ಗೂಗಲ್‌ ನೆಕ್ಸಸ್‌ 5 ಸ್ಮಾರ್ಟ್‌ಫೋನ್‌ ಬಿಡುಗಡೆ

By Ashwath
|

ಗೂಗಲ್‌ನ ನೆಕ್ಸಸ್‌ 5 ಸ್ಮಾರ್ಟ್‌ಫೋನ್‌ ಬಿಡುಗಡೆಯಾಗಿದೆ.ಹೊಸ ಸ್ಮಾರ್ಟ್‌ಫೋನ್‌ ಫುಲ್‌ ಎಚ್‌ಡಿ ಸ್ಕ್ರೀನ್‌ ಮತ್ತು ಹೊಸ ಆಂಡ್ರಾಯ್ಡ್‌ ಕಿಟ್‌ಕ್ಯಾಟ್‌ ಓಎಸ್‌ ಹೊಂದಿದ್ದು ಎರಡು ಆಂತರಿಕ ಮೆಮೊರಿಯಲ್ಲಿ ಬಿಡುಗಡೆಯಾಗಿದೆ.16GB ಆಂತರಿಕ ಮೆಮೊರಿಯ ಸ್ಮಾರ್ಟ್‌ಫೋನಿಗೆ 28,999 ರೂಪಾಯಿ, 32 GB ಆಂತರಿಕ ಮೆಮೊರಿ ಹೊಂದಿರುವ ಸ್ಮಾರ್ಟ್‌ಫೋನಿಗೆ 32,999 ರೂಪಾಯಿ ನಿಗದಿಯಾಗಿದ್ದು ಸದ್ಯದಲ್ಲೇ ಭಾರತದ ಮಾರುಕಟ್ಟೆಗೆ ಬಿಡುಗಡೆಯಾಗುವ ಸಾಧ್ಯತೆಯಿದೆ.

ಹೊಸ ಸ್ಮಾರ್ಟ್‌ಫೋನ್‌ ಆರಂಭದಲ್ಲಿ ಅಮೆರಿಕ,ಕೆನಡಾ,ಫ್ರಾನ್ಸ್‌,ಜರ್ಮನಿ,ಇಂಗ್ಲೆಂಡ್‌‌,ಇಟಲಿ, ಸ್ಪೈನ್‌,ಆಸ್ಟ್ರೇಲಿಯಾ,ಕೋರಿಯಾ ಮತ್ತು ಜಪಾನ್‌ನ ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ.

ಎಲ್‌ಜಿ ನೆಕ್ಸಸ್‌ 5
ವಿಶೇಷತೆ:
ಸಿಂಗಲ್‌ ಸಿಮ್‌(ಮೈಕ್ರೋ ಸಿಮ್‌)
4.95 ಇಂಚಿನ ಫುಲ್‌ಎಚ್‌ಡಿ ಐಪಿಎಸ್‌ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌(1920x1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.4 ಕಿಟ್‌ಕ್ಯಾಟ್‌ ಓಎಸ್
2.3 GHz ಕ್ವಾಡ್‌ ಕೋರ್‌ ಪ್ರೊಸೆಸರ್‌
2 GB ರ್‍ಯಾಮ್‌
16/32 GB ಆಂತರಿಕ ಮೆಮೊರಿ
8 ಎಂಪಿ ಮುಂದುಗಡೆ ಕ್ಯಾಮೆರಾ
1.3 ಎಂಪಿ ಮುಂದುಗಡೆ ಕ್ಯಾಮೆರಾ
ಮೆಮೊರಿ ಕಾರ್ಡ್‌ ಸೌಲಭ್ಯವಿಲ್ಲ.
3ಜಿ,ವೈಫೈ,ಬ್ಲೂಟೂತ್‌,ಜಿಪಿಎಸ್‌,ಎ-ಜಿಪಿಎಸ್‌,ಎನ್‌ಎಫ್‌ಸಿ
2300 mAh ಬ್ಯಾಟರಿ

ಗೂಗಲ್‌ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ಇಲ್ಲಿ ಹೊಸ ಸ್ಮಾರ್ಟ್‌ಫೋನ್‌ ಮತ್ತು ಈ ಹಿಂದೆ ಬಿಡುಗಡೆ ಮಾಡಿರುವ ನೆಕ್ಸಸ್‌ 4 ಸ್ಮಾರ್ಟ್‌ಫೋನ್‌ ಯಾವ ವಿಶೇಷತೆ ಹೊಂದಿತ್ತು ಎನ್ನುವ ವಿವರಣೆ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ಓದಿಕೊಂಡು ಹೋಗಿ.]

ಗೂಗಲ್‌ ನೆಕ್ಸಸ್‌ 5 ಸ್ಮಾರ್ಟ್‌ಫೋನ್‌ ಬಿಡುಗಡೆ

ಗೂಗಲ್‌ ನೆಕ್ಸಸ್‌ 5 ಸ್ಮಾರ್ಟ್‌ಫೋನ್‌ ಬಿಡುಗಡೆ

ಕಾರ್ನಿಂಗ್‌ ಗೊರಿಲ್ಲ ಗ್ಲಾಸ್‌,1920x1080 ಪಿಕ್ಸೆಲ್‌ ರೆಸೂಲೂಶನ್‌, 445 ಪಿಪಿಐ ಹೊಂದಿರುವ 4.95 ಇಂಚಿನ ಫುಲ್‌ಎಚ್‌ಡಿ ಐಪಿಎಸ್‌ ಕೆಪಾಸಿಟಿವ್‌ ಟಚ್‌ಸ್ಕ್ರೀನ್‌ ಸ್ಮಾರ್ಟ್‌ಫೋನ್‌ ಹೊಂದಿದೆ.

ನೆಕ್ಸಸ್‌4 ಸ್ಮಾರ್ಟ್‌ಫೋನ್ 4.7 ಇಂಚಿನ ಸ್ಕ್ರೀನ್,1280 x 768 ಪಿಕ್ಸೆಲ್‌ ರೆಸೂಲೂಶನ್‌,318 ಪಿಪಿಐ ಹೊಂದಿತ್ತು.

ಗೂಗಲ್‌ ನೆಕ್ಸಸ್‌ 5 ಸ್ಮಾರ್ಟ್‌ಫೋನ್‌ ಬಿಡುಗಡೆ

ಗೂಗಲ್‌ ನೆಕ್ಸಸ್‌ 5 ಸ್ಮಾರ್ಟ್‌ಫೋನ್‌ ಬಿಡುಗಡೆ

69.17 x 137.84 x 8.59 ಮಿ.ಮೀಟರ್‌ ಗಾತ್ರ,130 ಗ್ರಾಂ ತೂಕವನ್ನು ಸ್ಮಾರ್ಟ್‌ಫೋನ್‌ ಹೊಂದಿದೆ.

ನೆಕ್ಸಸ್‌4 ಸ್ಮಾರ್ಟ್‌ಫೋನ್ 133.9 x 68.7 x 9.1 ಮಿ.ಮೀಟರ್‌ ಗಾತ್ರ,139 ಗ್ರಾಂ ತೂಕವನ್ನು ಹೊಂದಿತ್ತು.

ಗೂಗಲ್‌ ನೆಕ್ಸಸ್‌ 5 ಸ್ಮಾರ್ಟ್‌ಫೋನ್‌ ಬಿಡುಗಡೆ

ಗೂಗಲ್‌ ನೆಕ್ಸಸ್‌ 5 ಸ್ಮಾರ್ಟ್‌ಫೋನ್‌ ಬಿಡುಗಡೆ

2300 mAh ಬ್ಯಾಟರಿಯನ್ನು ಹೊಂದಿದ್ದು ,17 ಗಂಟೆ ಟಾಕ್‌ ಟೈಂ ,300 ಗಂಟೆಸ್ಟ್ಯಾಂಡ್‌ ಬೈ ಟೈಂ, 8.5 ಗಂಟೆ ಕಾಲ ವೈಫೈ ಇಂಟರನೆಟ್‌ ಮೂಲಕ ಕೆಲಸ ಮಾಡಬಹುದಾಗಿದೆ.

ನೆಕ್ಸಸ್‌4 ಸ್ಮಾರ್ಟ್‌ಫೋನ್ 2100 mAh ಬ್ಯಾಟರಿಯೊಂದಿಗೆ ಬಿಡುಗಡೆಯಾಗಿತ್ತು.

ಗೂಗಲ್‌ ನೆಕ್ಸಸ್‌ 5 ಸ್ಮಾರ್ಟ್‌ಫೋನ್‌ ಬಿಡುಗಡೆ

ಗೂಗಲ್‌ ನೆಕ್ಸಸ್‌ 5 ಸ್ಮಾರ್ಟ್‌ಫೋನ್‌ ಬಿಡುಗಡೆ

2.3 GHz ಕ್ವಾಡ್‌ ಕೋರ್‌ ಕ್ರೈಟ್‌ 400 ಪ್ರೊಸೆಸರ್‌, Adreno 330 ಗ್ರಾಫಿಕ್‌‌ ಪ್ರೊಸೆಸರ್‌ ನೆಕ್ಸಸ್‌ 5 ಹೊಂದಿದೆ.

1.5 GHz ಕ್ವಾಡ್‌ ಕೋರ್‌ ಕ್ರೈಟ್‌ ಪ್ರೊಸೆಸರ್‌,Adreno 330 ಗ್ರಾಫಿಕ್‌‌ ಪ್ರೊಸೆಸರ್‌ ನೆಕ್ಸಸ್‌4 ಸ್ಮಾರ್ಟ್‌‌ಫೋನ್‌ ಒಳಗೊಂಡಿತ್ತು

ಗೂಗಲ್‌ ನೆಕ್ಸಸ್‌ 5 ಸ್ಮಾರ್ಟ್‌ಫೋನ್‌ ಬಿಡುಗಡೆ

ಗೂಗಲ್‌ ನೆಕ್ಸಸ್‌ 5 ಸ್ಮಾರ್ಟ್‌ಫೋನ್‌ ಬಿಡುಗಡೆ

ನೆಕ್ಸಸ್‌4 ಸ್ಮಾರ್ಟ್‌‌ಫೋನ್‌ನಲ್ಲಿ ಇದ್ದಂತೆ ಹಿಂದುಗಡೆ ಎಲ್‌ಇಡಿ ಫ್ಲ್ಯಾಶ್‌ ಹೊಂದಿರುವ 8 ಎಂಪಿ ಕ್ಯಾಮೆರಾ ಹೊಂದಿದ್ದು,3264 x 2448 ಪಿಕ್ಸೆಲ್‌ನಲ್ಲಿ ಚಿತ್ರಗಳನ್ನು ತೆಗೆಯಬಹುದಾಗಿದೆ. ಮುಂದುಗಡೆ 1.3 ಎಂಪಿ ಕ್ಯಾಮೆರಾವನ್ನು ಹೊಂದಿದೆ.

ಗೂಗಲ್‌ ನೆಕ್ಸಸ್‌ 5 ಸ್ಮಾರ್ಟ್‌ಫೋನ್‌ ಬಿಡುಗಡೆ

ಗೂಗಲ್‌ ನೆಕ್ಸಸ್‌ 5 ಸ್ಮಾರ್ಟ್‌ಫೋನ್‌ ಬಿಡುಗಡೆ

ಎಕ್ಸಲರೋಮೀಟರ್‌,ಕಂಪಾಸ್‌,ಲೈಟ್‌ಸೆನ್ಸರ್‌,ಪ್ರಾಕ್ಸಿಮಿಟಿ,ಗೈರೋಸ್ಕೋಪ್‌,ಪ್ರೆಶರ್‌,ಹಾಲ್‌‌ ಎಫೆಕ್ಟ್‌ ಸೆನ್ಸರ್‌ಗಳನ್ನು ಈ ಸ್ಮಾರ್ಟ್‌ಫೋನ್‌ ಒಳಗೊಂಡಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X