ಎಚ್‌ಟಿಸಿ ಡಿಸೈರ್ 210 ಬಜೆಟ್ ಸ್ನೇಹಿ ಫೋನ್ ಹೇಗೆ?

By Shwetha
|

ಎಚ್‌ಟಿಸಿ ಸ್ಮಾರ್ಟ್‌ಫೋನ್ ಕಂಪೆನಿ ಭಾರತೀಯ ಮಾರುಕಟ್ಟೆಗಾಗಿ ಫೋನ್ ತಯಾರಿಯಲ್ಲಿ ಯಾವತ್ತೂ ಹಿಂದೆ ಬಿದ್ದಿಲ್ಲ. ಆದರೂ ಈ ಕಂಪೆನಿ ಹೆಚ್ಚು ಬೆಲೆಯ ಫೋನ್ ತಯಾರಿಯಲ್ಲಿ ಹೆಸರು ಮಾಡಿದಂಥದ್ದು ಆದರೂ ಆಶ್ಚರ್ಯಕರವೆಂಬಂತೆ ತನ್ನ ಡಿಸೈರ್ 210 ಡ್ಯುಯೆಲ್ ಸಿಮ್ ಅನ್ನು ರೂ 8,700 ಕ್ಕೆ ಭಾರತದಲ್ಲಿ ಲಾಂಚ್ ಮಾಡುವಲ್ಲಿ ಜಯಶಾಲಿಯಾಗಿದೆ.

ಡಿಸೈರ್ 210 ಒಂದು ಫ್ರೆಂಡ್ಲಿ ಬಜೆಟ್ ಫೋನ್ ಆಗಿದ್ದು ಖರೀದಿಸುವವರ ಬಯಕೆಗನುಗುಣವಾಗಿ ಇದೆ ಎಂದೇ ಹೇಳಬಹುದು. ರೂ 8,700 ಕ್ಕೆ ನಿಮಗೆ ದೊರೆಯಲಿರುವ ಈ ಫೋನ್ ನಿಜಕ್ಕೂ ಒಂದು ಭರ್ಜರಿ ಕೊಡುಗೆಯಾಗಿದೆ. ಡಿಸೈರ್ 210 ಕೂಡ ಸೋನಿ ಎಕ್ಸ್‌ಪೀರಿಯಾ E1 (9,000) ನಿಂದ ಭರ್ಜರಿ ಪೈಪೋಟಿಯನ್ನು ಕೂಡ ಎದುರಿಸಲಿದೆ. ಎಚ್‌ಟಿಸಿ ಡಿಸೈರ್ 210 ನಲ್ಲಿ ಆಕರ್ಷಕವಾಗಿರುವಂತಹದ್ದು ಮತ್ತು ನಿಮ್ಮ ಮನಕ್ಕೆ ಮೆಚ್ಚುಗೆಯಾಗುವಂತಹ ಅಂಶಗಳು ಯಾವುವು ಎಂಬುದನ್ನು ವೀಕ್ಷಿಸಲು ಕೆಳಗಿನ ಸ್ಲೈಡ್‌ಗಳತ್ತ ಗಮನಹರಿಸಿ.

#1

#1

ನಿಮ್ಮ ಅಗತ್ಯ ಹಾಗೂ ಬಯಕೆಗನುಗುಣವಾಗಿ ಡಿಸೈರ್ 210 ಅನ್ನು ವಿನ್ಯಾಸ ಮಾಡಲಾಗಿದ್ದು ಇದು ಸ್ವಲ್ಪ ಒರಟು ಮತ್ತು ಕೈಯಲ್ಲಿ ಭದ್ರವಾಗಿ ಕೂರುವ ಗುಣವನ್ನು ಹೊಂದಿದೆ. ಇದನ್ನು ಪೋಲಿಕಾರ್ಬನೇಟ್ ಪ್ಲಾಸ್ಟಿಕ್ ಶೆಲ್‌ನಿಂದ ತಯಾರುಮಾಡಲಾಗಿದ್ದು ಬೆಲೆಯ ಆಧಾರದಲ್ಲೂ ಕೂಡ ಇದು ಸಿಂಪಲ್ ಮತ್ತು ಸೂಪರ್ಬ್ ಆಗಿದೆ. ನೀವು ಇದರ ಹಿಂಭಾಗವನ್ನು ಬ್ಯಾಟರಿಯೊಂದಿಗೆ ತೆರೆಯಬಹುದಾಗಿದೆ. ಇದು ಡ್ಯುಯೆಲ್ ಸಿಮ್ ಬೆಂಬಲವನ್ನು ಕೂಡ ಹೊಂದಿದೆ.

#2

#2

ಇದು 4 ಇಂಚಿನ WVGA ( 854 x 480) ಡಿಸ್‌ಪ್ಲೇಯೊಂದಿಗೆ ಬಂದಿದ್ದು ನೋಕಿಯಾ X ಗೆ ಹೋಲಿಸಿದಾಗ ಇದರ ಡಿಸ್‌ಪ್ಲೇ ಕೊಂಚ ಸಪ್ಪೆಯಾಗಿ ತೋರುತ್ತದೆ.

#3

#3

ಇದು 512MB RAM ಮತ್ತು 4ಜಿಬಿ ಆಂತರಿಕ ಮೆಮೊರಿ ಸಾಮರ್ಥ್ಯದೊಂದಿಗೆ ಬಂದಿದೆ. ಆದರೆ ನಮಗನಿಸಿದ್ದು ಇದರ ಶೇಖರಣಾ ಸಾಮರ್ಥ್ಯ 8ಜಿಬಿಯಾದರೂ ಬೇಕು ಎಂದಾಗಿದೆ. ಇದು ತೆಗೆಯಬಹುದಾದ 1300mAh Li-polymer ಬ್ಯಾಟರಿಯೊಂದಿಗೆ ಬಂದಿದೆ ಮತ್ತು ಇದನ್ನು 10.5 ಗಂಟೆಗಳವರೆಗೆ ಸಿಂಗಲ್ ಚಾರ್ಜ್‌ನಲ್ಲಿ (3 ಜಿ) ಚಾಲನೆ ಮಾಡಬಹುದಾಗಿದೆ.

#4

#4

ಎಚ್‌ಟಿಸಿ ಡಿಸೈರ್ 210 5 ಮೆಗಾಪಿಕ್ಸೆಲ್‌ಗಳ ರಿಯರ್ ಫೇಸಿಂಗ್ ಕ್ಯಾಮೆರಾವನ್ನು ಹೊಂದಿದೆ ಮತ್ತು ಇದರ ಫ್ರಂಟ್ ಶೂಟಿಂಗ್ ವಿಜಿಎ ಗುಣಮಟ್ಟವನ್ನು ಹೊಂದಿದೆ. ಆದರೆ ಇದು ಎಲ್‌ಇಡಿ ಫ್ಲ್ಯಾಶ್ ಅನ್ನು ಹೊಂದಿಲ್ಲ ಎಂಬುದು ಡಿವೈಸ್‌ಗಿರುವ ಕೊರತೆಯಾಗಿದೆ.

#5

#5

ಈ ಹ್ಯಾಂಡ್‌ಸೆಟ್ ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಆವೃತ್ತಿಯೊಂದಿಗೆ ಎಚ್‌ಟಿಸಿ ಯ ಸ್ಥಳೀಯ BlinkFeed UI ನಲ್ಲಿ ಚಾಲನೆಗೊಳ್ಳುತ್ತದೆ. ಡಿಸೈರ್ 210 ನಿಮ್ಮ ಖರೀದಿಗೆ ಒಳ್ಳೆಯ ಮೌಲ್ಯವನ್ನು ಒದಗಿಸಲಿದ್ದು ನಿಮಗೆ ಉತ್ತಮ ಸಂಗಾತಿಯಾಗಲಿದೆ.

#6

#6

ಪ್ರಪ್ರಥಮ ಬಾರಿಗೆ ಎಚ್‌ಟಿಸಿ ರೂ 10,000 ದ ಒಳಗಿನ ದರದಲ್ಲಿರುವ ಫೋನ್ ಅನ್ನು ಲಾಂಚ್ ಮಾಡಿದ್ದು ದರಕ್ಕೆ ತಕ್ಕಂತೆ ಫೋನ್ ಅಪ್ಯಾಯಮಾನವಾಗಿದೆ. ಕೆಲವೊಂದು ಕೊರತೆಗಳನ್ನು ಈ ಫೋನ್ ಹೊಂದಿದ್ದರೂ ಬಜೆಟ್ ಬೆಲೆಯಲ್ಲಿ ಬಂದಿರುವುದರಿಂದ ಗ್ರಾಹಕರಿಗೆ ಯಾವುದೇ ನಿರಾಸೆಯನ್ನುಂಟುಮಾಡುತ್ತಿಲ್ಲ.

<center><iframe width="100%" height="360" src="//www.youtube.com/embed/FYM58bM_FTo?feature=player_detailpage" frameborder="0" allowfullscreen></iframe></center>

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X