ಡುಯಲ್ ಕ್ಯಾಮೆರಾ ಹೊಂದಿರುವ ಹುವಾವೆ ಹಾನರ್ 5X ಮತ್ತು ಕೂಲ್‌ಪಾಡ್ ಕೂಲ್ 1 ಪೋನ್‌ಗಳಲ್ಲಿ ಯಾವುದು ಬೆಸ್ಟ್..?

ಈ ಎರಡು ಪೋನ್ ಗಳ ನಡುವಿನ ವ್ಯತ್ಯಸವೇನು..?

|

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಡುಯಲ್ ಕ್ಯಾಮೆರಾ ಪೋನುಗಳ ಹಾವಳಿ ಹೆಚ್ಚಾಗಿದ್ದು, 2017ರಲ್ಲಿ ಲಾಂಚ್‌ ಆಗುತ್ತಿರುವ ಬಹುತೇಕ ಎಲ್ಲಾ ಟಾಪ್‌ ಎಂಡ್ ಸ್ಮಾರ್ಟ್‌ಪೋನುಗಳು ಡ್ಯುಯಲ್ ಕ್ಯಾಮೆರಾವನ್ನು ಹೊಂದಿದ್ದು, ಆಪರ್ ಐಪೋನ್ 8, ಸ್ಯಾಮ್‌ಸಂಗ್ ಗ್ಯಾಲೆಕ್ಸಿ S8 ಪ್ಲಸ್ ಮತ್ತು ಹುವಾವೆ P10 ಪ್ಲಸ್ ಪೋನುಗಳು ಸಹ ಡುಯಲ್ ಕ್ಯಾಮೆರಾವನ್ನು ಹೊಂದಿವೆ.

ಹುವಾವೆ ಹಾನರ್ 5X ಮತ್ತು ಕೂಲ್‌ಪಾಡ್ ಕೂಲ್ 1ಗಳಲ್ಲಿ ಯಾವುದು ಬೆಸ್ಟ್..?

ಓದಿರಿ: ಹಾನರ್ 6X: ಆಟವಾಡಿದರೂ, ವಿಡಿಯೋ ನೋಡಿದರೂ ಈ ಪೋನು ಹಿಟ್ ಆಗುವುದಿಲ್ಲ..!

ಆದರೆ ಇವೆಲ್ಲವೂ ಟಾಪ್ ಎಂಡ್ ಪೋನುಗಳಾಗಿದ್ದು, ಈ ಸಂದರ್ಭದಲ್ಲಿ ಚೀನಾ ಮೂಲಕ ಹುವಾವೆ ಡುಯಲ್ ಕ್ಯಾಮರಾ ಪೋನುಗಳನ್ನು ತನ್ನ ಬಜೆಟ್ ಪೋನುಗಳಲ್ಲಿಯೂ ಅಳಡಿಸಿ ಗ್ರಾಹಕರ ಕೈಗೆ ನೀಡಿದೆ. ಈ ಮೊದಲು 30,000 ರೂಗಳಿಗೆ ಹಾನರ್ 8 ಸ್ಮಾರ್ಟ್‌ಪೋನನ್ನು ಪರಿಚಯಿಸಿತ್ತು. ನಂತರ ಹಾನರ್ 5X ಮಾರುಕಟ್ಟೆಯಲ್ಲಿ ಯಶಸ್ವಿಯಾದ ನಂತರ ಬಿಡುಗಡೆಗೊಂಡಿರುವ ಹಾನರ್ 6Xನಲ್ಲಿ ಡುಯಲ್ ಕ್ಯಾಮೆರವನ್ನು ಅಳವಡಿಸಿದ್ದು, ಕೇವಲ 12,999 ರೂಗಳಿಗೆ ಪೋನನ್ನು ನೀಡಲು ಮುಂದಾಗಿದೆ.

ಹುವಾವೆ ಹಾನರ್ 5X ಮತ್ತು ಕೂಲ್‌ಪಾಡ್ ಕೂಲ್ 1ಗಳಲ್ಲಿ ಯಾವುದು ಬೆಸ್ಟ್..?

ಓದಿರಿ: ಗ್ರಾಮೀಣ ಭಾಗಕ್ಕೆ ಗೂಗಲ್ ನಿಂದ ಬಲೂನ್ ಇಂಟರ್‌ನೆಟ್..!!

ಆದರೆ ಇದಕ್ಕೆ ಪ್ರತಿಯಯಾಗಿ ಕೂಲ್‌ಪಾಡ್ ಕೂಲ್ 1 ಸ್ಮಾರ್ಟ್‌ಪೋನನ್ನು ಬಿಡುಗಡೆ ಮಾಡಿದ್ದು, ಅದರಲ್ಲಿಯೂ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದ್ದು, ಈ ಹಿನ್ನಲೆಯಲ್ಲಿ ಈ ಎರಡು ಪೋನಗಳ ನಡುವೆನ ವ್ಯತ್ಯಾಸಯಸವೇನು ಎಂಬುದನ್ನು ನೋಡುವ.

ಡಿಸ್‌ಪ್ಲೇ ಮತ್ತು ಡಿಸೈನ್‌:

ಡಿಸ್‌ಪ್ಲೇ ಮತ್ತು ಡಿಸೈನ್‌:

ಹಾನರ್ 6‍‍‍‍X ಮತ್ತು ಕೂಲ್‌ಪ್ಯಾಡ್‌ ಕೂಲ್ 1 ಎರಡು ಪೋನಿಗಳು ಮೆಟಾಲಿಕ್ ಬಾಡಿಯನ್ನು ಹೊಂದಿದ್ದು, ಹಿಂಭಾಗದಲ್ಲಿ ಡುಯಲ್ ಕ್ಯಾಮೆರಾರವನ್ನು ಹೊಂದಿದೆ. ಅಲ್ಲದೇ ಎರಡು ಪೋನಿನಲ್ಲಿ ಬ್ರಾಂಡ್ ಲೋಗೊವೊಂದನ್ನು ಬಿಟ್ಟರೆ ಎರಡು ಪೋನುಗಳು ಒಂದೇ ಮಾದರಿಯಲ್ಲಿ ಕಾಣಿಸಲಿವೆ. ಆದರೆ ಪೋನನ್ನು ಕೈನಲ್ಲಿ ಹಿಡಿದು ಬಳಸುವ ರೀತಿಯಲ್ಲಿ ಹಾನರ್ 6‍‍‍‍X ಉತ್ತಮ ಫಿಲ್ ನೀಡಲಿದ್ದು, ಇದೇ ಕೂಲ್‌ಪ್ಯಾಡ್‌ ಕೂಲ್ 1 ನೋಡಲು ಉತ್ತಮವೆನ್ನಿಸುವುದಿಲ್ಲ.

ಅಲ್ಲದೇ ಈ ಎರಡು ಪೋನುಗಳು 5.5 ಇಂಚಿನ Full HD ಡಿಸ್‌ಪ್ಲೇಯನ್ನು ಹೊಂದಿದ್ದು, ಆದರೆ ಹಾನರ್ 6‍‍‍‍X 2.5 ಕಾರ್ವಡ್ ಗ್ಲಾಸ್‌ ಪ್ಯಾನಲ್ ಹೊಂದಿದ್ದರೆ, ಕೂಲ್‌ಪ್ಯಾಡ್‌ ಕೂಲ್ 1 ಗೂರಿಲ್ ಗ್ಲಾಸ್ 3 ಟೆಕ್ನಾಲಜಿಯನ್ನು ಹೊಂದಿದೆ.

ಒಟ್ಟಿನಲ್ಲಿ ಹೇಳುವುದಾದರೆ ಹಾನರ್ 6‍‍‍‍X ಉತ್ತಮ ಡಿಸೈನ್ ಮತ್ತು ಬಳಸಲು ಉತ್ತಮವಾಗಿದೆ ಎಂದು ಹೇಳಬಹುದು.

ಹಾರ್ಡ್‌ವೇರ್‌:

ಹಾರ್ಡ್‌ವೇರ್‌:

ಎರಡು ಪೋನಿನಲ್ಲಿ ಉತ್ತಮವಾದ ಹಾರ್ಡ್‌ವೇರ್ ಟೆಕ್ನಾಲಜಿಯನ್ನು ಹೊಂದಿದೆ ಎಂದು ಹೇಳಬಹುದಾಗಿದೆ. ಕೂಲ್‌ಪ್ಯಾಡ್‌ ಕೂಲ್ 1 ಕ್ವಾಲಕಮ್ ಸ್ನಾಪ್‌ಡ್ರಾಗನ್ 652 ಚಿಪ್‌ಸೆಟ್‌ನೊಂದಿಗೆ 4GB RAN ಮತ್ತು 32GB ಇಂಟರ್ನಲ್ ಮೆಮೊರಿಯನ್ನು ಹೊಂದಿದೆ.


ಹಾನರ್ 6‍‍‍‍X ಪೋನಿನಲ್ಲಿ ಹುವಾವೆ ಅವರೆದೆ Kirin 655 ಚಿಪ್‌ ಸೆಟ್ ಅಳವಡಿಸಲಾಗಿದ್ದು, ಹಾನರ್ 6‍‍‍‍X ಎರಡು ಮಾದರಿಯಲ್ಲಿ ಲಭ್ಯವಿದ್ದು ಒಂದು 3GB RAM ನೊಂದಿಗೆ 32GB ಇಂಟರ್ನಲ್ ಮೆಮೊರಿ ಒಂದು ಮಾದರಿ, 4GB RAM ಮತ್ತು 64GB ಇಂಟರ್ನಲ್ ಮೆಮೊರಿಯ ಮತ್ತೊಂದು ಮಾದರಿ ಲಭ್ಯವಿದೆ.

ಸಾಫ್ಟ್‌ವೇರ್:

ಸಾಫ್ಟ್‌ವೇರ್:

ಹುವಾವೆ ಹಾನರ್ 6‍‍‍‍X ಸ್ಮಾರ್ಟ್‌ಪೋನು EMUI 4.1 ನಲ್ಲಿ ಕಾರ್ಯನಿರ್ವಹಿಸಲಿದ್ದು, ಜೊತೆಗೆ ಆಂಡ್ರಾಯ್ಡ್ 6.0 ಸಹ ಇದೆ. ಅಲ್ಲದೇ ಕಂಪನಿಯೂ ಮುಂಬರುವ ಆಂಡ್ರಾಯ್ಡ್ 7.0ಗೆ ಆಪ್‌ಡೇಟ್‌ ಮಾಡಿಕೊಳ್ಳುವ ಅವಕಾಶವನ್ನು ನೀಡಲಿದೆಯಂತೆ ಅಲ್ಲದೇ EMUI 5.1 ಗೇ ಸಹ ಆಪ್‌ಡೇಟ್‌ ನೀಡಲಿದೆ.

ಕೂಲ್‌ಪ್ಯಾಡ್‌ ಕೂಲ್ 1 ಸ್ಮಾರ್ಟ್‌ಪೋನಿನಲ್ಲಿ ಲಿಕೋ ಅಭಿವೃದ್ಧಿಪಡಿಸಿರುವ EUI 5.6ನಲ್ಲಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ ಆಂಡ್ರಾಯ್ಡ್ 6.0 ಸಹ ಇದೆ. ಆದರೆ ಆಂಡ್ರಾಯ್ಡ್ 7.0ಗೆ ಆಪ್‌ಡೇಟ್‌ ಮಾಡಿಕೊಳ್ಳುವ ಅವಕಾಶವನ್ನು ನೀಡುವ ಕುರಿತು ಯಾವುದೇ ಮಾಹಿತಿ ಇಲ್ಲ. ಈ ಹಿನ್ನಲೆಯಲ್ಲಿ ಹಾನರ್ 6‍‍‍‍X ಬೆಸ್ಟ್‌.

ಕ್ಯಾಮೆರಾ:

ಕ್ಯಾಮೆರಾ:

ಸದ್ಯ ಸುದ್ದಿಯಲ್ಲಿರುವ ಈ ಎರಡು ಪೋನಿನ ಪ್ರಮುಖ ಆಕ್ಷಷಣೆ ಎಂದರೆ ಡ್ಯುಯಲ್ ಕ್ಯಾಮೆರಾ, ಹಿಂಬದಿಯಲ್ಲಿ ಈ ಎರಡು ಪೋನಿನಲ್ಲಿ ಡ್ಯುಯಲ್ ಕ್ಯಾಮರೆ ಇದೆಯಾದರೂ ಎರಡು ಕಾರ್ಯನಿರ್ವಹಿಸುವ ವಿಧಾನ ಮಾತ್ರ ಬೇರೆ ಬೇರೆಯಾಗಿದೆ.

ಹಾನರ್ 6‍‍‍‍X ಸ್ಮಾರ್ಟ್‌ಪೋನು 12MP ಮತ್ತು 2MP ಸೋನಿ AMX386 ಸೆನ್ಸಾರ್ ಹೊಂದಿದೆ. 12MP ಕ್ಯಾಮೆರಾ ಸಾಮಾನ್ಯ ಕ್ಯಾಮೆರಾದಂತೆ ಕಾರ್ಯನಿರ್ವಹಿಸಲಿದ್ದು, ಆದರೆ 2MP ಕ್ಯಾಮರೆ ಡೆಪ್ತ್ ಇಮೇಜ್ ಕ್ಯಾಪಚರ್ ಮಾಡಲಿದೆ. ಇದರಿಂದಾಗಿ ಹಾನರ್ 6‍‍‍‍X ನಲ್ಲಿ ಸೆರೆ ಹಿಡಿದ ಚಿತ್ರಗಳು ಉತ್ತಮವಾಗಿ ಮೂಡಿಬರಲಿದ್ದು, DSLR ಕ್ಯಾಮೆರಾದಲ್ಲಿ ತೆಗೆದಂತೆ ಕಾಣಲಿದೆ.

ಕೂಲ್‌ಪ್ಯಾಡ್‌ ಕೂಲ್ 1 ಸ್ಮಾರ್ಟ್‌ಪೋನ್‌ ಹಿಂಭಾಗದಲ್ಲಿ 13 MP ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು, f/2.0 ಆರ್ಪೆಚರ್ ಹೊಂದಿದೆ. ಇದಲ್ಲಿರುವ ಸೆನ್ಸಾರ್ ಒಂದು RGB ಕ್ಯಾಪ್ಚರ್ ಮಾಡಿದರೆ ಮತ್ತೊಂದು ಮೋನೋ ಕಲರ್‌ಗಳನ್ನು ಸೆರೆಹಿಡಿಯಲಿದೆ.

ಎರಡು ಪೋನಿನ ಕ್ಯಾಮೆರಾಗಳು ಉತ್ತಮವಾಗಿದ್ದು, ಶಕ್ತಿಯುತವಾಗಿದ್ದು, ಆದರೆ ಇನ್‌ಡೋರ್, ಓಟ್‌ಡೋರ್, ಕ್ಲೋಸ್‌ಆಪ್, ಮತ್ತು ಲೋ ಲೈಟ್ ಇರುವ ಕಡೆಯಲ್ಲಿ ಹಾನರ್ 6‍‍‍‍X ಉತ್ತಮ ಪೋಟೋ ತೆಗೆಯಲಿದೆ.

ಬ್ಯಾಟರಿ:

ಬ್ಯಾಟರಿ:

ಕೂಲ್‌ಪ್ಯಾಡ್‌ ಕೂಲ್ 1 ಪೋನಿನಲ್ಲಿ 4,060 mAh ಬ್ಯಾಟರಿಯಿದ್ದು, ಹಾನರ್ 6‍‍‍‍X ನಲ್ಲಿ 3,340mAh ಬ್ಯಾಟರಿಯನ್ನು ಅಳವಡಿಸಲಾಗಿದ್ದು, ಈ ವಿಷಯದಲ್ಲಿ ಹಾನರ್ 6‍‍‍‍X ಸ್ಪಲ್ಪ ಹಿಂದಿದೆ. ಆದರೆ ಹಾನರ್ 6‍‍‍‍X ಒಮ್ಮೆ ಚಾರ್ಜ ಮಾಡಿದರೆ ಒಂದು ದಿನವೆಲ್ಲ ಕಾರ್ಯನಿರ್ವಹಿಸಲಿದೆ.

 ಉಪಸಂಹಾರ:

ಉಪಸಂಹಾರ:

ಒಟ್ಟಿನಲ್ಲಿ ಹೇಳುವುದಾರೆ ಎರಡು ಪೋನಿನ ವಿಶೇಷತೆಗಳನ್ನು ಗಮನದಲ್ಲಿಟ್ಟುಕೊಂಡು ನೋಡುವುದಾರೆ ಹಾನರ್ 6‍‍‍‍X ಬ್ಯಾಟರ್ ಒಂದನ್ನು ಬಿಟ್ಟು ಇನೇಲ್ಲ ವಿಚಾರದಲ್ಲಿ ಮೇಲುಗೈ ಸಾಧಿಸಲಿದೆ. ಹಾನರ್ 6‍‍‍‍X ನೋಡಲು ಸುಂದರವಾಗಿದ್ದು, ಬಳಸು ಉತ್ತಮವಾಗಿದೆ. ಒಟ್ಟಿನಲ್ಲಿ ಕೊಟ್ಟ ಕಾಸಿಗಂತು ನಷ್ಟವಿಲ್ಲ.

Best Mobiles in India

Read more about:
English summary
Which of these phones is a good buy?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X