ಹಾನರ್ 6X: ಆಟವಾಡಿದರೂ, ವಿಡಿಯೋ ನೋಡಿದರೂ ಈ ಪೋನು ಹಿಟ್ ಆಗುವುದಿಲ್ಲ..!

ಅತೀ ಹೆಚ್ಚು ಜಾಗ ಮತ್ತು ವೇಗವನ್ನು ಕೇಳುವ ಗೇಮ್‌ಗಳನ್ನು ಈ ಪೋನಿನಲ್ಲಿ ಸುಲಭವಾಗಿ ಆಡಬಹುದಾಗಿದೆ. ಇದಕ್ಕೆಂದೆ ಅಳವಡಿಸಿರುವ ಚಿಪ್ ಸೆಟ್ ನಿಮ್ಮಗೆ ಉತ್ತಮ ಗೇಮಿಂಗ್ ಅನುಭವ ನೀಡಲಿದೆ.

|

ಚೀನಾ ಮೂಲದ ಟೆಕ್ ದೈತ್ಯ ಹುವಾವೆ ಮತ್ತೊಂದು ಬಜೆಟ್ ಸ್ಮಾರ್ಟ್‌ಪೋನನ್ನು ಭಾರತೀಯ ಮಾರುಕಟ್ಟೆಗೆ ಪರಿಚಯ ಮಾಡಿದೆ. ಹಾನರ್ 6X ಸ್ಮಾರ್ಟ್‌ಪೋನು ಭಾರತದಲ್ಲಿ ರೂ.12,999ಕ್ಕೆ ಲಭ್ಯವಿದ್ದು, ಸದ್ಯ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ 15 ಸಾವಿರದೊಳಗಿನ ಸ್ಮಾರ್ಟ್‌ಪೋನುಗಳಿಗೆ ಈ ಪೋನ್ ಸ್ಪರ್ಧೆ ನೀಡಲಿದೆ.

ಹಾನರ್ 6X: ಆಟವಾಡಿದರೂ, ವಿಡಿಯೋ ನೋಡಿದರೂ ಈ ಪೋನು ಹಿಟ್ ಆಗುವುದಿಲ್ಲ..!

ಓದಿರಿ: ಪ್ರೀ ಇಂಟರ್ನೆಟ್ ಅಂತ ವಿಡಿಯೋ ಓಪನ್ ಮಾಡೋ ಮುಂಚೇ ಈ ಸ್ಟೋರಿ ನೋಡಿ..!

ಹಾನರ್ 5X ಮಾರುಕಟ್ಟೆಯಲ್ಲಿ ಯಶಸ್ವಿಯಾದ ಹಿನ್ನಲೆಯಲ್ಲಿ ಹಾನರ್ 6X ಮಾರುಕಟ್ಟೆಗೆ ಕಾಲಿಡುತ್ತಿದ್ದು, Kirin 650 ಚಿಪ್ ಸೆಟ್ ಹೊಂದಿರುವ ಈ ಪೋನು ಆಕ್ಟಾಕೋರ್ CPU ಜೊತೆಗೆ 3GB ಮತ್ತು 4GB RAM ಮಾದರಿಯಲ್ಲಿ ಲಭ್ಯವಿರಲಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಯಾವ ಪೋನುಗಳು ಈ ಬೆಲೆಗೆ ಇಷ್ಟು ಪ್ರಮಾಣದ ಸೌಲಭ್ಯಗಳನ್ನು ಹೊಂದಿಲ್ಲ ಎನ್ನಬಹುದಾಗಿದೆ.

ಅತ್ಯಂತ ವೇಗದ ಪ್ರೋಸೆಸರ್ ಹೊಂದಿರುವ ಹಾನರ್ 6X:

ಅತ್ಯಂತ ವೇಗದ ಪ್ರೋಸೆಸರ್ ಹೊಂದಿರುವ ಹಾನರ್ 6X:

ಹಾನರ್ 6X ಸ್ಮಾರ್ಟ್‌ಪೋನಿನಲ್ಲಿ ವೇಗದ ಕಾರ್ಯಚರಣೆಗಾಗಿ kirin 655 ಚಿಪ್ ಸೆಟ್ ಅಳವಡಿಸಲಾಗಿದ್ದು, ಆಕ್ಟಾ-ಕೋರ್ ಪ್ರೋಸೆಸರ್ ಅನ್ನು ಹೊಂದಿದೆ. ಇದರಲ್ಲಿರುವ ಮೊದಲ ನಾಲ್ಕು ಪರ್ಫಾಮೆನ್ಸ್ Cortex A53 ಕೋರ್‌ಗಳು 2.1 GHz ವೇಗವನ್ನು ಹೊಂದಿದ್ದರೆ, ಉಳಿದ ನಾಲ್ಕು ಕಂಪ್ಯಾನಿಯನ್ ಕೋರ್‌ಗಳು 1.7 GHz ವೇಗವನ್ನು ಹೊಂದಿವೆ.

1.7 GHz ವೇಗದ ಕಂಪ್ಯಾನಿಯನ್ CPU ಕಡಿಮೆ ವೇಗವನ್ನು ಬೇಡುವ ಕಾರ್ಯಕ್ಕೆ ಸಹಾಯಕಾರಿಯಾಗಿದೆ. ಕಾಲ್ ಮಾಡುದ್ದು, MP3 ಪ್ಲೇ ಮಾಡುವುದು, ವಾಯ್ಸ್ ರೆಕಾರ್ಡಿಂಗ್ ಸೇರಿದಂತೆ ಸಣ್ಣಪುಟ್ಟ ಕೆಲಸಕ್ಕೆ ನೆರವಾಗಲಿದ್ದು, ಉಳಿದಂತೆ 2.1 GHz ವೇಗದ ಪ್ರೈಮರಿ CPU ಪೋನಿನಲ್ಲಿ ಗುಣಮಟ್ಟದ ಗೇಮ್ ಆಡಲು, FHD ವಿಡಿಯೋಗಳನ್ನು ನೋಡಲು ಮತ್ತು ಫೋಟೋ ಎಡಿಟಿಂಗ್ ಸೇರಿದಂತೆ ಹೆಚ್ಚಿನ ವೇಗ ಬೇಡುವ ಕಾರ್ಯಗಳಿಗೆ ಸಹಕಾರಿಯಾಗಲಿದೆ.

kirin 655 ಚಿಪ್ ಸೆಟ್ ಈ ಎರಡು ಕೋರ್‌ಗಳ ನಡುವೆ ಸರಿಯಾದ ರೀತಿಯಲ್ಲಿ ಸಮನ್ವಯತೆಯನ್ನು ಕಾಯ್ದುಕೊಳ್ಳಲಿದ್ದು, ಇದರಿಂದ ಪೋನ್ ವೇಗವಾಗಿ ಕಾರ್ಯನಿರ್ವಹಿಸಲಿದೆ. ಈ ಚಿಪ್‌ಸೆಟ್ ಕಾರ್ಯನಿರ್ವಹಿಸಲು ಹೆಚ್ಚಿನ ಶಕ್ತಿಯ ಅವಶ್ಯಕತೆ ಇರುವುದರಿಂದ ಈ ಪೋನಿನಲ್ಲಿ 3,340 mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಅಲ್ಲದೇ ವೇಗವಾಗಿ ಬ್ಯಾಟರಿ ಚಾರ್ಜ್ ಆಗುವ ತಂತ್ರಜ್ಞಾನವನ್ನು ಈ ಪೋನಿನಲ್ಲಿ ಅಳವಡಿಸಲಾಗಿದೆ. ಇದರೊಂದಿಗೆ ಮೊಬೈಲ್ ಬೇಗನೇ ಬಿಸಿಯಾಗದಂತೆ ತಡೆಯುವ ಸೌಲಭ್ಯವೂ ಈ ಪೋನಿನಲ್ಲಿದೆ.

ಮೊಬೈಲ್‌ ಗೇಮಿಂಗ್‌ಗೆ ಹೇಳಿ ಮಾಡಿಸಿದಂತಿದೆ ಹಾನರ್ 6X:

ಮೊಬೈಲ್‌ ಗೇಮಿಂಗ್‌ಗೆ ಹೇಳಿ ಮಾಡಿಸಿದಂತಿದೆ ಹಾನರ್ 6X:

kirin 655 ಚಿಪ್ ಸೆಟ್ ನೊಂದಿಗೆ ಆಕ್ಟಾ ಕೋರ್ ಪ್ರೋಸೆಸರ್ ಅನ್ನು ಹೊಂದಿರುವ ಹಾನರ್ 6X ಸ್ಮಾರ್ಟ್‌ಪೋನು ಉತ್ತಮ ಗೇಮಿಂಗ್ ಅನುಭವನ್ನು ನೀಡಲಿದೆ ಎನ್ನಲಾಗಿದೆ. ಇದಲ್ಲದೇ ಒಂದೇ ಸಮಯದಲ್ಲಿ ವಿವಿಧ ಕಾರ್ಯಗಳನ್ನು ಒಟ್ಟಾಗಿ ಮಾಡಲು ಇದು ಶಕ್ತವಾಗಿದೆ. ಒಂದೇ ಸಮಯದಲ್ಲಿ ಯೂಟುಬ್ ವಿಡಿಯೋ ನೋಡಿಕೊಂಡು, ಪೋನಿನಲ್ಲಿ ಪೋಟೊಗಳನ್ನು ಎಡಿಟ್ ಮಾಡಬಹುದಾಗಿದೆ ಅಲ್ಲದೇ ಇದೇ ಸಂದರ್ಭದಲ್ಲಿ ಸೋಷಿಯಲ್ ಮೀಡಿಯದ ಮೇಲೂ ಕಣ್ಣಾಡಿಸಬಹುದಾಗಿದೆ.

ಸದ್ಯ ಪ್ಲೇಸ್ಟೋರಿನಲ್ಲಿ ಲಭ್ಯವಿರುವ Asphalt 8, Marvel Champions, Real Racing ನಂತಹ ಅತೀ ಹೆಚ್ಚು ಜಾಗ ಮತ್ತು ವೇಗವನ್ನು ಕೇಳುವ ಗೇಮ್‌ಗಳನ್ನು ಈ ಪೋನಿನಲ್ಲಿ ಸುಲಭವಾಗಿ ಆಡಬಹುದಾಗಿದೆ. ಇದಕ್ಕೆಂದೆ ಅಳವಡಿಸಿರುವ ಚಿಪ್ ಸೆಟ್ ನಿಮ್ಮಗೆ ಉತ್ತಮ ಗೇಮಿಂಗ್ ಅನುಭವ ನೀಡಲಿದೆ.

ಮಲ್ಟಿಟಾಸ್ಕಿಂಗ್ ಈ ಪೋನಿಗೆ ಕಷ್ಟವೇ ಅಲ್ಲ:

ಮಲ್ಟಿಟಾಸ್ಕಿಂಗ್ ಈ ಪೋನಿಗೆ ಕಷ್ಟವೇ ಅಲ್ಲ:

ಹಾನರ್ 6X ಸ್ಮಾರ್ಟ್‌ಪೋನು ಮಲ್ಟಿಟಾಸ್ಕಿಂಗ್ ವಿಚಾರದಲ್ಲಿ ಸಾಕಷ್ಟು ಮುಂದಿದ್ದು, ಈ ಪೋನಿನಲ್ಲಿ 3GB ಇಲ್ಲವೇ 4GB RAM ಅಳವಡಿಸಲಾಗಿದೆ. ಇದರಿಂದ ಸುಮಾರು 30ಕ್ಕೂ ಹೆಚ್ಚು ಆಪ್‌ಗಳನ್ನು ಬ್ಯಾಕ್‌ಗ್ರಾಂಡಿನಲ್ಲಿ ತೆಗೆದಿಟ್ಟಿದ್ದರು ಯಾವುದೇ ತೊಂದರೆಯಾಗುವುದಿಲ್ಲ. ಪೋನಿ ಒಂದೇ ವೇಗದಲ್ಲಿ ಕಾರ್ಯನಿರ್ವಹಿಸಲಿದೆ.

ಹೆಚ್ಚು ಬಳಸಿದರು ಹಾನರ್ 6X ಬೇಗನೇ ಹಿಟ್ ಆಗುವುದಿಲ್ಲ:

ಹೆಚ್ಚು ಬಳಸಿದರು ಹಾನರ್ 6X ಬೇಗನೇ ಹಿಟ್ ಆಗುವುದಿಲ್ಲ:

ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್‌ಪೋನುಗಳು ಸ್ವಲ್ಪ ಸಮಯ ಬಳಕೆ ಮಾಡಿದರು ಬಹುಬೇಗನೇ ಹಿಟ್ ಆಗಲಿದೆ. ಆದರೆ ಇದಕ್ಕೆ ಹಾನರ್ 6X ಅಪವಾದ ಎನ್ನುವಂತಿದೆ. ಒಂದೇ ಸಮಯದಲ್ಲಿ 3D ಗೇಮಿಂಗ್, ವಿಡಿಯೋವನ್ನು ಬಹುಕಾಲದವೆರಗೂ ನೋಡಿದರು ಈ ಪೋನು ಹಿಟ್ ಆಗುವುದಿಲ್ಲ. ಪೋನ್ ಬೇಗನೇ ಬಿಸಿಯಾಗಬಾರದು ಎಂಬ ಕಾರಣಕ್ಕೆ ಹಿಟ್ ಕಂಟ್ರೋಲ್ ಸಿಸ್ಟಮ್ ಅನ್ನು ಈ ಪೋನಿನಲ್ಲಿ ಅಳವಡಿಸಲಾಗಿದೆ.

ಸದ್ಯ ಮಾರುಕಟ್ಟೆಯಲ್ಲಿರುವ ಬೆಸ್ಟ್‌ ಪೋನ್ 'ಹಾನರ್ 6X':

ಸದ್ಯ ಮಾರುಕಟ್ಟೆಯಲ್ಲಿರುವ ಬೆಸ್ಟ್‌ ಪೋನ್ 'ಹಾನರ್ 6X':

ಮಾರುಕಟ್ಟೆಯಲ್ಲಿ ಲಭ್ಯವಿರುವ 15 ಸಾವಿರದೊಳಗಿನ ಸ್ಮಾರ್ಟ್‌ಪೋನ್‌ಗಳಲ್ಲಿ ಯಾವ ಪೋನು ಇಷ್ಟು ಒಳ್ಳೆಯ ಬಾಳಿಕೆ ಮತ್ತು ಕಾರ್ಯನಿರ್ವಹಣೆಯನ್ನು ಹೊಂದಿಲ್ಲ ಎಂದೇ ಹೇಳಬಹುದು. ಬಜೆಟ್ ಸ್ಮಾರ್ಟ್‌ಪೋನು ಖರೀದಿಸಲು ಚಿಂತನೆ ನಡೆಸುತ್ತಿರುವವರು ಆರಾಮವಾಗಿ ಹಾನರ್ 6X ಸ್ಮಾರ್ಟ್‌ಪೋನನ್ನು ಖರೀದಿಸಬಹುದಾಗಿದೆ. ಇದೇ ಬೆಲೆಗೆ ಲಭ್ಯವಿರುವ ರೆಡ್‌ಮಿ ನೋಟ್ 4, ಮೊಟೊ G4 ಪೋನುಗಳು ಸಹ ಈ ಪೋನಷ್ಟು ಗುಣಮಟ್ಟ ಮತ್ತು ಆಯ್ಕೆಗಳನ್ನು ಹೊಂದಿಲ್ಲ.

Best Mobiles in India

Read more about:
English summary
Chinese tech giant Huawei introduced the budget smartphone- Honor 6X in India at a starting price of Rs. 12,999. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X