ಯಾವುದೇ ಒಂದು ಸ್ಮಾರ್ಟ್‌ಫೋನ್ ಆಯಸ್ಸು ಎಷ್ಟು?

ಕಡಿಮೆಬೆಲೆಯಲ್ಲಿ ಹೆಚ್ಚು ಫೀಚರ್‌ಗಳನ್ನು ಹೊತ್ತು ಬರುವ ಸ್ಮಾರ್ಟ್‌ಫೋನ್‌ಗಳು ಉತ್ತಮ ಹಾರ್ಡ್‌ವೇರ್‌ ಹೊಂದಿರುವುದಿಲ್ಲ. ಮತ್ತು ಕಡಿಮೆ ಗುಣಮಟ್ಟದ ಸಾಫ್ಟ್‌ವೇರ್‌ಗಳನ್ನು ಅಳವಡಿಸಿಕೊಂಡಿವೆ.

Written By:

ನೂತನವಾಗಿ ಖರೀದಿಸಿದ ಒಂದು ಸ್ಮಾರ್ಟ್‌ಫೋನ್ ಹೆಚ್ಚು ಎಂದರೆ ಎಷ್ಟು ಬಾಳಿಕೆ ಬರಬಹುದು? ಒಂದು ವರ್ಷ? ಇಲ್ಲವೇ 2 ವರ್ಷ? ಅಥವಾ 5 ವರ್ಷ ಎಂದು ನೀವು ಹೇಳಬಹುದು. ಆದರೆ ಸಂಶೋಧನೆಯೊಂದರ ಪ್ರಕಾರ ಒಂದು ಸ್ಮಾರ್ಟ್‌ಫೋನ್ ಸರಿಯಾಗಿ ಬಾಳಿಕೆ ಬರುತ್ತಿರುವುದು ಕೇವಲ ಆರುತಿಂಗಳು ಮಾತ್ರ!!

ಹೌದು, ಪ್ರಸ್ತುತ ಇರುವ ಸ್ಮಾರ್ಟ್‌ಫೋನ್‌ಗಳು ಹೆಚ್ಚೆಂದರೆ ಕೇವಲ ಆರುತಿಂಗಳ ಕಾಲ ಮಾತ್ರ ಉತ್ತಮ ಕಾರ್ಯನಿರ್ವಹಣೆ ನೀಡುತ್ತಿವೆ. ಕೆಲವೊಂದು ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳು ಮಾತ್ರ ಸ್ವಲ್ಪಗುಣಮಟ್ಟವನ್ನು ಹೊಂದಿದ್ದು, ಹೆಚ್ಚೆಂದರೆ 1 ವರ್ಷ ಬಾಳಿಕೆ ಬರತ್ತಿವೆ ಎಂದು ಸಂಶೋಧನೆಯೋಂದು ಹೇಳಿದೆ.

ಯಾವುದೇ ಒಂದು ಸ್ಮಾರ್ಟ್‌ಫೋನ್ ಆಯಸ್ಸು ಎಷ್ಟು?

ಫ್ಲಿಪ್‌ಕಾರ್ಟ್‌ನಿಂದ "ಬೆಸ್ಟ್ ಆಫ್ 2016 ಸ್ಮಾರ್ಟ್‌ಫೋನ್ ಸೇಲ್"! ಏನಿದು ಬಿಗ್ ಆಫರ್‌ ಗೊತ್ತಾ?

ಕಡಿಮೆಬೆಲೆಯಲ್ಲಿ ಹೆಚ್ಚು ಫೀಚರ್‌ಗಳನ್ನು ಹೊತ್ತು ಬರುವ ಸ್ಮಾರ್ಟ್‌ಫೋನ್‌ಗಳು ಉತ್ತಮ ಹಾರ್ಡ್‌ವೇರ್‌ ಹೊಂದಿರುವುದಿಲ್ಲ. ಮತ್ತು ಕಡಿಮೆ ಗುಣಮಟ್ಟದ ಸಾಫ್ಟ್‌ವೇರ್‌ಗಳನ್ನು ಅಳವಡಿಸಿಕೊಂಡಿವೆ. ಹಾಗಾಗಿ, ಸ್ಮಾರ್ಟ್‌ಫೋನ್‌ ಬೇಗ ಹಾಳಾಗುತ್ತಿವೆ ಎಂದು ಅಂತರಾಷ್ಟ್ರೀಯ ಮಟ್ಟದ ವರ್ಲ್ಡ್ ಸ್ಮಾರ್ಟ್‌ಫೋನ್ ಟೆಕ್ನಾಲಜಿಸ್ ಹೇಳಿದೆ.

ಯಾವುದೇ ಒಂದು ಸ್ಮಾರ್ಟ್‌ಫೋನ್ ಆಯಸ್ಸು ಎಷ್ಟು?

ಜನರು ಸ್ಮಾರ್ಟ್‌ಫೋನ್‌ ಉಪಯೋಗಿಸುತ್ತಿರುವ ಬಗ್ಗೆಯೂ ಕಂಪೆನಿ ವಿವರಣೆ ನೀಡಿದ್ದು, ಪ್ರಪಂಚದ ಹೆಚ್ಚಿನ ಜನರಿಗೆ ಸ್ಮಾರ್ಟ್‌ಫೋನ್ ಸರಿಯಾಗಿ ನಿರ್ವಹಣೆ ಮಾಡಲು ಬರುವುದಿಲ್ಲ. ಇನ್ನು ಮೊಬೈಲ್ ಕಂಪೆನಿಗಳು ಸಹ ಸ್ಮಾರ್ಟ್‌ಫೋನ್ ಬಗ್ಗೆ ಇವರಿಗೆ ಯಾವುದೇ ಸರಿಯಾದ ನಿರ್ದೇಶನ ನೀಡುತ್ತಿಲ್ಲ ಹಾಗಾಗಿ ಸ್ಮಾರ್ಟ್‌ಫೋನ್‌ಗಳು ಹೆಚ್ಚು ದಿನ ಬಳಕೆ ಬರುತ್ತಿಲ್ಲ ಎಂದು ಕಂಪೆನಿ ಆರೋಪಿಸಿದೆ.

ಯಾವುದೇ ಒಂದು ಸ್ಮಾರ್ಟ್‌ಫೋನ್ ಆಯಸ್ಸು ಎಷ್ಟು?

ಇನ್ನು ಬಹುತೇಕ ಜನರಿಗೆ ಸ್ಮಾರ್ಟ್‌ಫೋನ್‌ ಕ್ರೇಜ್ಃ ಇದ್ದು, ಇವುಗಳನ್ನು ಎನ್‌ಕ್ಯಾಶ್ ಮಾಡಿಕೊಳ್ಳುವಲ್ಲಿ ಮೋಸದ ಸ್ಮಾರ್ಟ್‌ಫೋನ್‌ ಕಂಪೆನಿಗಳು ಸಫಲವಾಗುತ್ತಿವೆ. ಹಾಗಾಗಿ, ಇವುಗಳಿಗೆ ಕಡಿವಾಣ ಹಾಕಬೇಕಿದೆ ಎಂದು ವರ್ಲ್ಡ್ ಸ್ಮಾರ್ಟ್‌ಫೋನ್ ಟೆಕ್ನಾಲಜಿಸ್ ಅಭಿಪ್ರಾಯಪಟ್ಟಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
If you've ever owned an Android smartphone phone, you probably noticed that it became slower after a few months of use. to know more visit to kannada.gizbot.com
Please Wait while comments are loading...
Opinion Poll

Social Counting