ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ5 V/S ಹೋನರ್ 5ಸಿ

By Shwetha
|

ಹುವಾವೆ ತನ್ನ ಆನ್‌ಲೈನ್ ಸ್ಪೆಸಿಫಿಕ್ ಬ್ರ್ಯಾಂಡ್ ಹೋನರ್ ಅನ್ನು ಪ್ರಸ್ತುತಪಡಿಸಿದ್ದು, ಇದ ಗ್ರಾಹಕರನ್ನು ತ್ವರಿತವಾಗಿ ತನ್ನತ್ತ ಆಕರ್ಷಿಸುತ್ತಿದೆ. ಕಡಿಮೆ ಬೆಲೆಯಲ್ಲೇ ಅತ್ಯುತ್ತಮ ಡಿವೈಸ್‌ಗಳನ್ನು ಗ್ರಾಹಕರಿಗೆ ಒದಗಿಸುವಲ್ಲಿ ಹೋನರ್ ಎತ್ತಿದ ಕೈ ಎಂದೆನಿಸಿದೆ.

ಓದಿರಿ: ಶ್ಯೋಮಿ ರೆಡ್ಮೀ ನೋಟ್ 3 ಯನ್ನು ಹಿಂದಿಕ್ಕಿದ ಹೋನರ್ 5ಸಿ

ಹೋನರ್ 5ಸಿ ಸ್ಮಾರ್ಟ್‌ಫೋನ್ ರೂ 10,999 ಕ್ಕೆ ಬಜೆಟ್ ಬಳಕೆದಾರರಿಗೆ ಲಭ್ಯವಿದ್ದು ಭಾರತದಲ್ಲಿ ಬಹುತೇಕ ಗ್ರಾಹಕರ ಹೆಮ್ಮೆಯ ಡಿವೈಸ್ ಎಂದೆನಿಸಿದೆ. ಇಂದಿನ ಲೇಖನದಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ5 ನೊಂದಿಗೆ ಹೋನರ್ 5ಸಿಯನ್ನು ಹೋಲಿಕೆ ಮಾಡುತ್ತಿದ್ದು ಇವುಗಳ ನಡುವಿನ ವಿಶೇಷತೆ ಮತ್ತು ಆಕರ್ಷಣೀಯ ಅಂಶಗಳೇನು ಎಂಬುದನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ.

ಓದಿರಿ: ಹೋನರ್ 5ಸಿ ಸ್ಮಾರ್ಟ್‌ಫೋನ್ ಕ್ಯಾಮೆರಾ ವಿಶೇಷತೆ

ಪ್ರೀಮಿಯಮ್ ಮೆಟಲ್ ಬಾಡಿ

ಪ್ರೀಮಿಯಮ್ ಮೆಟಲ್ ಬಾಡಿ

ಹೋನರ್ 5ಸಿ ಏರ್‌ಕ್ರಾಫ್ಡ್ ಗ್ರಾಡ್ ಅಲ್ಯುಮಿನಿಯಮ್ ಅಲಾಯ್ ಬಾಡಿಯನ್ನು ಪಡೆದುಕೊಂಡಿದ್ದು ಬೆಲೆಗೆ ತಕ್ಕುದಾದಾಗಿ ಮಾರುಕಟ್ಟೆಗೆ ಕಾಲಿಟ್ಟಿದೆ. ಇದರ ಮೆಟಲ್ ಬಿಲ್ಟ್ ರಚನೆ ಕೂಡ ಅದ್ವಿತೀಯ ಎಂದೆನಿಸಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ5 ಮೆಟಲ್ ಮತ್ತು ಗ್ಲಾಸ್ ವಿನ್ಯಾಸವನ್ನು ಪಡೆದುಕೊಂಡಿದ್ದು, ಹೋನರ್ 5ಸಿಗಿಂತ ದುಬಾರಿಯಾಗಿದೆ.

1080ಪಿ ಡಿಸ್‌ಪ್ಲೇ

1080ಪಿ ಡಿಸ್‌ಪ್ಲೇ

ಹೋನರ್ 5ಸಿ, 5.2 ಇಂಚಿನ ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ರೆಸಲ್ಯೂಶನ್ 1920 x 1080 ಪಿಕ್ಸೆಲ್‌ಗಳಾಗಿವೆ. ಗ್ಯಾಲಕ್ಸಿ ಎ5 ನಂತೆಯೇ ಸಮಾನ ಡಿಸ್‌ಪ್ಲೇ ರೆಸಲ್ಯೂಶನ್ ಅನ್ನು ಫೋನ್ ಪಡೆದುಕೊಂಡಿದೆ. ಹೋನರ್ 5ಸಿಗಿಂತ ಎ5 ಕೊಂಚ ದುಬಾರಿಯಾಗಿದ್ದು ಇದೇ ಫೀಚರ್‌ಗೆ ದುಬಾರಿ ಬೆಲೆ ಯಾರೂ ನೀಡಿ ಕೊಂಡುಕೊಳ್ಳಲಾರರು.

ಪವರ್ ಫುಲ್ ಓಕ್ಟಾ ಕೋರ್ ಹಾರ್ಡ್‌ವೇರ್

ಪವರ್ ಫುಲ್ ಓಕ್ಟಾ ಕೋರ್ ಹಾರ್ಡ್‌ವೇರ್

ಹೋನರ್ 5ಸಿಯಲ್ಲಿ ಪ್ರಮುಖವಾಗಿರುವುದೆಂದರೆ ಕಿರಿನ್ 650 ಸಾಕ್ ಜೊತೆಗೆ ಓಕ್ಟಾ ಕೋರ್ ಸಿಪಿಯು ಮತ್ತು 16 ಎನ್‌ಎಮ್ ಪ್ರೊಸೆಸಿಂಗ್ ಪವರ್ ಆಗಿದೆ, ಇದು Mali T830 GPU ನೊಂದಿಗೆ ಹೊಂದಾಣಿಕೆಯನ್ನು ಮಾಡಿಕೊಂಡು ಗ್ರಾಫಿಕ್ಸ್‌ಗೆ ಸಹಕಾರಿಯಾಗಿದೆ. ಗ್ಯಾಲಕ್ಸಿ ಎ5 ಎಕ್ಸೋನಸ್ ಓಕ್ಟಾ ಕೋರ್ ಪ್ರೊಸೆಸರ್ ಅನ್ನು ಪಡೆದುಕೊಂಡಿದೆ.

2 ಜಿಬಿ RAM ಮತ್ತು ಸಂಗ್ರಹಣಾ ಸಾಮರ್ಥ್ಯ

2 ಜಿಬಿ RAM ಮತ್ತು ಸಂಗ್ರಹಣಾ ಸಾಮರ್ಥ್ಯ

ಹೋನರ್ 5ಸಿ 2 ಜಿಬಿ RAM ನೊಂದಿಗೆ 16 ಜಿಬಿ ಸಂಗ್ರಹಣಾ ಸಾಮರ್ಥ್ಯವನ್ನು ಪಡೆದುಕೊಂಡಿದ್ದು, ಎಸ್‌ಡಿ ಕಾರ್ಡ್ ಬಳಸಿ ಇದನ್ನು 128 ಜಿಬಿಗೆ ವಿಸ್ತರಿಸಬಹುದಾಗಿದೆ. RAM ಮತ್ತು ಸಂಗ್ರಹಣಾ ಸಾಮರ್ಥ್ಯದ ಸಂಪರ್ಕವು ಚಿಪ್‌ಸೆಟ್‌ನ ಕಾರ್ಯಕ್ಷಮತೆಯನ್ನು ಸುಧಾರಿಸಿ ಬಳಕೆದಾರರಿಗೆ ಸಾಕಷ್ಟು ಆಂತರಿಕ ಸ್ಥಾನವನ್ನು ಒದಗಿಸಿಕೊಡುತ್ತದೆ.

ಸೆಲ್ಫಿ ಪ್ರಿಯರಿಗಾಗಿ 8 ಎಮ್‌ಪಿ ಮುಂಭಾಗ ಕ್ಯಾಮೆರಾ

ಸೆಲ್ಫಿ ಪ್ರಿಯರಿಗಾಗಿ 8 ಎಮ್‌ಪಿ ಮುಂಭಾಗ ಕ್ಯಾಮೆರಾ

ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಹೆಚ್ಚು ಪ್ರಿಯವಾಗುವ ಕ್ಯಾಮೆರಾ ಅಂಶಗಳು ಹೋನರ್ 5ಸಿಯಲ್ಲಿ ಸಾಕಷ್ಟಿದೆ. ಪ್ರೈಮರಿ ಕ್ಯಾಮೆರಾ 13 ಎಮ್‌ಪಿಯಾಗಿದ್ದು ಎಲ್‌ಇಡಿ ಫ್ಲ್ಯಾಶ್ ಲೈಟ್, ಪಿಡಿಎಫ್ ಅನ್ನು ಒಳಗೊಂಡಿದೆ. ಮುಂಭಾಗದಲ್ಲಿ 8ಎಮ್‌ಪಿ ಕ್ಯಾಮೆರಾವನ್ನು ಹೊಂದಿದ್ದು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ5 ಮುಂಭಾಗ ಕ್ಯಾಮೆರಾ 5ಎಮ್‌ಪಿಯಾಗಿದೆ.

ಹೆಚ್ಚುವರಿ ಭದ್ರತೆ

ಹೆಚ್ಚುವರಿ ಭದ್ರತೆ

ಹೋನರ್ 5ಸಿ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಪಡೆದುಕೊಂಡಿದ್ದು, ಗ್ಯಾಲಕ್ಸಿ ಎ5 ನಲ್ಲೂ ಇದೇ ಅಂಶವನ್ನು ನಿಮಗೆ ಕಂಡುಕೊಳ್ಳಬಹುದಾಗಿದೆ. ಹೋನರ್ 5ಸಿನ ಫಿಂಗರ್ ಪ್ರಿಂಟ್ ತ್ವರಿತವಾಗಿ ಕಾರ್ಯನಿರ್ವಹಿಸಿ ಉತ್ತಮವಾಗಿ ಕೆಲಸ ಮಾಡುತ್ತದೆ. ಸಿಂಗಲ್ ಹ್ಯಾಂಡಲ್‌ನಲ್ಲೂ ಡಿವೈಸ್ ಉತ್ತಮವಾಗಿ ಕೆಲಸ ಮಾಡುತ್ತದೆ.

ಆಂಡ್ರಾಯ್ಡ್ ಮಾರ್ಶ್ ಮಲ್ಲೊ

ಆಂಡ್ರಾಯ್ಡ್ ಮಾರ್ಶ್ ಮಲ್ಲೊ

ಹೋನರ್ 5ಸಿ, ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊವನ್ನು ಒಳಗೊಂಡಿದ್ದು, ಇದು ಅತ್ಯಾಧುನಿಕ ಫೀಚರ್‌ಗಳು ಮತ್ತು ಸುಧಾರಣೆಗಳನ್ನು ಡಿವೈಸ್‌ನಲ್ಲಿ ಆಗಾಗ್ಗೆ ಮಾಡುತ್ತಿರುತ್ತದೆ. ಹೋನರ್‌ನ ಸ್ಥಳೀಯ ಯುಐ ಹೆಚ್ಚುವರಿ ಫೀಚರ್ಸ್ ಮತ್ತು ಕಸ್ಟಮೈಸೇಶನ್ ಅನ್ನು ಒದಗಿಸುತ್ತದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎ5, ಆಂಡ್ರಾಯ್ಡ್‌ನ ಹಳೆಯ ಆವೃತ್ತಿಯನ್ನು ಚಾಲನೆ ಮಾಡುತ್ತದೆ.

ಬ್ಯಾಟರಿ ಕಾರ್ಯಕ್ಷಮತೆ

ಬ್ಯಾಟರಿ ಕಾರ್ಯಕ್ಷಮತೆ

ಹೋನರ್ 5ಸಿ 3000mAh ಬ್ಯಾಟರಿಯನ್ನು ಒದಗಿಸುತ್ತಿದ್ದು 10 ಗಂಟೆಗಳ ಕಾಲ ಮ್ಯೂಸಿಕ್, ಮನರಂಜನೆಯನ್ನು ಒದಗಿಸುತ್ತದೆ. ಕಿರಿನ್ 650 ನಿಂದ ಬ್ಯಾಟರಿ ಉತ್ತಮತೆ ಕೂಡ ಚೆನ್ನಾಗಿದೆ. ಕಡಿಮೆ ಪವರ್ ಅನ್ನು ಇದು ಬಳಸಿಕೊಂಡು, ಹೆಚ್ಚುವರಿ ದೀರ್ಘ ಬ್ಯಾಟರಿ ಜೀವನವನ್ನು ಒದಗಿಸುತ್ತದೆ. ಗ್ಯಾಲಕ್ಸಿ ಎ5, 2,900mAh ನಾನ್ ರಿಮೂವೇಬಲ್ ಬ್ಯಾಟರಿಯನ್ನು ಹೊಂದಿದೆ.

ಯುಎಸ್‌ಬಿ ಟೈಪ್ ಸಿ ಕನೆಕ್ಟಿವಿಟಿ ಆಪ್ಶನ್

ಯುಎಸ್‌ಬಿ ಟೈಪ್ ಸಿ ಕನೆಕ್ಟಿವಿಟಿ ಆಪ್ಶನ್

ಹೋನರ್ 5ಸಿ ಡ್ಯುಯಲ್ ಸಿಮ್ ಸ್ಮಾರ್ಟ್‌ಫೋನ್ ಆಗಿದ್ದು 4ಜಿ ಎಲ್‌ಟಿಇ ಕನೆಕ್ಟಿವಿಟಿ ಆಯ್ಕೆಯನ್ನು ಸಿಮ್ ಕಾರ್ಡ್‌ನಲ್ಲಿ ಹೊಂದಿದೆ ಮತ್ತು ಬ್ಲ್ಯೂಟೂತ್, ವೈಫೈ, ಜಿಪಿಎಸ್/ಎಜಿಪಿಎಸ್, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಅನ್ನು ಹೊಂದಿದೆ. ಯುಎಸ್‌ಬಿ ಟೈಪ್ ಸಿ ರಿವರ್ಸೀಬಲ್ ಪೋರ್ಟ್ ಅನ್ನು ಪಡೆದುಕೊಂಡಿದ್ದು, ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ನಲ್ಲಿ ಈ ಫೀಚರ್ ಅನ್ನು ನೀವು ಕಾಣುವುದಿಲ್ಲ.

ಹಗುರವಾಗಿರುವ ಡಿವೈಸ್

ಹಗುರವಾಗಿರುವ ಡಿವೈಸ್

ಹೋನರ್ 5ಸಿ ಹ್ಯಾಂಡಿ ಸ್ಮಾರ್ಟ್‌ಫೋನ್ ಎಂದೆನಿಸಿದ್ದು, ಕೈಯಲ್ಲಿ ಬಹು ನಾಜೂಕಾಗಿದೆ. ಇದರ ಗಾತ್ರ, ನಿಜಕ್ಕೂ ಬಳಕೆದಾರರಿಗೆ ಅಪ್ಯಾಯಮಾನವಾಗಿದ್ದು ನಿಮ್ಮ ಪಾಕೆಟ್‌ಗೆ ಸೂಕ್ತವಾಗಿದೆ. ಹೋನರ್ 5ಸಿ 156 ಗ್ರಾಮ್‌ ತೂಕದ್ದಾಗಿದೆ.

Best Mobiles in India

English summary
Let's take a look at 10 ways Honor 5C seems better as a phone than the Samsung Galaxy A5 smartphone that was unveiled earlier this year.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X