ಗೂಗಲ್ ನೆಕ್ಸಸ್ 8ನಲ್ಲಿರುವ ರೂಮರ್‌ಗಳು

By Shwetha
|

ನೆಕ್ಸಸ್ 7 ಈಗ ಹಳೆಯದಾಗಿದೆ ಮತ್ತು ಕಳೆದ ತಿಂಗಳ ಐ/ಒ 2014 ರಲ್ಲಿ ಮೂರನೇ ತಲೆಮಾರಿನ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಬಹುದೆಂದು ಹಲವಾರು ಜನರು ನಿರೀಕ್ಷಿಸಿದ್ದರು. ಆದರೆ ಇದಾವುದೂ ಸಂಭವಿಸಲಿಲ್ಲ ಆದರೆ ವದಂತಿಯನ್ನು ಹಬ್ಬಿಸುವವರು ನೆಕ್ಸಸ್ ಪ್ರೊಗ್ರಾಮ್ ಕೆಳಗೆ ಬರುವ ಮುಂಬರುವ ಟ್ಯಾಬ್ಲೆಟ್ ಬಗ್ಗೆ ಗುಲ್ಲನ್ನು ಎಬ್ಬಿಸುತ್ತಿದ್ದಾರೆ.

ಇದು 7 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಬಹುದೆಂಬುದು ವದಂತಿಯಾಗಿದ್ದರೂ ಗೂಗಲ್ 8 ಇಂಚಿನ ಪವರ್‌ಫುಲ್ ಪ್ರೊಸೆಸರ್ ಉಳ್ಳ ನೆಕ್ಸಸ್ ಟ್ಯಾಬ್ಲೆಟ್ ಅನ್ನು ಪ್ರಸ್ತುತಪಡಿಸಬಹುದೆಂಬುದು ಒಂದು ನಿರೀಕ್ಷೆಯಾಗಿದೆ.

ಭಾರತೀಯ ವೆಬ್‌ಸೈಟ್ ಜುಂಬಾ ಇತ್ತೀಚಿನ ಅತ್ಯಾಧುನಿಕ ನೆಕ್ಸಸ್ 8 ಟ್ಯಾಬ್ಲೆಟ್ ವದಂತಿಯಲ್ಲಿರುವಂತೆ ಬಿಡುಗಡೆಯಾಗಿದೆ ಎಂಬ ಸುದ್ದಿಯೊಂದನ್ನು ಬಿತ್ತರಿಸಿ ಆಶ್ಚರ್ಯವನ್ನುಂಟು ಮಾಡಿದೆ. ಇತ್ತೀಚಿನ ಜಿಎಸ್‌ಎಮ್ ಅರೇನಾ ವರದಿಯಂತೆ, ಟ್ಯಾಬ್ಲೆಟ್‌ನ ಮಾದರಿಯನ್ನು ಪರೀಕ್ಷೆಗಾಗಿ ಭಾರತಕ್ಕೆ ಕಳುಹಿಸಲಾಗಿದೆ ಎಂದಾಗಿದೆ.

ಗೂಗಲ್ ನೆಕ್ಸಸ್ 8 ಕುರಿತ ಲೀಕ್ ಔಟ್ ಮಾಹಿತಿ

ನೆಕ್ಸಸ್ 8 ನ ಕೆಲವೊಂದು ಆವೃತ್ತಿಗಳನ್ನು ಭಾರತಕ್ಕೆ ರೂ 16,484 ದರದಲ್ಲಿ ಶಿಪ್ ಮಾಡಲಾಗಿದ್ದು, ಯಾವ ತಯಾರಿಕಾ ಕಂಪೆನಿ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದೆ ಎಂಬ ಮಾಹಿತಿಯನ್ನು ನೀಡಿಲ್ಲ. ಹೆಚ್ಚುವರಿಯಾಗಿ, ಜಿಎಸ್‌ಎಮ್ ಅರೇನಾ ಹೇಳುವಂತೆ, ಯುಎಸ್‌ನಿಂದ ಪ್ರೊಟೋಟೈಪ್ ಟ್ಯಾಬ್ಲೆಟ್ ಬರುವವರೆಗೆ, ಕೆಲವೊಂದು ತಯಾರಿಕೆಯ ಬದಲಿಗೆ, ಗೂಗಲ್‌ನಿಂದ ಸ್ಲೇಟ್ ಬರಲಿದೆ.

ಈ ಹಿಂದೆ ಆಸಸ್‌ನ ಬದಲಿಗೆ ಎಚ್‌ಟಿಸಿ ನೆಕ್ಸಸ್ 8 ಅನ್ನು ನಿರ್ಮಿಸಬಹುದೆಂಬ ವದಂತಿ ಹಬ್ಬಿತ್ತು. ಇಲ್ಲಿಯವರೆಗಿನ ವದಂತಿಗಳನ್ನು ಅಂದಾಜಿಸುತ್ತಾ, ಗೂಗಲ್‌ನಿಂದ ಬರುವ ಮುಂದಿನ ಟ್ಯಾಬ್ಲೆಟ್ ಎಚ್‌ಟಿಸಿ ತಯಾರುಪಡಿಸುತ್ತಿದ್ದು, ಇದನ್ನು ನೆಕ್ಸಸ್ 8.9 ಗೆ ಡಬ್ ಮಾಡಲಾಗುತ್ತದೆ. ವರದಿಯ ಪ್ರಕಾರ ಈ ಟ್ಯಾಬ್ಲೆಟ್ 8.9-ಇಂಚಿನ ಡಿಸ್‌ಪ್ಲೇ 2560 x 1600- ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ಹೊಂದಿದ್ದು ಇದರಲ್ಲಿ 64-ಬಿಟ್ NVIDIA Tegra K1 ಪ್ರೊಸೆಸರ್ ಇದೆ. RAM ಸಾಮರ್ಥ್ಯ 2ಜಿಬಿಯಾಗಿದ್ದು ಇದರ ಮೆಮೊರಿ ಶಕ್ತಿ 32ಜಿಬಿಯಾಗಿದೆ. ಡಿವೈಸ್ 8ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾವನ್ನು ಹೊಂದಿದ್ದು, 3ಮೆಗಾಪಿಕ್ಸೆಲ್‌ಗಳ ಫ್ರಂಟ್ ಫೇಸಿಂಗ್ ಶೂಟರ್ ಅನ್ನು ಹೊಂದಿದೆ. ಒಳಗೆ ಅನ್ವಯಿಸಿರುವ 5ಜಿಬಿ RAM ಅನ್ನು ಡಿವೈಸ್ ಪ್ರಸ್ತುತಪಡಿಸಲಿದೆ ಎಂದು ಸುದ್ದಿ ತಿಳಿಸಿದೆ.

ಇಲ್ಲಿಯವರೆಗೆ ಡಿವೈಸ್ ಕುರಿತ ಯಾವುದೇ ಅಧಿಕೃತ ಮಾಹಿತಿ ದೊರಕಿಲ್ಲ. ಮೇಲೆ ತಿಳಿಸಿದ ಮಾಹಿತಿಗಳು ವದಂತಿಗಳನ್ನು ಆಧರಿಸಿದ್ದು ಗೂಗಲ್ ತನ್ನ ಟ್ಯಾಬ್ಲೆಟ್ ಅನ್ನು ಮಾರುಕಟ್ಟೆಗೆ ಅಧಿಕೃತವಾಗಿ ಘೋಷಿಸುವವರೆಗೆ ಯಾವುದೇ ವಿಚಾರವನ್ನು ನಂಬುವುದು ಅಸಾಧ್ಯವಾಗಿದೆ. ಹೆಚ್ಚಿನ ಮಾಹಿತಿಗಳಿಗಾಗಿ ಗಿಜ್‌ಬಾಟ್‌ಗೆ ಭೇಟಿ ಕೊಡುತ್ತಿರಿ!

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X