ಬಿಡುಗಡೆಯಾಗುತ್ತಿದೆ "ಹಾನರ್ 6ಎಕ್ಸ್"!!..ಸ್ಮಾರ್ಟ್‌ಫೋನ್ ಪ್ರಿಯರಿಗೆ ಏಕಿಷ್ಟು ಆತುರ?

ಹುವಾವೆಯ ಸರಣಿ ಸ್ಮಾರ್ಟ್‌ಫೋನ್ ಆಗಿರುವ "ಹಾನರ್‌ 6ಎಕ್ಸ್" ಅತ್ಯಂತ ಹೆಚ್ಚು ಫೀಚರ್‌ ಒಳಗೊಂಡು ಬರುತ್ತಿರುವ ಸ್ಮಾರ್ಟ್‌ಫೋನ್‌ ಆಗಿದ್ದು, ಕಡಿಮೆ ಬೆಲೆ ಸಹ ಇರುವುದರಿಂದ ಸ್ಮಾರ್ಟ್‌ಫೋನ್‌ ಪ್ರಿಯರು ಖರೀದಿಸಲು ಕಾತುರರಾಗಿದ್ದಾರೆ.

|

ಚೀನಾದ ಹುವಾವೆ ಕಂಪೆನಿಯ ಅತ್ಯುತ್ತಮ ಬ್ರಾಂಡ್ ಎಂದು ಹೆಸರಾಗಿರುವ ಹಾನರ್ ಸೀರಿಸ್‌ ಸ್ಮಾರ್ಟ್‌ಫೋನ್ ಮತ್ತು ಮೊಬೈಲ್ ಪ್ರಿಯರ ಬಹುನಿರೀಕ್ಷಿತ ಫೀಚರ್ ಸ್ಮಾರ್ಟ್‌ಫೋನ್ "ಹಾನರ್ 6ಎಕ್ಸ್" ಭಾರತದಲ್ಲಿ ಇದೇ ಜನವರಿ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗುತ್ತಿದೆ.

ಹುವಾವೆಯ ಸರಣಿ ಸ್ಮಾರ್ಟ್‌ಫೋನ್ ಆಗಿರುವ "ಹಾನರ್‌ 6ಎಕ್ಸ್" ಅತ್ಯಂತ ಹೆಚ್ಚು ಫೀಚರ್‌ ಒಳಗೊಂಡು ಬರುತ್ತಿರುವ ಸ್ಮಾರ್ಟ್‌ಫೋನ್‌ ಆಗಿದ್ದು, ಕಡಿಮೆ ಬೆಲೆ ಸಹ ಇರುವುದರಿಂದ ಸ್ಮಾರ್ಟ್‌ಫೋನ್‌ ಪ್ರಿಯರು ಖರೀದಿಸಲು ಕಾತುರರಾಗಿದ್ದಾರೆ. ಗೋಲ್ಡ್, ಸಿಲ್ವರ್, ಗ್ರೇ ಮತ್ತು ಬ್ಲೂ ಕಲರ್‌ಗಳಲ್ಲಿ "ಹಾನರ್‌ 6ಎಕ್ಸ್" ಬಿಡುಗಡೆಯಾಗುತ್ತಿದ್ದು, ಸ್ಮಾರ್ಟ್‌ಫೋನ್‌ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಲು ರೆಡಿಯಾಗಿದೆ.

ಪ್ರಪಂಚದ ಟಾಪ್ 5 ವಿಡಿಯೋ ಗೇಮ್‌ ಯಾವುವು? ಏನು ವಿಶೇಷ?

ಹಾಗಾದರೆ ನೂತನವಾಗಿ ಬಿಡುಗಡೆಯಾಗುತ್ತಿರುವ "ಹಾನರ್‌ 6ಎಕ್ಸ್" ಸ್ಮಾರ್ಟ್‌ಫೋನ್‌ ಏನೆಲ್ಲಾ ವಿಶೇಷತೆಗಳನ್ನು ಹೊಂದಿದೆ ಮತ್ತು ಬೆಲೆ ಎಷ್ಟು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ಡಿಸ್‌ಪ್ಲೇ ಮತ್ತು ರೆಸ್ಯುಲೇಶನ್

ಡಿಸ್‌ಪ್ಲೇ ಮತ್ತು ರೆಸ್ಯುಲೇಶನ್

"ಹಾನರ್‌ 6ಎಕ್ಸ್" 5.5 ಇಂಚ್ ಸ್ಪೋರ್ಟಿಂಗ್ ಐಪಿಎಸ್ ಡಿಸ್‌ಪ್ಲೇ ಜೊತೆಗೆ 2.5D ಕರ್ವಡ್ ಗ್ಲಾಸ್‌ ಪ್ರೊಟೆಕ್ಷನ್ ಹೊಂದಿದೆ.ಮತ್ತು 1080*1920 ಪಿಕ್ಸೆಲ್ ರೆಸ್ಯುಲೇಶನ್ ಹೊಂದಿದ್ದು, ಹೆಚ್‌ಡಿ ಗುಣಮಟ್ಟದ ವಿಡಿಯೋಗಳು ಅತ್ಯುತ್ತಮವಾಗಿ ಮೂಡಿಬರಲಿವೆ.

ಒಎಸ್ ಮತ್ತು ಪ್ರೊಸೆಸರ್ ಯಾವುದು?

ಒಎಸ್ ಮತ್ತು ಪ್ರೊಸೆಸರ್ ಯಾವುದು?

ಹಾನರ್‌ 6ಎಕ್ಸ್ ಇಎಮ್‌ಯುಐ 4.1 ಆಪರೇಟಿಂಗ್ ಸಿಸ್ಟಮ್ ಮತ್ತು ಕಿರಿನ್ ಆಕ್ಟ-ಕೋರ್ (4 cores at 2.1GHz + 4 cores at 1.7GHz) ಪ್ರೊಸೆಸರ್ ಹೊಂದಿದ್ದು, ಉಪಯೋಗಕ್ಕೆ ಅತ್ಯದ್ಬುತ ಫೀಲ್ ನೀಡಲಿದೆ. ಜೊತೆಗೆ ಹೈಬ್ರಿಡ್ ಡ್ಯುವೆಲ್ ಸಿಮ್ ಕಾರ್ಡ್ ಸ್ಲಾಟ್ ಹೊಂದಿದೆ.

12 ಮತ್ತು 8 ಮೆಗಾಪಿಕ್ಸೆಲ್ ಕ್ಯಾಮೆರಾ!

12 ಮತ್ತು 8 ಮೆಗಾಪಿಕ್ಸೆಲ್ ಕ್ಯಾಮೆರಾ!

ಹಾನರ್ ಸೀರಿಸ್ ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾ ಎಂದರೆ ಅತ್ಯುತ್ತಮ ಎನ್ನುವ ಅನುಭವ ಬರುತ್ತದೆ. ಕಡಿಮೆ ಮೆಗಾಪಿಕ್ಸೆಲ್ ಕ್ಯಾಮೆರಾ ಆದರೂ ಇದಕ್ಕಿಂತ ಉತ್ತಮ ಚಿತ್ರಗಳನ್ನು ಇದೇ ಸರಣಿಯ ಯಾವ ಸ್ಮಾರ್ಟ್‌ಫೋನ್‌ಗಳು ತೆಗೆಯಲಾರವು.

RAM ಮತ್ತು ROM

RAM ಮತ್ತು ROM

3GB RAM/ 32GB ಸಂಗ್ರಹಣಾ ಸಾಮರ್ಥ್ಯ,4GB RAM/ 32GBಸಂಗ್ರಹಣಾ ಸಾಮರ್ಥ್ಯ, ಮತ್ತು 4GB RAM/ 64GB ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಹಾನರ್‌ 6ಎಕ್ಸ್ ಸ್ಮಾರ್ಟ್‌ಫೋನ್‌ಗಳು ಹೊರಬರುತ್ತಿವೆ.

ಬೆಲೆ ಎಷ್ಟು?

ಬೆಲೆ ಎಷ್ಟು?

3GB RAM/ 32GB ಸಂಗ್ರಹಣಾ ಸಾಮರ್ಥ್ಯದ ಹಾನರ್‌ 6ಎಕ್ಸ್ ಸ್ಮಾರ್ಟ್‌ಫೋನ್‌ ಬೆಲೆ 9,999 ರೂಗಳಾದರೆ 4GB RAM/ 64GB ಸಂಗ್ರಹಣಾ ಸಾಮರ್ಥ್ಯ ಹೊಂದಿರುವ ಹಾನರ್‌ 6ಎಕ್ಸ್ ಸ್ಮಾರ್ಟ್‌ಫೋನ್‌ ಬೆಲೆ 12,999 ರೂಗಳಾಗಿವೆ.

Best Mobiles in India

English summary
Huawei brand Honor has revealed it's set to launch its Honor 6X smartphone in India in late-January. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X