ಎಚ್‌ಟಿಸಿ ಡಿಸೈರ್ 616 ಚೀನಾದಲ್ಲಿ ಬಿಡುಗಡೆ

By Shwetha
|

ತೈವಾನ್‌ನ ಎಚ್‌ಟಿಸಿ ಒಂದರ ಇನ್ನೊಂದರಂತೆ ತನ್ನದೇ ಫ್ಲ್ಯಾಗ್‌ಶಿಪ್ ಡಿವೈಸ್‌ಗಳನ್ನು ಲಾಂಚ್ ಮಾಡುತ್ತಾ ಮಾರುಕಟ್ಟೆಯನ್ನಾಳುತ್ತಿದೆ. ಒಂದು ಎಚ್‌ಟಿಸಿ ಎಮ್ 8 ಆದರೆ ಇನ್ನೊಂದು ಡಿಸೈರ್ 816 ಆಗಿದೆ.

ಈ ಎರಡೂ ಮಧ್ಯಮ ಕ್ರಮಾಂಕದ ಫೋನ್ ಅನ್ನು ಎಚ್‌ಟಿಸಿ ಬಿಡುಗಡೆ ಮಾಡಿ ಉತ್ತಮ ಆದಾಯವನ್ನು ಗಳಿಸಿಕೊಂಡಿದೆ ಎಂದೇ ಹೇಳಬಹುದು. ಮತ್ತು ಆದಾಯವನ್ನು ತನ್ನ ಮುಂದಿನ ಎಚ್‌ಟಿಸಿ ಡಿಸೈರ್ 616 ಮೂಲಕ ಮುಂದುವರಿಸುವುದರಲ್ಲಿ ಸಫಲವಾಗಿದೆ ಎಂದೇ ಹೇಳಬಹುದು.

ಎಚ್‌ಟಿಸಿ ಡಿಸೈರ್ 616 ಅಧಿಕೃತ ಘೋಷಣೆ

ಹೊಸ ಡಿಸೈರ್ 616 1.7GHz ಓಕ್ಟಾ ಕೋರ್ ಮೀಡಿಯಾ ಟೆಕ್ 6592 ಪ್ರೊಸೆಸರ್‌ನೊಂದಿಗೆ ಬಂದಿದ್ದು ಡ್ಯುಯೆಲ್ ಸಿಮ್ ಬೆಂಬಲದೊಂದಿಗೆ ಆಕರ್ಷಕವಾಗಿದೆ. ಇದರ ಬೆಲೆ ರೂ. 17,792 ಎಂದು ಅಂದಾಜಿಸಲಾಗಿದೆ. ಈಗ ಡಿವೈಸ್ ಚೀನಾದಲ್ಲಿ ಲಭ್ಯವಿದೆ.

ಪರಿಪೂರ್ಣವಾಗಿ ಹೇಳಬೇಕೆಂದರೆ ಡಿಸೈರ್ 616 ಎಚ್‌ಡಿ ಡಿಸ್‌ಪ್ಲೇಯೊಂದಿಗೆ 5 ಇಂಚಿನ 720p ಯೊಂದಿಗೆ ಬಂದಿದೆ. ಇದು ಓಕ್ಟಾ ಕೋರ್ ಪ್ರೊಸೆಸರ್ ಅನ್ನು ತನ್ನಲ್ಲಿ ಹೊಂದಿದ್ದು, 1 ಜಿಬಿ RAM ಬೆಂಬಲ ಇದಕ್ಕಿದೆ. ಇದರಲ್ಲಿ 4ಜಿಬಿ ಆನ್ ಬೋರ್ಡ್ ಮೆಮೊರಿ ಇದ್ದು, ಇದನ್ನು 32ಜಿಬಿಗೆ ವಿಸ್ತರಿಸಬಹುದಾಗಿದೆ. ಇದರಲ್ಲಿ ಆಂಡ್ರಾಯ್ಡ್ 4.2 ಜೆಲ್ಲಿ ಬೀನ್ ಚಾಲನೆಯಾಗುತ್ತಿದೆ ಎಂಬುದೇ ದುರಾದೃಷ್ಟಕರ ಸಂಗತಿಯಾಗಿದೆ.

ಎಚ್‌ಟಿಸಿ ಡಿಸೈರ್ 616 ನ ಬ್ಯಾಟರಿ ಸಾಮರ್ಥ್ಯ 2000mAh ಆಗಿದ್ದು 9.15mm ದಪ್ಪವನ್ನು 150 ಗ್ರಾಮ್‌ಗಳ ತೂಕವನ್ನು ಇದು ಹೊಂದಿದೆ. ಭಾರತಕ್ಕೆ ಇದು ಯಾವಾಗ ಬರಬಹುದೆಂಬುದರ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಭಾರತದಲ್ಲಿ ಮಧ್ಯಮ ಕ್ರಮಾಂಕದ ಫೋನ್‌ಗಳಿಗಿರುವ ಬೇಡಿಕೆಯು ಎಚ್‌ಟಿಸಿ ಡಿಸೈರ್ 616 ಅನ್ನು ಇಲ್ಲಿಗೆ ಶೀಘ್ರವೇತರಬಹುದೆಂಬುದು ನಮ್ಮ ಭರವಸೆಯಾಗಿದೆ.

ಎಚ್‌ಟಿಸಿ ಡಿಸೈರ್ 616 ಭಾರತದಲ್ಲಿ ಕೂಡಲೇ ಬಿಡುಗಡೆಯಾಗಲಿ ಮತ್ತು ಇದರ ಬೆಲೆ ಕೂಡ ಕೈಗೆಟಕುವಂತರಲಿ ಎಂಬುದು ನಮ್ಮ ಆಶಯವಾಗಿದೆ. ಹೆಚ್ಚಿನ ಮಾಹಿತಿಗಳಿಗಾಗಿ GizBot ಗೆ ಭೇಟಿ ಕೊಡುತ್ತಿರಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X