ಮಳೆಗಾಲದಲ್ಲಿ ಫೋನ್ ಸುರಕ್ಷತೆ ಹೇಗಿರಬೇಕು?

By Shwetha
|

ಎಲ್ಲಾ ಕಾಲದಲ್ಲಿ ನಿಮ್ಮ ಫೋನ್ ಅನ್ನು ಕೊಂಡೊಯ್ದಂತೆ ಮಳೆಗಾಲದಲ್ಲಿ ಫೋನ್ ಬಳಸುವುದು ತುಂಬಾ ಕಷ್ಟಕರವಾದ ಕೆಲಸವಾಗಿದೆ. ನಿಮ್ಮ ಸುರಕ್ಷೆಯೊಂದಿಗೆ ನಿಮ್ಮ ಫೋನ್ ಸಂರಕ್ಷಣೆಯನ್ನು ಮಾಡುವುದೂ ಅತ್ಯಗತ್ಯವಾಗಿದೆ. ನಿಮ್ಮ ಫೋನ್‌ಗೆ ಸ್ವಲ್ಪ ನೀರು ತಾಗಿದರೂ ಫೋನ್‌ಗೆ ಏನಾದರೂ ಹಾನಿಯಾಗುವುದು ಖಂಡಿತ. ಫೋನ್‌ನ ಸುರಕ್ಷತೆಯನ್ನು ಮಾಡಲು ನೀವು ದುಬಾರಿಯಾಗಿ ಖರ್ಚು ಮಾಡಬೇಕೆಂದೇನಿಲ್ಲ.

ಓದಿರಿ: ಬಿದ್ದರೂ ಒಡೆಯದ ಟ್ಯೂರಿಂಗ್ ಫೋನ್ ವಿಶೇಷತೆ

ಇಂದಿನ ಲೇಖನದಲ್ಲಿ ನಾವು ನೀಡಿರುವ ಕೆಲವೊಂದು ಟಿಪ್ಸ್‌ಗಳು ನಿಮ್ಮ ಫೋನ್‌ನ ಸುರಕ್ಷತೆಯನ್ನು ಸರಳವಾಗಿ ಮಾಡುತ್ತವೆ. ಇದು ಹೇಗೆ ಎಂಬುದನ್ನು ನೋಡಿ

ಬ್ಲ್ಯೂಟೂತ್ ಅಥವಾ ಇಯರ್ ಫೋನ್

ಬ್ಲ್ಯೂಟೂತ್ ಅಥವಾ ಇಯರ್ ಫೋನ್

ಮಳೆಗಾಲದ ಸಮಯದಲ್ಲಿ ಫೋನ್ ಬಳಸುವಾಗ ಬ್ಲ್ಯೂಟೂತ್ ಅಥವಾ ಇಯರ್ ಫೋನ್ ಬಳಕೆ ಮಾಡಿ. ಕೆಲವೊಂದು ಬ್ಲ್ಯೂಟೂತ್‌ಗಳು ಜನಪ್ರತಿರೋಧಕವಾಗಿರುತ್ತವೆ ಆದ್ದರಿಂದ ಇದರ ಬಳಕೆಯನ್ನು ಮಾಡಿ.

ಜಿಪ್ ಪೌಚ್

ಜಿಪ್ ಪೌಚ್

ಪ್ಲಾಸ್ಟಿಕ್‌ನಿಂದ ತಯಾರಿಸಲಾಗುವ ಈ ಪೌಚ್ ಜನಪ್ರತಿರೋಧಕವಾಗಿರುತ್ತವೆ ಮತ್ತು ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ. ಭಾರೀ ಮಳೆಯಲ್ಲಿ ಕೂಡ ನಿಮ್ಮ ಫೋನ್‌ನ ಸುರಕ್ಷತೆಯನ್ನು ಈ ಪೌಚ್ ಬಳಸಿ ಮಾಡಬಹುದು.

ವಾಟರ್ ಪ್ರೂಫ್ ಕವರ್

ವಾಟರ್ ಪ್ರೂಫ್ ಕವರ್

ವಾಟರ್ ಪ್ರೂಪ್ ಕವರ್ ಕೂಡ ಮಳೆಯಿಂದ ನಿಮ್ಮ ಫೋನ್‌ಗೆ ಉತ್ತಮ ಸುರಕ್ಷತೆಯನ್ನು ನೀಡುತ್ತದೆ. ಐಫೋನ್, ಸ್ಯಾಮ್‌ಸಂಗ್, ಸೋನಿ ಫೋನ್‌ಗೆ ವಾಟರ್ ಪ್ರೂಫ್ ಕವರ್ ಅನ್ನು ನಿಮಗೆ ಖರೀದಿಸಬಹುದು.

ಫೋನ್ ಒದ್ದೆಯಾದಾಗ ಬ್ಯಾಟರಿ ತೆಗೆಯಿರಿ

ಫೋನ್ ಒದ್ದೆಯಾದಾಗ ಬ್ಯಾಟರಿ ತೆಗೆಯಿರಿ

ನಿಮ್ಮ ಫೋನ್‌ನ ಒಳಗೆ ತುಸು ಹೆಚ್ಚು ನೀರು ಹೋಗಿದೆ ಎಂದಾದಲ್ಲಿ ಫೋನ್‌ನಿಂದ ಬ್ಯಾಟರಿ ಬೇರ್ಪಡಿಸಿ. ನಂತರ ಅದನ್ನು ಒಣಗಲು ಬಿಡಿ.

ಹೇರ್ ಡ್ರೈಯರ್ ಬಳಕೆ ಬೇಡ

ಹೇರ್ ಡ್ರೈಯರ್ ಬಳಕೆ ಬೇಡ

ಫೋನ್ ಒಣಗಿಸಲು ಬೆಂಕಿ ಅಥವಾ ಹೇರ್ ಡ್ರೈಯರ್ ಬಳಕೆಯನ್ನು ಮಾಡದಿರಿ.

ಅಕ್ಕಿಯಲ್ಲಿಡಿ

ಅಕ್ಕಿಯಲ್ಲಿಡಿ

ಫೋನ್‌ನ ಮೇಲೆ ಹೆಚ್ಚು ನೀರು ಬಿದ್ದಿದೆ ಎಂದಾದಲ್ಲಿ ಅದನ್ನು ಅಕ್ಕಿಯಲ್ಲಿ ಹಾಕಿಡಿ. ಅಕ್ಕಿ ಫೋನ್‌ನಲ್ಲಿರುವ ಹೆಚ್ಚು ನೀರನ್ನು ಹೀರಿಕೊಳ್ಳುತ್ತದೆ.

ಚಾರ್ಜರ್ ಬಳಕೆಯನ್ನು ಮಾಡದಿರಿ

ಚಾರ್ಜರ್ ಬಳಕೆಯನ್ನು ಮಾಡದಿರಿ

ಫೋನ್ ಒದ್ದೆಯಾದ ಸಂದರ್ಭದಲ್ಲಿ ಚಾರ್ಜರ್ ಬಳಕೆಯನ್ನು ಮಾಡದಿರಿ. ಶಾರ್ಟ್ ಸರ್ಕ್ಯೂಟ್‌ನಂತಹ ಅಪಾಯ ಸಂಭವಿಸಿ ಫೋನ್ ಸುಟ್ಟು ಹೋಗುವ ಸಾಧ್ಯತೆ ಇರುತ್ತದೆ.

Best Mobiles in India

English summary
Monsoons have arrived and so has the tricky problem of using your phone while you are caught in a sudden downpour. Water damage is not covered under warranty and the moment even some moisture is detected in your phone it is considered to be out of warranty. Here are seven tricks and tips to protect your phone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X