ಹುವಾವೆ ಪಿ9 ಸ್ಮಾರ್ಟ್‌ಫೋನ್ ಕ್ಯಾಮೆರಾ ಏಕೆ ಅತಿ ವಿಶಿಷ್ಟ?

By Shwetha
|

ಸ್ಮಾರ್ಟ್‌ಫೋನ್ ಇಂಡಸ್ಟ್ರಿಯು ಫೋನ್ ನಿರ್ಮಾಣದಲ್ಲಿ ಹೊಸ ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಫೋನ್ ವಿಶೇಷತೆಗಳು ಮತ್ತು ಬೆಲೆಯಲ್ಲಿ ಮಾರ್ಪಾಡುಗಳನ್ನು ತರುವುದರ ಮೂಲಕ ಮಾರುಕಟ್ಟೆಯಲ್ಲಿ ಹೊಸ ಇತಿಹಾಸ ಸೃಷ್ಟಿಸಲಿದೆ. ಸಾಫ್ಟ್‌ವೇರ್ ಫೀಚರ್‌ಗಳೊಂದಿಗೆ ಹಾರ್ಡ್‌ವೇರ್ ಬೆಂಬಲವನ್ನು ಫೋನ್ ಹೊಂದಿದ್ದರೆ ಮಾತ್ರವೇ ಉತ್ತಮ ಕಾರ್ಯಕ್ಷಮತೆಯನ್ನು ನಾವು ಡಿವೈಸ್‌ನಿಂದ ಎದುರು ನೋಡಲು ಸಾಧ್ಯ.

ಓದಿರಿ: ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್7 ಗಿಂತ ಹುವಾವೆ ಪಿ9 ಹೇಗೆ ಅತ್ಯುತ್ತಮ?

ಈ ಸಾಲಿನಲ್ಲಿ ಬರುವ ಹೆಸರೆಂದರೆ ಅದು ಹುವಾವೆ ಆಗಿದೆ. ಅನ್ವೇಷಣೆ ಎಂಬ ಪದಕ್ಕೆ ಸೂಕ್ತವಾಗಿರುವ ಈ ಕಂಪೆನಿ ಉತ್ತಮ ತಂತ್ರಜ್ಞಾನವನ್ನು ಗ್ರಾಹರಿಗೆ ಒದಗಿಸುವ ನಿಟ್ಟಿನಲ್ಲಿದೆ. ಸೂಕ್ತವಾದ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಸಮ್ಮಿಶ್ರಣದೊಂದಿಗೆ ಬಳಕೆದಾರರಿಗೆ ಅತ್ಯದ್ಭುತ ಅನುಭವವನ್ನು ಇದು ನೀಡುತ್ತಿದೆ. ತನ್ನದೇ ಕ್ಷೇತ್ರದಲ್ಲಿ ಟ್ರೆಂಡ್ ಸೆಟ್ಟರ್ ಎಂದೇ ಹುವಾವೆ ಕರೆಯಿಸಿಕೊಂಡಿದೆ.

ಗರಿಷ್ಟ ಪೇಟೆಂಟ್‌

ಗರಿಷ್ಟ ಪೇಟೆಂಟ್‌

ಗರಿಷ್ಟ ಪೇಟೆಂಟ್‌ಗಳನ್ನು ಗಳಿಸಿಕೊಳ್ಳುವುದರ ಮೂಲಕ ಕಂಪೆನಿ ಜಾಗತಿಕ ನಾಯಕ ಎಂದೇ ಕರೆಯಿಸಿಕೊಂಡಿದೆ. ತನ್ನ ಹೆಸರಿನಲ್ಲಿ ಸಾಕಷ್ಟು ಪೇಟೆಂಟ್‌ಗಳನ್ನು ಗಳಿಸಿಕೊಳ್ಳುವುದರ ಮೂಲಕ ತನ್ನ ಉತ್ಪನ್ನಗಳಿಗೆ ಉತ್ತಮ ಬಳಕೆದಾರ ಅನುಭವವನ್ನು ಪಡೆದುಕೊಂಡಿದೆ. ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬ್ರ್ಯಾಂಡ್ ಉತ್ತಮ ಸ್ಥಾನವನ್ನು ಗಳಿಸಿಕೊಂಡಿದೆ. ಅನ್ವೇಷಣೆಗಳನ್ನು ಬಳಸಿಕೊಂಡೇ ಒಂದೇ ವಿಶೇಷತೆಗಳನ್ನು ಡಿವೈಸ್‌ಗಳನ್ನು ಇರಿಸುವುದರ ಮೂಲಕ ಫೋನ್ ಕ್ಷೇತ್ರದಲ್ಲಿ ಸ್ಥಾನವನ್ನು ಗಳಿಸಿಕೊಂಡಿದೆ.

ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್

ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್

ಕಂಪೆನಿ ಇತ್ತೀಚೆಗೆ ತಾನೇ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಅನ್ನು ಕಂಡುಹಿಡಿದಿದ್ದು, ಹುವಾವೆ ಪಿ9 ಎಂಬುದಾಗಿ ಇದಕ್ಕೆ ನಾಮಕರಣ ಮಾಡಿದೆ. ಇದರ ಬೆಲೆ ರೂ 39,999 ಆಗಿದೆ. ಸೌಂದರ್ಯ ಮತ್ತು ತಂತ್ರಜ್ಞಾನ ಅಡಕವಾಗಿರುವ ಅದ್ಭುತ ಫೋನ್ ಆಗಿ ಇದನ್ನು ಕಂಡುಕೊಳ್ಳಬಹುದಾಗಿದೆ.

ಡ್ಯುಯಲ್ ಕ್ಯಾಮೆರಾ

ಡ್ಯುಯಲ್ ಕ್ಯಾಮೆರಾ

ಡ್ಯುಯಲ್ ಕ್ಯಾಮೆರಾ ಈ ಡಿವೈಸ್‌ನಲ್ಲಿದ್ದು ಇತರ ಫೋನ್‌ಗಳಲ್ಲಿ ಇಲ್ಲದೇ ಇರುವ ಕ್ಯಾಮೆರಾ ವಿಶೇಷತೆಯನ್ನು ಈ ಫೋನ್ ಪಡೆದುಕೊಂಡಿದೆ. ಎಚ್‌ಟಿಸಿ ಒನ್ ಎಮ್8 ಮತ್ತು ಇತರ ಫೋನ್‌ಗಳಲ್ಲಿ ಈ ವಿಶೇಷತೆ ಇದ್ದರೂ ಲೈಕಾದ ಲೆನ್ಸ್ ಅನ್ನು ಹುವಾವೆ ಪಿ9 ಪಡೆದುಕೊಂಡು ಅತ್ಯುತ್ತಮ ಕ್ಯಾಮೆರಾ ಅನುಭವವನ್ನು ಬಳಕೆದಾರರಿಗೆ ನೀಡಿದೆ.

ಕ್ಯಾಮೆರಾ ಮತ್ತು ಲೆನ್ಸ್ ಬ್ರ್ಯಾಂಡ್‌ ಲೈಕಾ

ಕ್ಯಾಮೆರಾ ಮತ್ತು ಲೆನ್ಸ್ ಬ್ರ್ಯಾಂಡ್‌ ಲೈಕಾ

ಲೈಕಾ ತನ್ನ ಕ್ಯಾಮೆರಾ ಮತ್ತು ಲೆನ್ಸ್ ಬ್ರ್ಯಾಂಡ್‌ಗಳಿಗೆ ಹೆಸರುವಾಸಿಯಾಗಿದೆ. ಪ್ರೀಮಿಯಮ್ ಕ್ಯಾಮೆರಾ ತಯಾರಕರಾಗಿರುವ ಈ ಸಂಸ್ಥೆ ಕಪ್ಪು ಮತ್ತು ಬಿಳುಪು ಫೋಟೋಗ್ರಾಫಿಗೆ ಹೆಸರುವಾಸಿಯಾಗಿದೆ. ಹೆಚ್ಚಿನ ವೃತ್ತಿಪರ ಫೋಟೋಗ್ರಾಫರ್‌ಗಳಿಗೆ ಇದು ಆದ್ಯತೆಯ ಬ್ರ್ಯಾಂಡ್ ಎಂದೆನಿಸಿದೆ.

ಟೆಕ್ ದೈತ್ಯ

ಟೆಕ್ ದೈತ್ಯ

ಹುವಾವೆ ಪಿ9 ಸ್ಮಾರ್ಟ್‌ಫೋನ್ ಚೀನಾದ ಟೆಕ್ ದೈತ್ಯ ಎಂದೇ ಕರೆಯಿಸಿಕೊಂಡಿದ್ದು ಲೈಕಾದೊಂದಿಗೆ ಪಾಲುದಾರಿಕೆಯನ್ನು ಪಡೆದುಕೊಂಡು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಅದ್ಭುತ ಫೋಟೋಗ್ರಫಿ ಅನುಭವವನ್ನು ನೀಡುತ್ತಿದೆ. ಹುವಾವೆಯು ಲೈಕಾದೊಂದಿಗೆ ಸೇರಿಕೊಂಡು ಉತ್ತಮ ಅನ್ವೇಷಕ ಅನುಭವವನ್ನು ನೀಡುತ್ತಿದ್ದು ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಇದು ಹೊಸ ಮೈಲಿಗಲ್ಲನ್ನು ಬರೆದಿದೆ.

ಉತ್ತಮ ಚಿತ್ರ ಗುಣಮಟ್ಟ

ಉತ್ತಮ ಚಿತ್ರ ಗುಣಮಟ್ಟ

ಪಿ9 ಕ್ಯಾಮೆರಾವು 12 ಎಮ್‌ಪಿ ಡ್ಯುಯಲ್ ಕ್ಯಾಮೆರಾವನ್ನು ಹೊಂದಿದ್ದು, ಲೈಕಾ ಸಮ್ಮರಿಟ್ ಲೆನ್ಸ್ 1.25 ಮೈಕ್ರೋನ್ ಪಿಕ್ಸೆಲ್‌ಗಳನ್ನು ಪಡೆದುಕೊಂಡಿದೆ. ಕಡಿಮೆ ಬೆಳಕಿನ ಸಮಯದಲ್ಲಿ ಕೂಡ ಉತ್ತಮ ಚಿತ್ರ ಗುಣಮಟ್ಟವನ್ನು ಇದು ಒದಗಿಸಲಿದೆ. ಆಯ್ಕೆಯ ಫೋಕಸ್ ತಂತ್ರಜ್ಞಾನವನ್ನು ಕ್ಯಾಮೆರಾ ಪಡೆದುಕೊಂಡು ಬಂದಿದ್ದು ಫೋಕಸ್ ಅನ್ನು ಇದು ಯಾವ ಸಮಯದಲ್ಲಿ ಬದಲಾಯಿಸಿದರೂ ಉತ್ತಮ ಫೋಟೋಗ್ರಫಿ ಫಲಿತಾಂಶಗಳನ್ನು ಪಡೆದುಕೊಳ್ಳಲಿದೆ.

ಬ್ಲ್ಯಾಕ್ ಏಂಡ್ ವೈಟ್ ಶಾಟ್ ಇಫೆಕ್ಟ್‌

ಬ್ಲ್ಯಾಕ್ ಏಂಡ್ ವೈಟ್ ಶಾಟ್ ಇಫೆಕ್ಟ್‌

ಬೋಕ್ ಇಫೆಕ್ಟ್ ಅನ್ನು ಬಳಸಿಕೊಂಡು ಡಿಎಸ್‌ಎಲ್‌ಆರ್‌ ಕ್ಯಾಮೆರಾದಂತೆ ಚಿತ್ರಗಳನ್ನು ಸೆರೆಹಿಡಿಯುವಲ್ಲಿ ಇದು ಶಕ್ತನಾಗಲಿದೆ. ಲೈಕಾ ಬ್ಲ್ಯಾಕ್ ಏಂಡ್ ವೈಟ್ ಶಾಟ್ ಇಫೆಕ್ಟ್‌ಗಳಲ್ಲಿ ಅಸದಳ ಎಂದೆನಿಸಿದ್ದು, ಫೋನ್‌ನ ಸೆನ್ಸಾರ್ ಉತ್ತಮ ಮೋನೋಕ್ರೋಮ್ ಶಾಟ್‌ಗಳನ್ನು ನೀಡುವಲ್ಲಿ ಬೆಸ್ಟ್ ಎಂದೆನಿಸಲಿದೆ.

ಹುವಾವೆ ಪಿ9 ವಿಶೇಷತೆ

ಹುವಾವೆ ಪಿ9 ವಿಶೇಷತೆ

ಹುವಾವೆ ಪಿ9, 5.2 ಇಂಚಿನ ಎಫ್‌ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು 1920x1080 ಪಿಕ್ಸೆಲ್‌ಗಳ ರೆಸಲ್ಯೂಶನ್‌ಗಳನ್ನು ಪಡೆದುಕೊಂಡಿದೆ. ಕಿರಿನ್ 955 ಸಾಕ್ ಅನ್ನು ಡಿವೈಸ್ ಹೊಂದಿದ್ದು 2.5GHZ ಜೊತೆಗೆ 64 ಬಿಟ್ RAM ಆಧಾರಿತ ಪ್ರೊಸೆಸರ್ ಇದರೊಂದಿಗೆ 4ಜಿಬಿ RAM ಅಂತೆಯೇ 32 ಜಿಬಿ ಆಂತರಿಕ ಸಂಗ್ರಹಣೆಯನ್ನು ಫೋನ್ ಒಳಗೊಂಡಿದೆ. ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ ಇದರಲ್ಲಿದ್ದು 3000mAh ಬ್ಯಾಟರಿಯನ್ನು ಹೊಂದಿದೆ. ಎಸ್‌ಡಿ ಕಾರ್ಡ್, ಡ್ಯುಯಲ್ ಸಿಮ್ ಸ್ಮಾಟ್ ಅನ್ನು ಫೋನ್ ಹೊಂದಿದೆ.

Best Mobiles in India

English summary
Huawei is a brand name that is well associated with the term 'innovative', for the company is willing to bring the best technology, combining hardware and software, for a flawless user experience. Huawei has been a trend setter in its own segment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X