧ್ಯತೆ ಇದೆ. ಫೋನ್‌ನ ಕುರಿತಾದ ಟಾಪ್ ಐದು ವಿಶೇಷತೆಗಳನ್ನು ಇಂದಿನ ಲೇಖನದಲ್ಲಿ ನಾವು ಪಟ್ಟಿ ಮಾಡುತ್ತಿದ್ದೇವೆ.

ಇದನ್ನೂ ಓದಿ: ಸೋನಿಯ ಹೊಸ ಎಕ್ಸ್‌ಪೀರಿಯಾ Z3 ಲಾಂಚ್

#1

#1

ಇಲೈಫ್ S5.1, 5.1mm ಶೆಲ್ ಕಂಪ್ರೈಸ್‌ನೊಂದಿಗೆ ಬಂದಿದ್ದು ಗ್ಲಾಸ್ ಮತ್ತು ಮೆಟಲ್ ಎರಡರ ರಚನೆ ಇದರಲ್ಲಿದೆ. ಹ್ಯಾಂಡ್‌ಸೆಟ್ 4.8 ಇಂಚಿನ ಸೂಪರ್ AMOLED ಡಿಸ್‌ಪ್ಲೇಯೊಂದಿಗೆ ರೆಸಲ್ಯೂಶನ್ 720x1280 ಪಿಕ್ಸೆಲ್‌ಗಳೊಂದಿಗೆ ಬಂದಿದೆ.

#2

#2

ಈ ಹ್ಯಾಂಡ್‌ಸೆಟ್ 1.2GHz ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್ ಮತ್ತು 1 ಜಿಬಿ RAM ಅನ್ನು ಪಡೆದುಕೊಂಡಿದೆ.

#3

#3

ಜಿಯೋನಿಯ ಹೊಸ ಸ್ಮಾರ್ಟ್‌ಫೋನ್ 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾದೊಂದಿಗೆ ಬಂದಿದ್ದು LED ಫ್ಲ್ಯಾಶ್ ಇದರಲ್ಲಿದೆ. 5 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ ಇದರಲ್ಲಿದ್ದು ಇದು LTE ಸಂಪರ್ಕವನ್ನು ಒದಗಿಸುತ್ತಿದೆ.

#4

#4

ಜಿಯೋನಿಯ ಇಲೈಫ್ S5.1 ಇದು 2100mAh ಬ್ಯಾಟರಿಯನ್ನು ಒದಗಿಸುತ್ತಿದ್ದು ಇದು ಕಪ್ಪು, ಬಿಳಿ, ಗುಲಾಬಿ, ಮತ್ತು ಪುದಿನಾ ಹಸಿರು ಬಣ್ಣದಲ್ಲಿ ಬಂದಿದೆ. ಇದು 16 ಜಿಬಿ ವಿಸ್ತರಿಸಲಾಗದೇ ಇರುವ ಬಿಲ್ಟ್ ಇನ್ ಸಂಗ್ರಹಣೆಯನ್ನು ಇದು ಪಡೆದುಕೊಂಡಿದೆ.

#5

#5

ಜಿಯೋನಿ ಇಲೈಫ್ S5.1 ಅನ್ನು ಈ ಹಿಂದೆಯೇ ಚೀನಾದಲ್ಲಿ ಬಿಡುಗಡೆ ಮಾಡಲಾಗಿದ್ದು ಇದರ ಬೆಲೆ ರೂ 20,000 ಎಂದು ಅಂದಾಜಿಸಲಾಗಿದೆ.

Best Mobiles in India

English summary
This article tells about Gionee Elife S5.1 Creates History; Becomes the Slimmest handset Ever.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X