ಆಂಡ್ರಾಯ್ಡ್ ಲಾಲಿಪಪ್ ಬೆಂಬಲದೊಂದಿಗೆ ಹಿಯರ್ ಮ್ಯಾಪ್ಸ್ ಬೇಟಾ

By Shwetha
|

ಕಳೆದ ತಿಂಗಳು ಆಂಡ್ರಾಯ್ಡ್‌ಗಾಗಿ ಹಿಯರ್ ಮ್ಯಾಪ್ಸ್‌ನ ಬೇಟಾ ಆವೃತ್ತಿಯನ್ನು ಬಿಡುಗಡೆ ಮಾಡಿದ ನಂತರ, ಇದೇ ಅಪ್ಲಿಕೇಶನ್ ಅನ್ನು ಮೈಕ್ರೋಸಾಫ್ಟ್ ಬಿಡುಗಡೆ 1.0.220 ಗೆ ನವೀಕರಿಸಿದ್ದು ಇದು ಆಂಡ್ರಾಯ್ಡ್ 5.0 ಲಾಲಿಪಪ್‌ಗೆ ಬೆಂಬಲವನ್ನು ಒದಗಿಸುತ್ತಿದೆ.

ವಿಂಡೋಸ್ ಫೋನ್‌ನ ಈ ಅಪ್ಲಿಕೇಶನ್ ಅನ್ನು ಆಂಡ್ರಾಯ್ಡ್ ಬಳಕೆದಾರರು ಬಳಸಬಹುದಾಗಿದೆ. ಡೌನ್‌ಲೋಡ್ ಮಾಡಿದ ಧ್ವನಿ ಫೈಲ್‌ಗಳ ಸಮಸ್ಯೆಗಳನ್ನು ಹೊಂದಿಸುವಂತಿದ್ದು, ಕ್ಲೀನಿಂಗ್ ಸಮಯದಲ್ಲಿ ನೀವು ಇದನ್ನು ಕಳೆದುಕೊಂಡಿರಿ ಎಂದಾದಲ್ಲಿ ಯಾವುದೇ ಇಂಗ್ಲೀಷ್ ಅಲ್ಲದ ಧ್ವನಿಗಳಲ್ಲಿ ಇದನ್ನು ಮರುಡೌನ್‌ಲೋಡ್ ಮಾಡಬೇಕಾಗುತ್ತದೆ.

ಹಿಯರ್ ಮ್ಯಾಪ್ಸ್ ಬೇಟಾ ವಿಶೇಷತೆ ಗೊತ್ತೇ?

ಈ ನವೀಕರಣವು ಕೆಲವೊಂದು ಸುಧಾರಣೆಗಳನ್ನು ಹೊರತರಲಿದ್ದು ನೀವು ಬಗ್ಸ್ ಕುರಿತು ವರದಿ ಮಾಡಬಹುದು ಮತ್ತು ಅಪ್ಲಿಕೇಶನ್ ಅನ್ನು ಬಳಸಿಕೊಂಡು ವೈಶಿಷ್ಟ್ಯ ಸಲಹೆಗಳನ್ನು ಒದಗಿಸಬಹುದು.

ಎಪಿಕೆ ಫೈಲ್‌ ಸ್ವರೂಪದಲ್ಲಿ ವೆಬ್‌ಸೈಟ್‌ನಲ್ಲಿ ನವೀಕರಣವು ಇದೀಗ ಲಭ್ಯವಾಗುತ್ತಿದ್ದು ಸ್ಯಾಮ್‌ಸಂಗ್ ಗ್ಯಾಲಕ್ಸಿ ಆಪ್ಲಿಕೇಶನ್ ಸ್ಟೋರ್‌ ಮೂಲಕ ಸ್ಯಾಮ್‌ಸಂಗ್ ಡಿವೈಸ್‌ನಲ್ಲಿ ಕೂಡ ಈ ನವೀಕರಣ ಇದೀಗ ಲಭ್ಯವಿದೆ.

ಇದನ್ನೂ ಓದಿ: ಆಂಡ್ರಾಯ್ಡ್ ಲಾಲಿಪಪ್ ಮನಮೋಹಕ ವಿಶೇಷತೆ

ಅಪ್ಲಿಕೇಶನ್ ಸರಿಯಾಗಿ ಬಿಡುಗಡೆಗೊಂಡ ನಂತರ, ಗೂಗಲ್ ಪ್ಲೇನಲ್ಲಿ ಇದು ಬಿಡುಗಡೆಯಾಗುತ್ತಿದೆ. ನೀವು ಈ ಅಪ್ಲಿಕೇಶನ್ ಅನ್ನು ಇಂಟರ್ನೆಟ್ ಸಂಪರ್ಕ ಇದ್ದು ಅಥವಾ ಇಲ್ಲದೆ ಕೂಡ ಬಳಸಬಹುದಾಗಿದೆ. ಹೆಚ್ಚಾಗಿ ಆಂಡ್ರಾಯ್ಡ್ ಬಳಕೆದಾರರು, ರೂಟ್‌ಗಳನ್ನು ಪಡೆಯಬಹುದಾಗಿದ್ದು ಹಂತ ಹಂತದ ಮಾಹಿತಿಯನ್ನು ಧ್ವನಿ ಮಾರ್ಗದರ್ಶನದ ಮೂಲಕ ಪಡೆಯಬಹುದಾಗಿದೆ.

ಆಂಡ್ರಾಯ್ಡ್‌ಗಾಗಿ ಹಿಯರ್ ಬೇಟಾದ ಕೆಲವೊಂದು ವಿಶೇಷತೆಗಳು ಇಲ್ಲಿವೆ

  • ಆಫ್‌ಲೈನ್ ನ್ಯಾವಿಗೇಶನ್ - ಇಂಟರಾಕ್ಟೀವ್ ಮ್ಯಾಪ್ಸ್ ಮತ್ತು ಹಂತ ಹಂತದ ಧ್ವನಿ ಸೂಚನೆಯನ್ನು ಇಂಟರ್ನೆಟ್ ಸಂಪರ್ಕ ಇಲ್ಲದೆಯೂ ಪಡೆದುಕೊಳ್ಳಬಹುದು.
  • ಮ್ಯಾಪ್ಸ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು 100 ದೇಶಗಳಲ್ಲಿ ಆಫ್‌ಲೈನ್‌ ಬಳಕೆಯಲ್ಲಿ ಬಳಸಬಹುದಾಗಿದೆ.
  • 40 ದೇಶಗಳಲ್ಲಿ, 800 ನಗರಗಳಿಗೆ ಸಾರ್ವಜನಿಕ ಟ್ರಾನ್ಸ್‌ಪೋರ್ಟ್ ಮ್ಯಾಪ್ಸ್ ಮತ್ತು ದಿಕ್ಕುಗಳ ಸೂಚನೆ ನೀವು ಆಫ್‌ಲೈನ್‌ನಲ್ಲಿದ್ದಾಗ ಕೂಡ.
  • 40 ದೇಶಗಳಿಗಿಂತಲೂ ಅಧಿಕ ಸ್ಥಳದಲ್ಲಿ ನೇರ ಟ್ರಾಫಿಕ್ ಮಾಹಿತಿ.
  • ಬೇಟಾ.ಹಿಯರ್.ಕಾಮ್‌ನಲ್ಲಿ ನಿಮ್ಮ ಪ್ರಯಾಣವನ್ನು ಆಯೋಜಿಸಿ, ನಂತರ ನಿಮ್ಮ ಮೊಬೈಲ್ ಅನ್ನು ಬಳಸಿಕೊಂಡು ನಿಮ್ಮ ಪ್ರಯಾಣ ಸಾಗಲಿ.
  • ನಿಮ್ಮ ಮೆಚ್ಚಿನ ಸ್ಥಳಗಳ ಸಂಗ್ರಹವನ್ನು ರಚಿಸುವ ಮೂಲಕ ನಿಮ್ಮ ನಕ್ಷೆಯನ್ನು ವೈಯಕ್ತೀಕರಿಸಿ.
  • ನೀವು Glympse ನ ಮೂಲಕ ಪ್ರಯಾಣಿಸುತ್ತಿದ್ದಂತೆ ನೈಜ ಸಮಯದಲ್ಲಿ ನಿಮ್ಮ ಸ್ಥಾನವನ್ನು ಸ್ನೇಹಿತರು ಮತ್ತು ಕುಟುಂಬದವರೊಂದಿಗೆ ಹಂಚಿಕೊಳ್ಳಿ.
Best Mobiles in India

English summary
This article tells about HERE Maps Beta Now Updated With Android Lollipop Support.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X