ಹುವಾವೆಯ ಹೋನರ್ ನೋಟ್ 8 ಫೋನ್ ಶೀಘ್ರದಲ್ಲೇ ಭಾರತಕ್ಕೆ

By Shwetha
|

ಹುವಾವೆಯ ಆನ್‌ಲೈನ್ ಬ್ರ್ಯಾಂಡ್, ಹೋನರ್ ಈಗ ಹೋನರ್ ನೋಟ್ 8 ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಿದ್ದು ಚೀನಾ ಮಾರುಕಟ್ಟೆಯಲ್ಲಿ ಸದ್ಯಕ್ಕೆ ಡಿವೈಸ್ ಕಾಲಿರಿಸಿದೆ. 6.6 ಇಂಚಿನ ಡಿಸ್‌ಪ್ಲೇಯನ್ನು ಫೋನ್ ಪಡೆದುಕೊಂಡಿದ್ದು, ಲೆನೊವೊ ಫ್ಯಾಬ್ ಪ್ಲಸ್ ಮತ್ತು ಶ್ಯೋಮಿ ಎಮ್ಐ ಮ್ಯಾಕ್ಸ್ ಈ ಡಿವೈಸ್‌ಗೆ ಸ್ಪರ್ಧಿಗಳಾಗಿವೆ.

ಓದಿರಿ: ಮೊಬೈಲ್‌ಗಳಲ್ಲಿ ಇಂಟರ್ನೆಟ್ ಇಲ್ಲದಿದ್ದರೂ ಫೇಸ್‌ಬುಕ್‌ ಬಳಕೆ ಹೇಗೆ?

ಚಿನ್ನದ ಬಣ್ಣ, ಬೆಳ್ಳಿ ಮತ್ತು ಕಂದು ಬಣ್ಣಗಳಲ್ಲಿ ಡಿವೈಸ್ ಬಂದಿದ್ದು, ಪ್ರಿ ಆರ್ಡರ್ ಇಂದಿನಿಂದ ಆರಂಭವಾಗಿ ಆಗಸ್ಟ್ 9 ಕ್ಕೆ ಇದು ಮಾರಾಟವನ್ನು ಕಂಡುಕೊಳ್ಳಲಿದೆ.ಇಂದಿನ ಲೇಖನದಲ್ಲಿ ಹೋನರ್ ನೋಟ್ 8 ನ ವಿಶೇಷತೆಗಳನ್ನು ಸ್ಲೈಡರ್‌ಗಳಲ್ಲಿ ಕಂಡುಕೊಳ್ಳುತ್ತಿದ್ದೇವೆ.

ಫಾರ್ಮ್ ಫ್ಯಾಕ್ಟರ್

ಫಾರ್ಮ್ ಫ್ಯಾಕ್ಟರ್

ಈ ಸ್ಮಾರ್ಟ್‌ಫೋನ್ ಮೆಟಲ್ ಬಾಡಿಯನ್ನು ಪಡೆದುಕೊಂಡಿದ್ದು, ಇದರ ಅಳತೆ 7.18 mm ಆಗಿದೆ ಮತ್ತು ತೆಳು ರಚನೆಯನ್ನು ಹೊಂದಿದ್ದು 219 ಗ್ರಾಮ್ ತೂಕವನ್ನು ಹೊಂದಿದೆ.

ಡಿಸ್‌ಪ್ಲೇ

ಡಿಸ್‌ಪ್ಲೇ

ಹೋನರ್ ನೋಟ್ 8 ಸ್ಮಾರ್ಟ್‌ಫೋನ್ 6.6 ಇಂಚಿನ ಕ್ವಾಡ್ ಎಚ್‌ಡಿ 2.5 ಡಿ ಕರ್ವ್ಡ್ ಗ್ಲಾಸ್ ಅನ್ನು ಪಡೆದುಕೊಂಡಿದೆ.

ಹಾರ್ಡ್‌ವೇರ್

ಹಾರ್ಡ್‌ವೇರ್

ಹಾರ್ಡ್‌ವೇರ್ ವಿಷಯಕ್ಕೆ ಬಂದಾಗ, ನೋಟ್ 8 ಹೆಚ್ಚು ಚಾಲಿತ ಓಕ್ಟಾ ಕೋರ್ ಕಿರಿನ್ 955 ಪ್ರೊಸೆಸರ್‌ನೊಂದಿಗೆ ಬಂದಿದ್ದು ಮಾಲಿ T880-MP4 ನಂತೆ ಜಿಪಿಯುವನ್ನು ಪಡೆದುಕೊಂಡಿದೆ.

ಸಂಗ್ರಹಣೆ

ಸಂಗ್ರಹಣೆ

ಸಂಗ್ರಹಣೆಯ ಬಗ್ಗೆ ಮಾತನಾಡುವಾಗ, ಫ್ಯಾಬ್ಲೆಟ್ 4 ಜಿಬಿ RAM ನೊಂದಿಗೆ ಬಂದಿದ್ದು, 32/64/128 ಜಿಬಿಗೆ ಬಂದಿದ್ದು ಇದನ್ನು ಎಸ್‌ಡಿ ಕಾರ್ಡ್ ಸ್ಲಾಟ್ ಬಳಸಿ 128 ಜಿಬಿಗೆ ವಿಸ್ತರಿಸಬಹುದಾಗಿದೆ.

ಕ್ಯಾಮೆರಾ

ಕ್ಯಾಮೆರಾ

13 ಎಮ್‌ಪಿ ರಿಯರ್ ಕ್ಯಾಮೆರಾದೊಂದಿಗೆ ಬಂದಿದ್ದು ಎಲ್‌ಇಡಿ ಫ್ಲ್ಯಾಶ್ ಅನ್ನು ಒಳಗೊಂಡಿದೆ ಮತ್ತು ಮುಂಭಾಗ ಕ್ಯಾಮೆರಾ 8 ಎಮ್‌ಪಿಯಾಗಿದೆ.

ಆಪರೇಟಿಂಗ್ ಸಿಸ್ಟಮ್

ಆಪರೇಟಿಂಗ್ ಸಿಸ್ಟಮ್

ಹೋನರ್ ನೋಟ್ 8 ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊನೊಂದಿಗೆ ಬಂದಿದ್ದು EMUI 4.0 ನೊಂದಿಗೆ ಬಂದಿದೆ.

ಸಂಪರ್ಕ ವಿಶೇಷತೆಗಳು

ಸಂಪರ್ಕ ವಿಶೇಷತೆಗಳು

ಈ ಫ್ಯಾಬ್ಲೆಟ್ ಸಂಪರ್ಕ ಆಯ್ಕೆಗಳನ್ನು ಪಡೆದುಕೊಂಡಿದ್ದು, 4ಜಿ ವೋಲ್ಟ್, ವೈ-ಫೈ, ಬ್ಲ್ಯೂಟೂತ್ 4.2, ಜಿಪಿಎಸ್, ಎನ್‌ಎಫ್‌ಸಿ ಮತ್ತು ಯುಎಸ್‌ಬಿ ಟೈಪ್ ಸಿ ಯನ್ನು ಹೊಂದಿದೆ.

ಬ್ಯಾಟರಿ

ಬ್ಯಾಟರಿ

ಈ ಸ್ಮಾರ್ಟ್‌ಫೋನ್ 4500mAh ಬ್ಯಾಟರಿಯನ್ನು ಹೊಂದಿದ್ದು ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.

Best Mobiles in India

English summary
Today, we have jotted down the list of 7 features of Honor Note 8 smartphone in the below slider. Do swirl through.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X