2016ರಲ್ಲಿ ಫ್ಲಾಪ್ ಆದ ಟಾಪ್‌ 5 ನಿರೀಕ್ಷೆಯ ಸ್ಮಾರ್ಟ್‌ಫೋನ್‌ಗಳು ಯಾವುವು ಗೊತ್ತಾ?

ಫ್ಯೂಚರ್ ಸ್ಮಾರ್ಟ್‌ಫೊನ್‌ ಬಗ್ಗೆ ಸ್ಮಾರ್ಟ್‌ಫೊನ್ ಪ್ರಿಯರಿಗೆ ಮೊದಲೇ ಕುತೋಹಲವಿರುತ್ತದೆ. ಏನೇನು ಹೊಸ ಹೊಸ ಫೀಚರ್‌ಗಳನ್ನು ಒಳಗೊಂಡಿದೆ ಎಂಬುದನ್ನು ಎಲ್ಲರೂ ಕಾತುರದಿಂದ ಕಾಯುತ್ತಿರುತ್ತಾರೆ.

Written By:

ಪ್ರತಿವರ್ಷವೂ ಹೊಸಹೊಸ ಸ್ಮಾರ್ಟ್‌ಫೊನ್‌ಗಳು ಮಾರುಕಟ್ಟೆಗೆ ಬರುತ್ತಲೇ ಇರುತ್ತವೆ. ಕೆಲವೊಂದು ಸ್ಮಾರ್ಟ್‌ಫೊನ್‌ಗಳು ಮಾರುಕಟ್ಟೆಯಲ್ಲಿ ಉಳಿದರೆ, ಉಳಿದವು ಹೇಳಲು ಹೆಸರಿಲ್ಲದಂತೆ ಕಾಣದಾಗುತ್ತವೆ!!

ಇನ್ನು ಪ್ರಖ್ಯಾತ ಕಂಪೆನಿಗಳಾದ ಸ್ಯಾಮ್‌ಸಂಗ್, ಆಪಲ್‌ಗಳಂತಹ ಮೊಬೈಲ್‌ಗಳು ಕಂಪೆನಿಗಳು ಬಿಡುಗಡೆ ಮಾಡುವ ಫ್ಯೂಚರ್ ಸ್ಮಾರ್ಟ್‌ಫೊನ್‌ ಬಗ್ಗೆ ಸ್ಮಾರ್ಟ್‌ಫೊನ್ ಪ್ರಿಯರಿಗೆ ಮೊದಲೇ ಕುತೋಹಲವಿರುತ್ತದೆ. ಏನೇನು ಹೊಸ ಹೊಸ ಫೀಚರ್‌ಗಳನ್ನು ಒಳಗೊಂಡಿದೆ ಎಂಬುದನ್ನು ಎಲ್ಲರೂ ಕಾತುರದಿಂದ ಕಾಯುತ್ತಿರುತ್ತಾರೆ!!

ಮೊದಲಿಗಿಂತಲೂ ಸುರಕ್ಷಿತವಾದ ಪೇಟಿಎಂ!! ಇ-ವಾಲೆಟ್ ಹೊಸ ಫೀಚರ್ ಏನು?

ಹೀಗೆ ದೊಡ್ಡ ಹೆಸರನ್ನು ಹೊತ್ತು ಬಿಡುಗಡೆಗೊಂಡ ಪ್ರಖ್ಯಾತ ಕಂಪನಿಗಳ ಸ್ಮಾರ್ಟ್‌ಫೊನ್‌ಗಳಿಗೆ 2016 ಒಳ್ಳೆಯ ವರ್ಷವಲ್ಲ ಎಂದು ಹೇಳಬಹುದು! ಹಾಗದರೆ ಯಾವ ಯಾವ ಪ್ರಖ್ಯಾತ ಕಂಪೆನಿಗಳ ಯಾವ ಸ್ಮಾರ್ಟ್‌ಫೊನ್‌ಗಳು ಜನರ ಅಗತ್ಯತೆಗಳನ್ನು ಪೂರೈಸಲು ಆಗಲಿಲ್ಲ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ನೋಟ್ 7

ಸ್ಯಾಮ್‌ಸಂಗ್ ಬಿಡುಗಡೆ ಮಾಡಿದ ಗ್ಯಾಲಾಕ್ಸಿ ನೋಟ್ 7 ಸ್ಮಾರ್ಟ್‌ಫೊನ್ 2016 ನೇ ಸಾಲಿನ ದೊಡ್ಡ ಫ್ಲಾಪ್ ಎನ್ನಬಹುದು. ಬ್ಯಾಟರಿ ಸಮಸ್ಯೆಯಿಂದ ಗ್ಯಾಲಾಕ್ಸಿ ನೋಟ್ 7 ಸ್ಪೋಟಗೊಂಡ ಉದಾಹರಣೆಗಳು ಸಾಕಷ್ಟು ಸಿಕ್ಕವು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೋನಿ ಎಕ್ಸ್‌ಪಿರಿಯಾ ಎಕ್ಸ್‌ ಜಡ್

ನೋಡಲು ಸ್ಟೈಲಿಶ್ ಆಗಿ ಅತ್ಯಾಧುನಿಕ ಫೀಚರ್‌ಗಳನ್ನು ಹೊಂದಿದ್ದರೂ ಸೋನಿ ಎಕ್ಸ್‌ಪಿರಿಯಾ ಎಕ್ಸ್‌ ಜಡ್ ಸ್ಮಾರ್ಟ್‌ಫೊನ್ ಮಾರುಕಟ್ಟೆಯಲ್ಲಿ ಹೇಳುವಂತಹ ಹೆಸರು ಮಾಡಲಿಲ್ಲ!. 51,990 ರೂಪಾಯಿ ಬೆಲೆ ಸೋನಿ ಎಕ್ಸ್‌ಪಿರಿಯಾ ಎಕ್ಸ್‌ ಜಡ್ ಅಳಿವಿಗೆ ಕಾರಣವಾಯಿತು ಎನ್ನಬಹುದು.

ಗೂಗಲ್ ಪಿಕ್ಸೆಲ್ ಮತ್ತು ಪಿಕ್ಸೆಲ್ ಎಕ್ಸ್‌ಎಲ್

ಗೂಗಲ್ ಸ್ಮಾರ್ಟ್‌ಫೊನ್‌ ಈ ವರ್ಷದ ಬಹುದೊಡ್ಡ ಮೊಬೈಲ್‌ ಲಾಂಚಿಂಗ್‌ ಎನ್ನಬಹುದು. ಬೇರೆ ಸ್ಮಾರ್ಟ್‌ಫೊನ್ ಕಂಪೆನಿಗಳಿಗೆ ನಡುಕ ಹುಟ್ಟಿಸಿದ್ದ ಗೂಗಲ್‌ ಫೋನ್‌ಗಳು ಸಹ ಹೆಚ್ಚು ಬೆಲೆಯ ಕಾರಣಕ್ಕಾಗಿ ಮಾರುಕಟ್ಟೆಯಲ್ಲಿ ನೆಲೆ ನಿಲ್ಲಲಿಲ್ಲ ಎನ್ನಬಹುದು. ಕ್ರಮವಾಗಿ 57,000 ಮತ್ತು 76,000 ರೂಪಾಯಿಗಳ ಬೆಯನ್ನು ಈ ಸ್ಮಾರ್ಟ್‌ಫೊನ್ ಹೊಂದಿದ್ದವು.

ಆಪಲ್ ಐಫೋನ್ 7

ಗುಣಮಟ್ಟಕ್ಕೆ ಮತ್ತೊಂದು ಹೆಸರಾಗಿದ್ದ ಆಪಲ್ ಕಂಪೆನಿಯ ಐಫೊನ್‌ಗಳ ಬೆಲೆ ಆಪಲ್ ಐಫೋನ್ 7 ರಿಂದ ಹಾಳಾಯಿತು ಎನ್ನಬಹುದು. ಗ್ಯಾಲಾಕ್ಸಿ ನೋಟ್ 7 ನಂತೆಯೇ ಆಪಲ್ ಐಫೋನ್ 7 ಸಹ ಬ್ಯಾಟರಿ ಸ್ಪೋಟದಂತಹ ಸಮಸ್ಯೆಯನ್ನು ಅನುಭವಿಸಿತು. 7 ನೇ ಶನಿಯ ಪ್ರಭಾವವಿರಬಹುದು!!.

ಸೋನಿ ಎಕ್ಸ್‌ಪೀರಿಯಾ ಜೆಡ್

10 ರಿಂದ 20 ಸಾವಿರಗಳಲ್ಲಿಯೇ ಎಲ್ಲಾ ಫೀಚರ್‌ ಹೊಂದಿರುವ ಮೊಬೈಲ್‌ಗಳು ಸಿಗುವ ಸಮಯದಲ್ಲಿ ಸೋನಿ ಎಕ್ಸ್‌ಪೀರಿಯಾ ಎಕ್ಸ್ ಕೇವಲ ಕ್ಯಾಮೆರಾ ನಂಬಿ 50,000 ಕ್ಕೂ ಹೆಚ್ಚು ಬೆಲೆಯನ್ನು ನಿಗದಿಪಡಿಸಿತು. ಅದಕ್ಕಾಗಿ ಸೋನಿ ಎಕ್ಸ್‌ಪೀರಿಯಾ ಎಕ್ಸ್ ಮಾರುಕಟ್ಟೆಯಲ್ಲಿ ಹೆಸರಿಲ್ಲದಂತಾಯಿತು ಎನ್ನಬಹುದು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
Being the worst year for the smartphone sector, here are a few smartphone flops of 2016 you'll surely agree. kannada.gizbot.com
Please Wait while comments are loading...
Opinion Poll

Social Counting