ಫೇಸ್‌ಬುಕ್‌ನ ಹೊಸ ಯೋಜನೆಯಿಂದ ಹೊರಬರಬೇಕೇ?

By Shwetha
|

ನಿಮ್ಮ ಆಸಕ್ತಿಗಳಿಗೆ ನಿರ್ದಿಷ್ಟವಾಗಿರುವ ಟಾರ್ಗೆಟ್ ಜಾಹೀರಾತುಗಳನ್ನು ವಿತರಿಸಲು ನಿಮ್ಮ ಬ್ರೌಸರ್ ಇತಿಹಾಸವನ್ನು ಅಧ್ಯಯನ ಮಾಡುವಂತಹ ಹೊಸ ಜಾಹೀರಾತು ಪ್ರೊಗ್ರಾಮ್ಅನ್ನು ಫೇಸ್‌ಬುಕ್ ಕೂಡಲೇ ಲಾಂಚ್ ಮಾಡುತ್ತಿದೆ.

ಆದರೆ ಅದೃಷ್ಟವಶಾತ್ ಈ ಪ್ರೊಗ್ರಾಮ್‌ನಿಂದ ಹೊರಬರುವ ಆಯ್ಕೆಯೂ ಇದರಲ್ಲಿದ್ದು ಇದರಿಂದ ನೀವು ಆನ್‌ಲೈನ್‌ನಲ್ಲಿ ಏನು ಮಾಡುತ್ತಿರುವಿರಿ ಎಂಬುದನ್ನು ಫೇಸ್‌ಬುಕ್‌ನಲ್ಲಿನೋಡಲಾಗುವುದಿಲ್ಲ.

ಫೇಸ್‌ಬುಕ್ ಹೊಸ ಯೋಜನೆ ಹೇಗಿದೆ?

ಸ್ವಲ್ಪ ವಾರಗಳ ನಂತರ, ಫೇಸ್‌ಬುಕ್ ಬಳಕೆದಾರರು ಇದರ ಹೊಸ ಜಾಹೀರಾತು ಆದ್ಯತೆಗಳನ್ನು ಬಳಸಲು ಮತ್ತು ನಿಯಂತ್ರಿಸಲು ಸಾಧ್ಯವಾಗುತ್ತದೆ. ನಿಮಗೆ ಫೇಸ್‌ಬುಕ್ ತೋರಿಸುವ ಪ್ರತಿ ಜಾಹೀರಾತಿನಲ್ಲಿ ಇದು ಲಭ್ಯವಿರುತ್ತದೆ, ನೀವೇಕೆ ಆ ಜಾಹೀರಾತನ್ನು ನೋಡುತ್ತಿರುವಿರಿ ಹಾಗೂ ನಿಮ್ಮ ಆಸಕ್ತಿಗಳನ್ನು ಸೇರಿಸಲು ತೆಗೆದುಹಾಕಲು

ವೈಯಕ್ತೀಕರಿಸಿದ ಜಾಹೀರಾತುಗಳನ್ನು ಹಾಗೆಯೇ ನಿಮಗೆ ಸರಿಹೊಂದಿಸಬಹುದು. ಮುಂಬರುವ ತಿಂಗಳಲ್ಲಿ ತನ್ನ ಜಾಹೀರಾತು ಆದ್ಯತೆಗಳನ್ನು ಉಪಕರಣದ ಮೂಲಕ ವಿಸ್ತರಿಸಲು ಫೇಸ್‌ಬುಕ್ ನಿರ್ಧರಿಸಿದೆ.

ನಿಮ್ಮ ವೈಯಕ್ತಿಕ ಮಾಹಿತಿಯನ್ನು ಫೇಸ್‌ಬುಕ್ ಮಾರಬಾರದೆಂಬುದು ನಿಮ್ಮ ಆಸೆಯಾಗಿದ್ದರೆ, ಅದರಿಂದ ಹೊರ ಬರುವ ಸುಲಭ ವಿಧಾನ ಕೂಡ ಇದೆ. ಯಾವುದೇ ವೆಬ್‌ ಬ್ರೌಸರ್‌ನಲ್ಲಿ, ಡಿಜಿಟಲ್ ಅಡ್ವೈರ್‌ಟೈಸಿಂಗ್ ಅಲೈಯನ್ಸ್ ಆಪ್ಟ್ - ಔಟ್ ಅನ್ನು ಭೇಟಿ ಮಾಡಿ ಮತ್ತು ಪುಟದ ಮಧ್ಯಭಾಗದಲ್ಲಿ, "ಕಂಪೆನಿಗಳ ಕಸ್ಟಮೈಸಿಂಗ್ ಜಾಹೀರಾತು ಫಾರ್ ಯುವರ್ ಬ್ರೌಸರ್" ನಲ್ಲಿ ಕ್ಲಿಕ್ ಮಾಡಿ. ನೀವು ಜಾಹೀರಾತುಗಳನ್ನು ಪಡೆಯಲು ಇಚ್ಛಿಸದೇ ಇರುವ ಕಂಪೆನಿಗಳ ಪಟ್ಟಿಯಿರುವ ಮುಂದಿನ ಬಾಕ್ಸ್ ಅನ್ನು ಆಯ್ಕೆ ಮಾಡಿ. ನಂತರ ಕೆಳಕ್ಕೆ ಸ್ಕ್ರಾಲ್ ಮಾಡಿ ಮತ್ತು ನಿಮ್ಮ ಆಯ್ಕೆಗಳನ್ನು ಸಲ್ಲಿಸಿ.

ಐಓಎಸ್ ಹಾಗೂ ಆಂಡ್ರಾಯ್ಡ್‌ನಲ್ಲಿ ಎಂಬೆಡ್ ಮಾಡಲಾದ ವಿಶೇಷ ನಿಯಂತ್ರಣ ಸೆಟ್ಟಿಂಗ್‌ಗಳ ಮೂಲಕ ಮೊಬೈಲ್ ಬಳಕೆದಾರರು ಜಾಹೀರಾತಿನ ಮೂಲಕ ಹೆಚ್ಚುವರಿಯಾಗಿ ಹೊರಗೆ ಬರಬೇಕು. ಐಓಎಸ್‌ನಲ್ಲಿ "ಸೆಟ್ಟಿಂಗ್ಸ್" ಅಪ್ಲಿಕೇಶನ್‌ಗೆ ಹೋಗಿ ಮತ್ತು "ಪ್ರೈವಸಿ" ಟ್ಯಾಬ್ ಅನ್ನು ತೆರೆಯಿರಿ, "ಅಡ್ವಟೈಸಿಂಗ್" ಕ್ಲಿಕ್ ಮಾಡಿ ಮತ್ತು "ಜಾಹೀರಾತು ಟ್ರ್ಯಾಕಿಂಗ್ ಲಿಮಿಟ್" ಸಕ್ರಿಯಗೊಳಿಸಿ.

ಆಂಡ್ರಾಯ್ಡ್‌ನಲ್ಲಿ, "ಸೆಟ್ಟಿಂಗ್ಸ್‌ನಲ್ಲಿ" ಕಂಡುಬರುವ "ಅಪ್ಲಿಕೇಶನ್ ಮ್ಯಾನೇಜರ್" ನೊಂದಿಗೆ ಬಳಕೆದಾರ ಆದ್ಯತೆಯಂತೆ ಫೇಸ್‌ಬುಕ್ ಈ ಸೆಟ್ಟಿಂಗ್ ಅನ್ನು ಸೇರಿಸಿರಬಹುದು, ಆದರೆ ನೀವು ಇದನ್ನು ಸೆಟಪ್ ಮಾಡಬಹುದು ಮತ್ತು ಯಾವುದೇ ಬ್ರೌಸರ್ ಟ್ರ್ಯಾಕಿಂಗ್ ಅನ್ನು ಸ್ವಯಂಚಾಲಿತವಾಗಿ ಅನುಮತಿಸದಿರುವ ವರ್ಚುವಲ್ ಪ್ರೈವೇಟ್ ನೆಟ್‌ವರ್ಕ್ (ವಿಪಿಎನ್) ಅನ್ನು ನೀವು ನಿರ್ವಹಿಸಬಹುದು.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X