ಎಚ್‌ಟಿಸಿ ಬಟರ್‌ಫ್ಲೈ 2 ಒಂದು ಉತ್ತಮ ಹ್ಯಾಂಡ್ ಸೆಟ್ ಹೇಗೆ

By Shwetha
|

ಎಚ್‌ಟಿಸಿ ಯಾವಾಗಲೂ ಇತರ ಪೋನ್‌ಗಳಿಗಿಂತ ಭಿನ್ನ ಹಾಗೂ ವ್ಯತ್ಯಾಸವಾಗಿರುತ್ತದೆ. ಎಚ್‌ಟಿಸಿ ಒನ್ M8 ಇದರ ಅತ್ಯಾಧುನಿಕ ಫೋನ್ ಆಗಿದ್ದು ಇದು 5 ಇಂಚಿನ ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದೆ ಹಾಗೂ ನೋಡಲು ಗ್ಯಾಲಕ್ಸಿ S5 ನಂತೆಯೇ ಸಮಾನವಾಗಿದೆ.

ಹೀಗೆ ಭಿನ್ನವಾಗಿರುವ ಎಚ್‌ಟಿಸಿ ಮಾರುಕಟ್ಟೆಯಲ್ಲಿ ತನ್ನ ಚಕ್ರಾಧಿಪತ್ಯವನ್ನು ಸ್ಥಾಪಿಸಿರುವಂತಹ ಬ್ರಾಂಡ್ ಕಂಪೆನಿಗಳಾದ ಆಪಲ್, ಎಲ್‌ಜಿ ಗೆ ಸಡ್ಡು ಹೊಡೆಯುವಂತೆ ಬಟರ್‌ಫ್ಲೈ 2 ಅನ್ನು ಸದ್ಯದಲ್ಲೇ ಹೊರತರಲಿದೆ. ಸದ್ಯದಲ್ಲೇ ಈ ಕ್ರಂಚಿ ಹ್ಯಾಂಡ್‌ಸೆಟ್ ಜಪಾನ್, ತೈವಾನ್, ಹಾಂಗ್‌ಕಾಂಗ್‌ನಲ್ಲಿ ಬಿಡುಗಡೆಯಾಗಲಿದ್ದು ಏಷ್ಯಾದಲ್ಲೂ ಸದ್ಯವೇ ಬರಲಿದೆ. ಆದರೆ ಭಾರತದಲ್ಲಿ ಈ ಸೆಟ್ ಲಾಂಚ್ ಆಗುವ ಯಾವುದೇ ಮಾಹಿತಿ ಸದ್ಯಕ್ಕೆ ದೊರೆತಿಲ್ಲ.

ಎಚ್‌ಟಿಸಿ ಬಟರ್‌ಫ್ಲೈ 2 ಒಂದು ಉತ್ತಮ ಹ್ಯಾಂಡ್ ಸೆಟ್ ಹೇಗೆ

ಮಾಹಿತಿಯ ಪ್ರಕಾರ ಊ ಹ್ಯಾಂಡ್‌ಸೆಟ್ ಡ್ಯುಯೆಲ್ ಮುಂಭಾಗ ಸ್ಪೀಕರ್‌ಗಳನ್ನು ಹೊಂದಲಿದೆ ಹಾಗೂ ತನ್ನ ಕಂಪೆನಿಯ ಫ್ಲ್ಯಾಗ್‌ಶಿಪ್ ಅನ್ನು ಎತ್ತರಕ್ಕೆ ಕೊಂಡೊಯ್ಯಲಿದೆ. ಇದು 5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಲಿದ್ದು ಕ್ವಾಡ್ ಕೋರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 801 ಪ್ರೊಸೆಸರ್ ಇದರ ವಿಶೇಷೆಯಾಗಲಿದೆ. 2 ಜಿಬಿ ರ್‌ಯಾಮ್ ಅನ್ನು ಫೋನ್ ಹೊಂದಲಿದ್ದು 16 ಜಿಬಿ ಆನ್ ಬೋರ್ಡ್ ಮೆಮೊರಿ ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್ ಇದರಲ್ಲಿ ಬರಲಿದೆ.

ಇದೇ ಸಮಯದಲ್ಲಿ, ತೈವಾನ್ ಆಧಾರಿತ ಎಚ್‌ಟಿಸಿ ಕಂಪೆನಿ ಎಚ್‌ಟಿಸಿ ಒನ್ (M8) ಯ ಅಗ್ಗದ ಫೋನ್ ಅನ್ನು ಹೊರತರಲಿದ್ದು ಇದಕ್ಕೆ ಎಚ್‌ಟಿಸಿ ಒನ್ M8 ಎಂಬ ಹೆಸರನ್ನು ನೀಡಲಿದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X