ಸೋನಿ ಎಕ್ಸ್‌ಪೀರಿಯಾ ಜೆಡ್ 5 ಕ್ಯಾಮೆರಾ ವಿಶೇಷತೆಗಳು

By Shwetha
|

ಸೋನಿ ಇತ್ತೀಚೆಗೆ ತಾನೇ ತನ್ನ ಅತ್ಯಾಧುನಿಕ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಎಕ್ಸ್‌ಪೀರಿಯಾ ಜೆಡ್ 5 ಅನ್ನು ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. 23 ಮೆಗಾಪಿಕ್ಸೆಲ್ ಕ್ಯಾಮೆರಾ ವಿಶೇಷತೆಗಳನ್ನೊಳಗೊಂಡು ಈ ಫೋನ್ ಬಂದಿದ್ದು ಎಕ್ಸಾಮರ್ ಆರ್ ಎಸ್ 1/2.3 ಹಾಗೂ f/2.0 G ಲೆನ್ಸ್‌ನೊಂದಿಗೆ ಬಂದಿದೆ.

ಫೋನ್ 5.2 ಇಂಚಿನ ಐಪಿಎಸ್ ಟ್ರಿಲ್ಯಮಿನಿಯಸ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ರೆಸಲ್ಯೂಶನ್ 1080x1920 ಪಿಕ್ಸೆಲ್ ಇದರಲ್ಲಿದೆ. ಡಿಸ್‌ಪ್ಲೇ ಸ್ಕ್ರಾಚ್ ವಿರೋಧಿ ಅಂಶಗಳನ್ನು ಒಳಗೊಂಡಿದ್ದು ಒಲಿಯೊಫೊಬಿಕ್ ಅಂಶಗಳನ್ನು ಪಡೆದುಕೊಂಡಿದೆ. ಕ್ವಾಲ್‌ಕಾಮ್ MSM8994 ಸ್ನ್ಯಾಪ್‌ಡ್ರಾಗನ್ 810 ಪ್ರೊಸೆಸರ್ ಇದರಲ್ಲಿದ್ದು ಓಕ್ಟಾ ಕೋರ್ ಸಿಪಿಯುಗಳನ್ನು ಇದು ಹೊಂದಿದೆ, 64 ಬಿಟ್ ಸಾಮರ್ಥ್ಯಗಳನ್ನು ಡಿವೈಸ್ ಪಡೆದುಕೊಂಡಿದ್ದು ಅಡ್ರೆನೊ 430 ಜಿಪಿಯು ಮತ್ತು 3 ಜಿಬಿ RAM ಡಿವೈಸ್‌ನಲ್ಲಿದೆ. ಆಂಡ್ರಾಯ್ಡ್ 5.1.1 ಲಾಲಿಪಪ್ ಡಿವೈಸ್‌ನಲ್ಲಿದ್ದು ಓಪರೇಟಿಂಗ್ ಸಿಸ್ಟಮ್ ಅನ್ನು ಇದು ಹೊಂದಿದೆ. ಇದನ್ನು ಇತ್ತೀಚಿನ ಆಂಡ್ರಾಯ್ಡ್ 6.0 ಮಾರ್ಷ್‌ಮಲ್ಲೊಗೆ ಅಪ್‌ಗ್ರೇಡ್ ಮಾಡಬಹುದಾಗಿದೆ.

23 ಮೆಗಾಪಿಕ್ಸೆಲ್ ಎಕ್ಸಾಮರ್ ಆರ್‌ಎಸ್ ಕ್ಯಾಮೆರಾವನ್ನು ಡಿವೈಸ್ ಹೊಂದಿದ್ದು ಅತಿ ನಿಕಟವಾಗಿ ಫೋಟೋ ತೆಗೆಯಲು ಸಹಕಾರಿಯಾಗಿದೆ. 5 ಎಕ್ಸ್ ಕ್ಲಿಯರ್ ಇಮೇಜ್ ಜೂಮ್‌ನೊಂದಿಗೆ ಗುಣಮಟ್ಟವನ್ನು ಕಳೆದುಕೊಳ್ಳದೆ ಫೋಟೋವನ್ನು ತೆಗೆಯಬಹುದಾಗಿದೆ. ವೇಗದ ಪ್ರವೇಶಕ್ಕಾಗಿ ಮ್ಯಾನುವಲ್, ಸುಪೀರಿಯರ್ ಆಟೊ, ವೀಡಿಯೊ ಮತ್ತು ಕ್ಯಾಮೆರಾ ಅಪ್ಲಿಕೇಶನ್ ಮೋಡ್ಸ್‌ಗಾಗಿ ಸ್ವೈಪ್ ಮಾಡಬಹುದಾಗಿದೆ. ಕೆಳಗಿನ ಸ್ಲೈಡರ್‌ಗಳಲ್ಲಿ ಇನ್ನಷ್ಟು ಮಾಹಿತಿಗಳನ್ನು ಪಡೆದುಕೊಳ್ಳೋಣ.

ಸೋನಿ ಎಕ್ಸ್‌ಪೀರಿಯಾ ಜೆಡ್5 ಕ್ಯಾಮೆರಾ ವಿಶೇಷತೆಗಳು

ಸೋನಿ ಎಕ್ಸ್‌ಪೀರಿಯಾ ಜೆಡ್5 ಕ್ಯಾಮೆರಾ ವಿಶೇಷತೆಗಳು

ಹೊಸದಾಗಿ ಸೇರಿಸಲಾದ ಕ್ಯಾಮೆರಾ ಅಪ್ಲಿಕೇಶನ್ ಮೋಡ್ ವಿಶೇಷ ಇಫೆಕ್ಟ್‌ಗಳು ಮತ್ತು ಶೂಟಿಂಗ್ ಫಂಕ್ಶನ್‌ಗಳನ್ನು ನಿಮಗೆ ನೋಡಬಹುದಾಗಿದೆ. ಸುಪೀರಿಯರ್ ಮೋಡ್ ಸ್ವಯಂಚಾಲಿತ ಸೀನ್ ಸೆಲೆಕ್ಶನ್ ಮೋಡ್‌ಗಳಂತೆ ಕಾರ್ಯನಿರ್ವಹಿಸುತ್ತಿದ್ದು ಕಾಂಪಾಕ್ಟ್ ಡಿಜಿಟಲ್ ಕ್ಯಾಮೆರಾಗಳಿಗೆ ಸಮಾನವಾಗಿದೆ.

ಮ್ಯಾನುವಲ್ ಮೋಡ್

ಮ್ಯಾನುವಲ್ ಮೋಡ್

ಮ್ಯಾನುವಲ್ ಮೋಡ್‌ನಲ್ಲಿ ವೈಟ್ ಬ್ಯಾಲೆನ್ಸ್ ಸೆಟ್ಟಿಂಗ್‌ಗಳನ್ನು ನಿಮಗೆ ಆರಿಸಬಹುದಾಗಿದೆ ಎಕ್ಸ್‌ಪೋಶರ್ ಅಪ್ಲೈ ಮಾಡಬಹುದಾಗಿದೆ ಎಚ್‌ಡಿಆರ್ ಫಂಕ್ಶನ್‌ಗೆ ಬದಲಾಯಿಸಬಹುದಾಗಿದೆ

ಸುಪೀರಿಯರ್ ಆಟೊ ಮೋಡ್

ಸುಪೀರಿಯರ್ ಆಟೊ ಮೋಡ್

ಇದು ಸ್ವಯಂಚಾಲಿತವಾಗಿ ಫೋಟೋ ವಿಷಯವನ್ನು ವರ್ಧಿಸುತ್ತದೆ. ಬೆಳಕಿನ ವ್ಯವಸ್ಥೆ ಇದಕ್ಕೆ ಮುಖ್ಯವಾಗಿದೆ.

ಕ್ಲೋಸ್ ಅಪ್ ಮ್ಯಾನುವಲ್ ಮೋಡ್

ಕ್ಲೋಸ್ ಅಪ್ ಮ್ಯಾನುವಲ್ ಮೋಡ್

ಕ್ಯಾಮೆರಾವು ಕ್ಲೋಸಪ್ ಶಾಟ್‌ಗಳನ್ನು ತೆಗೆಯಲು ಸೂಕ್ತವಾಗಿದೆ. ಬಣ್ಣದ ಬಳಕೆ ಅದ್ಭುತವಾಗಿದೆ. ಮ್ಯಾನುವಲ್ ಮೋಡ್‌ನಲ್ಲಿ ಎಚ್‌ಡಿ ಆರ್ ಅನ್ನು ಬಳಸಿಕೊಂಡು ವೈಟ್ ಬ್ಯಾಲೆನ್ಸ್ ನಿಯಂತ್ರಣ ಇಲ್ಲಿ ಸೂಕ್ತವಾಗಿ ನಡೆದಿದೆ.

ಔಟ್‌ಡೋರ್: ಡೇ ಲೈಟ್

ಔಟ್‌ಡೋರ್: ಡೇ ಲೈಟ್

ಎಕ್ಸ್‌ಪೀರಿಯಾ ಜೆಡ್ 5 ನಿಂದ ನಡೆಸಲಾದ ಔಟ್‌ಡೋರ್ ಶೂಟ್ ತುಂಬಾ ಚೆನ್ನಾಗಿ ಬಂದಿದೆ. ಇಲ್ಲಿ ಕಲರ್ ಕಾಂಬಿನೇಶನ್ ಬಳಕೆ ಉತ್ತಮವಾಗಿದೆ.

ಔಟ್‌ಡೋರ್: ಲೋ ಲೈಟ್

ಔಟ್‌ಡೋರ್: ಲೋ ಲೈಟ್

ನಿರೀಕ್ಷಿಸಿದಕ್ಕಿಂತಲೂ ಅದ್ಭುತವಾಗಿ ಫೋಟೋ ಬಂದಿದೆ. ಇಲ್ಲಿ ಬೆಳಕಿನ ಬಳಕೆ ಮಂದಗತಿಯಲ್ಲಿದ್ದು ಫೋಟೋ ಅದ್ಭುತವಾಗಿ ಮೂಡಿ ಬಂದಿದೆ.

ಔಟ್‌ಡೋರ್: ನೈಟ್ ಶಾಟ್ಸ್

ಔಟ್‌ಡೋರ್: ನೈಟ್ ಶಾಟ್ಸ್

ಕಡಿಮೆ ಬೆಳಕಿನಲ್ಲಿ ತೆಗೆಯಲಾದ ಈ ಫೋಟೋ ಅತ್ಯದ್ಭುತವಾಗಿದೆ. ಇಲ್ಲಿ ಬಳಸಲಾದ ಬೆಳಕು ಕಡಿಮೆಯದ್ದಾಗಿದೆ ಅಂತೆಯೇ ಹಲವಾರು ಮೋಡ್‌ಗಳಾದ ಸುಪೀರಿಯರ್ ಆಟೊ, ಮ್ಯಾನುವಲ್ ಮತ್ತು ನೈಟ್ ಮೋಡ್‌ನಲ್ಲಿ ಚಿತ್ರ ತೆಗೆಯಲಾಗಿದೆ.

ನೈಜತೆ

ನೈಜತೆ

ಏರ್ ಮೋಡ್‌ನಲ್ಲಿ ಮಕ್ಕಳು ಹೆಚ್ಚಿನ ಮೋಜನ್ನು ಅನುಭವಿಸಬಹುದಾಗಿದೆ. "ಫೇರಿ ಟೇಲ್", "ಚೋಟಾ ಭೀಮ್" ಮತ್ತು "ದೀನೊಶಾರ್" ಅಪ್ಲಿಕೇಶನ್ ಅತ್ಯುತ್ತಮವಾಗಿ ಮೂಡಿ ಬಂದಿದೆ. ಇನ್ನು ಬೆಳಕು ಕಡಿಮೆ ಇದ್ದ ಸಂದರ್ಭದಲ್ಲಿ ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಅನ್ನು ಮುಚ್ಚುತ್ತದೆ ಎಂಬ ಎಚ್ಚರಿಕೆಯನ್ನು ನೀಡುತ್ತದೆ.

ಏರ್ ಮಾಸ್ಕ್ ಮತ್ತು ಸೆಲ್ಫ್ ಪೋಟ್ರೇಟ್ ಮೋಡ್

ಏರ್ ಮಾಸ್ಕ್ ಮತ್ತು ಸೆಲ್ಫ್ ಪೋಟ್ರೇಟ್ ಮೋಡ್

ಈ ಮೋಡ್ ಅತಿ ಭಿನ್ನವಾದ ಸೆಲ್ಫಿಗಳನ್ನು ತೆಗೆಯಲು ಅನುಕೂಲಕರವಾಗಿದೆ. ಇದು ಸಿಂಹ, ಗೋರಿಲ್ಲಾ ಮತ್ತು ಇತರ ಸೆಲ್ಫಿಗಳನ್ನು ತೆಗೆಯಲು ಅನುಕೂಲಕಾರಿ.

ಬ್ಯಾಕ್‌ಗ್ರೌಂಡ್ ಡಿಫೋಕಸ್

ಬ್ಯಾಕ್‌ಗ್ರೌಂಡ್ ಡಿಫೋಕಸ್

ಬ್ಯಾಕ್‌ಗ್ರೌಂಡ್ ಡಿಫೋಕಸ್ ಮೋಡ್ ವಿಷಯವನ್ನು ಮ್ಯಾನುವಲ್ ಆಗಿ ಫೋಕಸ್ ಮಾಡಲು ಸಹಕರಿಯಾಗಿದೆ. ತುಂಬಿದ ರಸ್ತೆಗಳಲ್ಲಿ ಪೊಟ್ರೇಟ್ ಸೆರೆಹಿಡಿಯಲು ಅನುಕೂಲಕರವಾಗಿದೆ. ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ಯಾಮೆರಾ ಅಂಶ ಹೆಚ್ಚು ಅಗತ್ಯವಾಗಿದ್ದು ಅಂತಹ ಫೋನ್‌ಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗುತ್ತಿದೆ.

Best Mobiles in India

English summary
Sony has recently announced its latest flagship smartphone - the Xperia Z5 - in the Indian market. The handset comes with a stunning 23 megapixel sensor equipped with new 1/2.3 Exmor RS sensor along with f/2.0 G lens.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X