ಫೋನ್‌ನ ಸ್ಕ್ರಾಚ್ ಅನ್ನು ತೆಗೆಯುವ 8 ಉಪಾಯಗಳು

By Shwetha
|

ನಮ್ಮ ಜೇಬಿನಲ್ಲಿದ್ದ ಅಥವಾ ಬ್ಯಾಗ್‌ನಲ್ಲಿರುವ ಫೋನ್‌ಗಳು ಹಲವಾರು ಕಾರಣಗಳಿಂದ ಕಲೆ ಮತ್ತು ಸ್ಕ್ರಾಚ್‌ಗೆ ಒಳಗಾಗುತ್ತಿರುತ್ತದೆ. ಇದಕ್ಕಾಗಿ ಹೆಚ್ಚು ಬೆಲೆಯ ಫೋನ್ ಅನ್ನು ಖರೀದಿಸುವುದಕ್ಕಿಂತ ಅಥವಾ ರಿಪೇರಿ ಶಾಪ್‌ಗೆ ಹೆಚ್ಚು ಶುಲ್ಕ ನೀಡಿ ನಿಮ್ಮ ಫೋನ್ ಅನ್ನು ಸರಿಪಡಿಸುವುದಕ್ಕಿಂತ ಕೆಲವೊಂದು ಸುಲಭ ವಿಧಾನಗಳ ಮೂಲಕ ನಿಮ್ಮ ಪೋನ್ ಮೇಲಿರುವ ಸ್ಕ್ರಾಚ್ ಅನ್ನು ದೂರ ಮಾಡಬಹುದು.

ಹೌದು ಈ ಸ್ಕ್ರಾಚ್ ಅನ್ನು ಹೋಗಲಾಡಿಸುವ ವಸ್ತುಗಳು ನಿಮ್ಮ ಮನೆಯಲ್ಲೇ ಇದ್ದು ಅವುಗಳನ್ನು ನೀವು ಯಾವಾಗ ಬೇಕಾದರೂ ಬಳಸಬಹುದಾಗಿದೆ. ಇವುಗಳು ಕಡಿಮೆ ಬೆಲೆಯಲ್ಲಿ ನಿಮಗೆ ದೊರಕಲಿದ್ದು ಖಂಡಿತ ಪ್ರಯೋಜನಕಾರಿಯಾಗಲಿದೆ.

#1

#1

ಜೆಲ್ ಇಲ್ಲದ ಟೂತ್‌ಪೇಸ್ಟ್ ಅನ್ನು ಬಳಸಿ ನಿಮ್ಮ ಫೋನ್‌ಗಾಗಿರುವ ಸ್ಕ್ರಾಚ್ ಅನ್ನು ಹೋಗಲಾಡಿಸಬಹುದಾಗಿದೆ. ಹೇಗೆಂದರೆ ಮೊದಲು ಸ್ವಲ್ಪ ಟೂತ್‌ಪೇಸ್ಟ್ ಅನ್ನು ತೆಗೆದುಕೊಳ್ಳಿ ಮತ್ತು ಅದನ್ನು ಹತ್ತಿಗೆ ಹಚ್ಚಿ ನಿಮ್ಮ ಫೋನ್ ಪರದೆ ಮೇಲೆ ಉಜ್ಜಿ. ನಿಮ್ಮ ಫೋನ್ ಮೇಲಿನಿಂದ ಕಲೆ ಹೋಗುವವರೆಗೆ ಈ ಕ್ರಿಯೆಯನ್ನು ಮುಂದುವರಿಸಿ. ನಂತರ ಒಣಗಿದ ಬಟ್ಟೆಯಿಂದ ಪರದೆಯನ್ನು ಒರೆಸಿ.

#2

#2

ಕಾರಿನ ಸ್ಕ್ರಾಚ್ ಅನ್ನು ತೆಗೆಯುವಂತಹ ಟರ್ಟಲ್ ವ್ಯಾಕ್ಸ್, ಸ್ವಿರಿಲ್ ರಿಮೂವರ್ ನಿಮ್ಮ ಫೋನ್‌ನಲ್ಲಿರುವ ಸ್ಕ್ರಾಚ್ ಅನ್ನು ನಿವಾರಿಸುತ್ತದೆ. ಕ್ರೀಮ್ ಅನ್ನು ಪರದೆಯ ಮೇಲೆ ಸರಳವಾಗಿ ಹಚ್ಚಿ ಮತ್ತು ಬಟ್ಟೆಯಿಂದ ಫೋನ್ ಪರದೆಯನ್ನು ಚೆನ್ನಾಗಿ ಒರೆಸಿ.

#3

#3

ಸ್ಯಾಂಡ್ ಪೇಪರ್ ಅನ್ನು ಬಳಸುವಾಗ, ಇದನ್ನು ಸ್ವಲ್ಪ ಮಟ್ಟಿಗೆ ಮಾತ್ರವೇ ನಿಮ್ಮ ಫೋನ್‌ಗೆ ಬಳಸಬೇಕಾಗುತ್ತದೆ. ನೀವು ಫೋನ್ ಸ್ಕ್ರಾಚ್ ಅನ್ನು ತೆಗೆಯುವ ಭರದಲ್ಲಿ ನಿಮ್ಮ ಫೋನ್‌ಗೆ ಯಾವುದೇ ಹಾನಿ ಉಂಟಾಗಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

#4

#4

ಎರಡು ಭಾಗದಷ್ಟು ಬೇಕಿಂಗ್ ಸೋಡಾ ಮತ್ತು ಒಂದು ಭಾಗ ನೀರನ್ನು ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ಇದು ದಪ್ಪನೆಯ ಪೇಸ್ಟ್ ಆಗುವವರೆಗೆ ಚೆನ್ನಾಗಿ ಕಲಸಿಕೊಳ್ಳಿ. ನಂತರ ಇದನ್ನು ಫೋನ್‌ನ ಸ್ಕ್ರಾಚ್ ಆಗಿರುವ ಭಾಗಕ್ಕೆ ಹಚ್ಚಿ ಮತ್ತು ಹತ್ತಿಯ ಮೃದುವಾದ ಬಟ್ಟೆಯನ್ನು ಬಳಸಿಕೊಂಡು ಉಜ್ಜಿ. ನಂತರ ಒಣಗಿದ ಬಟ್ಟೆಯಿಂದ ಫೋನ್ ಪರದೆಯನ್ನು ಒರೆಸಿ.

#5

#5

ಬೇಬಿ ಪೌಡರ್‌ಗೆ ಸ್ವಲ್ಪ ನೀರನ್ನು ಹಾಕಿಕೊಂಡು ಅದನ್ನು ಮಿಶ್ರ ಮಾಡಿಕೊಳ್ಳಿ ಮತ್ತು ಸ್ಕ್ರಾಚ್ ಆಗಿರುವ ನಿಮ್ಮ ಫೋನ್ ಪರದೆಗೆ ಈ ಮಿಶ್ರಣವನ್ನು ಹಚ್ಚಿರಿ.

#6

#6

ಸಣ್ಣದಾದ ಅಥವಾ ಕಾಣಿಸದಿರುವ ಸ್ಕ್ರಾಚ್‌ಗಳಿಗಾಗಿ, ವೆಜಿಟೇಬಲ್ ಆಯಿಲ್ ಅನ್ನು ಬಳಸಿಕೊಳ್ಳಬಹುದಾಗಿದೆ. ಇದು ನಿಮ್ಮ ಫೋನ್‌ನ ಸ್ಕ್ರಾಚ್ ಭಾಗವನ್ನು ಚೆನ್ನಾಗಿ ರಿಪೇರಿ ಮಾಡುತ್ತದೆ.

#7

#7

ಮೊಟ್ಟೆಯ ಬಿಳಿ ಭಾಗ ಮತ್ತು ಪೊಟ್ಯಾಶಿಯಮ್ ಅಲ್ಯುಮಿನಿಯಮ್ ಸಲ್ಫೇಟ್ ಅನ್ನು ಮಿಶ್ರ ಮಾಡಿ ಸ್ಕ್ರಾಚ್ ಇರುವ ಭಾಗಕ್ಕೆ ಇದನ್ನು ಹಚ್ಚಬೇಕು.

#8

#8

ಪಾತ್ರೆಗೆ ಸ್ವಲ್ಪ ಪಾಲಿಶ್ ಅನ್ನು ಹಾಕಿಕೊಳ್ಳಿ. ಪಾತ್ರೆಗೆ ಪಾಲಿಶ್ ಅನ್ನು ಹಾಕಿಕೊಳ್ಳುವ ಮುಂಚೆ ಕೆಳಭಾಗದಲ್ಲಿ ಒಂದು ಬಟ್ಟೆಯನ್ನು ಹಾಸಿ. ಮೃದುವಾದ ಬಟ್ಟೆಯನ್ನು ಪಾಲಿಶ್‌ಗೆ ಮುಳುಗಿಸಿ. ಸ್ಕ್ರಾಚ್ ಉಂಟಾಗಿರುವ ಭಾಗಕ್ಕೆ ಮೇಲಿನಿಂದ ಕೆಳಕ್ಕೆ ವೃತ್ತಾಕಾರದಲ್ಲಿ ಇದನ್ನು ಉಜ್ಜಿ. ನಂತರ ಸ್ವಚ್ಛವಾದ ಬಟ್ಟೆಯಿಂದ ಉಳಿದ ಪಾಲಿಶ್ ಅನ್ನು ಫೋನ್‌ನ ಪರದೆಯಿಂದ ತೆಗೆಯಿರಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X