ಕಡಿಮೆ ಬೆಲೆಗೆ ಉತ್ತಮ 4G VoLTE ಸಪೋರ್ಟ್ ಪೋನ್ ಹಾನರ್‌ ಬಿ 2

ಚೀನಾ ಮೂಲದ ಹಾನರ್ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಮತ್ತೊಂದು ಬಜೆಟ್ ಫೋನ್ ಬಿಡುಗಡೆ ಮಾಡಿದೆ. ರೂ.7,499ಗೆ ಲಭ್ಯವಿದೆ.

|

ಚೀನಾ ಮೂಲದ ಹಾನರ್ ಭಾರತೀಯ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಮತ್ತೊಂದು ಬಜೆಟ್ ಫೋನ್ ಬಿಡುಗಡೆ ಮಾಡಿದೆ. ಈ ಫೋನ್ ರೂ.7,499ಗೆ ಲಭ್ಯವಿದ್ದು, ಈ ಪೋನಿಗೆ ಹಾನರ್ ಬಿ 2 ಎಂದು ಹೆಸರಿಡಲಾಗಿದೆ. ಈ ಹಿಂದೆ ಮಾರುಕಟ್ಟೆಗೆ ಬಂದಿದ್ದ ಹಾನರ್ ಬಿ ಫೋನಿನ ಮುಂದಿನ ಅವತರಣಿಕೆಯಾಗಿದೆ.

ಕಡಿಮೆ ಬೆಲೆಗೆ ಉತ್ತಮ 4G VoLTE ಸಪೋರ್ಟ್ ಪೋನ್ ಹಾನರ್‌ ಬಿ 2

ಓದಿರಿ: ಬಿಡುಗಡೆಯಾಗಿದೆ ಜಿಯೋ DTH: ವಿಡಿಯೋ ನೋಡಿ..!!!!

ಹಾನರ್ ಬಿ 2 ಸ್ಮಾರ್ಟ್‌ಫೋನಿನ ಮತ್ತೊಂದು ವಿಶೇಷತೆ ಎಂದರೆ ಫೋನಿನ ಹಿಂಬದಿ ಇರುವ ಕ್ಯಾಮೆರಾ ಸುತ್ತ ಎಲ್‌ಇಡಿ ಲೈಟ್ ನೀಡಲಾಗಿದ್ದು, ಇದು ಒಂದೊಂದು ನೋಟಿಫಿಕೆಷನ್‌ಗೆ ಒಂದೊಂದು ಬಣ್ಣದಲ್ಲಿ ಬೆಳಗಲಿದೆ. ಈ ಹಿನ್ನಲೆಯಲ್ಲಿ ಈ ಫೋನಿನ ವಿಶೇಷತೆಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಓದಿರಿ: ಯೂಟೂಬ್‌ನಲ್ಲಿ ಹೆಚ್ಚು ವಿಡಿಯೋ ನೋಡುವವರಿಗಾಗಿ...!!!

4.5 ಇಂಚಿನ ಡಿಸ್‌ಪ್ಲೇ:

4.5 ಇಂಚಿನ ಡಿಸ್‌ಪ್ಲೇ:

ಹಾನರ್ ಬಿ 2 ಬಜೆಟ್ ಸ್ಮಾರ್ಟ್‌ಫೋನಾಗಿರುವುದರಿಂದ 4.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು 480×854 p ಗುಣಮಟ್ಟದಿಂದ ಕೂಡಿದೆ ಎನ್ನಲಾಗಿದೆ. ಈ ಫೋನ್ ಆಂಡ್ರಾಯ್ಡ್ 5.1ನಲ್ಲಿ ಕಾರ್ಯನಿರ್ವಹಿಸಲಿದೆ.

5 MP ಕ್ಯಾಮೆರಾ:

5 MP ಕ್ಯಾಮೆರಾ:

ಹಾನರ್ ಬಿ 2 ಬಜೆಟ್ ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ 5 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಮುಂಭಾಗದಲ್ಲಿ 2 MP ಕ್ಯಾಮೆರಾವನ್ನು ನೀಡಿದೆ. ಅಲ್ಲದೇ ಡ್ಯುಯಲ್ ಟೋನ್ ಎಲ್‌ಇಟಿ ಫ್ಲಾಷ್ ಸಹ ಆಳವಡಿಸಲಾಗಿದೆ. ಇದರಲ್ಲಿ ಮಿಡಿಯಾ ಟೆಕ್ ಪ್ರೊಸೆಸರ್ ಅಳವಡಿಸಲಾಗಿದೆ.

1GB RAM/ 8GB ROM:

1GB RAM/ 8GB ROM:

ಹಾನರ್ ಬಿ 2 ಫೋನಿನಲ್ಲಿ 1GB RAM ಅಳವಡಿಸಲಾಗಿದ್ದು, ಇದರೊಂದಿಗೆ 8GB ಇಂಟರ್ನಲ್ ಮೆಮೊರಿ ಸಹ ಈ ಫೋನಿನಲ್ಲಿ ಕಾಣಬಹುದಾಗಿದೆ. ಅಲ್ಲದೇ 32GB ವರೆಗೂ ಮೆಮೊರಿಯನ್ನು ವಿಸ್ತರಿಸಿಕೊಳ್ಳಬಹುದಾಗಿದೆ.

4G VoLTE ಸಫೋರ್ಟ್ ಮಾಡಲಿದೆ:

4G VoLTE ಸಫೋರ್ಟ್ ಮಾಡಲಿದೆ:

ಸದ್ಯ ಮಾರುಕಟ್ಟೆಯಲ್ಲಿ 4G VoLTE ಸಫೋರ್ಟ್ ಮಾಡುವ ಫೋನುಗಳಿಗೆ ಮಾತ್ರವೇ ಹೆಚ್ಚಿನ ಬೇಡಿಕೆ ಇದ್ದು ಇದಕ್ಕೆ ಪ್ರಮುಖ ಕಾರಣ ಜಿಯೋ ಎಂದರೆ ತಪ್ಪಾಗಲಾರದು. ಈ ಹಿನ್ನಲೆಯಲ್ಲಿ ಈ ಫೋನ್‌ ಸಹ 4G VoLTE ಸಫೋರ್ಟ್ ಮಾಡಲಿದೆ.

Best Mobiles in India

Read more about:
English summary
Honor Bee 2, a budget 4G VoLTE phone, is listed on Honor’s India website. The smartphone is aimed at budget conscious buyers, and is priced at Rs 7,499. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X