ಎಚ್‌ಟಿಸಿ ಒನ್ ಮಿನಿ 2 ಯ ಅನನ್ಯ ವಿಶಿಷ್ಟತೆಗಳನ್ನು ನೀವೂ ತಿಳಿಯಿರಿ

By Shwetha
|

ಎಚ್‌ಟಿಸಿ ತನ್ನದೇ ನಾಯಕತ್ವದ ಸ್ಮಾರ್ಟ್‌ಫೋನ್‌ ಅನ್ನು ಹೊರತಂದಿದ್ದು ಇದು ಗ್ರಾಹಕರಲ್ಲಿ ಉತ್ಪನ್ನದ ಬೇಡಿಕೆಯನ್ನು ಹೆಚ್ಚಿಸಲಿದೆ. ಮಧ್ಯಮ ಶ್ರೇಣಿಯ ಈ ಫೋನ್‌ಗಳು ನಿಜಕ್ಕೂ ಬಳಕೆದಾರರ ಸ್ನೇಹಿತನಾಗಿ ಮಾರ್ಪಡಲಿದೆ.

ಎಚ್‌ಟಿಸಿ ಒನ್ ಮಿನಿ 2 4.5-ಇಂಚಿನ 720p ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿದ್ದು ಕ್ವಾಡ್ ಕೋರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್, ರ್‌ಯಾಮ್ 1 ಜಿಬಿ 16ಜಿಬಿ/32ಜಿಬಿ ಆಂತರಿಕ ಮೆಮೊರಿ, ಮೈಕ್ರೋ ಎಸ್‌ಡಿ ಕಾರ್ಡ್‌ ಸ್ಲಾಟ್, 13ಎಂಪಿ ರಿಯರ್ ಫೇಸಿಂಗ್ ಕ್ಯಾಮೆರಾ, 5ಎಂಪಿ ಮುಂಭಾಗ ಕ್ಯಾಮೆರಾ ಹಾಗೂ ಇನ್ನಿತರ ವೈಶಿಷ್ಟ್ಯಗಳಿಂದ ಈ ಫೋನ್ ಮನಸೆಳೆಯುತ್ತದೆ.

ಎಚ್‌ಟಿಸಿ ಒನ್ ಮಿನಿ 2 ಬಗ್ಗೆ ಇನ್ನಷ್ಟು ತಿಳಿದುಕೊಳ್ಳಬೇಕೆಂಬ ಬಯಕೆ ನಿಮ್ಮದಾಗಿದ್ದರೆ ಇಲ್ಲಿ ನಾವು ನೀಡಿರುವ ಸ್ಲೈಡ್‌ಗಳನ್ನು ಗಮನಿಸಿ

#1

#1

ಇದು 4.5 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. M8 720 ಡಿಸ್‌ಪ್ಲೇಯನ್ನು ನೀಡುತ್ತದೆ.

#2

#2

ಇದು ಹಿಂದಿನ ಒನ್ ಮಿನಿಗಿಂತ ಸಣ್ಣದಾಗಿದ್ದು 1.4GHz ಕ್ವಾಡ್ ಕೋರ್ ಪ್ರೊಸೆಸರ್ ಕ್ವಾಲ್‌ಕಾಂ ಸ್ನ್ಯಾಪ್‌ಡ್ರಾಗನ್ 400 ಪ್ರೊಸೆಸರ್, 1ಜಿಬಿ ರ್‌ಯಾಮ್, 16ಜಿಬಿ ಆಂತರಿಕ ಮೆಮೊರಿ ಹಾಗೂ ಮೈಕ್ರೋ ಎಸ್‌ಡಿ ಕಾರ್ಡ್ ಸ್ಲಾಟ್‌ ಈ ಫೋನ್‌ನಲ್ಲಿದೆ.

#3

#3

ನೋಡಲು ಇದು ಸೆಕೆಂಡರಿ ಕ್ಯಾಮೆರಾ ಸೆನ್ಸರ್ ಅನ್ನು ಹೊಂದಿರುವಂತೆ ತೋರಿದ್ದು ಫ್ರಂಟ್ ಫೇಸಿಂಗ್ ಅಲ್ಟ್ರಾ ಪಿಕ್ಸೆಲ್ ಕ್ಯಾಮೆರಾ ಕೂಡ ಫೋನ್ ಹೊಂದಿದೆ. 13 ಎಂಪಿ ಶೂಟರ್ ಇದರಲ್ಲಿದೆ.

#4

#4

ಹೊಸ ಸುದ್ದಿಯ ಪ್ರಕಾರ, ತೈವಾನಿ ದೈತ್ಯ ಎಚ್‌ಟಿಸಿ ಒನ್ ಮಿನಿ 2 ತನ್ನ ತವರಿನಲ್ಲೇ ಎರಡು ತಿಂಗಳ ನಂತರ ಈ ಫೋನ್‌ ಅನ್ನು ಬಿಡುಗಡೆ ಮಾಡಲಿದೆ. ಇದರ ಬೆಲೆ ಇನ್ನೂ ನಿರ್ಧರಿತವಾಗಿಲ್ಲ ಆದರೆ ಮುಂಚಿನ ಎಚ್‌ಟಿಸಿ ಒನ್ ಮಿನಿಯು ರೂ 36,790 ಕ್ಕೆ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿತ್ತು. ಇದರ ಬೆಲೆ ಕೂಡ ಇದಕ್ಕೆ ಸಮನಾಗಿ ಇರಬಹುದೆಂಬುದು ಅಂದಾಜಾಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X